ಜಿಯೋ ಸಮ್ಮರ್ ಆಫರ್ ಕ್ಯಾನ್ಸಲ್..ಏಕೆ? ಒಂದೇ ರಾತ್ರಿಯಲ್ಲಿ ಏನೆಲ್ಲಾ ಆಯ್ತು?

Written By:

ಆರು ತಿಂಗಳ ಉಚಿತ ಸೇವೆಯ ನಂತರ ಮತ್ತೆ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿದ್ದ ಜಿಯೋ ನೂತನ ಆಫರ್ ಆಫರ್‌ ಅನ್ನು ಹಿಂಪಡೆದಿದೆ.!! 303 ರೂಪಾಯಿಯ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದ್ದರೆ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ಪಡೆಯಬಹುದು ಎಂದಿದ್ದ ಜಿಯೋ ಇದೀಗ ಟ್ರಾಯ್ ಸೂಚನೆಗೆ ತಲೆಬಾಗಿದೆ.!!

ಸಮ್ಮರ್ ಸರ್‌ಪ್ರೈಸ್ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದ್ದ ಜಿಯೋ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯ ಹಿನ್ನೆಲೆಯಲ್ಲಿ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಿದ್ದ ಜಿಯೋ ನೂತನ ಆಫರ್ ಆಫರ್‌ ಅನ್ನು ಹಿಂಪಡೆದಿದ್ದು, ಮೊದಲಿದ್ದ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿರಿ: ಜಿಯೋ, ಏರಟೆಲ್ ಸೇರಿದಂತೆ ಟೆಲಿಕಾಂಗೆ ಶಾಕ್ ನೀಡಿದ ಮೋದಿ!!

ಹಾಗಾದರೆ, ಒಂದೇ ರಾತ್ರಿಯಲ್ಲಿ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಕೊನೆಗೊಂಡಿದ್ದು ಏಕೆ? ಈಗ ಜಿಯೋ ಆಫರ್ ಏನಿದೆ? ಸರ್‌ಪ್ರೈಸ್ ಆಫರ್ ಬದಲಾಗಿದ್ದು ಏಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಪ್ರಕಟಣೆಯಲ್ಲಿ ಹೊರಡಿಸಿರುವುದು ಏನು?

ಜಿಯೋ ಪ್ರಕಟಣೆಯಲ್ಲಿ ಹೊರಡಿಸಿರುವುದು ಏನು?

ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಸಮ್ಮರ್ ಸರ್‌ಪ್ರೈಸ್ ಆಫರ್ ರಿಚಾರ್ಜ್ ಮಾಡಿಸಿದರೆ 303 ರೂಪಾಯಿ ರೀಚಾರ್ಜ್‌ಗೆ ಕೇವಲ 30 ದಿನಗಳಿಗೆ ಮಾತ್ರ ಜಿಯೋ ಸೌಲಭ್ಯ ಪಡೆಯಲಿದ್ದಾರೆ ಎಂದು ಹೇಳಿದೆ.

ಸರ್‌ಪ್ರೈಸ್ ಆಫರ್ ಬದಲಾಗಿದ್ದು ಏಕೆ?

ಸರ್‌ಪ್ರೈಸ್ ಆಫರ್ ಬದಲಾಗಿದ್ದು ಏಕೆ?

ಟೆಲಿಕಾಂನಲ್ಲಿ ಈಗಾಗಲೇ ದರಸಮರದ ಕಿಚ್ಚು ಹತ್ತಿದ್ದು, ಏರ್‌ಟೆಲ್‌ ಸೇರಿದಂತೆ ಉಳಿದೆಲ್ಲಾ ಕಂಪೆನಿಗಳು ಜಿಯೋ ಮತ್ತು ಟ್ರಾಯ್‌ ಮೇಲೆ ಕಿಡಿಕಾರಿದ್ದವು. ನಿಯಮಬಾಹಿರವಾಗಿ ಜಿಯೋ ಸೇವೆ ನೀಡುತ್ತಿದ್ದು, ಇದರಿಂದ ಇತರ ಟೆಲಿಕಾಂಗಳು ಮುಳುಗುತ್ತಿವೆ ಎಂದು ಕೋರ್ಟ್ ಮೊರೆಹೊಗಿದ್ದವು. ಹಾಗಾಗಿ, ಮುಂದಾಲೋಚನೆ ಮಾಡಿರುವ ಟ್ರಾಯ್ ಸಮ್ಮರ್ ಸರ್‌ಪ್ರೈಸ್ ಆಫರ್‌ಗೆ ತಡೆಯೊಡ್ಡಿದೆ ಎನ್ನಲಾಗಿದೆ.

ಈಗಾಗಲೇ ಸಮ್ಮರ್ ಸರ್‌ಪ್ರೈಸ್ ರೀಚಾರ್ಜ್ ಮಾಡಿಸಿದ್ದರೆ?

ಈಗಾಗಲೇ ಸಮ್ಮರ್ ಸರ್‌ಪ್ರೈಸ್ ರೀಚಾರ್ಜ್ ಮಾಡಿಸಿದ್ದರೆ?

ಪ್ರೈಮ್ ಸದಸ್ಯತ್ವ ಪಡೆದು 303 ಹಾಗೂ ಅದಕ್ಕಿಂತ ಮೇಲ್ಪಟ್ಟ ದರಗಳಲ್ಲಿ ರೀಚಾರ್ಜ್ ಮಾಡಿಸಿ ಸಮ್ಮರ್ ಆಫರ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರಿಗೆ ಈ ಮೊದಲು ಘೋಷಿಸಿದ್ದಂತೆ 3 ತಿಂಗಳ ಉಚಿತ ಡೇಟಾ, ಕರೆ ಆಫರ್ ಮುಂದುವರಿಯಲಿದೆ.!!

ಈಗ ಜಿಯೋ ಆಫರ್ ಏನಿದೆ?

ಈಗ ಜಿಯೋ ಆಫರ್ ಏನಿದೆ?

ಜಿಯೋ ಮೊದಲೇ ಹೇಳಿದಂತೆ, ಪ್ರೈಮ್ ಗ್ರಾಹಕರು 303 ರೂಪಾಯಿ ರೀಚಾರ್ಜ್ ಮಾಡಿಸಿ. ಪ್ರತಿದಿವಸ ಒಂದು ಜಿಬಿ ಡೇಟಾ ಮತ್ತು ಅನ್‌ಲಿಮಿಟೆಡ್ ಸೇವೆಗಳನ್ನು ಪಡೆಯಬಹುದಾಗಿದೆ. ಉಳಿದಂತೆ ಹಳೆಯ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.

ಇದೀಗ ಬಂದ ಸುದ್ದಿ..ಜಿಯೋ ಸಮ್ಮರ್ ಆಫರ್ ಪಡೆಯಲು ಲಾಸ್ಟ್‌ಚಾನ್ಸ್ ನೀಡಿದ ಅಂಬಾನಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The telecom regulator ordered Reliance Jio Infocomm to withdraw its Summer Surprise plan.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot