ಸ್ಯಾಮ್‌ಸಂಗ್‌ನಿಂದ ಹೊಸ ಆ್ಯಪ್‌ ಲಾಂಚ್‌! ಇದರ ಕಾರ್ಯನಿರ್ವಹಣೆ ಏನು?

|

ಇಂದಿನ ದಿನಗಳಲ್ಲಿ ಡಿವೈಸ್‌ಗಳಿಂದ ಡಿವೈಸ್‌ಗಳಿಗೆ ಫೈಲ್‌ ಟ್ರಾನ್ಸ್‌ಫರ್‌ ಮಾಡುವುದಕ್ಕೆ ಸಾಕಷ್ಟು ಅಪ್ಲಿಕೇಶನ್‌ಗಳಿವೆ. ಇವುಗಳ ಮೂಲಕ ಹಳೆ ಡಿವೈಸ್‌ನಿಂದ ಹೊಸ ಡಿವೈಸ್‌ಗೆ, ಸ್ನೇಹಿತರಿಂದ ಸ್ನೇಹಿತರಿಗೆ ಫೈಲ್‌ ವರ್ಗಾವಣೆ ಮಾಡುವುದು ಸಾಮಾನ್ಯವಾಗಿದೆ. ಇದೀಗ ಇದೇ ಸಾಲಿಗೆ ಸೇರುವ ಹೊಸ ಅಪ್ಲಿಕೇಶನ್‌ ಒಂದನ್ನು ಸ್ಯಾಮ್‌ಸಂಗ್‌ ಕಂಪೆನಿ ಪರಿಚಯಿಸಿದೆ. ಇದರ ಹೆಸರು ಡ್ರಾಪ್‌ಶಿಪ್‌ ಎಂದು ಹೇಳಲಾಗಿದೆ. ಇನ್ನು ಈ ಆ್ಯಪ್‌ ಇತರೆ ಫೈಲ್‌ ಟ್ರಾನ್ಸಫರ್‌ ಆ್ಯಪ್‌ಗಳಿಗಿಂತ ಭಿನ್ನವಾಗಿದ್ದು, ಸರಳವಾಗಿ ಫೈಲ್‌ ವರ್ಗಾವಣೆ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಡ್ರಾಪ್‌ಶಿಪ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಡ್ರಾಪ್‌ಶಿಪ್‌ ಆ್ಯಪ್‌ ಕ್ರಾಸ್-ಪ್ಲಾಟ್‌ಫಾರ್ಮ್ ಫೈಲ್ ಟ್ರಾನ್ಸಫರ್‌ ಮಾಡುವುದಕ್ಕೆ ಸಹಾಯ ಮಾಡಲಿದೆ. ಇದು ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತು ಐಫೋನ್‌ನಲ್ಲಿ ಫೈಲ್‌ ಟ್ರಾನ್ಸಫರ್‌ ಮಾಡಲಿದೆ. ಪ್ರಸ್ತುತ ಐಪ್ಯಾಡ್‌ಗಳು, ಐಫೋನ್‌ಗಳು ಮತ್ತು ವೆಬ್ ಸೇರಿದಂತೆ ಎಲ್ಲಾ ಗ್ಯಾಲಕ್ಸಿ ಫೋನ್‌ಗಳು, ಟ್ಯಾಬ್ಲೆಟ್‌ಗಳಲ್ಲಿ ಲಭ್ಯವಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಡ್ರಾಪ್‌ಶಿಪ್‌ ಆ್ಯಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಡ್ರಾಪ್‌ಶಿಪ್‌ ಅಪ್ಲಿಕೇಶನ್‌ ಬಳಸಿ ವಿವಿಧ ಡಿವೈಸ್‌ಗಳ ನಡುವೆ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು. ಇದಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಶೇರ್‌ ಮಾಡುವಾಗ ಲಿಂಕ್‌ ಕ್ರಿಯೆಟ್‌ ಮಾಡುವುದು, ಇಲ್ಲವೇ ಕ್ಯೂರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕಾಗುತ್ತದೆ. ಇದು ಬಳಕೆದಾರರಿಗೆ ಲಿಂಕ್‌ಗಳನ್ನು ಕ್ರಿಯೆಟ್‌ ಮಾಡುವ, ಟೈಂ-ಲಿಮಿಟ್‌ ಸೆಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ದೈನಂದಿನ ಆಧಾರದ ಮೇಲೆ 5GB ಗಾತ್ರದವರೆಗಿನ ಟ್ರಾನ್ಸಫರ್ ಅನ್ನು ಬೆಂಬಲಿಸಲಿದೆ.

ಡ್ರಾಪ್‌ಶಿಪ್

ಇನ್ನು ಡ್ರಾಪ್‌ಶಿಪ್ ಅಪ್ಲಿಕೇಶನ್ ಉತ್ತಮ ಲಾಕ್ ಮಾಡ್ಯೂಲ್‌ನಂತೆ ಗ್ಯಾಲಕ್ಸಿ ಸ್ಟೋರ್‌ನಲ್ಲಿ ಲಭ್ಯವಿದೆ. ಇದ ಈ ಅಪ್ಲಿಕೇಶನ್‌ ಮೂಲಕ ಫೈಲ್‌ಗಳನ್ನು ಟ್ರಾನ್ಸಫರ್‌ ಮಾಡಬೇಕಾದರೆ ಇಂಟರ್‌ನೆಟ್‌ ಕನೆಕ್ಟಿವಿಟಿ ಅತ್ಯಗತ್ಯವಾಗಿದೆ. ಅಲ್ಲದೆ ಫೈಲ್‌ ಟ್ರಾನ್ಸಫರ್‌ ವೇಗವು ನೇರವಾಗಿ ಇಂಟರ್‌ನೆಟ್‌ ಕನೆಕ್ಟಿವಿಟಿ ವೇಗದ ಮೇಲೆ ಅವಲಂಬಿತವಾಗಿರುತ್ತದೆ. ಇದು ನಿಯರ್‌ ಬೈ ಶೇರ್‌, ಇನ್ಸಟಂಟ್‌ ಶೇರ್‌, ಬ್ಲೂಟೂತ್ ಅಥವಾ ವೈಫೈ ಮೂಲಕ ಫೈಲ್‌ ಟ್ರಾನ್ಸಫರ್‌ ಮಾಡುವ ಅಪ್ಲಿಕೇಶನ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಲಿಂಕ್

ಇದರಲ್ಲಿ ಫೈಲ್‌ಗಳನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದಕ್ಕಾಗಿ ಬಳಕೆದಾರರು ಪ್ಲಾಟ್‌ಫಾರ್ಮ್ ಮತ್ತು ಕಳುಹಿಸುವವರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಲಿಂಕ್ ಅನ್ನು ಕ್ರಿಯೆಟ್‌ ಮಾಡಲಾಗುತ್ತದೆ, ಈ ಲಿಂಕ್ ಅನ್ನು ನೀವು ಶೇರ್‌ ಮಾಡಲು ಬಯಸುವ ವ್ಯಕ್ತಿಯ ಜೊತೆ ಶೇರ್‌ ಮಾಡಲಾಗುತ್ತದೆ. ಇಲ್ಲವೇ ಸ್ವೀಕರಿಸುವವರು QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಡ್ರಾಪ್‌ಶಿಪ್ ಅಪ್ಲಿಕೇಶನ್‌ನಲ್ಲಿ ರೀಸಿವರ್‌ ನೇರವಾಗಿ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಡ್ರಾಪ್‌ಶಿಪ್‌

ಇನ್ನು ಡ್ರಾಪ್‌ಶಿಪ್‌ ಅಪ್ಲಿಕೇಶನ್‌ ಪ್ರಸ್ತುತ ಆಂಡ್ರಾಯ್ಡ್‌ 13-ಆಧಾರಿತ OneUI 5.0 ಚಾಲನೆಯಲ್ಲಿರುವ ಡಿವೈಸ್‌ಗಳನ್ನು ಮಾತ್ರ ಬೆಂಬಲಿಸಲಿದೆ. ಇದನ್ನು ನೀವು ಗ್ಯಾಲಕ್ಸಿ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದು. ಇದು ಐಪ್ಯಾಡ್‌, ಐಫೋನ್‌, ಗ್ಯಾಲಕ್ಸಿ ಫೋನ್‌ಗಳು, ಟ್ಯಾಬ್ಲೆಟ್‌ ಮತ್ತು ವೆಬ್‌ನಲ್ಲಿ ಲಭ್ಯವಾಗಲಿದ್ದು, ಪ್ರಸ್ತುತ ದಕ್ಷಿಣ ಕೊರಿಯಾದ ಬಳಕೆದಾರರಿಗೆ ಸೀಮಿತವಾಗಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್ ಪರಿಚಯಿಸಿದೆ. ಇದು ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅಂದರೆ ವೈಯಕ್ತೀಕರಣ ಅಪ್ಲಿಕೇಶನ್‌ಗಳ ಕಂಪನಿಯ ಗುಡ್ ಲಾಕ್ ಸೂಟ್‌ನ ಒಂದು ಭಾಗವಾಗಿದೆ. ಇದರಿಂದ ನೀವು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾವನ್ನು ಬಳಸುವಾಗ ಅಪ್ಡೇಟೆಡ್‌ ಫೀಚರ್ಸ್‌ಗಳು ಲಭ್ಯವಾಗಲಿವೆ. ಇದನ್ನು ಬಳಸುವ ಮೂಲಕ ನಿಮ್ಮ ಫೋಟೋಗಳನ್ನು ಉತ್ತಮವಾಗಿ ಸೆರೆಹಿಡಿಯಲು ಸಾಧ್ಯವಾಗಲಿದೆ.

ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ಮೂಲಕ ಗ್ಯಾಲಕ್ಸಿ ಫೋನ್‌ ಬಳಕೆದಾರರು ಮೃದುವಾದ ಫೋಟೋ ವಿನ್ಯಾಸವನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ನೀವು ಫೋಟೋ ಶೂಟ್‌ ಮಾಡುವ ಕಂಟೆಂಟ್‌ ದೂರವಿದ್ದರೆ ಸ್ವಯಂಚಾಲಿತ ಲೆನ್ಸ್ ಸ್ವಿಚಿಂಗ್ ಅನ್ನು ಸಹ ನಿರೀಕ್ಷಿಸಬಹುದು. ಇದಲ್ಲದೆ, ಹೊಸ ಕ್ಯಾಮರಾ ಅಸಿಸ್ಟೆಂಟ್‌ ಅಪ್ಲಿಕೇಶನ್ ಫೋಟೋ ಮೋಡ್ ಅನ್ನು ಬಳಸುವಾಗಲೂ ವೀಡಿಯೊಗಳನ್ನು ಶೂಟ್ ಮಾಡಲು ನಿಮಗೆ ಅನುಮತಿಸಲಿದೆ. ಕ್ಯಾಮೆರಾ ಅಸಿಸ್ಟಂಟ್‌ ಮೂಲಕ ವೀಡಿಯೊಗಳನ್ನು ರೆಕಾರ್ಡಿಂಗ್ ಪ್ರಾರಂಭಿಸಲು ಬಳಕೆದಾರರು ಶಟರ್ ಬಟನ್ ಅನ್ನು ಬಳಸಬಹುದಾಗಿದೆ.

Best Mobiles in India

English summary
Samsung has launched a new file-sharing app called a 'Dropship'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X