ಸ್ಯಾಮ್‌ಸಂಗ್‌ ಟಿವಿ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್‌ ಟೈಂ ಸಿಗೋದಿಲ್ಲ!

|

ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಕೂಡ ಪ್ರಸಿದ್ಧ ಬ್ರ್ಯಾಂಡ್‌ ಆಗಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ವಿವಿಧ ಬೆಲೆಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಅನೇಕ ಸ್ಮಾರ್ಟ್‌ಟಿವಿಗಳು ಖರೀದಿಗೆ ಲಭ್ಯವಿದೆ. ಇನ್ನು ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ಕೂಡ ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಲೈಫ್‌ಸ್ಟೈಲ್‌ ಮತ್ತು ಪ್ರೀಮಿಯಂ ಟಿವಿ ಶ್ರೇಣಿಯನ್ನು ಖರೀದಿಸುವವರಿಗಾಗಿ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ' ಅನ್ನು ಘೋಷಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ಖರೀದಿಸುವವರಿಗಾಗಿ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ' ಅನ್ನು ಪರಿಚಯಿಸಿದೆ. ಇದಕ್ಕಾಗಿ ನಿಯೋ ಕ್ಯೂಎಲ್‌ಇಡಿ, ದಿ ಫ್ರೇಮ್ ಮತ್ತು ಕ್ರಿಸ್ಟಲ್ ಯುಹೆಚ್‌ಡಿ, ಫ್ಲಿಪ್‌ಕಾರ್ಟ್ ಸಹಯೋಗವನ್ನು ಕೂಡ ಹೊಂದಿದೆ. ಇನ್ನು ಈ ಪ್ರೋಗ್ರಾಂನಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವವರು ಕೇವಲ 70% ಹಣವನ್ನು ಪಾವತಿಸಿ ಖರೀದಿಸಬಹುದು. ಇನ್ನುಳಿದ 30% ಹಣವನ್ನು ಒಂದು ವರ್ಷದ ನಂತರ ಪಾವತಿಸುವುದಕ್ಕೆ ಅವಕಾಶ ನೀಡಿದೆ. ಇದರಿಂದ ಸ್ಯಾಮ್‌ಸಂಗ್‌ನ ಪ್ರೀಮಿಯಂ ಸ್ಮಾರ್ಟ್‌ಟಿವಿ ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಗಳನ್ನು ನೀಡಲಿದೆ. ಇದಕ್ಕಾಗಿ ನೀವು ಕೇವಲ 70% ಹಣನ್ನು ಹೊಂದಿಸಿಕೊಂಡರೆ ಸಾಕು.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ' ಮೂಲಕ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಗುಡ್‌ ನ್ಯೂಸ್‌ ನೀಡಿದೆ. ಕೇವಲ 70% ಹಣವನ್ನು ಪಾವತಿಸುವ ಮೂಲಕ ನಿಮ್ಮ ನೆಚ್ಚಿನ ಸ್ಮಾರ್ಟ್‌ಟಿವಿಗಳನ್ನು ಖರೀದಿಸಬಹುದಾಗಿದೆ. ಇನ್ನುಳಿದ ಹಣವನ್ನು ಪಾವತಸುವುದಕ್ಕೆ ಒಂದು ವರ್ಷದ ಅವಧಿಯನ್ನು ಸಹ ನೀಡಲಿದೆ. ಸ್ಯಾಮ್‌ಸಂಗ್‌ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ' ಮೂಲಕ ನೀವು ನಿಮ್ಮ ಸ್ಮಾರ್ಟ್‌ಟಿವಿಗಳನ್ನು ಅಪ್ಡೇಟ್‌ ಮಾಡಬಹುದು. ಈ ಪ್ರೋಗ್ರಾಂನಲ್ಲಿ ನಿಯೋ ಕ್ಯೂಎಲ್‌ಇಡಿ, ದಿ ಫ್ರೇಮ್ ಮತ್ತು ಪ್ರೀಮಿಯಂ ಟಿವಿಯ ಕ್ರಿಸ್ಟಲ್ ಯುಹೆಚ್‌ಡಿ ಲೈನ್‌ಅಪ್‌ಗಳನ್ನು ಖರೀದಿಸುವುದಕ್ಕೆ ಅವಕಾಶವಿದೆ. ಹಾಗಾದ್ರೆ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ' ಕಾರ್ಯಕ್ರಮದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್‌ಗ್ರೇಡ್

"ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ'' ಟಿವಿಗಳಿಗಾಗಿ ಸ್ಯಾಮ್‌ಸಂಗ್‌ ನಡೆಸುತ್ತಿರುವ ಮೊದಲ ಕಾರ್ಯಕ್ರಮಗವಾಗಿದೆ. ಸ್ಮಾರ್ಟ್‌ಟಿವಿ ಖರಿದಿಸುವ ಗ್ರಾಹಕರಿಗೆ ಕೈಗೆಟುಕುವ ಪರಿಹಾರಗಳನ್ನು ನೀಡುವುದಕ್ಕೆ ನಾವು ಫ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಪರಿಚಯಿಸಿದ್ದೇವೆ ಎಂದು ಸ್ಯಾಮ್‌ಸಂಗ್‌ ಹೇಳಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಹಕರು ಅತ್ಯುತ್ತಮವಾದ ತಂತ್ರಜ್ಞಾನಕ್ಕೆ ಸ್ಮಾರ್ಟ್‌ಟಿವಿಗಳನ್ನು ಅಪ್‌ಗ್ರೇಡ್ ಮಾಡಲು ಅವಕಾಶ ಸಿಗಲಿದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾದ ಕನ್ಶೂಮರ್‌ ಎಲೆಕ್ಟ್ರಾನಿಕ್ಸ್‌ನ ಆನ್‌ಲೈನ್ ವ್ಯವಹಾರದ ಹಿರಿಯ ನಿರ್ದೇಶಕ ಸಂದೀಪ್ ಸಿಂಗ್ ಅರೋರಾ ಹೇಳಿದರು.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ 'ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ'ನಲ್ಲಿ ಗ್ರಾಹಕರು ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K UHD ಟಿವಿಯನ್ನು 23,093ರೂ.ಗನ್ನು ಮುಂಗಡ ಪಾವತಿಮಾಡುವ ಮೂಲಕ ಖರೀದಿಸಬಹುದು. ಇನ್ನುಳಿದ 9,897ರೂ.ಗಳನ್ನು ಉಳಿದ 12 ತಿಂಗಳ ನಂತರ ಪಾವತಿಸಬಹುದು. ಇದಲ್ಲದೆ ಸ್ಯಾಮ್‌ಸಂಗ್‌ ಫ್ರೇಮ್‌ 2021 ಸರಣಿಯ QLED ಅಲ್ಟ್ರಾ HD (4K) ಸ್ಮಾರ್ಟ್ ಟಿವಿಯನ್ನು ಕೇವಲ 38,493ರೂ.ಗಳನ್ನು ಮುಂಗಡ ಪಾವತಿ ಮಾಡುವ ಮೂಲಕ ಖರೀದಿಸಬಹುದು. ಇನ್ನುಳಿದ 16,497ರೂ. ಹಣವನ್ನು ಒಂದು ವರ್ಷದ ನಂತರ ಪಾವತಿಸುವುದಕ್ಕೆ ಅವಕಾಶವಿದೆ.

ಕ್ರಿಸ್ಟಲ್ UHD ಟಿವಿಗಳು

ಕ್ರಿಸ್ಟಲ್ UHD ಟಿವಿಗಳು

ಕ್ರಿಸ್ಟಲ್ 4K UHD ಟಿವಿಗಳು ಪ್ರತಿಯೊಂದು ಸೂಕ್ಷ್ಮತೆಯೊಂದಿಗೆ ಲೈಫೈಟೈಮ್‌ ಇಮೇಜ್‌ ಅನ್ನು ನೀಡುವ ಏಮ್‌ ಹೊಂದಿದೆ. ಇನ್ನು ಕ್ರಿಸ್ಟಲ್ 4K UHD ಟಿವಿ ಶ್ರೇಣಿಯ ಸ್ಮಾರ್ಟ್‌ಟಿವಿಗಳಲ್ಲಿ HDR ಅನುಭವವನ್ನು ಮಾಸ್ಟರ್ ಮಾಡಲಾಗಿದೆ. ಇದು ಕಂಟೆಂಟ್‌ ಅನ್ನು ನೈಜವಾಗಿ ಆನಂದಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಇದಲ್ಲದೆ ಗೇಮಿಂಗ್ ಉತ್ಸಾಹಿಗಳಿಗೆ ಸುಗಮ ಚಲನೆಗಳು ಮತ್ತು ಸ್ಪಷ್ಟವಾದ ಚಿತ್ರಗಳನ್ನು ಸಕ್ರಿಯಗೊಳಿಸುವ ಮೋಷನ್ ಎಕ್ಸ್‌ಸೆಲೇಟರ್ ಟರ್ಬೊ ಅನ್ನು ಕೂಡ ಅಳವಡಿಸಲಾಗಿದೆ. ಈ ಹೊಸ ಮಾದರಿಗಳು ಯುನಿವರ್ಸಲ್ ಗೈಡ್, ಗೇಮ್ ಮೋಡ್, ಟ್ಯಾಪ್ ವ್ಯೂ, ಸ್ಯಾಮ್‌ಸಂಗ್ ಟಿವಿ ಪ್ಲಸ್ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ.

ನಿಯೋ QLED ಟಿವಿಗಳು

ನಿಯೋ QLED ಟಿವಿಗಳು

"ಸ್ಮಾರ್ಟ್ ಅಪ್‌ಗ್ರೇಡ್ ಪ್ರೋಗ್ರಾಂ''ನಲ್ಲಿ ನೀವು ಸ್ಯಾಮ್‌ಸಂಗ್‌ನ ನಿಯೋ QLED ಟಿವಿಗಳನ್ನು ಖರೀದಿಸಬಹುದಾಗಿದೆ. ಸ್ಯಾಮ್‌ಸಂಗ್‌ ಕಂಪೆನಿ ಪರಿಚಯಿಸಿರುವ ಇತ್ತೀಚಿನ ಸ್ಮಾರ್ಟ್‌ಟಿವಿಗಳಲ್ಲಿ ನಿಯೋ QLED ಟಿವಿಗಳು ಕೂಡ ಸೇರಿವೆ. ಈ ಸ್ಮಾರ್ಟ್‌ಟಿವಿಗಳು ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೊ ಹೊಂದಿವೆ. ಜೊತೆಗೆ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 8K ಒಳಗೊಂಡಿದ್ದು, ಟ್ರೂಲಿ ಡೆಪ್ತ್ ವರ್ಧಕದೊಂದಿಗೆ ಬರುತ್ತದೆ. ಇನ್ನು ಸ್ಯಾಮ್‌ಸಂಗ್‌ನ 2022 ನಿಯೋ ಕ್ಯೂಎಲ್‌ಇಡಿ ಟಿವಿಗಳು ವಿಶೇಷವಾದ ಫೀಚರ್ಸ್‌ಗಳು ಮತ್ತು ಯೂಸರ್‌ ಇಂಟರ್‌ಫೇಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಟಿವುಗಳಲ್ಲಿ ಕಂಟೆಂಟ್‌ ವಾಚ್‌, ಡಿವೈಸ್‌ ಕಂಟ್ರೋಲ್‌, ಪ್ಲೇ ಗೇಮ್‌ ಹಾಗೂ ವರ್ಕ್ ಔಟ್‌ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.

ಫ್ರೇಮ್ ಟಿವಿ

ಫ್ರೇಮ್ ಟಿವಿ

ಈ ಸ್ಮಾರ್ಟ್‌ಟಿವಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಕ್ಕಾಗಿ 100% ಕಲರ್‌ ವಾಲ್ಯೂಮ್‌ ಅನ್ನು ನೀಡಲಾಗಿದೆ. ಇದು QLED ಟಕ್ನಾಲಜಿ ಹೊಂದಿದ್ದು, ಉತ್ತಮ ಚಿತ್ರ ಗುಣಮಟ್ಟವನ್ನು ನೀಡುವ ಫ್ರೇಮ್ ಏಮ್‌ ಅನ್ನು ಹೊಂದಿದೆ. ಇನ್ನು ಫ್ರೇಮ್‌ ಟಿವಿಗಳಲ್ಲಿ ಸ್ಯಾಮ್‌ಸಂಗ್‌ನ ಕ್ವಾಂಟಮ್ ಡಾಟ್ ತಂತ್ರಜ್ಞಾನ, ಪವರ್‌ಫುಲ್‌ ಕ್ವಾಂಟಮ್ ಪ್ರೊಸೆಸರ್ 4K, 4K AI ಅಪ್ ಸ್ಕೇಲಿಂಗ್ ಕ್ಯಾಪಬ್ಲಿಟಿಸ್‌ ಹೊಂದಿದೆ. ಅಲ್ಲದೆ ನಿಮ್ಮ ರೂಮಿನ ಪರಿಸರಕ್ಕೆ ತಕ್ಕಂತೆ ಸೌಂಡ್‌ ಸೆಟ್ಟಿಂಗ್ಸ್‌ ಅನ್ನು ಆಟೋ-ಆಪ್ಟಿಮೈಸ್ ಮಾಡುವ ಸ್ಪೇಸ್‌ ಫಿಟ್‌ ಸೌಂಡ್‌ ಫೀಚರ್ಸ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಸ್ಮಾರ್ಟ್‌ಟಿವಿಗಳಿಗಾಗಿ ಹೊಸ ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಅನ್ನು ಪರಿಚಯಿಸಿದೆ. ಇದರಿಂದ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ Xbox, ಎನ್‌ವಿಡಿಯಾ ಜಿಪೋರ್ಸ್‌ ನೌ, ಗೂಗಲ್‌ ಸ್ಟಾಡಿಯಾ, ಟ್ವಿಚ್‌ ಮತ್ತು Utomik ಸೇರಿದಂತೆ ವಿವಿಧ ಗೇಮ್ ಸ್ಟ್ರೀಮಿಂಗ್ ಸೇವೆಗೆ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಶೀಘ್ರದಲ್ಲೇ ಅಮೆಜಾನ್ ಲೂನಾವನ್ನು ಕೂಡ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಮೂಲಕ ನೀವು ಸ್ಮಾರ್ಟ್‌ಟಿವಿಗಳಲ್ಲಿ ಗೇಮಿಂಗ್‌ ಅನ್ನು ಅನುಭವಿಸಬಹುದು. ಜನಪ್ರಿಯ ಗೇಮ್‌ ಸ್ಟ್ರೀಮಿಂಗ್‌ ಸೇವೆಗಳಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದು.

Best Mobiles in India

English summary
Samsung smart TV's now available with 70 percent of their original price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X