ಟ್ರಾಯ್‌ ಹೊಸ ನಿಯಮದ 'ಕೇಬಲ್​ ಬಿಲ್' ನೋಡಿ ಬೆಚ್ಚಿಬಿದ್ದ ಜನ!!

|

ಟ್ರಾಯ್ ತಂದಿರುವ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳು ಎಷ್ಟು ಗೊಂದಲಕಾರಿಯಾಗಿವೆ ಎಂದರೆ ಈಗಲೂ ಕೂಡ ಯಾವೊಂದು ಮಾಧ್ಯಮ ಕೂಡ ಸರಿಯಾದ ವಿವರಣೆ ನಿಡುವಲ್ಲಿ ವಿಫಲವಾಗಿದೆ. ಡಿಟಿಹೆಚ್ ಮತ್ತು ಕೇಬಲ್ ಟಿವಿ ಸೇವಾದಾತರು ಚಂದಾದಾರರಿಂದ ಎಷ್ಟು ಹಣ ಪಡೆಯಬಹುದು ಎನ್ನುವ ಕುರಿತ ಟ್ರಾಯ್ ನಿರ್ದೇಶನಗಳ ಅನುಷ್ಠಾನ ವಿಚಾರದಲ್ಲಿ ಗೊಂದಲಗಳು ಮುಂದುವರೆದಿದ್ದು, ಕಳೆದ ಡಿಸೆಂಬರ್ ತಿಂಗಳಿನಿಂದಲೂ ಬದಲಾಗತ್ತಲೇ ಬರುತ್ತಿರುವ ಟ್ರಾಯ್ ಪ್ರೆಸ್ ರಿಲೀಸ್‌ಗಳು ಮಾಧ್ಯಮದವರನ್ನು ಸಹ ಬೆಚ್ಚಿಬೀಳಿಸಿವೆ.

ಹೌದು, ಕೇವಲ 154 ರೂಪಾಯಿಗಳಲ್ಲಿ ಪೇ ಚಾನೆಲ್‌ಗಳನ್ನು ಸೇರಿ ಟಿವಿ ಚಾನಲ್‌ಗಳನ್ನು ವೀಕ್ಷಿಸಬಹುದು ಎಂಬ ಟ್ರಾಯ್ ಪ್ರೆಸ್ ರಿಲೀಸ್ ಅನ್ನು ನಂಬಿ ಎಲ್ಲಾ ಮಾಧ್ಯಮಗಳು ಕೇಬಲ್ ಬಿಲ್ ಕಡಿಮೆಯಾಗಲಿದೆ ಎಂದು ವರದಿ ಮಾಡಿದ್ದವು. ಆದರೆ, ನಂತರ ಟ್ರಾಯ್ ಚಾನಲ್ ಸೆಲೆಕ್ಟರ್‌ನಲ್ಲಿ 154 ರೂಪಾಯಿಗಳಲ್ಲಿ ಪೇ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಆಯ್ಕೆಯೇ ಇರಲಿಲ್ಲ. ಇದೀಗ ಟ್ರಾಯ್‌ನ ನೂತನ ನಿಯಮ ಮಾರ್ಚ್ ತಿಂಗಳ ಅಂತ್ಯದ ವರೆಗೂ ಮುಂದುವರೆದಿದ್ದು ಈಗಲೂ ಕೂಡ ಗೊಂದಲಕಾರಿಯೇ ಆಗಿದೆ.

ಟ್ರಾಯ್‌ ಹೊಸ ನಿಯಮದ 'ಕೇಬಲ್​ ಬಿಲ್' ನೋಡಿ ಬೆಚ್ಚಿಬಿದ್ದ ಜನ!!

ಉದಾಹರಣೆಗೆ, ಟೈಮ್ಸ್ ಆಫ್ ಇಂಡಿಯಾ, ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ಮತ್ತು ಪ್ರಜಾವಾಣಿ 1, ಪ್ರಜಾವಾಣಿ 2 ಸೇರಿದಂತೆ ಹಲವು ಪತ್ರಿಕೆಗಳ ಈ ವರದಿಗಳಲ್ಲೂ ಕೂಡ ರೂ. 130ಕ್ಕೆ ಆಗುವಷ್ಟು ಯಾವುದೇ ಪೇ ಚಾನಲ್‌ಗಳು ಮತ್ತು ಫ್ರೀ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. 130ಕ್ಕೆ ಕೇವಲ ಫ್ರೀ ಚಾನಲ್‌ಗಳು ಮಾತ್ರ ದೊರೆಯುತ್ತವೆ, ಮನರಂಜನೆಯ ಪೇ ಚಾನಲ್‌ಗಳಿಗೆ ಪ್ರತ್ಯೇಕ ಹಣ ಪಾವತಿಸಬೇಕು ಎಂದು ಕೇಬಲ್ ಸೇವಾದಾತರು ದಾರಿ ತಪ್ಪಿಸುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಗೊಂದಲ ಮೂಡಿಸಿದ ಟ್ರಾಯ್‌ನ 'ಚಾನಲ್ ಸೆಲೆಕ್ಟರ್'

ಗೊಂದಲ ಮೂಡಿಸಿದ ಟ್ರಾಯ್‌ನ 'ಚಾನಲ್ ಸೆಲೆಕ್ಟರ್'

ಆದರೆ, ಇಲ್ಲಿ ಗೊಂದಲ ಮೂಡಿರುವುದು ಟ್ರಾಯ್‌ನ 'ಚಾನಲ್ ಸೆಲೆಕ್ಟರ್' ವೆಬ್‌ಸೈಟ್‌ನಲ್ಲಿ 130ರೂ.ಗೆ ಯಾವುದೇ ಪೇ ಚಾನಲ್‌ಗಳು ದೊರೆಯುತ್ತಿಲ್ಲದಿರುವುದು ಆತಂಕಕಾರಿಯಾಗಿದೆ. ಗ್ರಾಹಕರು ತಮ್ಮಿಷ್ಟದ ಚಾನೆಲ್​ಗಳನ್ನು ಆರಿಸಿ ಅದಕ್ಕೆ​ ಪಾವತಿ ಮಾಡಬೇಕಾದಾಗ ಕೇಬಲ್ ಬಿಲ್ 1000 ರೂ.ಗಳನ್ನು ದಾಟುತ್ತಿದೆ. ಅಂದರೆ, ಟ್ರಾಯ್ ಬಿಡುಗಡೆ ಮಾಡಿದ್ದ ಪ್ರೆಸ್ ರಿಲೀಸ್‌ನಲ್ಲಿ ಇದ್ದಂತೆ, 130ಕ್ಕೆ ಯಾವುದೇ ಪೇ ಚಾನಲ್‌ಗಳು ದೊರೆಕದೇ ಇರುವುದು ಈಗ ಪ್ರಮುಖ ಇಂಗ್ಲೀಷ್ ಮಾಧ್ಯಮಗಳಿಗೂ ಗೊಂದಲದ ಗೂಡಾಗಿದೆ.

ಮೊದಲ ಟ್ರಾಯ್ ಪ್ರೆಸ್ ರಿಲೀಸ್!

ಮೊದಲ ಟ್ರಾಯ್ ಪ್ರೆಸ್ ರಿಲೀಸ್!

ಈ ಮೇಲೆ ನೀಡಿರುವ ಚಿತ್ರದಲ್ಲಿ ಟ್ರಾಯ್ ಬಿಡುಗಡೆ ಮಾಡಿದ್ದ ಪ್ರೆಸ್ ರಿಲೀಸ್ ಅನ್ನು ಗಮನಿಸಿದರೆ, ರೂ. 130ಕ್ಕೆ ಆಗುವಷ್ಟು ಯಾವುದೇ ಪೇ ಚಾನಲ್‌ಗಳನ್ನು ಪಡೆಯಬಹುದು ಎಂದು ನಮೂದಿಸಿರುವುದನ್ನು ಗಮನಿಸಬಹುದಾಗಿದೆ. ಆದರೆ, ಕಾರ್ಯಗತವಾಗಿ ಇದು ಚಾಲನೆಯಲ್ಲಿ ಇದೀಗ ಇಲ್ಲ.! ಇಷ್ಟೆಲ್ಲಾ ಅವಂತಾರಗಳ ನಡುವೆಯೂ ಮಾರ್ಚ್ ಅಂತ್ಯಕ್ಕೆ ಟ್ರಾಯ್‌ನ ನೂತನ ನಿಯಮಗಳ ಅನುಷ್ಠಾನ ಗೊಂದಲ ಮುಂದುವರೆದಿದೆ. ಇದೀಗ, ಟ್ರಾಯ್‌ನ 'ಚಾನಲ್ ಸೆಲೆಕ್ಟರ್' ಪ್ರಕಾರ ನಾವು ಈ ಕೆಳಗಿನ ರೀತಿ ಕೇಬಲ್ ಬಿಲ್ ನಿಯಮವನ್ನು ಅರ್ಥ ಮಾಡಿಕೊಳ್ಳಬೇಕಿದೆ

ಈಗ ಪ್ರತಿ ತಿಂಗಳ ರಿಚಾರ್ಜ್​ ಎಷ್ಟು?

ಈಗ ಪ್ರತಿ ತಿಂಗಳ ರಿಚಾರ್ಜ್​ ಎಷ್ಟು?

ಟ್ರಾಯ್‌ನ 'ಚಾನಲ್ ಸೆಲೆಕ್ಟರ್' ವೆಬ್‌ಸೈಟ್‌ನಲ್ಲಿ ನಾವು ತಿಳಿಯುವಂತೆ, ಟ್ರಾಯ್‌ನ ಹೊಸ ನಿಯಮದ ಅನುಸಾರ ಪ್ರತಿ ತಿಂಗಳು 100 ಉಚಿತ ಚಾನೆಲ್​ಗಳಿಗೆ 150 ರೂ. ಪಾವತಿಸಬೇಕಾಗುತ್ತದೆ. ನೀವು 100 ಚಾನೆಲ್​ಗಳನ್ನು ಆರಿಸಿಕೊಂಡು, ಬಳಿಕ ಹೆಚ್ಚುವರಿ 25 ಚಾನೆಲ್​ಗಳಿಗಾಗಿ 20 ರೂ. ಪಾವತಿಸಬೇಕು. ಇವೆಲ್ಲವಕ್ಕೂ ಜಿಎಸ್‌ಟಿ ಸೇರಿದೆ. ಇನ್ನು -ಚಾನೆಲ್​ಗಳಿಗೆ ಸ್ಥಿರ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಅದರಂತೆ ಹಣ ನೀಡಬೇಕಿದ್ದು, 1 ರೂ. ನಿಂದ 19 ರೂ. ಒಳಗಿರಲಿರುವ ಇವುಗಳನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಮೊದಲ ಹೇಳಿದಂತೆ 130ಕ್ಕೆ ಪೇ ಚಾನಲ್‌ಗಳು ಸೇರಿಲ್ಲವಾದುದರಿಂದ ಎಲ್ಲಾ ಚಾನಲ್‌ಗಳು ಬೇಕೆಂದರೆ ಕೇಬಲ್ ಬಿಲ್ 1000 ರೂ.ವರೆಗೂ ಏರಿಕೆಯಾಗಲಿದೆ.

ಹೊಸ ನಿಯಮದಿಂದ ತಿಂಗಳ ದರದಲ್ಲಿ ಹೆಚ್ಚಳ!

ಹೊಸ ನಿಯಮದಿಂದ ತಿಂಗಳ ದರದಲ್ಲಿ ಹೆಚ್ಚಳ!

ಹೌದು, ಡಿಸೆಂಬರ್‌ನಲ್ಲಿ ಟ್ರಾಯ್ ಹೇಳಿದರೆ ಈಗ ಕೇಬಲ್ ಬಿಲ್ ಕಡಿಮೆಯಾಗಲು ಸಾಧ್ಯವೇ ಇಲ್ಲ. ಅಥವಾ ಇದು ನೀವು ಯಾವ ಚಾನೆಲ್​ಗಳನ್ನು ವೀಕ್ಷಿಸುತ್ತೀರಾ ಎಂಬುದರ ಮೇಲೆ ನಿರ್ಧಾರವಾಗಲಿದೆ. ಗ್ರಾಹಕರು ಚಾನೆಲ್​ಗಳ ಆಯ್ಕೆ ವೇಳೆ ಸ್ವಲ್ಪ ಎಚ್ಚರವಹಿಸಿದರೆ ಪ್ರಸ್ತುತ ಪಾವತಿಸುವ ಬಿಲ್​ಗಿಂತ ಕಡಿಮೆ ದರದಲ್ಲಿ ಹೆಚ್ಚು ಚಾನೆಲ್​ಗಳನ್ನು ವೀಕ್ಷಿಸಬಹುದು ಎಂದು ಟ್ರಾಯ್ ತಿಳಿಸಿದೆ. ಆದರೆ, ಕನಿಷ್ಟ 154 ರೂ. ಪಾವತಿಗೆ ಕೇವಲ ಉಚಿತ ಚಾನಲ್‌ಗಳು ಮಾತ್ರ ಈಗ ಲಭ್ಯವಾಗುತ್ತಿರುವುದರಿಂದ ಗ್ರಾಹಕರ ಬಿಲ್ ಗಗನಕ್ಕೇರಿದೆ. ಕೇವಲ ಕನ್ನಡದ ಎಲ್ಲಾ ಪೇ ಚಾನಲ್‌ಗಳನ್ನು ಆಯ್ಕೆ ಮಾಡಿಕೊಂಡರೆ ಕೇಬಲ್ ಬಿಲ್ 300 ರೂ. ದಾಟುತ್ತಿದೆ. ಇದು ಈಗ ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ.

154 ರೂ.ನಲ್ಲಿ ಯಾವ ಚಾನೆಲ್​ಗಳು ಸಿಗಲಿದೆ?

154 ರೂ.ನಲ್ಲಿ ಯಾವ ಚಾನೆಲ್​ಗಳು ಸಿಗಲಿದೆ?

ನೀವು ಪಾವತಿಸಲೇಬೇಕಾದ 154 ರೂ.ನಲ್ಲಿ ನಿಮ್ಮ ಇಷ್ಟದ ಎಫ್​ಟಿಎ ಚಾನೆಲ್​ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ, ಪೇ ಚಾನೆಲ್​ಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ನೀವು 100 ಫ್ರೀ-ಟು-ಏರ್ ಚಾನೆಲ್​ಗಳನ್ನು (130 + 20) 150 ರೂಪಾಯಿಗಳಲ್ಲಿ ಆಯ್ಕೆ ಮಾಡಿಕೊಂಡಿರಿ ಅಂದುಕೊಳ್ಳಿ. ಬಳಿಕ ನಿಮಗೆ ಚಾನೆಲ್​ ಬೇಕಿದ್ದರೆ (100 ಕ್ಕಿಂತ ಹೆಚ್ಚು) 25 ಚಾನೆಲ್​ಗಳಿಗೆ 20 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ದೇಶದಲ್ಲಿ 534 ಫ್ರೀ-ಟು ಏರ್​ ಚಾನೆಲ್​ಗಳು ಲಭ್ಯವಿದ್ದು, ಇವುಗಳಲ್ಲಿ ನಿಮಗೆ ಬೇಕಾದ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಮೇಲೆ ಪೇ ಚಾನಲ್‌ಗಳನ್ನು ಪಡೆಯಲು ನೀವು ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತಿದೆ.

ಚಾನೆಲ್​ಗಳ ಲೀಸ್ಟ್​ ಪಡೆಯುವುದೆಲ್ಲಿ?

ಚಾನೆಲ್​ಗಳ ಲೀಸ್ಟ್​ ಪಡೆಯುವುದೆಲ್ಲಿ?

ಟ್ರಾಯ್​ ಮಾರ್ಗಸೂಚಿ ಪ್ರಕಾರ, ಕೇಬಲ್ ಟಿವಿ ಬಳಕೆದಾರರು ಚಾನಲ್ 999 ರಲ್ಲಿ ಚಾನಲ್‌ಗಳ ಲೀಸ್ಟ್ ಪಡೆಯಬಹುದಾಗಿದ್ದರೆ, ಎಲ್ಲಾ DTH ಕಂಪೆನಿಗಳು ಗ್ರಾಹಕರಿಗೆ ತಮ್ಮ ವೆಬ್​ಸೈಟ್​ನಲ್ಲಿ ಚಾನೆಲ್​ ದರಗಳ ಪಟ್ಟಿ ಹಾಕುವಂತೆ ತಿಳಿಸಿದೆ. ನಿಮ್ಮ DTH ಕಂಪೆನಿಯ ವೆಬ್​ಸೈಟ್​ ಅಥವಾ ಆಪ್​ಗೆ ಭೇಟಿ ನೀಡುವ ಮೂಲಕ ಪತ್ಯೇಕ ಮತ್ತು ಪ್ಯಾಕ್​ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದು. ಅದೇ ರೀತಿ 342 ಚಾನೆಲ್​ಗಳ ದರ ಪಟ್ಟಿಯನ್ನು ಟ್ರಾಯ್​ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಇದು ಸಾಧ್ಯವಾಗದಿದ್ದರೆ, ಟ್ರಾಯ್ ಬಿಡುಗಡೆ ಮಾಡಿರುವ ''ಟ್ರಾಯ್ ಚಾನಲ್ ಸೆಲೆಕ್ಟರ್'' ವೆಬ್‌ಸೈಟ್ ಮೂಲಕ ನೀವು ನಿಮ್ಮ ಸಂಪೂರ್ಣ ಕೇಬಲ್ ಬಿಲ್ ಅನ್ನು ತಯಾರಿಸಿಕೊಳ್ಳಬಹುದು.

ಈ ತಿಂಗಳು ಕಾದುನೋಡಬೇಕು!

ಈ ತಿಂಗಳು ಕಾದುನೋಡಬೇಕು!

ಕೇಬಲ್ ಮತ್ತು ಡಿಟಿಹೆಚ್‌ನ ಅನುಷ್ಠಾನವನ್ನು ಟ್ರಾಯ್ ಇದೀಗ ಮಾರ್ಚ್ 31ರ ವೇಳೆಗೆ ನಿಗದಿಪಡಿಸಿದೆ. ಆ ನಂತರವಷ್ಟೇ ಸರಿಯಾದ ಕೇಬಲ್ ಅಥವಾ ಡಿಟಿಹೆಚ್ ಬಿಲ್‌ ಎಷ್ಟು ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು ಎನ್ನಲಾಗುತ್ತಿದೆ. ಏಕೆಂದರೆ, ಟ್ರಾಯ್ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳು ಈಗಲೂ ಕೂಡ ಗೊಂದಲಕಾರಿಯಾಗಿದ್ದು, ಮಾಧ್ಯಮಗಳು ಕೂಡ ತೊಂದರೆಗೆ ಸಿಲುಕಿವೆ. ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ತಯಾರಿಸಲು ಹಿಂದೆ ಮುಂದೆ ನೋಡುತ್ತಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ಸಿಗಬಾರದು ಎಂದು ಕಾದುನೋಡುವ ತಂತ್ರಕ್ಕೆ ಮೊರೆಹೋಗಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಸರಿಯಾದ ಮಾಹಿತಿ ಇಲ್ಲದೇ ಕೇಬಲ್ ನಿಯಮ ಇದೀಗ ಗ್ರಾಹಕರ ಮೋಸಕ್ಕೆ ಕಾರಣವಾಗುತ್ತಿದೆ.

ಭವಿಷ್ಯದಲ್ಲಿ ಜಿಯೋ ಹೇಗಿರಲಿದೆ ಎಂಬ ಕಲ್ಪನೆ ಸಿಕ್ಕಿದ್ದು ಮುಂಬೈನ ಈ ಕಟ್ಟಡದಲ್ಲಿ!!

ಭವಿಷ್ಯದಲ್ಲಿ ಜಿಯೋ ಹೇಗಿರಲಿದೆ ಎಂಬ ಕಲ್ಪನೆ ಸಿಕ್ಕಿದ್ದು ಮುಂಬೈನ ಈ ಕಟ್ಟಡದಲ್ಲಿ!!

ಜಿಯೋ ಎಂದರೆ ಕೇವಲ ಟೆಲಿಕಾಂ ಕಂಪೆನಿ ಎಂದು ತಿಳಿದಿದ್ದ ನಮಗೆ ಅದರ ಆಳಅಗಲಗಳು ತಿಳಿಯಲು ಇತ್ತೀಚಿಗೆ ಒಂದು ಅವಕಾಶ ಸಿಕ್ಕಿತ್ತು. ಜಿಯೋ ಕಂಪೆನಿಯಿಂದ ಬೆಂಗಳೂರಿನಲ್ಲಿರುವ ನಮ್ಮ ಕಚೇರಿಗೆ ಬಂದ ಒಂದು ಕರೆಯಿಂದಾಗಿ ಮುಂಬೈನಲ್ಲಿರುವ 'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'ಕ್ಕೆ ಒಂದು ದಿನ ಭೇಟಿ ನೀಡಲು ಸಾಧ್ಯವಾಯಿತು. ಆ ಒಂದು ಭೇಟಿಯಲ್ಲಿಯೇ ನನಗೆ ಜಿಯೋ ಭವಿಷ್ಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲಿದೆ ಎಂಬ ಸ್ಪಷ್ಟ ಕಲ್ಪನೆಯೊಂದು ಮೂಡಿತು. ಭವಿಷ್ಯದಲ್ಲಿ ಭಾರತದ ಡಿಜಿಟಲ್ ಪ್ರಪಂಚ ಹೇಗೆ ಬದಲಾಗಬಹುದು ಎಂಬ ಕೂತುಹಲಕಾರಿ ವಿಷಯಗಳು ನೇರವಾಗಿ ನಮ್ಮ ಕಣ್ಣಿಗೆ ಮತ್ತು ಅನುಭವಕ್ಕೆ ಸಿಕ್ಕವು.

ಹೌದು, ಮುಕೇಶ್ ಅಂಬಾನಿಯ ಕನಸಿನ ಕೂಸಾಗಿರುವ ಜಿಯೋ ಎಂದರೆ ಕೇವಲ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಟೆಲಿಕಾಂ ಕಂಪೆನಿ ಮಾತ್ರವಲ್ಲ. ಅದೊಂದು ಡಿಜಿಟಲ್ ಪ್ರಪಂಚದ ಆಗರ ಎಂಬುದು ನಿಮ್ಮ ಮತ್ತು ನನ್ನ ಕಲ್ಪನೆಯನ್ನೂ ಮೀರಿದ್ದಾಗಿದೆ ಎಂಬುದನ್ನು ನಾವು ತಿಳಿದೆವು. ಜಿಯೋಫೋನ್, ಜಿಯೋ ಪೋನ್ 2 ಡಿವೈಸ್‌ಗಳು ಸೇರಿದಂತೆ ಜಿಯೋ ಗೀಗಾಪೈಬರ್ ಕಲ್ಪನೆಗಳನ್ನು ಮೀರಿ ಭವಿಷ್ಯದಲ್ಲಿ ಭಾರೀ ಅನ್ವೇಷಣೆಗಳನ್ನು ತರಲು ಜಿಯೋ ಸಜ್ಜಾಗಿ ನಿಂತಿದ್ದು, ಭವಿಷ್ಯದಲ್ಲಿ ಭಾರತೀಯರಿಗೆ ಡಿಜಿಟಲ್ ಎಂಬ ಮತ್ತೊಂದು ಪ್ರಪಂಚವನ್ನೇ ತೊರಿಸಲು ತಯಾರಾಗಿರುವ ಜಿಯೋ ಬತ್ತಳಿಕೆಯಲ್ಲಿರುವ ಅಸ್ತ್ರಗಳು ನಿಜವಾಗಿಯೂ ನಮ್ಮನ್ನು ಮಂತ್ರಮುಗ್ದಗೊಳಿಸಿದವು.

ಜಿಯೋಫೋನ್, ಜಿಯೋ ಗಿಗಾಫೈಬರ್ ಬಗೆಗೆ ಮಾತ್ರವಷ್ಟೇ ಮಾಹಿತಿಗಳನ್ನು ಹೊಂದಿದ್ದ ನಮಗೆ ಜಿಯೋವಿನ ಇನ್ನಿತರ ಅನ್ವೇಷಣೆಗಳು ಯಾವುವು ಎಂಬುದನ್ನು ಜಿಯೋ ತಿಳಿಸಿತು. ಜಿಯೋ ಇಂಟರ್‌ನೆಟ್ ಆಫರ್ ಥಿಂಗ್ಸ್, ಜಿಯೋ ಸ್ಮಾರ್ಟ್‌ಹೋಮ್, ಜಿಯೋ ಸ್ಮಾರ್ಟ್‌ ಎಂಟರ್‌ಟೈನಮೆಂಟ್, ಜಿಯೋ ಹೈ ಸ್ಪೀಡ್ ಡೇಟಾ, ಜಿಯೋ ಸ್ಮಾರ್ಟ್‌ ಕಾರ್ ಡಿವೈಸ್, ಜಿಯೋ ಸ್ಮಾರ್ಟ್‌ ಲಾಕ್, ಜಿಯೋ ಸ್ಮಾರ್ಟ್‌ ಡಿವೈಸ್ ಕನೆಕ್ಟರ್‌ಗಳು ಬಿಡುಗಡೆಗೂ ಮುನ್ನವೇ ಎಕ್ಸ್‌ಪೀರಿಯನ್ಸ್‌ಗೆ ಲಭ್ಯವಾಗಿ ನಮಗೆ ಆಶ್ಚರ್ಯ ಮೂಡಿಸಿದವು. ಹಾಗಾಗಿ, ಇಂದಿನ ಲೇಖನದಲ್ಲಿ ಮುಂಬೈ ಎಂಬ ಮಹಾನಗರದಲ್ಲಿ ಜಿಯೋ ಸೃಷ್ಟಿಸಿರುವ ಸ್ಮಾರ್ಟ್‌ ಪ್ರಪಂಚದ ಬಗ್ಗೆ ನಾನು ಭೇಟಿ ನೀಡಿದ ಮತ್ತು ಅಲ್ಲಿ ನನಗೆ ಆದಂತಹ ಅನುಭವಗಳ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತಿದ್ದೇನೆ.

'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'ಕ್ಕೆ ಪ್ರಯಾಣ.

'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'ಕ್ಕೆ ಪ್ರಯಾಣ.

ಇದೇ ಬುಧವಾರ, ಅಂದರೆ ನೆನ್ನೆ ಬೆಂಗಳೂರಿನಿಂದ ಸುಮಾರು ಬೆಳಗ್ಗೆ 8 25 ಗಂಟೆಗೆ ವಿಮಾನದಲ್ಲಿ ಮುಂಬೈಗೆ ಹಾರಿದ ನನಗೆ ಜಿಯೋ 'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'ಕ್ಕೆ ಭೇಟಿ ನೀಡುತ್ತಿದ್ದೇನೆ ಎಂಬುದು ಮೊದಲೇ ತಿಳಿದಿತ್ತು. ಮುಂಬೈನ ವಿಮಾನ ನಿಲ್ದಾಣದಿಂದ ಸರಿಸುಮಾರು 30 ಕಿ.ಮೀ ದೂರದಲ್ಲಿರುವ 555 ಎಕ್ಕರೆಯಷ್ಟು ದೊಡ್ಡದಾದ 'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌'ಗೆ ನಮ್ಮ ಪಯಣ ಮುಂದುವರೆದಿತ್ತು. ಈ ಸಮಯದಲ್ಲಿ ಕರ್ನಾಟಕದ ಜಿಯೋ ಕಂಪೆನಿ ಮುಖ್ಯಸ್ಥೆ ರೇಖಾ ಗಂಗಾಧರ್ ಅವರು ಜಿಯೋ ಬಗೆಗಿನ ಕೆಲ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಸಮಗೆ ಜಿಯೋ ಬಗೆಗೆ ಮತ್ತಷ್ಟು ಕುತೋಹಲಗಳನ್ನು ಮೂಡಿಸಿದರು. ನಂತರ ಆ ಮಹಾನಗರದ ಟ್ರಾಫಿಕ್ ದಾಟಿ ಸರಿಯಾಗಿ ಬೆಳಗ್ಗೆ 10.30 ರ ವೇಳೆಗೆ ನಾವು 'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌ ಅನ್ನು ತಲುಪಿದೆವು.

'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌' ಮೊದಲ ನೋಟ!

'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌' ಮೊದಲ ನೋಟ!

ಮುಂಬಯಿ ತಲುಪುವ ವೇಳೆಗೆ 'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌' ಬಗ್ಗೆ ಅಲ್ಪಸ್ವಲ್ಪ ಮಾಹಿತಿಗಳನಷ್ಟೇ ತಿಳಿದಿದ್ದ ನಮಗೆ, 555 ಎಕರೆಯಷ್ಟು ವಿಸ್ತಾರವಾದ 'ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್‌' ಅನ್ನು ನೋಡುವ ಮೊದಲ ಅವಕಾಶ ಸಿಕ್ಕಿತು. ಒಳಗೆ ಹೋಗಲು ಮುಖ್ಯವಾಗಿ ಬೇಕಿರುವ ವಿಸಿಟರ್ ಪಾಸ್‌ಗಳು ಮೊದಲೇ ಸಿದ್ದವಾಗಿದ್ದರಿಂದ ನಾವು ಒಳಹೋಗಲು ಸೆಕೆಂಡ್‌ಗಳಷ್ಟು ಸಹ ತಡವಾಗಲಿಲ್ಲ. ನಂತರ ಆ ವಿಸಿಟರ್ ಪಾಸ್‌ಗಳನ್ನು ಹಾಕಿಕೊಂಡು ಒಳಗೆ ಹೋದ ನಮಗೆ ಜಿಯೋ ಹೆಸರಿನ ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸಿದವು. ಅಲ್ಲಿನ ಸರಿಸುಮಾರು 20 ರಿಂದ 25 ಗಗನಚುಂಬಕ ಕಟ್ಟಗಳಲ್ಲಿ ಜಿಯೋ ಹೆಸರಿನಲ್ಲೇ ಹಲವು ಕಟ್ಟಡಗಳು ಕಾಣಿಸಿದವು. ನಂತರ ಹಾಗೆಯೇ ನೋಡುತ್ತಾ ಹೋದ ನಮಗೆ ಮೊದಲ ಸ್ವಾಗತಿಸಿದ್ದು, ಪಾರ್ಕ್‌ನಲ್ಲಿರುವ ಬಹುತೇಕ ಗ್ಲಾಸ್‌ನಿಂದಲೇ ನಿರ್ಮಿತವಾಗಿರುವ ಕ್ಯಾಂಟಿನ್. ನಂತರ ಅಲ್ಲಿಯೇ ಲಘುಉಪಹಾರ ಮುಗಿಸಿ 'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'ಕ್ಕೆ ಪ್ರಯಾಣ ಬೆಳೆಸಿದವು.

'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'!

'ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರ'!

ಕ್ಯಾಂಟಿನಿನಲ್ಲಿ ಲಘುಉಪಹಾರ ಮುಗಿಸಿದ ನಂತರ ನಮಗೆ ಅದರ ಪಕ್ಕದಲ್ಲೇ ಇದ್ದಂತಹ ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಮ್ಮ ನಾಲ್ಕು ಜನರ ತಂಡದ ಜೊತೆಗೆ ಜಿಯೋ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಜನ ನಮ್ಮ ಜೊತೆ ಹೆಜ್ಜೆಹಾಕಿದರು. ಆ ನಂತರ ಒಂದು ದೊಡ್ಡ ಕಟ್ಟಡದ ಒಳಗೆ ಕಾಲಿಟ್ಟ ತಕ್ಷಣವೇ ನಾವು ಜಿಯೋ ಹೆಸರಿನ ಮತ್ತೊಂದು ಪ್ರಪಂಚಕ್ಕೆ ಕಾಲಿಟ್ಟ ಅನುಭವಾಯಿತು. ಜಿಯೋವಿನ ಪ್ರತಿಯೊಂದು ಡಿವೈಸ್‌ಗಳು ಸೇರಿದಂತೆ ಭವಿಷ್ಯದಲ್ಲಿ ಜಿಯೋ ಲಾಂಚ್ ಮಾಡುತ್ತಿರುವ ಎಲ್ಲಾ ತಂತ್ರಜ್ಞಾನಗಳನ್ನು ತೋರಿಸುವಂತಹ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿತ್ತು. ಆ ಕಟ್ಟದ ಒಳಗೆ ಇಂಟರ್‌ನೆಟ್ ಆಫ್ ಥಿಂಗ್ಸ್ ಎಂಬ ಕಲ್ಪನೆಯನ್ನೇ ಸಾಕಾರಗೊಳಿಸುವ ಕೆಲಸವನ್ನು ಜಿಯೋ ಮಾಡಿತ್ತು. ಜಿಯೋ ಸ್ಮಾರ್ಟ್‌ಹೋಮ್ ಅನ್ನು ತೋರಿಸಲು ಕೃತಕವಾಗಿ ಮನೆಯೊಂದನ್ನೇ ತಯಾರಿಸಲಾಗಿತ್ತು.

ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಪೂರ್ಣ ಮಾಹಿತಿ!

ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಪೂರ್ಣ ಮಾಹಿತಿ!

ಹೆಸರಿಗೆ ತಕ್ಕಂತೆಯೇ ಈಗಿನ ಹಾಗೂ ಭವಿಷ್ಯದ ತಂತ್ರಜ್ಞಾನಗಳನ್ನು ಹೊತ್ತಿದ್ದ ಆ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ನಮಗೆ ಜಿಯೋವಿನ ತಂತ್ರಜ್ಞಾನಗಳ ಪರಿಚಯವನ್ನು ಮಾಡಿಕೊಡಲು ಜಿಯೋ ಓರ್ವರನ್ನು ನೇಮಿಸಿತ್ತು ( ಅವರ ಹೆಸರನ್ನು ಮರೆತಿದ್ದೇನೆ). ಅಲ್ಲಿ ವ್ಯವಸ್ಥಿತವಾಗಿ ಜೋಡಣೆ ಮಾಡಿದ್ದ ಜಿಯೋ ಉತ್ಪನ್ನಗಳ ಬಗ್ಗೆ ಅವರು ನಮಗೆ ಮಾಹಿತಿ ನೀಡಲು ಶುರು ಮಾಡಿದರು. ಜಿಯೋಫೋನಿನಿಂದ ಶುರುವಾದ ಮಾಹಿತಿ, ಜಿಯೋ ಈ ವರೆಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡದಂತಹ ಹಲವು ಡಿವೈಸ್‌ಗಳು ಮತ್ತು ತಂತ್ರಜ್ಞಾನಗಳವರೆಗೂ ಸಿಕ್ಕಿತು. ಇದರಿಂದ ನಾವು ಅವುಗಳ ಕಾರ್ಯನಿರ್ವಹಣೆ ಮತ್ತು ತಂತ್ರಜ್ಞಾನಗಳನ್ನು ಕಣ್ಣಮುಂದೆಯೇ ಅನುಭವಿಸಲು ಸಾಧ್ಯವಾಯಿತು ಆದರೆ, ಈ ಲೇಖನದಲ್ಲಿ ನಾನು ನಿಮಗೆ ಜಿಯೋ ಈ ವರೆಗೂ ಬಿಡುಗಡೆ ಮಾಡದಂತಹ ಡಿವೈಸ್ ಮತ್ತು ತಂತ್ರಜ್ಞಾನಗಳ ಬಗ್ಗೆ ಮಾತ್ರವೇ ಮಾಹಿತಿ ನೀಡುತ್ತಿದ್ದೇನೆ ಎಂಬುದು ನಿಮಗೆ ತಿಳಿದಿರಲಿ.

1) ಜಿಯೋಫೋನ್ ಟಿವಿ ಕನೆಕ್ಟರ್ ಡಿವೈಸ್!

1) ಜಿಯೋಫೋನ್ ಟಿವಿ ಕನೆಕ್ಟರ್ ಡಿವೈಸ್!

ಈ ವರೆಗೂ ಮಾರುಕಟ್ಟೆಗೆ ಬಿಡುಗಡೆಯಾಗದ ಜಿಯೋಫೋನ್ ಟಿವಿ ಕನೆಕ್ಟರ್ ಡಿವೈಸ್ ಹೇಗಿದೆ ಎಂಬ ಮೊದಲ ಪರಿಚಯವನ್ನು ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರವು ಮಾಡಿಕೊಟ್ಟಿತು. ಈ ಟಿವಿ ಕನೆಕ್ಟರ್ ಡಿವೈಸ್ ಅನ್ನು ಜಿಯೋ ಪೋನಿಗೆ ಕನೆಕ್ಟ್ ಮಾಡಿ ಟಿವಿಯಲ್ಲಿ ಮೊಬೈಲ್ ವೀಕ್ಷಣೆ ಮಾಡಬಹುದಾದ ತಂತ್ರಜ್ಞಾನ ಅದಾಗಿತ್ತು. ನಿಮ್ಮ ಮನೆಯಲ್ಲಿ ಹೆಚ್‌ಡಿಎಂಐ ಸಪೋರ್ಟೆಡ್ ಟಿವಿ ಇದ್ದರೆ ಆ ಜಿಯೋ ಟಿವಿ ಕನೆಕ್ಟರ್ ಮೂಲಕ ಜಿಯೋ ಫೋನ್ ಅನ್ನು ಕನೆಕ್ಟ್ ಮಾಡಿಕೊಳ್ಳಬಹುದು. ಹೀಗೆ ಕನೆಕ್ಟ್ ಆದರೆ ಜಿಯೋನಲ್ಲಿ ವಿಡಿಯೋಗಳನ್ನು ನೀವು ಟಿವಿಯನ್ನು ಪ್ಲೇ ಮಾಡಬಹುದು. ಹೀಗೆ ಪ್ಲೇ ಮಾಡಿದಾಗ ವಿಡಿಯೋ ಗುಣಮಟ್ಟ ಎಳ್ಳಷ್ಟೂ ಕಡಿಮೆಯಾಗದಿರುವುದು ಆಶ್ಚರ್ಯವಾಗಿತ್ತು. ಇದು ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಬಗ್ಗೆ ಮಾಹಿತಿ ನೀಡಿದ ಅವರು ಬಿಡುಗಡೆ ದಿನಾಂಕವನ್ನು ಮಾತ್ರ ಹೇಳಲಿಲ್ಲ.

2) ಜಿಯೋ ಕಾರ್ ಕನೆಕ್ಟ್ ರೂಟರ್!

2) ಜಿಯೋ ಕಾರ್ ಕನೆಕ್ಟ್ ರೂಟರ್!

ಜಿಯೋ ಟಿವಿ ಕನೆಕ್ಟರ್ ಡಿವೈಸ್ ನಂತರ ನಮ್ಮ ಗಮನಸೆಳೆದಿದ್ದು ಜಿಯೋ ಕಾರ್ ಕನೆಕ್ಟ್ ರೂಟರ್. ಕೇವಲ 50 ರಿಂದ 60 ಗ್ರಾಂ ತೂಕವಿರುವ ಆ ಕನೆಕ್ಟರ್ ತಂತ್ರಜ್ಞಾನ ವಿಶೇಷವಾಗಿತ್ತು. ಆ ಕನೆಕ್ಟರ್ ಒಂದು ಕಾರನ್ನೇ ಸ್ಮಾರ್ಟ್‌ ಮಾಡುವ ತಂತ್ರಜ್ಞಾನವನ್ನು ಹೊಂದಿತ್ತು. ಇತ್ತೀಚಿನ ಕಾರುಗಳಲ್ಲಿ ನೀಡಲಾಗುತ್ತಿರುವ ಸ್ಮಾರ್ಟ್‌ ಕಾರ್ಯಾಚರಣೆಗಳಿಗೆ ಹೃದಯವಾಗಿ ಕೆಲಸ ಮಾಡುವ ಡಿವೈಸ್ ಇದಾಗಿತ್ತು. ಆ ಡಿವೈಸ್ ಒಳಗೆ ಜಿಯೋ ಸಿಮ್ ಅನ್ನು ಇನ್‌ಬ್ಯುಲ್ಟ್ ಮಾಡಲಾಗಿದ್ದು, ಅದಕ್ಕೆ ರೀಚಾರ್ಜ್ ಮಾಡಿದರೆ ಸಾಕು ನೀವು ನಿಮ್ಮ ಕಾರಿನ ಆರೋಗ್ಯ ತಿಳಿದುಕೊಳ್ಳಬಹುದು. ನಿಮ್ಮ ಕಾರಿನಲ್ಲಿ ಇಂಧನ ಎಷ್ಟಿದೆ?, ಚಕ್ರಗಳಲ್ಲಿ ಗಾಳಿ ಎಷ್ಟಿದೆ?, ಯಾವ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ಸಂಚರಿಸಬೇಕು?, ನಿಮ್ಮ ಕಾರನ್ನು ಯಾವಾಗ ಸರ್ವಿಸ್‌ಗೆ ಬಿಡಬೇಕು ಎಂಬಂತಹ ಸಲಹೆಗಳನ್ನು ಜಿಯೋ ಆಪ್‌ಗೆ ಸಂದೇಶದ ಮೂಲಕ ತಿಳಿಸುವ ಸ್ಮಾರ್ಟ್‌ ಡಿವೈಸ್ ಅದಾಗಿತ್ತು. ಅದನ್ನು ಮನೆಯ ಇಂಟರ್‌ನೆಟ್‌ಗೂ ಸಹ ಬಳಸಿಕೊಳ್ಳಬಹುದಾಗಿತ್ತು.

3) ಜಿಯೋ ಮರ್ಚೆಂಟ್ಸ್!

3) ಜಿಯೋ ಮರ್ಚೆಂಟ್ಸ್!

ಆನ್‌ಲೈನ್ ಇ ಕಾಮರ್ಸ್ ಮಾರುಕಟ್ಟೆಗೆ ವಿರುದ್ದವಾಗಿ ನಮ್ಮ ಪಕ್ಕದಲ್ಲೇ ಇರುವ ಕಿರಾಣಿ ಅಂಗಡಿಗಳನ್ನು ಸ್ಮಾರ್ಟ್‌ ಮಾಡುವಂತಹ ಜಿಯೋ ಯೋಜನೆಯೇ ಈ ಜಿಯೋ ಮರ್ಚೆಂಟ್ಸ್. ಕಿರಾಣಿ ಅಂಗಡಿಗಳಲ್ಲೂ ಡಿಸ್ಕೌಂಟ್ಸ್, ವಸ್ತುಗಳ ಲಭ್ಯತೆ, ಇಎಂಐ ಎಲ್ಲವೂ ಲಭ್ಯವಾಗುವಂತಹ ಹತ್ತಾರು ಕಲ್ಪನೆಯನ್ನು ಹೊಂದಿರುವ ಜಿಯೋ ಮರ್ಚೆಂಟ್ಸ್ ಯೋಜನೆಯಲ್ಲಿ ಒಂದು ಡಿವೈಸ್ ರೂಪುಗೊಂಡಿದೆ. ಜಿಯೋ ಸಿಮ್ ಬಳಸಬಹುದಾದ ಆ ಡಿವೈಸ್ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಸ್ಮಾರ್ಟ್‌ ಆಗಿದೆ. ಕಿರಾಣಿ ಅಂಗಡಿಗಳಲ್ಲೂ ಸ್ಮಾರ್ಟ್‌ಬಿಲ್, ಆನ್‌ಲೈನ್ ಪೇಮೆಂಟ್, ಬಾರ್‌ಕೋಡ್ ಸ್ಕ್ಯಾನ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪೇಮೆಂಟ್, ಇಎಂಐ ಕನ್ವರ್ಟರ್, ಬ್ಯಾಲೆನ್ಸ್ ಮಾಹಿತಿ, ಸ್ಟಾಕ್ ಕ್ಲಿಯರೆನ್ಸ್, ಜಿಎಸ್‌ಟಿ ಸೇರಿದಂತೆ ಹಲವು ತಂತ್ರಜ್ಞಾನಗನ್ನು ಆ ಡಿವೈಸ್ ಹೊಂದಿದೆ. ಈಗಾಗಲೇ ಮುಂಬೈನ ಕೆಲವೆಡೆ ಪರೀಕ್ಷಾ ಹಂತದಲ್ಲಿರುವ ಆ ಡಿವೈಸ್ ಬೆಲೆ ಈಗಲೂ ಗೌಪ್ಯವಾಗಿದೆ. ಆದರೆ, ಅದ್ಬುತ ಡಿವೈಸ್ ಅದಾಗಿದೆ.

4) ಜಿಯೋ ಗಿಗಾಫೈಬರ್!

4) ಜಿಯೋ ಗಿಗಾಫೈಬರ್!

ಭಾರತಿಯರು ಭಾರೀ ಕುತೋಹಲದಿಂದ ಕಾಯುತ್ತಿರುವ ಜಿಯೋ ಗಿಗಾಫೈಬರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ನೇರವಾಗಿ ತಿಳಿದೆವು. ಜಿಯೋ ಗಿಗಾಫೈಬರ್ ರೂಟರ್ ಬಾಕ್ಸ್ ಮತ್ತು ಜಿಯೋ ಗಿಗಾ ಟಿವಿ ರೂಟರ್ ಅನ್ನು ಸ್ಮಾರ್ಟ್‌ಟಿವಿಗೆ ಜೋಡಿಸಲಾಗಿತ್ತು. ಪ್ರತಿಸೆಕೆಂಡ್‌ಗೆ ಒಂದು ಜಿಬಿ ವೇಗದಲ್ಲಿ ಸ್ಟ್ರೀಮ್ ಆಗುತ್ತಿದ್ದ ಇಂಟರ್‌ನೆಟ್ ಮೂಲ 4k ಸಾಮರ್ಥ್ಯದ ವಿಡಿಯೋಗಳು ಯಾವುದೇ ಬಫರಿಂಗ್ ಇಲ್ಲದಂತೆ ಪ್ಲೇ ಆಗುತ್ತಿದ್ದವು. ಜಿಯೋ ಗಿಗಾಫೈಬರ್ ರೂಟರ್ ಬಾಕ್ಸ್ ಜೊತೆಗೆ ಜಿಯೋ ಗಿಗಾ ಟಿವಿ ರೂಟರ್ ಇದ್ದರೆ ಮಾತ್ರ ಇದರಿಂದ ಟಿವಿ ನೋಡಲು ಸಾಧ್ಯ ಎಂಬುದನ್ನು ಅಲ್ಲಿ ಮಾಹಿತಿ ನೀಡಿದರು. ಪ್ಯೂರ್ 4k ವಿಡಿಯೋವನ್ನು ಮಧ್ಯದಿಂದಲೇ ಪ್ಲೇ ಮಾಡಿದರೂ ಸಹ ಸೆಕೆಂಡ್‌ನಷ್ಟು ತಡಮಾಡದಂತೆ ವಿಡಿಯೋ ತೆರೆಯುತ್ತಿತ್ತು. ಇನ್ನು ಜಿಯೋ ಗಿಗಾಫೈಬರ್ ರೂಟರ್ ಸ್ಮಾರ್ಟ್‌ ಹೋಮ್ ಅನ್ನು ಸಹ ನಿಖರವಾಗಿ ನಿಯಂತ್ರಿಸುತ್ತಿತ್ತು.

4) ಜಿಯೋ ಸ್ಮಾರ್ಟ್‌ಹೋಮ್

4) ಜಿಯೋ ಸ್ಮಾರ್ಟ್‌ಹೋಮ್

ಜಿಯೋ ಗಿಗಾಫೈಬರ್ ಎಂಬುದು ಒಂದು ದೊಡ್ಡ ಇಂಟರ್‌ನೆಟ್ ಬ್ಯಾಟರಿ ಇದ್ದಂತೆ. ಅದಕ್ಕೆ ಜಿಯೋ ಟಿವಿ ರೂಟರ್ ಎಂಬುದು ಜೋಡಿಸಲ್ಪಟ್ಟಿರುವ ಒಂದು ರೂಟರ್ ಮಾತ್ರ. ಜಿಯೋ ಟಿವಿ ರೂಟರ್‌ನಂತೆಯೇ ಜಿಯೋ ಹಲವು ಸ್ಮಾರ್ಟ್‌ಡಿವೈಸ್‌ಗಳನ್ನು ತಯಾರಿಸಿದೆ. ವಾಯ್ಸ್ ಕಮಾಂಡ್ ಮೂಲಕ ಎಸಿಯನ್ನು ಆನ್ ಅಥವಾ ಆಫ್ ಮಾಡುವ, ಅಡುಗೆ ಮಾಡಿ ಮುಗಿದ ನಂತರ ವಾಯ್ಸ್ ಕಮಾಂಡ್ ನೀಡಿ ಗ್ಯಾಸ್ ಅನ್ನು ಆಫ್ ಮಾಡುವ, ಕಿಟಕಿಯಲ್ಲಿ ಇರುವ ಕರ್ಟನ್ ಅನ್ನು ಮುಚ್ಚುವ, ಯಾವುದೇ ಒಂದು ಲೈಟ್ ಅನ್ನು ದೂರದಿಂದಲೇ ವಾಯ್ಸ್ ಕಮಾಂಡ್ ಮೂಲಕ ಆಫ್ ಮಾಡಬಹುದಾದಂತಹ ಸ್ಮಾರ್ಟ್‌ ಪ್ರಪಂಚ ಅದಾಗಿದೆ. ಇದಕ್ಕಾಗಿ ಜಿಯೋ ಹಲವು ಡಿವೈಸ್‌ಗಳು ತಯಾರಿಸಿ ಇಟ್ಟುಕೊಂಡಿದೆ. ಆದರೆ, ಅವುಗಳ ಬಿಡುಗಡೆ ಯಾವಾಗ ಎಂಬುದನ್ನು ಮಾತ್ರ ನಮ್ಮಿಂದ ಮುಚ್ಚಿಟ್ಟಿದೆ.

5) ಜಿಯೋ ಸ್ಮಾರ್ಟ್‌ ಲಾಕ್‌ಗಳು

5) ಜಿಯೋ ಸ್ಮಾರ್ಟ್‌ ಲಾಕ್‌ಗಳು

ನೀವು ಅಮೆರಿಕಾದಲ್ಲಿದ್ದು ಬೆಂಗಳೂರಿನಲ್ಲಿರುವ ಮನೆಯನ್ನು ಲಾಕ್ ಮಾಡಬಹುದಾದ ಅಥವಾ ತೆರೆಯಬಹುದಾದ ಡಿವೈಸ್ ಈ ಸ್ಮಾರ್ಟ್‌ಲಾಕ್. ಮನೆಯ ಡೋರ್‌ಗೆ ಅದನ್ನು ಅಳವಡಿಸಿದರೆ ನೀವು ಮೊಬೈಲ್ ಆಪ್‌ ಮೂಲಕವೇ ಅದನ್ನು ನಿಯಂತ್ರಿಸಬಹುದು. ಸೆನ್ಸಾರ್ ವ್ಯವಸ್ಥೆಯನ್ನು ಹೊಂದಿರುವ ಆ ಆಪ್ ಕಳ್ಳರ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ರವಾನಿಸುತ್ತದೆ. ಇದೇ ರೀತಿಯ ವ್ಯವಸ್ಥೆಯನ್ನು ಮನೆಯ ಬೀರು ಮತ್ತು ಇತರೆ ಅತ್ಯಮೂಲ್ಯ ವಸ್ತುಗಳನ್ನು ಲಾಕ್ ಮಾಡಲು ಬಳಸಬಹುದು. 100 ಗ್ರಾಂ ತೂಕದ ಸ್ಮಾರ್ಟ್‌ ಲಾಕ್ ಡಿವೈಸ್‌ಗಳಿಂದ ಹಿಡಿದು 3 ಕೆಜಿ ತೂಗುವಂತಹ ಸ್ಮಾರ್ಟ್‌ ಲಾಕ್ ಡಿವೈಸ್‌ಗಳನ್ನು ಅಲ್ಲಿ ಇಡಲಾಗಿತ್ತು. ಸ್ಮಾರ್ಟ್‌ಜೊತೆಗೆ ನಾವೇ ಸ್ಮಾರ್ಟ್‌ಲಾಕ್ ಅನ್ನು ನಿಯಂತ್ರಿಸುವ ವ್ಯವಸ್ಥೆ ಕೂಡ ಅವುಗಳಲ್ಲಿ ಇದ್ದದ್ದು ವಿಶೇಷವಾಗಿತ್ತು. ಇದರ ಬೆಲೆಯನ್ನೂ ಕೂಡ ಗೌಪ್ಯವಾಗಿ ಇಟ್ಟರು.

ಜಿಯೋ ಸ್ಮಾರ್ಟ್‌ ಕನೆಕ್ಟರ್‌ಗಳು!

ಜಿಯೋ ಸ್ಮಾರ್ಟ್‌ ಕನೆಕ್ಟರ್‌ಗಳು!

ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ನಮಗೆ ಆಶ್ಚರ್ಯವಾದಂತಹ ಮತ್ತೊಂದು ಸಂಗತಿ ಎಂದರೆ ಜಿಯೋ ಬಿಡುಗಡೆಗೆ ತಯಾರಾಗಿರುವ ಜಿಯೋ ಸ್ಮಾರ್ಟ್‌ ಕನೆಕ್ಟರ್‌ಗಳು. ಮೊದಲೇ ಹೇಳಿದಂರೆ ಒಂದು ಸಾಮಾನ್ಯ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಸಹ ಸ್ಮಾರ್ಟ್‌ ಮಾಡುವಂತಹ ಕನೆಕ್ಟರ್‌ಗಳು ಅವಾಗಿದ್ದವು. ಸಾಮಾನ್ಯವಾದ ಒಂದು ಫ್ಯಾನ್ ಅನ್ನು ಸ್ಮಾರ್ಟ್‌ ಮಾಡುವ ಹಾಗೂ ಒಂದು ಸಾಮಾನ್ಯವಾದ ಕೆಟಲ್ ಅನ್ನು ಸ್ಮಾರ್ಟ್‌ ಮಾಡುವ ಕನೆಕ್ಟರ್‌ಗಳು ಅಲ್ಲಿದ್ದವು. ಇನ್ನು ವರ್ಚುವಲ್ ರಿಯಾಲಿಟಿ ಡಿವೈಸ್ ತಯಾರಿಕೆಗೂ ಸಹ ಜಿಯೋ ಮುಂದಾಗಿರುವುದನ್ನು ನಾವು ಅನುಭವಿಸಿ ನೋಡಿದೆವು. ಮನೆಯಲ್ಲಿ ನೆಲದ ಮೇಲೆ ನೀರು ಚೆಲ್ಲದರೂ ಸಹ ಮಾಹಿತಿ ನೀಡುವ ಗ್ಯಾಜೆಟ್ ಒಂದು ಕಣ್ಣರಳಿಸುವಂತೆ ಮಾಡಿತು. ಈ ಎಲ್ಲಾ ಡಿವೈಸ್‌ಗಳ ಕಾರ್ಯನಿರ್ವಹಣೆಯನ್ನು ಬಿಡುಗಡೆಗೂ ಮುನ್ನವೇ ಪ್ರತ್ಯಕ್ಷವಾಗಿ ನೋಡಿ ಅನುಭವಿಸಿದ ಸಂತಸ ನಮ್ಮದಾಯಿತು.

ಜಿಯೋ ಗುಂಗಿನಲ್ಲಿ ಬೆಂಗಳೂರಿಗೆ ವಾಪಸ್!

ಜಿಯೋ ಗುಂಗಿನಲ್ಲಿ ಬೆಂಗಳೂರಿಗೆ ವಾಪಸ್!

ಹೀಗೆ ಜಿಯೋ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಹೊಸದೊಂದು ಡಿಜಿಟಲ್ ಲೋಕವನ್ನು ನೋಡಿ ಮುಗಿಸಿದ ನಮಗೆ ಭರ್ಜರಿ ಭೋಜನವನ್ನು ನೀಡಲಾಯಿತು. ಆದರೆ, ಅದೇ ಭೋಜನವು ಅಲ್ಲಿನ ಸಾವಿರಾರು ಉದ್ಯೋಗಿಗಳಿಗೂ ಸಹ ಇರಲಿದೆ ಎಂದು ಕೇಳಿ ಆಶ್ಚರ್ಯವಾಯಿಗಿದ್ದಂತೂ ಸುಳ್ಳಲ್ಲ. ಊಟದ ನಂತರ ಜಿಯೋ ಉದ್ಯೋಗಿಗಳೊಂದಿಗೆ ಸ್ವಲ್ಪ ಸಮಯ ಹರಟೆ ಹೊಡೆಯುವ ವೇಳೆಗೆ ಸಮಯ ಮಧ್ಯಾಹ್ನ 4 ದಾಟಿತ್ತು. ಸಂಜೆ 6 ಗಂಟೆಗೆ ಮತ್ತೆ ಬೆಂಗಳೂರಿಗೆ ಹೊರಡುವ ವಿಮಾನ ನಮಗಾಗಿ ಕಾಯುತ್ತಿದೆ ಎಂದು ಮೊದಲೇ ಗೊತ್ತಿದ್ದರಿಂದ ಅಲ್ಲನವರಿಗೆ ಬೈ ಬೈ ಹೇಳಿ ಹೊರೆಟೆವು. ಆದರೆ, ವಿಮಾನ ಒಂದು ಗಂಟೆ ತಡವಾಗಿ ಬೆಂಗಳೂರಿಗೆ ಬರುವ ವೇಳೆಗೆ ರಾತ್ರಿ 9 ಗಂಟೆಯಾಗಿತ್ತು. ಬೆಂಗಳೂರಿಗೆ ಬಂದ ನಂತರದಲ್ಲೂ, ಮುಕೇಶ್ ಅಂಬಾನಿಯ ಜಿಯೋ ಭವಿಷ್ಯದಲ್ಲಿ ಭಾರತವನ್ನು ಹೇಗೆಲ್ಲಾ ಬದಲಾಯಿಸಬಹುದು ಎಂಬ ಗುಂಗು ನನ್ನ ತಲೆಯಲ್ಲಿ ಕಾಡುತ್ತಿತ್ತು. ಅದನ್ನೇ ನಿಮ್ಮ ಮುಂದೆಯೂ ತೆರೆದಿಟ್ಟಿದ್ದೇನೆ.!

Best Mobiles in India

English summary
TRAI's new cable, DTH rules: TV bills will go up for users. How Trai's tariff order will affect your cable bill. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X