ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದ ವಿ ಟೆಲಿಕಾಂ! RedX ಪ್ಲಾನ್‌ಗಳಿಗೆ ಗೇಟ್‌ಪಾಸ್‌!

|

ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ವಿ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ತನ್ನ ಜನಪ್ರಿಯ ಪ್ರೀಮಿಯಂ ರೆಡ್‌ಎಕ್ಸ್‌ ಪೋಸ್ಟ್‌ಪೆಯ್ಡ್‌ ಪ್ಲಾನ್‌ಗಳನ್ನು ಸೈಲೆಂಟ್‌ ಆಗಿ ತೆಗೆದುಹಾಕಿದೆ. ವಿ ಟೆಲಿಕಾಂ ರೆಡ್‌ಎಕ್ಸ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ತೆಗೆದುಹಾಕಿರುವುದರ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ ಮತ್ತು ಕಂಪೆನಿಯ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಮಾಹಿತಿ ನೀಡಿದೆ. ಈಗಾಗಲೇ ನಿಗಧಿತ ಯೋಜನೆಯನ್ನು ಹೊಂದಿರುವವರು ಅದರ ಮಾನ್ಯತೆ ಮುಗಿಯುವ ತನಕ ಬಳಸಬಹುದಾಗಿದೆ.

ವೊಡಾಫೋನ್ ಐಡಿಯಾ

ಹೌದು, ವೊಡಾಫೋನ್ ಐಡಿಯಾ ಭಾರತದಲ್ಲಿ ಪ್ರೀಮಿಯಂ ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ತೆಗೆದುಹಾಕಿದೆ. ಇನ್ಮುಂದೆ ಈ ಪ್ಲಾನ್‌ಗಳನ್ನು ನೀವು ರೀಚಾರ್ಜ್‌ ಮಾಡಿಸುವುದಕ್ಕೆ ಸಾಧ್ಯವಿಲ್ಲ ಎಂದು ವಿ ಟೆಲಿಕಾಂ ಹೇಳಿದೆ. ಅಷ್ಟೇ ಅಲ್ಲ ಈ ಪ್ಲಾನ್‌ಗಳು ವಿ ಟೆಲಿಕಾಂನ ಅಧಿಕೃತ ಅಪ್ಲಿಕೇಶನ್‌ನಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಈ ಪ್ಲಾನ್‌ಗಳ ಚಂದಾದಾರರಾಗಿರುವವರು ತಮ್ಮ ಪ್ಲಾನ್‌ಗಳ ಮಾನ್ಯತೆಯ ಅವಧಿ ಮುಗಿದ ನಂತರ ಮತ್ತೆ ರೀಚಾರ್ಜ್‌ ಮಾಡಲು ಸಾದ್ಯವಾಗುವುದಿಲ್ಲ. ಹಾಗಾದ್ರೆ ವಿ ಟೆಲಿಕಾಂನ ಈ ನಿರ್ಧಾರಕ್ಕೆ ಕಾರಣ ಏನು? ಇದರ ಬಗ್ಗೆ ವಿ ಟೆಲಿಕಾಂ ಹೇಳಿರುವುದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ

ವಿ ಟೆಲಿಕಾಂ ತನ್ನ ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಆನ್‌ಲೈನ್‌ನಲ್ಲಿ ಸ್ಟಾಪ್‌ ಮಾಡಿದೆ. ಆದರೆ ಈ ಪ್ಲಾನ್‌ಗಳು ಇನ್ನು ಕೂಡ ವೆಬ್‌ಸೈಟ್‌ ಮತ್ತು ಕಂಪೆನಿಯ ಕೆಲವು ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ ಎನ್ನಲಾಗುತ್ತಿದೆ. ಇದು ಕೂಡ ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ. ಆದರಿಂದ ವಿ ಟೆಲಿಕಾಮ ರೆಡ್‌ಎಕ್ಸ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು ಇನ್ನು ನೆನಪು ಮಾತ್ರ ಎನ್ನಲಾಗ್ತಿದೆ. ವಿ ಸ್ಟೋರ್‌ನಲ್ಲಿ ರೆಡ್‌ಎಕ್ಸ್‌ ಪೋಸ್ಟ್‌ಪೆಯ್ಡ್‌ ಪ್ಲಾನ್‌ಗಳು ಲಭ್ಯವಿದೆಯಾದರೂ ವ್ಯಾಲಿಡಿಟಿ ಅವಧಿ ಮುಗಿದ ನಂತರ ಅವರು ಈ ಯೋಜನೆಗಳನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ.

ಟೆಲಿಕಾಂ

ಇನ್ನು ವಿ ಟೆಲಿಕಾಂ ಭಾರತದಲ್ಲಿ ಮೂರು ರೀತಿಯ ರೆಡ್‌ಎಕ್ಸ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿತ್ತು. ಈ ಪ್ಲಾನ್‌ಗಳನ್ನು ವೈಯುಕ್ತಿಕ ಮತ್ತು ಫ್ಯಾಮಿಲಿ ಪ್ಲಾನ್‌ಗಳ ಆಧಾರದಲ್ಲಿ ವಿಭಾಗಿಸಲಾಗಿತ್ತು. ಇದರಲ್ಲಿ ವೈಯಕ್ತಿಕ ಚಂದಾದಾರರಿಗೆ ತಿಂಗಳಿಗೆ 1,099ರೂ. ಬೆಲೆಯ ಪ್ಲಾನ್‌ ನೀಡಲಾಗ್ತಿತ್ತು. ಆದರೆ ಫ್ಯಾಮಿಲಿ ಪ್ಲಾನ್‌ನಲ್ಲಿ ಚಂದಾದಾರರಿಗೆ 1,699ರೂ. ಮತ್ತು 2,299ರೂ. ಪ್ಲಾನ್‌ಗಳನ್ನು ಪರಿಚಯಿಸಲಾಗಿತ್ತು. ಇನ್ನು ಈ ಪ್ಲಾನ್‌ಗಳ ವಿವರವನ್ನು ಈ ಕೆಳಗಿನಂತಿದೆ.

ವಿ ರೆಡ್‌ಎಕ್ಸ್‌ 1,099ರೂ. ಪ್ಲಾನ್‌

ವಿ ರೆಡ್‌ಎಕ್ಸ್‌ 1,099ರೂ. ಪ್ಲಾನ್‌

ವಿ ರೆಡ್‌ಎಕ್ಸ್‌ 1,099ರೂ. ಪ್ಲಾನ್‌ ತಿಂಗಳ ಪ್ಲಾನ್‌ ಆಗಿದೆ. ಇದು ತಿಂಗಳ ಅವಧಿಗೆ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ, ಚಂದಾದಾರರು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್, Vi ಚಲನಚಿತ್ರಗಳು ಮತ್ತು ಟಿವಿ ಮತ್ತು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಒಂದು ವರ್ಷ ಅವಧಿಗೆ ಪಡೆಯಲಿದ್ದಾರೆ. ಅಲ್ಲದೆ ಚಂದಾದಾರರು ವರ್ಷಕ್ಕೆ ನಾಲ್ಕು ಬಾರಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

ವಿ ರೆಡ್‌ಎಕ್ಸ್‌ 1,699ರೂ. ಪ್ಲಾನ್‌

ವಿ ರೆಡ್‌ಎಕ್ಸ್‌ 1,699ರೂ. ಪ್ಲಾನ್‌

ಇನ್ನು ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಡೇಟಾ, ಅನಿಯಮಿತ ಸ್ಥಳೀಯ, STD ಮತ್ತು ರಾಷ್ಟ್ರೀಯ ರೋಮಿಂಗ್ ಕರೆ ಪ್ರಯೋಜನಗಳನ್ನುಪಡೆಯಬಹುದು. ಅಲ್ಲದೆ ದಿನಕ್ಕೆ 100 SMS ಅಥವಾ ತಿಂಗಳಿಗೆ 3000 SMS ಪ್ರಯೋಜನ ನೀಡಲಿದೆ. ಇದರಲ್ಲಿ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ಮತ್ತು ವಿ ಮೂವಿಸ್‌ಗಳಿಗೆ ಒಂದು ವರ್ಷದ ಚಂದಾದಾರಿಕೆಯನ್ನು ನೀಡಲಿದೆ.

ವಿ ರೆಡ್‌ಎಕ್ಸ್‌ 2,299ರೂ. ಪ್ಲಾನ್‌

ವಿ ರೆಡ್‌ಎಕ್ಸ್‌ 2,299ರೂ. ಪ್ಲಾನ್‌

ಇನ್ನು ಈ ಪ್ಲಾನ್‌ ಕೂಡ 1,699ರೂ. ಪ್ಲಾನ್‌ನಲ್ಲಿರುವ ಎಲ್ಲಾ ಪ್ರಯೋಜನಗಳನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನೀವು ಮೂರು ಸಂಪರ್ಕಗಳಿಗೆ ಬದಲಾಗಿ ಒಟ್ಟು ಐದು ಸಂಪರ್ಕಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Vodafone Idea removes RedX Plans from app and official website

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X