ವಾಹ್ ಸೂಪರ್! ಸ್ಯಾಮ್‌ಸಂಗ್‌ನ ಹೊಸ ಡಿವೈಸ್‌ಗಳ ಬೆಲೆ ಇಳಿಕೆ

ಸ್ಯಾಮ್‌ಸಂಗ್ ಮತ್ತೊಮ್ಮೆ ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್8 + ಅನ್ನು ಭಾರತದ ಮಾರುಕಟ್ಟೆಯಲ್ಲಿ ಬೆಲೆಯನ್ನು ಕಡಿಮೆ ಮಾಡಲಿದೆ.

By Shwetha Ps
|

ಸ್ಯಾಮ್‌ಸಂಗ್ ಮತ್ತೊಮ್ಮೆ ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್8 + ಅನ್ನು ಭಾರತದ ಮಾರುಕಟ್ಟೆಯಲ್ಲಿ ಬೆಲೆಯನ್ನು ಕಡಿಮೆ ಮಾಡಲಿದೆ. ಈ ಡಿವೈಸ್ 6 ಜಿಬಿ RAM ಅನ್ನು ಪಡೆದುಕೊಂಡಿದ್ದು ಈಗ ರೂ 65,900 ಕ್ಕೆ ಲಭ್ಯವಿದೆ. ಇದರ ಬೆಲೆ ರೂ 5,000 ಕ್ಕೆ ಇಳಿಕೆಯಾಗಿದೆ. ಬರೇ ಎರಡು ತಿಂಗಳಲ್ಲಿ ಬೆಲೆ ಕಡಿಮೆಯಾಗಿರುವುದಕ್ಕೆ ಸ್ಯಾಮ್‌ಸಂಗ್ ಡಿವೈಸ್ ಸಾಕ್ಷಿಯಾಗಿದೆ.

ವಾಹ್ ಸೂಪರ್! ಸ್ಯಾಮ್‌ಸಂಗ್‌ನ ಹೊಸ ಡಿವೈಸ್‌ಗಳ ಬೆಲೆ ಇಳಿಕೆ

ಗ್ಯಾಲಕ್ಸಿ ಎಸ್8 + ನ ಬೆಲೆ ಮೊದಲು 70,900 ಆಗಿತ್ತು. ತನ್ನ ಹೊಸ ಡಿವೈಸ್‌ಗಳನ್ನು ಲಾಂಚ್ ಮಾಡಿದ ಕೂಡಲೆಯೇ ಕೆಲವೇ ದಿನಗಳಲ್ಲಿ ಕಂಪೆನಿಯು ಬೆಲೆಯನ್ನು ಕಡಿಮೆ ಮಾಡುತ್ತದೆ. ಕೊರಿಯನ್ ಸ್ಥಾಪಕವು ಗ್ಯಾಲಕ್ಸಿ ನೋಟ್ 8 ಫ್ಯಾಬ್ಲೆಟ್ ಅನ್ನು ಈಗಾಗಲೇ ಪ್ರದರ್ಶಿಸಿದ್ದು, ಭಾರತಕ್ಕೆ ಕೂಡಲೇ ಇದುಪ ಪ್ರವೇಶಿಸಲಿದೆ.

ಗ್ಯಾಲಕ್ಸಿ ನೋಟ್ 8 ಸ್ಯಾಮ್‌ಸಂಗ್‌ನ ಹೆಚ್ಚು ಸುಧಾರಿತ ನೋಟ್ ಡಿವೈಸ್ ಆಗಿ ಈಗಿನವರೆಗೆ ಪ್ರಸಿದ್ಧಿಯಲ್ಲಿದೆ. ಈ ಫೋನ್ ಸಿದ್ಧಪಡಿಸುವಲ್ಲಿ ಸ್ಯಾಮ್‌ಸಂಗ್ ಹೆಚ್ಚಿನ ಇಂಜಿನಿಯರಿಂಗ್ ಕೆಲಸಗಳನ್ನು ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 + ಸ್ಮಾರ್ಟ್‌ಫೋನ್ 128 ಜಿಬಿ ಸಂಗ್ರಹಣೆಯೊಂದಿಗೆ ಬಂದಿದ್ದು ಇದು 6ಜಿಬಿ RAM ಅನ್ನು ಪಡೆದುಕೊಂಡಿದೆ. 6.2 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಇದು ಹೊಂದಿದ್ದು 2960x1440 ಪಿಕ್ಸೆಲ್‌ಗಳು ಇದರಲ್ಲಿದೆ. ಇದರ ಪ್ಯಾನೆಲ್ ಡಿಸ್‌ಪ್ಲೇ 18:5:9 ಅನ್ನು ಹೊಂದಿದೆ. ಡ್ಯುಯಲ್ ಅಲ್ಟ್ರಾ ವೈಡ್ ಸ್ಕ್ರೀನ್ ಫೋನ್‌ನಲ್ಲಿದೆ.

ಸರಹಾ ಆಪ್ ನಿಮ್ಮ ಕಾಂಟೆಕ್ಟ್ ಗಳನ್ನು ಕದಿಯುತ್ತದೆ ಎಚ್ಚರ.!ಸರಹಾ ಆಪ್ ನಿಮ್ಮ ಕಾಂಟೆಕ್ಟ್ ಗಳನ್ನು ಕದಿಯುತ್ತದೆ ಎಚ್ಚರ.!

What do you mean by Hybrid SIM Slot? ಹೈಬ್ರೀಡ್ ಸಿಮ್ ಸ್ಲಾಟ್ ಫೋನ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಫೋನ್ ಕ್ಯಾಮೆರಾದಲ್ಲಿ 12 ಎಮ್‌ಪಿ ಮುಖ್ಯವಾಗಿದ್ದು ಅಪಾರ್ಚರ್ ಮತ್ತು ಓಐಎಸ್ ಇದರಲ್ಲಿದೆ. ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾ ಇದೆ. ಫೋನ್ 128 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು 256 ಜಿಬಿ ಸಂಗ್ರಹಣೆಯನ್ನು ಹೊಂದಿದೆ. ಡ್ಯುಯಲ್ ಸಿಮ್ ಕಾರ್ಡ್ ಇದರಲ್ಲಿದೆ. 4ಜಿ ಎಲ್‌ಟಿಇ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದರಲ್ಲಿದೆ. ಸ್ಯಾಮ್‌ಸಂಗ್ ಪೇ ಕೂಡ ಇದರಲ್ಲಿದೆ.

ಇದು ಐರಿಸ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದ್ದು ಫೇಶಿಯಲ್ ರೆಕಾಗ್ನಿಶನ್ ಅನ್ನು ಹೊಂದಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದರಲ್ಲಿದೆ. ಬ್ಯಾಟರಿಯು 3500 mAh ಆಗಿದೆ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿದೆ. ಇದು ನೀರು ಮತ್ತು ಧೂಳು ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

Read more about:
English summary
Samsung has dropped the price of Galaxy S8+ by Rs. 5,000 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X