ಗ್ಯಾಲೆಕ್ಸಿ J7 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

Written By: Lekhaka

ಸ್ಯಾಮ್ ಸಂಗ್ ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಗ್ಯಾಲೆಕ್ಸಿ J7 ಮ್ಯಾಕ್ಸ್ ಮತ್ತು ಗ್ಯಾಲೆಕ್ಸಿ J7 ಪ್ರೋ ಸಾಕಷ್ಟು ಸದ್ದು ಮಾಡಿತ್ತು ಗ್ಯಾಲೆಕ್ಸಿ J7 ಪ್ರೋ ರೂ.20,900ಕ್ಕೆ ಮಾರಾಟವಾಗುತಿತ್ತು.

ಗ್ಯಾಲೆಕ್ಸಿ J7 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

ಈ ಗ್ಯಾಲೆಕ್ಸಿ J7 ಪ್ರೋ ಸ್ಮಾರ್ಟ್ ಫೋನ್ ಹೆಚ್ಚು ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಈ ಫೋನ್ ಬೆಲೆಯಲ್ಲಿ ಕೊಂಚ ಕಡಿಮೆ ಮಾಡಿದೆ. ರೂ. 1000ದಷ್ಟು ಕಡಿತವನ್ನು ಮಾಡಿದೆ ಎನ್ನಲಾಗಿದೆ.

ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ರೂ. 19000ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.

2G, 3G ಗ್ರಾಹಕರಿಗೆ ಐಡಿಯಾದಿಂದ ಬಂಪರ್ ಆಫರ್!!

ಗ್ಯಾಲೆಕ್ಸಿ J7 ಪ್ರೋ ಸ್ಮಾರ್ಟ್ ಫೋನ್ ಬಗ್ಗೆ ನೋಡುವುದಾದರೆ, ಇದರಲ್ಲಿ 5.5 ಇಂಚಿನ್ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು ಸೂಪರ್ ಅಮೋಲೈಡ್ ಡಿಸ್ ಪ್ಲೇಯಾಗಿದೆ. ಇದಲ್ಲದೇ ಎಕ್ಸ ನೋಸ್ 7870 ಪ್ರೋಸೆಸರ್ ಹೊಂದಿದೆ.

3 GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ ಮೆಮೋರಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಸಹ ನೀಡಲಾಗಿದೆ.

ಇನ್ನು ಹಿಂಭಾಗ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಈ ಫೋನಿನಲ್ಲಿ ಕಾಣಬಹುದಾಗಿದ್ದು, ಫ್ಲಾಷ್ ಲೈಟ್ ಸಹ ನೀಡಲಾಗಿದೆ. 3000mAh ಬ್ಯಾಟರಿಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ. ಬೈಕ್ ಮೋಡ್ ಸಹ ಇದೆ. ಸ್ಯಾಮ್ ಸಂಗ್ ಪೇ ಮಿನಿ ಆಪ್ ಸಹ ಇದೆ.

Read more about:
English summary
Thanks to the price cut, you can now buy the Samsung Galaxy J7 Pro at Rs. 19,000 from both Amazon and Flipkart.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot