ಫೇಸ್‌ಬುಕ್ ಪ್ರಿಯತಮೆಗೆ ಮರುಳಾಗಿ 35 ಲಕ್ಷ ಕಳೆದುಕೊಂಡ ಬ್ಯಾಂಕರ್ ತಾತ!!

|

ಫೇಸ್‌ಬುಕ್ ಪ್ರಿಯತಮೆಗೆ ಮರುಳಾಗಿ ಹಣ ಕಳೆದುಕೊಳ್ಳುವವರ ನೂರಾರು ಪ್ರಕರಣಗಳ ನಡುವೆ ಬ್ಯಾಂಕ್ ಉದ್ಯೋಗಿಯೋರ್ವರ ಕಥೆ ಚಿಂತಾಜನಕವಾಗಿದೆ. ಫೇಸ್‌ಬುಕ್ ಪ್ರಿಯತಮೆಯ ಬಣ್ಣದ ಮಾತಿಗೆ ಮರುಳಾಗಿರುವ 65 ವರ್ಷದ ಮಾಜಿ ಬ್ಯಾಂಕ್ ಉದ್ಯೋಗಿ ಸುಮಾರು 35 ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಪ್ರಕರಣವೊಂದು ಹರಿಯಾಣದಲ್ಲಿ ನಡೆದಿದೆ.

ಹೌದು, ಗುರುಗ್ರಾಂನ ಡಿಎಲ್‌ಎಫ್ 1 ಪ್ರದೇಶದ ನಿವಾಸಿಯಾಗಿರುವ ನಿವೃತ್ತ ಬ್ಯಾಂಕರ್ ಓರ್ವರ ತನ್ನ ವೃತ್ತಿ ಜೀವನದಲ್ಲಿ ಉಳಿಸಿಟ್ಟ 13 ರೂಪಾಯಿ ಸೇರಿದಂತೆ ಖಾಸಗಿ ಫೈನಾನ್ಸ್ ಕಂಪೆನಿಯಿಂದ 22 ಲಕ್ಷ ರೂಪಾಯಿ ಪಡೆದು ಫೇಸ್‌ಬುಕ್ ಪ್ರಿಯತಮೆಗೆ ನೀಡಿ ಪಂಗನಾಮ ಹಾಕಿಸಿಕೊಂಡಿರುವ ಸುದ್ದಿ ಪೊಲೀಸರ ಮೂಲದಿಂದ ಮಾಧ್ಯಮಗಳಿಂದ ಬೆಳಕಿಗೆ ಬಂದಿದೆ.

ಫೇಸ್‌ಬುಕ್ ಪ್ರಿಯತಮೆಗೆ ಮರುಳಾಗಿ 35 ಲಕ್ಷ ಕಳೆದುಕೊಂಡ ಬ್ಯಾಂಕರ್ ತಾತ!!

ಜೆನ್ನಿ ಆಂಡರ್ಸನ್ ಎಂಬ ಫಾರಿನ್ ಫೇಸ್‌ಬುಕ್ ಪ್ರಿಯತಮೆ ಆಡಿದ ಮೋಸದಾಟಕ್ಕೆ ನಿವೃತ್ತ ಬ್ಯಾಂಕರ್ ಹಣ ಕಳೆದುಕೊಂಡು ಕಣ್ಣಿರಿಡುತ್ತಿದ್ದಾರೆ. ಹಾಗಾದರೆ, ಪೊಲೀಸರು ತನಿಖೆ ನಡೆಸುತ್ತಿರುವ ಈ ಫೇಸ್‌ಬುಕ್ ಪ್ರಿಯತಮೆ ಮೋಸದ ಪ್ರಕರಣ ನಡೆದದ್ದು ಹೇಗೆ ? ಬ್ಯಾಂಕರ್ 35 ಲಕ್ಷ ರೂ.ಹಣವನ್ನು ಕಳೆದುಕೊಂಡಿದ್ದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಮಾಯಾಂಗನೆ ಬಲೆ ಬಿದ್ದಿದ್ದು ಹೇಗೆ?

ಮಾಯಾಂಗನೆ ಬಲೆ ಬಿದ್ದಿದ್ದು ಹೇಗೆ?

ಮೋಸಹೋದ ನಿವೃತ್ತ ಬ್ಯಾಂಕ್ ಉದ್ಯೋಗಿಯೋರ್ವವರ ಖಾತೆಗೆ ಜೆನ್ನಿ ಆಂಡರ್ಸನ್ ಹೆಸರಿನ ಮಹಿಳೆ ಫ್ರೆಂಡ್‌ ರಿಕ್ವೆಸ್ಟ್ ಕಳಿಸಿದ್ದಳು. ಅವಳ ಮನವಿಯನ್ನು ಬ್ಯಾಂಕ್ ಉದ್ಯೋಗಿ ಸ್ವೀಕರಿಸಿದ ಬಳಿಕ ಇಬ್ಬರ ನಡುವೆ ಮಾತುಕತೆ ಶುರುವಾಗಿದೆ. ಫೇಸ್‌ಬುಕ್‌ನಲ್ಲಿ ಜೆನ್ನಿ ಆಂಡರ್ಸನ್ ಆರಂಭಸಿದ ಮಾತುಕತೆ, ವಾಟ್ಸಪ್ ಚಾಟ್‌‌ವರೆಗೆ ಬೆಳೆದಿದೆ.

ಪರಿಚಯದಿಂದ ಮನೆಯವರೆಗೆ!

ಪರಿಚಯದಿಂದ ಮನೆಯವರೆಗೆ!

ಫೇಸ್‌ಬುಕ್‌ನಲ್ಲಿ ಪರಿಚಯವಾಗ ಜೆನ್ನಿ ಆಂಡರ್ಸನ್ ಯುವತಿಯು ತಾನು ಲಂಡನ್‌ನಲ್ಲಿ ವಾಸವಾಗಿರುವುದಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ ನಂಬಿಸಿದ್ದಾಳೆ. ಚೆಂದದ ಮಾತುಗಳ ಮೂಲಕ ಬಲೆಗೆ ಬೀಳಿಸಿ, ಕೆಲಸದ ನಿಮಿತ್ತ ಭಾರತಕ್ಕೆ ಬರುವುದಾಗಿ ಮತ್ತು ನಿಮ್ಮನ್ನು ಭೇಟಿಯಾಸಿ ನಿಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವುದಾಗಿ ಹೇಳಿದ್ದಾಳೆ.

ಬಲೆಗೆ ಬಿದ್ದ ಬ್ಯಾಂಕ್ ಉದ್ಯೋಗಿ

ಬಲೆಗೆ ಬಿದ್ದ ಬ್ಯಾಂಕ್ ಉದ್ಯೋಗಿ

ಜೂನ್ 1 ರಂದು ವ್ಯವಹಾರದ ನಿಮಿತ್ತ ಭಾರತಕ್ಕೆ ಬರುತ್ತಿದ್ದೇನೆ ಎಂದು ಜೆನ್ನಿ ಆಂಡರ್ಸನ್ ಹೇಳಿದ ನಂತರ, ವೃತ್ತ ಬ್ಯಾಂಕ್ ಉದ್ಯೋಗಿ ಅವಲ ಆಗಮನಕ್ಕಾಗಿ ಕಾದುಕುಳಿತಿದ್ದಾರೆ. ಆ ಮಹಿಳೆ ಸುಳ್ಳು ಕಥೆ ಕಟ್ಟುವ ಮೂಲಕ ವಂಚನೆಯ ಜಾಲ ಹೆಣೆದಿರುವುದು ಅವಳ ಆಗಮನದ ನಿರೀಕ್ಷೆಯಲ್ಲಿದ್ದ ಬ್ಯಾಂಕರ್‌ಗೆ ತಾನು ಮೋಸದ ಬಲೆಯಲ್ಲಿ ಬಿದ್ದಿರುವುದು ಅರಿವಾಗಿಲ್ಲ.

ಮೋಸದ ಬಲೆ ಹೆಣೆದದ್ದು ಹೀಗೆ!

ಮೋಸದ ಬಲೆ ಹೆಣೆದದ್ದು ಹೀಗೆ!

ಜೂನ್ 1 ರಂದು, ಪೂಜಾ ಎಂದು ಪರಿಚಯಿಸಿಕೊಂಡ ಯುವತಿಯೋರ್ವಳು ಆತನಿಗೆ ಫೋನ್ ಕರೆ ಮಾಡಿದ್ದಾಳೆ. ಜೆನ್ನಿ ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. 68 ಲಕ್ಷ ರೂಪಾಯಿ ಹೊಂದಿರುವ ಜಿನ್ನಿ ಅವರು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆ ಇಲ್ಲ. ಅವರು ನಿಮ್ಮ ಬಳಿ ಮಾತನಾಡಬೇಕಂತೆ ಎಂದು ಜಿನ್ನಿಗೆ ಫೋನ್ ಕರೆ ವರ್ಗಾಯಿಸಿದ್ದಾಳೆ.

35 ಲಕ್ಷ ರೂ.ಬೇಕಾಗಿದೆ.!!

35 ಲಕ್ಷ ರೂ.ಬೇಕಾಗಿದೆ.!!

ಮೋಸಹೋದ ಬ್ಯಾಂಕ್ ಉದ್ಯೋಗಿ ಬಳಿ ಅಳುತ್ತ ಮಾತನಾಡಿದ ಜೆನ್ನಿ, ದಂಡ ಕಟ್ಟಲು 35 ಲಕ್ಷ ರೂಪಾಯಿ ಬೇಕಾಗಿದೆ. ನಿಮ್ಮನ್ನು ಬಿಟ್ಟು ಬೇರೆ ಯಾರು ನನಗೆ ಗೊತ್ತಿಲ್ಲ. ದಯವಿಟ್ಟು ಸಹಾಯ ಮಾಡಿ. ನಾನು ನಿಮ್ಮ ಹಣವನ್ನು ಹಿಂತಿರುಗಿ ನೀಡುತ್ತೇನೆ ಎಂದು ಗೋಳಾಡಿದ್ದಾಳೆ. ಆಕೆಯ ಕಣ್ಣೀರಿಗೆ ಈತನು ಯಾಮಾರಿದ್ದಾನೆ.

35 ಲಕ್ಷ ರೂಪಾಯಿ ಪಂಗನಾಮ!

35 ಲಕ್ಷ ರೂಪಾಯಿ ಪಂಗನಾಮ!

ಆಕೆಯ ಕಣ್ಣೀರಿಗೆ ಸೋತ ಬ್ಯಾಂಕರ್, ತಾನು ಕೂಡಿಸಿಟ್ಟಿದ್ದ ಹಣ ಹಾಗೂ ಇತರರಿಂದ ಸಾಲ ಪಡೆದು ಜಿನ್ನಿ ನೀಡಿದ ವಿವಿಧ 20 ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾನೆ. 15 ದಿನಗಳು ಹಣ ಹೊಂದಿಸಿ ನೀಡಿದ ನಂತರ ಆಕೆ ಸಂಪರ್ಕ ಕಡಿದುಕೊಂಡಿದ್ದಾಳೆ. ನಂತರ ಬ್ಯಾಂಕರ್‌ಗೆ ತಾನು ಮೋಸ ಹೋಗಿರುವುದಾಗಿ ಅರಿವಾಗಿದೆ.

ಎಚ್ಚರವಿರಲಿ!

ಎಚ್ಚರವಿರಲಿ!

ತಾನು ಮೋಸ ಹೋಗಿರುವುದಾಗಿ ತಿಳಿದ ಬ್ಯಾಂಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ವಂಚಕರನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಆದರೆ, ಒಮ್ಮೆ ಕಳೆದುಕೊಂಡ ಹಣ ಮತ್ತೆ ವಾಪಸ್ ಕೈಸೇರುವುದು ಅನುಮಾನ. ಹಾಗಾಗಿ, ನೀವು ಇಂತಹ ವಂಚನೆಯ ಬಲೆಯಲ್ಲಿ ಬೀಳದಿರಿ.!

Best Mobiles in India

English summary
Love is blind. It can be an expensive affair too. Retired banker falls in love with chat friend, conned of Rs 35 lakh. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X