Subscribe to Gizbot

ನೂರು ಸಲ ಧರಿಸಿದ್ರೂ ಈ ಶರ್ಟ್‌ ಕೊಳೆ ಆಗಲ್ಲ

Posted By:

ಶರ್ಟ್‌ಗೆ ಯಾವಾಗ್ಲೂ ಇಸ್ತ್ರೀ ಮಾಡಿ ಮಾಡಿ ಮತ್ತು ಕೊಳೆಯಾದ್ರೆ ತೊಳೆದು ತೊಳೆದು ಬೇಸತ್ತು ಹೋಗಿದ್ದೀರಾ? ಹಾಗಾದ್ರೆ ಇನ್ನು ಮುಂದೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಇಂಗ್ಲೆಂಡ್‌ನಲ್ಲಿರವ ಅಮರಿಕದ ಬಟ್ಟೆ ತಯಾರಕ ಕಂಪೆನಿ ಹೊಸದೊಂದು ಶರ್ಟ್ ಬಿಡುಗಡೆ ಮಾಡಿದೆ.ಈ ಶರ್ಟ್‌ನ್ನು ನೂರು ದಿನ ಕಾಲ ಪ್ರತಿದಿನ ಧರಿಸಿದ್ರೂ ಒಂದು ಚೂರು ಕೊಳೆ ಅಗುದಿಲ್ಲ.ಜೊತೆಗೆ ಇಸ್ರ್ರೀ ಹಾಕುವ ಅಗತ್ಯವೇ ಇಲ್ವಂತೆ.ಕೊಳೆಯಾದ್ರೂ ಅದೇ ಸ್ವಯಂಚಾಲಿತವಾಗಿ ಕ್ಲೀನ್‌ ಮಾಡುತ್ತಂತೆ.!

ನೂರು ಸಲ ಧರಿಸಿದ್ರೂ ಈ ಶರ್ಟ್‌ ಕೊಳೆ ಆಗಲ್ಲ

ಇದನ್ನೂ ಓದಿ : ಸೋಲಾರ್‌ ಶರ್ಟ್‌ ಹಾಕಿ. ಕೂಲ್‌ ಕೂಲ್‌ ಆಗಿ

ವೂಲ್‌ ಆಂಡ್‌ ಪ್ರಿನ್ಸ್‌ ಕಂಪೆನಿ ಹೊಸದೊಂದು ಉಣ್ಣೆಯ ಫ್ಯಾಬ್ರಿಕ್‌ ಬಳಸಿ ಈ ಶರ್ಟ್‌ನ್ನು ತಯಾರಿಸಿದೆ. ಈ ಉಣ್ಣೆಯ ಫ್ಯಾಬ್ರಿಕ್‌ನ್ನು ದೇಹದ ಬೆವರು ಬಂದ ಕೂಡಲೇ ಬೆವರನ್ನು ಆವಿಮಾಡುವ ಮೂಲಕ ವಾಸನೆ ಬಾರದಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಈ ಶರ್ಟ್‌ನ್ನು ಹೇಗೆ ಬೇಕಾದ್ರೂ ಮಡಚಿ,ಯಾವ ರೀತಿ ಬೇಕಾದ್ರೂ ಮುದ್ದೆ ಮಾಡಿದ್ರೂ ಈ ಶರ್ಟ್‌ಗೆ ಏನು ಆಗುದಿಲ್ವಂತೆ. ಶರ್ಟ್‌ ಹೇಗೆ ಇದೆಯೋ ಹಾಗೆ ಇರುತ್ತದೆ. ಇಸ್ತ್ರೀ ಮಾಡುವ ಅಗತ್ಯವೇ ಇಲ್ಲ ಎಂದು ಕಂಪೆನಿ ಗ್ರಾಹಕರಿಗೆ ಭರವಸೆ ನೀಡಿದೆ.

ಇದನ್ನೂ ಓದಿ : ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಈ ಕಂಪೆನಿ 15 ಬಾರಿ ಈ ಶರ್ಟಿನ ಗುಣಮಟ್ಟವನ್ನು ಪರೀಕ್ಷೆ ನಡೆಸಿದ್ದು, ಬೆನ್ನು ಹೊರೆ ಹೊರುವ ಕೆಲಸಗಾರರು ಈ ಬಟ್ಟೆಯನ್ನು ಧರಿಸಿ ಕೆಲಸ ಮಾಡಿದ್ರೂ ಈ ಶರ್ಟ್‌ಗೆ ಏನು ಆಗಿಲ್ಲ ಎಂದು ಕಂಪೆನಿ ಸಷ್ಟಪಡಿಸಿದೆ.ಈ ಹೊಸ ಬಟ್ಟೆಗೆ ಕಂಪೆನಿ 63 ಪೌಂಡ್‌ (5,300 ರೂ.) ದರವನ್ನು ನಿಗದಿ ಮಾಡಿದೆ.

ಇದನ್ನು ಓದಿ : ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot