ಬಳಕೆದಾರರ ಕಿರಿಕಿರಿ ನಿವಾರಿಸುವ ಟ್ವಿಟ್ಟರ್‌ನ ಹೊಸ ಬಟನ್

Posted By:

ಯಾವುದೇ ಸಾಮಾಜಿಕ ತಾಣಗಳಲ್ಲಿ ನಮ್ಮ ಸ್ನೇಹಿತರಲ್ಲದವರು ಕಿರಿಕಿರಿ ಉಂಟು ಮಾಡುವುದು ಸಹಜವಾಗಿರುತ್ತದೆ. ನಮ್ಮ ಸ್ನೇಹಿತರಲ್ಲದವರು ನಮ್ಮ ಫೋಟೋ ಲೈಕ್ ಮಾಡಿದಾಗ ಇಲ್ಲವೇ ಅದನ್ನು ಹಂಚಿಕೊಂಡಾಗ ನಮಗೆ ತ್ರಾಸದಾಯಕವಾಗುತ್ತದೆ.

ಈ ತೊಂದರೆಯನ್ನು ನಿವಾರಿಸುವ ಸಲುವಾಗಿಯೇ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹೊಸದಾದ ಬಟನ್ ಅನ್ನು ತನ್ನ ಐಒಎಸ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅನ್ವಯಿಸಿದೆ. ಈ ಬಟನ್ ಅನ್ನು ಬಳಸುವ ಮೂಲಕ ನಿಮಗೆ ಕಿರಿಕಿರಿ ಉಂಟು ಮಾಡುವ ಬಳಕೆದಾರರನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ಬಳಕೆದಾರರ ಕಿರಿಕಿರಿ ನಿವಾರಿಸುವ ಟ್ವಿಟ್ಟರ್‌ನ ಹೊಸ ಬಟನ್

ಐಒಎಸ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮ್ಯೂಟ್ ಎಂಬ ಆಯ್ಕೆ ಇದ್ದು ಇದನ್ನು ಬಳಸಿಕೊಂಡು ನೀವು ನಿಮಗೆ ಬೇಡದ ಟ್ವೀಟ್ ಹಾಗೂ ರೀಟ್ವೀಟ್ ಅನ್ನು ತೆಗೆದುಹಾಕಬಹುದಾಗಿದೆ. ಇದರಿಂದ ಅವರು ನಿಮಗೆ ವಿನಾಕಾರಣ ಕಿರಿಕಿರಿ ಉಂಟು ಮಾಡುವುದನ್ನು ತಡೆಗಟ್ಟಬಹುದಾಗಿದೆ. ಆದರೆ ಇದು ಫೇಸ್‌ಬುಕ್‌ನ ಅನ್‌ಫಾಲೋ ಫೀಚರ್‌ಗೆ ಸಮನಾಗಿರುವುದಿಲ್ಲ.

ನೀವು ಟ್ವಿಟ್ಟರ್‌ನಲ್ಲಿ ಬಳಕೆದಾರರನ್ನು ಮ್ಯೂಟ್ ಮಾಡಿದಾಗ ಕೂಡ ಆ ಬಳಕೆದಾರರೊಂದಿಗೆ ನೇರವಾದ ಸಂದೇಶಗಳನ್ನು ನಿಮಗೆ ಸ್ವೀಕರಿಸಬಹುದು ಮತ್ತು ಕಳುಹಿಸಬಹುದು ಹಾಗೂ ಅಧಿಸೂಚನೆ ಮತ್ತು ಟ್ಯಾಗ್ ಅನ್ನು ಕೂಡ ನಿರ್ವಹಿಸಬಹುದಾಗಿದೆ.

ಮ್ಯೂಟ್ ಬಟನ್‌ಗಳು ಟ್ವಿಟ್ಟರ್‌ಗೆ ಹೊಸದಾಗಿದ್ದು ಇತರ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಾದ ಟ್ವೀಟ್‌ಡೆಕ್ ಮತ್ತು ಟ್ವೀಟ್‌ಬೋಟ್‌ನಲ್ಲೂ ಕಂಡುಬರುತ್ತದೆ. ಫೇಸ್‌ಬುಕ್ ಕೂಡ ಇದೇ ವಿಧಾನಗಳನ್ನು ಅನುಸರಿಸಿದ್ದು, ನ್ಯೂಸ್ ಫೀಡ್‌ನಿಂದ ಅವರ ಪೋಸ್ಟ್‌ಗಳನ್ನು ತೆಗೆದುಹಾಕಲು ಅನುಮತಿಸುತ್ತದೆ.

ಕಂಪೆನಿಯ ಆಸೆಯು ಇನ್ನಷ್ಟು ಆರಾಮದಾಯಕ ವೈಶಿಷ್ಟ್ಯಗಳನ್ನು ಹೊರತರುವುದಾಗಿದ್ದು ಇದು ಇನ್ನಷ್ಟು ಬಳಕೆದಾರರನ್ನು ಖಂಡಿತ ಆಕರ್ಷಿಸುತ್ತದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot