ರೂ 2,500 ಕ್ಕೆ 90 ದಿನ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಆಕ್ಸೆಸ್

By Suneel
|

ಮುಕೇಶ್‌ ಅಂಬಾನಿ ಮಾಲೀಕತ್ವದ 'ರಿಲಾಯನ್ಸ್ ಜಿಯೋ' ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಒಂದು ಸಿಹಿ ಸುದ್ದಿ ವಿತರಿಸಿದೆ. 4G ಸ್ಮಾರ್ಟ್‌ಫೋನ್‌ ಬಳಸದವರು 4G ಸೇವೆಯ ಉತ್ತಮ ಇಂಟರ್ನೆಟ್‌ ಸೇವೆ ಪಡೆಯಲು ರಿಲಾಯನ್ಸ್‌ ಜಿಯೋದ 'ಜಿಯೋಲಿಂಕ್' ವೈಫೈ ಹಾಟ್‌ಸ್ಪಾಟ್‌ ಅನ್ನು ಕೇವಲ ರೂ.2,500 ಗೆ ಪಡೆಯಬಹುದಾಗಿದೆ. 90 ದಿನಗಳು ಅನ್‌ಲಿಮಿಟೆಡ್‌ ಡಾಟಾ ಆಕ್ಸೆಸ್‌ ಮಾಡಬಹುದಾಗಿದೆ. ಅಂದಹಾಗೆ ರಿಲಾಯನ್ಸ್‌ ಜಿಯೋ ವೈಫೈ ಹಾಟ್‌ಸ್ಟಾಟ್‌ ಪಡೆಯುವ ಆಸಕ್ತಿ ನಿಮಗಿದ್ದಲ್ಲಿ ಮೊದಲು ಈ ಲೇಖನದ ಸಂಪೂರ್ಣ ಮಾಹಿತಿ ಓದಿರಿ.

ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ಜಿಯೋಲಿಂಕ್‌

ಜಿಯೋಲಿಂಕ್‌

ರಿಲಾಯನ್ಸ್‌ ಜಿಯೊ ನೀಡುವ 'ಜಿಯೋಲಿಂಕ್ ' ವೈಫೈ ಹಾಟ್‌ಸ್ಟಾಪ್ ಇಂಟರ್ನೆಟ್‌ ಬಳಕೆದಾರರಿಗೆ ಜಿಯೋನ ಅತಿವೇಗದ 4G ಸೇವೆಯನ್ನು ನೀಡುತ್ತದೆ. ಬಳಕೆದಾರರು ಈ ವೇಗದ ಇಂಟರ್ನೆಟ್‌ ಸೇವೆಯನ್ನು ಜಿಯೋ ಎಲ್‌ಟಿಇ ಬ್ಯಾಂಡ್‌ ಸಪೋರ್ಟ್‌ ಮಾಡದಿದ್ದರೂ ಸಹ ಪಡೆಯಬಹುದಾಗಿದೆ.

ಮುಕೇಶ್‌ ಅಂಬಾನಿ

ಮುಕೇಶ್‌ ಅಂಬಾನಿ

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ 4G ಸ್ಮಾರ್ಟ್‌ಫೋನ್‌ ಬಳಸದವರಿಗಾಗಿ 'ಜಿಯೋಲಿಂಕ್ ' 4G ಹಾಟ್‌ಸ್ಪಾಟ್‌ ಅನ್ನು ಲಾಂಚ್‌ ಮಾಡುವುದರ ಉತ್ತಮ ಸೇವೆ ನೀಡಲಿದೆಯಂತೆ. ಜಿಯೋಲಿಂಕ್‌ 4G ಹಾಟ್‌ಸ್ಪಾಟ್‌ ಸೇವೆ ಪಡೆಯಲು ಎಲ್ಲರ ಕೈಗೆಟಕುವ ಬೆಲೆ ರೂ. 2,500 ಅನ್ನು ನಿಗದಿಪಡಿಸಲಾಗಿದೆ.

 2,500 ರೂಗೆ 90 ದಿನ ಅನ್‌ಲಿಮಿಟೆಡ್‌ ಸೇವೆ

2,500 ರೂಗೆ 90 ದಿನ ಅನ್‌ಲಿಮಿಟೆಡ್‌ ಸೇವೆ

ರಿಲಾಯನ್ಸ್‌ ಜಿಯೋ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಅನ್‌ಲಿಮಿಟೆಡ್ ಡಾಟಾ ಆಕ್ಸೆಸ್ ಸೇವೆಗಳನ್ನು ನೀಡುತ್ತಿದ್ದು, 90 ದಿನಗಳ ಕಾಲ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳನ್ನು ಆಕ್ಸೆಸ್ ಮಾಡಬಹುದಾಗಿದೆ.

ಜಿಯೋಲಿಂಕ್‌

ಜಿಯೋಲಿಂಕ್‌

ಜಿಯೋಲಿಂಕ್ 'ಕಸ್ಟಮರ್‌ ಪ್ರಿಮೈಸ್ ಎಕ್ವಿಪ್‌ಮೆಂಟ್ (CPE)' ಏಕಮಾರ್ಗಿ ಆಂಟೆನಾವಾಗಿದೆ. CPE ಅನ್ನು ಮನೆಗಳ ಮಹಡಿ ಅಥವಾ ಕಛೇರಿಗಳಲ್ಲಿ ಇಟ್ಟು ಟೆಲಿಕಂಮ್ಯೂನಿಕೇಷನ್‌ ಅತಿ ವೇಗದ ಡಾಟಾ ನೆಟ್‌ವರ್ಕ್‌ ಸೇವೆಯನ್ನು ನೀಡಲಾಗುತ್ತದೆ. ಅಥವಾ ಒಳಾಂಗಣದ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಫೈಬರ್‌ ಮತ್ತು ವೈಫೈ ರೂಟರ್ ಮೂಲಕ ನೀಡಲಾಗುತ್ತದೆಯಂತೆ.

ಜಿಯೋಲಿಂಕ್ ಯುನಿಟ್ ಫೀಚರ್

ಜಿಯೋಲಿಂಕ್ ಯುನಿಟ್ ಫೀಚರ್

ಜಿಯೋಲಿಂಕ್‌ ಯುನಿಟ್‌ 'ಆರ್‌ಜೆ45' ಪೋರ್ಟ್‌ ಹೊಂದಿದೆ. cat5, cat6 ಕೇಬಲ್‌ನಂತೆ ಆಂಟೆನಾಗೆ ಕನೆಕ್ಟ್ ಆಗುತ್ತದೆ. ಶೀಘ್ರದಲ್ಲಿ ಲಾಂಚ್‌ ಆಗಲಿದ್ದು, ಒಳಾಂಗಣ ಪ್ರದೇಶದಲ್ಲಿ ಕಳಪೆ ಮತ್ತು ನಿಧಾನ ವೇಗ ಡಾಟಾ ನೆಟ್‌ವರ್ಕ್‌ ಅನ್ನು ವೇಗಗೊಳಿಸಲಿದೆ.

 ಜಿಯೋ ಎಲ್‌ಟಿಇ ಬ್ಯಾಂಡ್‌

ಜಿಯೋ ಎಲ್‌ಟಿಇ ಬ್ಯಾಂಡ್‌

ಜಿಯೋ ಎಲ್‌ಟಿಇ ಬ್ಯಾಂಟ್‌ ಅನ್ನು ಸಪೋರ್ಟ್‌ ಮಾಡದ (4G ನೆಟ್‌ವರ್ಕ್‌) ಡಿವೈಸ್‌ಗಳಿಗೆ 'ಜಿಯೋಲಿಂಕ್‌' 4G ಸೇವೆಯ ಅತಿವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ.

 4G ಪ್ಲೇಯರ್‌ಗಳು

4G ಪ್ಲೇಯರ್‌ಗಳು

ಏರ್‌ಸೆಲ್‌ ಮತ್ತು ಟಿಕೊನ ಡಿಜಿಟಲ್‌ ನೆಟ್‌ವರ್ಕ್‌ ಈಗಾಗಲೇ 4G CPE ಸೇವೆಯನ್ನು ಆರಂಭಿಸಿದ್ದು, ಇದು ಸಿಂಗಲ್‌ ಮೋಡ್‌ ಎಲ್‌ಟಿಇ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ಜಿಯೋಲಿಂಕ್ ಡಿವೈಸ್‌

ಜಿಯೋಲಿಂಕ್ ಡಿವೈಸ್‌

ಜಿಯೋಲಿಂಕ್‌ ಹಾಟ್‌ಸ್ಪಾಟ್‌ ಡಿವೈಸ್‌ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ಪ್ರಸ್ತುತದಲ್ಲಿ ಲಭ್ಯವಿಲ್ಲ. ಆದರೆ ಶೀಘ್ರದಲ್ಲಿ ಖರೀದಿಸಬಹುದಾಗಿದ್ದು ಅದರ ಬೆಲೆ ರೂ 2,500. ಈ ಬೆಲೆಯು ಇನ್‌ಸ್ಟಾಲ್‌ ಮಾಡಲು ತಗಲುವ ವೆಚ್ಚ ಮಾತ್ರ ಎನ್ನಲಾಗಿದೆ. 90 ದಿನಗಳು ಅನ್‌ಲಿಮಿಟೆಡ್‌ ಆಕ್ಸೆಸ್‌ ಪಡೆಯಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳುರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ಇಂಟರ್ನೆಟ್‌ ಬಗೆಗಿನ ವಿಸ್ಮಯ ಸತ್ಯಾಂಶಗಳು ನಿಮಗೆಷ್ಟು ಗೊತ್ತು?ಇಂಟರ್ನೆಟ್‌ ಬಗೆಗಿನ ವಿಸ್ಮಯ ಸತ್ಯಾಂಶಗಳು ನಿಮಗೆಷ್ಟು ಗೊತ್ತು?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
NEW DELHI: Mukesh Ambani-led Reliance Jio is gearing up to tap the non-4G smartphone users with launch of JioLink, an 4G hotspot, which will be priced affordably at Rs 2500.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X