ಭಾರತದಲ್ಲಿ U&i ಬ್ರ್ಯಾಂಡ್‌ನಿಂದ 35W ಫಾಸ್ಟ್‌ ಚಾರ್ಜರ್‌ ಡಿವೈಸ್‌ ಲಾಂಚ್‌! ಫೀಚರ್ಸ್‌ ಏನಿದೆ?

|

ಇಂದಿನ ದಿನಗಳಲ್ಲಿ ಪವರ್‌ ಬ್ಯಾಂಕ್‌ ಮತ್ತು ವೇಗದ ಚಾರ್ಜರ್‌ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌ ಇದೆ. ಹೊರ ಪ್ರದೇಶಗಳಿಗೆ ಪ್ರವಾಸ ಹೊರಡುವಾಗ ಪವರ್‌ ಬ್ಯಾಂಕ್‌ನ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿಯೊಂದು ಪವರ್‌ ಬ್ಯಾಂಕ್‌ ಇದ್ದರೆ ಉತ್ತಮ ಎಂದು ಬಯಸುತ್ತಾರೆ. ಅದರಂತೆ ಹಲವು ಕಂಪೆನಿಗಳು ವಿವಿಧ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಯು ಆಂಡ್‌ ಐ ಬ್ರ್ಯಾಂಡ್‌ ಕೂಡ ಒಂದಾಗಿದೆ. ಯು ಆಂಡ್‌ ಐ ಇದೀಗ ಎರಡು ಹೊಸ ಪವರ್‌ ಡಿವೈಸ್‌ಗಳನ್ನು ಪರಿಚಯಿಸಿದೆ.

ಯು ಆಂಡ್‌ ಐ ಬ್ರ್ಯಾಂಡ್‌

ಹೌದು, ಯು ಆಂಡ್‌ ಐ ಬ್ರ್ಯಾಂಡ್‌ ಹೊಸದಾಗಿ U&i 35W ಫಾಸ್ಟ್‌ ಚಾರ್ಜರ್‌ ಮತ್ತು U&i ಬೈಯರ್ ಸರಣಿ 10,000mAh 24W 4-in-1 ಪವರ್ ಬ್ಯಾಂಕ್ ಅನ್ನು ಲಾಂಚ್‌ ಮಾಡಿದೆ. ಈ ಹೊಸ ಚಾರ್ಜಿಂಗ್ ಡಿವೈಸ್‌ಗಳು ಸ್ಮಾರ್ಟ್‌ಫೋನ್‌, ಹೆಡ್‌ಫೋನ್‌ ಮತ್ತು TWS ಇಯರ್‌ಫೋನ್‌ಗಳನ್ನು ತ್ವರಿತವಾಗಿ ರೀಚಾರ್ಜ್ ಮಾಡುವುದಕ್ಕೆ ಅವಕಾಶ ನೀಡಲಿವೆ. ಇನ್ನು ಈ ಎರಡು ಡಿವೈಸ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಬಳಕೆದಾರರ ಗಮನಸೆಳೆದಿವೆ. ಹಾಗಾದ್ರೆ ಈ ಪವರ್‌ ಡಿವೈಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

U&i 35W ವೇಗದ ಚಾರ್ಜರ್ ಫೀಚರ್ಸ್‌

U&i 35W ವೇಗದ ಚಾರ್ಜರ್ ಫೀಚರ್ಸ್‌

U&i 35W ವೇಗದ ಚಾರ್ಜರ್ ಡಿವೈಸ್‌ USB-A ನಿಂದ USB-C ಡೇಟಾ ಕೇಬಲ್‌ ಅನ್ನು ಒಳಗೊಂಡಿದೆ. ಇನ್ನು ಈ ಡಿವೈಸ್‌ ಕ್ವಾಲ್ಕಾಮ್‌ ಕ್ವಿಕ್‌ ಚಾರ್ಜ್‌ 3.0 (QC3.0), ಫ್ಲ್ಯಾಶ್ ಚಾರ್ಜ್, ಸೂಪರ್ ವೂಕ್‌, DASH ಚಾರ್ಜ್ ಮತ್ತು WARP ಚಾರ್ಜ್ ಅನ್ನು ಹೊಂದಿದೆ. ಈ ಡಿವೈಸ್‌ ಚಾರ್ಜರ್ ಸೆಫ್ಟಿ ಮಾನದಂಡಗಳನ್ನು ಒಳಗೊಂಡಿದ್ದು, ಓವರ್‌ ವೋಲ್ಟೇಜ್, ಓವರ್‌ಕರೆಂಟ್, ಓವರ್‌ಹೀಟಿಂಗ್ ಮತ್ತು ಓವರ್‌ ಚಾರ್ಜಿಂಗ್‌ನಿಂದ ರಕ್ಷಿಸುತ್ತದೆ. ಇದಕ್ಕಾಗಿ ಈ ಚಾರ್ಜರ್ BIS ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

U&i ಬೈಯರ್ ಸರಣಿ 10,000mAh 24W 4-in-1 ಪವರ್ ಬ್ಯಾಂಕ್

U&i ಬೈಯರ್ ಸರಣಿ 10,000mAh 24W 4-in-1 ಪವರ್ ಬ್ಯಾಂಕ್

ಯು ಆಂಡ್‌ ಐ ಕಂಪೆನಿ ಪರಿಚಯಿಸಿರುವ ಹೊಸ ಯು ಆಂಡ್‌ ಐ ಬೈಯರ್ ಸರಣಿ 10,000mAh 4-in-1 ಪವರ್‌ಬ್ಯಾಂಕ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಯುಎಸ್‌ಬಿ-ಸಿ ಮತ್ತು ಲೈಟ್‌ನಿಂಗ್ ಪೋರ್ಟ್ ಹೊಂದಿದೆ. ಇದು ಡ್ಯುಯಲ್ ಕೇಬಲ್‌ ಹೊಂದಿದ್ದು, ಯುಎಸ್‌ಬಿ-ಸಿ ಪೋರ್ಟ್‌ನೊಂದಿಗೆ ಬರುವ ಐಫೋನ್‌ಗಳು ಮತ್ತು ಇತರ ಸ್ಮಾರ್ಟ್‌ಫೋನ್‌ಗಳನ್ನು ಬಳಕೆದಾರರು ಚಾರ್ಜ್ ಮಾಡಬಹುದು.

ಪವರ್‌ಬ್ಯಾಂಕ್

ಇನ್ನು ಈ ಪವರ್‌ಬ್ಯಾಂಕ್ 10,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ಪವರ್‌ಬ್ಯಾಂಕ್ ವಿವಿಧ ಸುರಕ್ಷತಾ ಮಾನದಂಡಗಳನ್ನು ಪ್ರಮಾಣೀಕರಿಸಲ್ಪಟ್ಟಿದೆ. ಆದರಿಂದ ಈ ಪವರ್‌ ಬ್ಯಾಂಕ್‌ ಓವರ್‌ವೋಲ್ಟೇಜ್, ಓವರ್‌ಕರೆಂಟ್, ಓವರ್‌ಹೀಟಿಂಗ್ ಮತ್ತು ಓವರ್‌ಚಾರ್ಜ್‌ನಿಂದ ಪ್ರೊಟೆಕ್ಷನ್‌ ನೀಡಲಿದೆ. ಇದಲ್ಲದೆ ಈ ಡಿವೈಸ್‌ ಆಂತರಿಕ ಬ್ಯಾಟರಿ ಸಾಮರ್ಥ್ಯದ ಬಗ್ಗೆ ನಿಮಗೆ ಮಾಹಿತಿ ನೀಡುವ ಡಿಸ್‌ಪ್ಲೇ ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ಚಾರ್ಜಿಂಗ್‌ ಪ್ರಮಾಣ ಎಷ್ಟಿದೆ ಅನ್ನೊದನ್ನ ತಿಳಿಯಲು ಸಾಧ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

U&i ಕಂಪನಿಯ ಹೊಸ ಆಲ್ ರೌಂಡರ್ ಸೀರೀಸ್ 35W ಫಾಸ್ಟ್ ಚಾರ್ಜರ್ ಡಿವೈಸ್‌ ಭಾರತದಲ್ಲಿ 1,999ರೂ. ಬೆಲೆಯನ್ನು ಹೊಂದಿದೆ. ಇನ್ನು U&i ಬೈಯರ್ ಸೀರೀಸ್ ಪವರ್‌ಬ್ಯಾಂಕ್ ಡಿವೈಸ್‌ ಬೆಲೆ 2,799ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಎರಡು ಡಿವೈಸ್‌ಗಳು ಭಾರತದಲ್ಲಿರುವ ಎಲ್ಲಾ U&i ಔಟ್‌ಲೆಟ್‌ಗಳು ಮತ್ತು ಇತರ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಸಿಗಲಿದೆ. ಇದು ಯಾವ ಬಣ್ಣದ ಆಯ್ಕೆಯಲ್ಲಿ ಬರಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

Read more about:
English summary
U&i has launched two new power devices in india!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X