ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಪ್ಲಸ್‌ ಬಡ್ಸ್‌ ಬಿಡುಗಡೆ!

|

ಟೆಕ್‌ಲೋಕದ ದಿಗ್ಗಜ ಕಂಪೆನಿಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ ತನ್ನ ಬಹುನಿರೀಕ್ಷಿತ S20 ಆವೃತ್ತಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಅಲ್ಲದೆ ಸ್ಯಾಮ್ಸಂಗ್ ತನ್ನ ಮಡಿಸಬಹುದಾದ ಫೋನ್ - ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ ಅನ್ನು ಸಹ ಲಾಂಚ್‌ ಮಾಡಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಇದೇ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ ಹೊಸ ಇಯರ್‌ಬಡ್ಸ್‌ ಅನ್ನು ಸಹ ಪರಿಚಯಿಸಿದೆ.

ಹೌದು

ಹೌದು, ದಕ್ಷಿಣ ಕೋರಿಯಾದ ಟೆಕ್‌ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್‌ ಮಾಡಿದ್ದು. ಇದರ ಜೊತೆಗೆ ಹೊಸ ಗ್ಯಾಲಕ್ಸಿ ಪ್ಲಸ್‌ ಇಯರ್‌ ಬಡ್ಸ್‌ ಅನ್ನು ಸಹ ಲಾಂಚ್‌ ಮಾಡಿದೆ. ಈ ಇಯರ್‌ ಬಡ್ಸ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿಯ 2ನೇ ತಲೆಮಾರಿನ ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ಆಗಿದ್ದು, ಬಹಳ ವಿಶೇಷವಾಗಿ ವಿನ್ಯಾಸಗೊಂಡಿದೆ. ಅಲ್ಲದೆ ಈ ಇಯರ್‌ಬಡ್ಸ್‌ಗಳು 2-ವೇ ಸ್ಪೀಕರ್‌ಗಳು ಮತ್ತು ಉತ್ತಮ ಬ್ಯಾಟರಿ ಬಾಳಿಕೆಯನ್ನ ನೀಡಲಿದೆ ಎಂದು ಹೇಳಲಾಗಿದೆ.

ಗ್ಯಾಲಕ್ಸಿ ಬಡ್ಸ್ ಪ್ಲಸ್‌ ವಿನ್ಯಾಸ

ಗ್ಯಾಲಕ್ಸಿ ಬಡ್ಸ್ ಪ್ಲಸ್‌ ವಿನ್ಯಾಸ

ಗ್ಯಾಲಕ್ಸಿ ಬಡ್ಸ್‌ ಪ್ಲಸ್‌ 2-ವೇ ಸ್ಪೀಕರ್‌ಗಳನ್ನ ಹೊಂದಿದ್ದು, ಈ ಸ್ಪೀಕರ್‌ಗಳು ವೂಫರ್ ಮತ್ತು ಟ್ವೀಟರ್‌ಗಳ ಸಂಯೋಜನೆಯನ್ನ ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಈ ಹಿಂದಿನ ಆವೃತ್ತಿಯ ಗ್ಯಾಲಕ್ಸಿ ಇಯರ್‌ ಬಡ್‌ಗಳಿಗಿಂತ ಆಪ್ಡೇಟ್‌ ವರ್ಷನ್‌ ಆಗಿದ್ದು, AKG ಟ್ಯೂನ್‌ ಅನ್ನು ಹೊಂದಿದೆ. ಇನ್ನು ಗಾತ್ರ ಮತ್ತು ಆಕಾರದಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ, ಹಿಂದಿನ ಇಯರ್‌ಬಡ್ಸ್‌ಗಳಂತೆಯೆ ಇದೆ. ಇನ್ನು ಈ ಇಯರ್‌ಬಡ್ಸ್‌ 2-ವೇ ಸ್ಪೀಕರ್‌ 3 ಮೈಕ್ರೊಫೋನ್‌ಗಳನ್ನು ಹೊಂದಿವೆ, ಆದರೂ ಕೂಡ ಇದು ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ.

ವಿಶೇಷತೆಯೇನು?

ವಿಶೇಷತೆಯೇನು?

ಇನ್ನು ಈ ಇಯರ್‌ಬಡ್ಸ್‌ ನೋಡಲು ಆಕರ್ಷಕ ವಿನ್ಯಾಸವನ್ನ ಹೊಂದದೆ. ಅಲ್ಲದೆ ಇಯರ್‌ಬಡ್ಸ್‌ನ ಸ್ಪೀಕರ್‌ನ ಸುತ್ತಆಂಬಿಯೆಂಟ್‌ ಪಾಸ್‌ ಫಿಚರ್ಸ್‌ ಅನ್ನು ನೀಡಲಾಗಿದ್ದು, ಇದು ಬಳಕೆದಾರರು ತಮ್ಮ ಸುತ್ತಲಿನ ಪ್ರಮುಖ ಶಬ್ದಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ಪ್ಲೇಬ್ಯಾಕ್‌ ಮ್ಯೂಸಿಕ್‌ ಕೇಳುವಾಗ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಇದು ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಉತ್ತಮ ಅನುಭವ ಸಿಗಲಿದೆ.

ಬ್ಯಾಟರಿ ವಿಶೇಷತೆ

ಬ್ಯಾಟರಿ ವಿಶೇಷತೆ

ಗ್ಯಾಲಕ್ಸಿ ಬಡ್ಸ್ ಪ್ಲಸ್‌ ಇಯರ್‌ ಬಡ್‌ಗಳು ಪ್ರತ್ಯೇಕವಾಗಿ 85mAh ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನ ನೀಡಲಿದೆ. ಇದು 11 ಗಂಟೆಗಳ ಪ್ಲೇಬ್ಯಾಕ್ ಮ್ಯೂಸಿಕ್‌ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ನಿಮ್ಮ ಕಿ ಚಾರ್ಜಿಂಗ್ ಪ್ಯಾಡ್, ವೈರ್‌ಲೆಸ್ ಪವರ್ ಬ್ಯಾಂಕ್ ಅಥವಾ ನಿಮ್ಮ ಗ್ಯಾಲಕ್ಸಿ ಎಸ್ 20 ಸರಣಿಯ ಸ್ಮಾರ್ಟ್‌ಫೋನ್‌ನೊಂದಿಗೆ ಟ್ರಾವೆಲ್‌ ಮಾಡುವಾಗಲೂ ಚಾರ್ಜ್ ಮಾಡಬಹುದಾಗಿದೆ. ಜೊತೆಗೆ ಈ ಇಯರ್‌ಬಡ್ಸ್‌ಗಳು ಈಒಎಸ್‌ ಮತ್ತು ಆಂಡ್ರಾಯ್ಡ್‌ ಡಿವೈಸ್‌ಗಳನ್ನ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ S20 ಸ್ಮಾರ್ಟ್‌ಫೋನ್‌ ಅನ್ನು ನೀವು ಈಗಾಗ್ಲೆ ಆರ್ಡರ್‌ ಮಾಡಿದ್ದರೆ ಅದರ ಜೊತೆಗೆ ಗ್ಯಾಲಕ್ಸಿ ಪ್ಲಸ್‌ ಇಯರ್‌ಬಡ್ಸ್‌ ಸಿಗಲಿದೆ. ಇಲ್ಲವೇ ಪ್ರತ್ಯೇಕವಾಗಿ ಖರೀದಿಸುವುದಾದರೆ ಗ್ಯಾಲಕ್ಸಿ ಪ್ಲಸ್‌ ಬಡ್ಸ್‌ ಬೆಲೆ $ 150 (ಸುಮಾರು 10,700 ರೂ.) ಆಗಿದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ಲಸ್‌ ಕಪ್ಪು, ಬಿಳಿ, ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. ಫೆಬ್ರವರಿ 14 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
Samsung launched the new Galaxy Buds+ successor with 2-way speakers and better battery life. It will be available for order starting February 14.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X