ವಾಟ್ಸಾಪ್‌ನಿಂದ ನಾಲ್ಕು ಹೊಸ ಫೀಚರ್ಸ್‌ ಸೇರ್ಪಡೆ! ಏನೆಲ್ಲಾ ಪ್ರಯೋಜನಗಳು!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದ್ದ ಬಹು ನಿರೀಕ್ಷಿತ ಫೀಚರ್ಸ್‌ಗಳನ್ನು ಇದೀಗ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಈ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಮುಂದಾಗಿದೆ. ಇದರಲ್ಲಿ ವಾಟ್ಸಾಪ್‌ ಕಮ್ಯೂನಿಟಿ ಫೀಚರ್ಸ್‌ ಪ್ರಮುಖವಾಗಿದೆ. ಇದರೊಂದಿಗೆ ಇನ್‌ಚಾಟ್‌ ಫೋಲ್‌ ನಂತಹ ಫೀಚರ್ಸ್ ಸೇರ್ಪಡೆಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರಿಗೆ ಇಂದಿನಿಂದ ವಾಟ್ಸಾಪ್‌ ಕಮ್ಯೂನಿಟಿಸ್‌ ಫೀಚರ್ಸ್‌ ಲಭ್ಯವಾಗಲಿವೆ. ಕಮ್ಯೂನಿಟಿಸ್‌ ಫೀಚರ್ಸ್‌ ಜೊತೆಗೆ ವಾಟ್ಸಾಪ್‌ 1024 ಬಳಕೆದಾರರೊಂದಿಗೆ ಇನ್-ಚಾಟ್ ಪೋಲ್‌ಗಳು, 32-ವ್ಯಕ್ತಿಗಳ ವೀಡಿಯೊ ಕಾಲ್‌ ಸಾಮರ್ಥ್ಯ ಮತ್ತು ಗ್ರೂಪ್‌ ಕ್ರಿಯೆಟ್‌ ಮಾಡುವ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದಲ್ಲದೆ ಇನ್ಮುಂದೆ ವಾಟ್ಸಾಪ್‌ನಲ್ಲಿ 1024 ಜನರನ್ನು ಗ್ರೂಪ್‌ಗೆ ಸೇರಿಸಲು ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಸಮುದಾಯಗಳು (ಕಮ್ಯೂನಿಟಿಸ್‌)

ವಾಟ್ಸಾಪ್‌ ಸಮುದಾಯಗಳು (ಕಮ್ಯೂನಿಟಿಸ್‌)

ವಾಟ್ಸಾಪ್‌ ಕಮ್ಯೂನಿಟಿ ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿಯಲ್ಲಿ ತರಲಿದೆ. ಅಂದರೆ ವಿವಿಧ ಗುಂಪುಗಳನ್ನು ಒಂದೇ ಕಡೆ ತರುವುದಕ್ಕೆ ಸಹಾಯ ಮಾಡಲಿದೆ. ಅಲ್ಲದೆ ನೀವು ಕಮ್ಯೂನಿಟಿಯಲ್ಲಿ ಮಾಡುವ ಅಪ್ಡೇಟ್‌ಗಳು ಎಲ್ಲಾ ಗ್ರೂಪ್‌ಗಳು ಕೂಡ ಸ್ವೀಕರಿಸಲು ಸಾಧ್ಯವಾಗಲಿದೆ. ಇದಲ್ಲದೆ ಮುಖ್ಯವಾದ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಚರ್ಚಾ ಗ್ರೂಪ್‌ಗಳನ್ನು ಕ್ರಿಯೆಟ್‌ ಮಾಡಲು ಅವಕಾಶವಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಕಮ್ಯೂನಿಟಿ ಗುಂಪುಗಳು ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಇದರಲ್ಲಿ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು. ಇದಲ್ಲದೆ ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಗ್ರೂಪ್ಸ್‌ ನಡುವಿನ ಸಂಭಾಷಣೆಗಳಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ. ಇದರಿಂದ ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಜನರಿಗೆ ಮುಖ್ಯವಾದುದನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.

ಕಮ್ಯೂನಿಟಿ

ವಾಟ್ಸಾಪ್‌ನಲ್ಲಿ ಕಮ್ಯೂನಿಟಿ ಫೀಚರ್ಸ್‌ಗಳನ್ನು ಬಳಸುವುದಕ್ಕೆ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಚಾಟ್‌ಗಳ ಮೇಲ್ಭಾಗದಲ್ಲಿ ಮತ್ತು ಐಒಎಸ್‌ನಲ್ಲಿ ಕೆಳಭಾಗದಲ್ಲಿರುವ ಹೊಸ ಕಮ್ಯೂನಿಟಿ ಟ್ಯಾಬ್‌ ಅನ್ನು ಟ್ಯಾಪ್‌ ಮಾಡಬೇಕಾಗುತ್ತದೆ. ನಂತರ ಬಳಕೆದಾರರು ಮೊದಲಿನಿಂದ ಹೊಸ ಸಮುದಾಯವನ್ನು ಪ್ರಾರಂಭಿಸಬಹುದು. ಇಲ್ಲವೇ ಈಗಾಗಲೇ ಅಸ್ತಿತ್ವದಲ್ಲಿರುವ ಗುಂಪುಗಳನ್ನು ಸೇರಿಸಬಹುದು. ಒಮ್ಮೆ ನೀವು ವಾಟ್ಸಾಪ್‌ ಕಮ್ಯೂನಿಟಿ ಸೇರಿದ ನಂತರ ನಿಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಲಭ್ಯವಿರುವ ಗುಂಪುಗಳ ನಡುವೆ ನೀವು ಸುಲಭವಾಗಿ ಬದಲಾಯಿಸಬಹುದು.

ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಸುರಕ್ಷತೆಗಳು

ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಸುರಕ್ಷತೆಗಳು

ವಾಟ್ಸಾಪ್‌ ಕಮ್ಯೂನಿಟಿ ಅಡ್ಮಿನ್ಸ್‌ ಹೊಸ ಪರಿಕರಗಳನ್ನು ಒಳಗೊಂಡಿರುತ್ತದೆ. ಎಲ್ಲರಿಗೂ ಕಳುಹಿಸಲಾದ ಪ್ರಕಟಣೆ ಸಂದೇಶಗಳು ಮತ್ತು ಯಾವ ಗುಂಪುಗಳನ್ನು ಸೇರಿಸಬಹುದು ಎಂಬುದರ ಮೇಲೆ ಕಂಟ್ರೋಲ್‌ಗಳನ್ನು ಒಳಗೊಂಡಿರುತ್ತದೆ. ಅವರ ಪ್ರೈವೇಟ್‌ ಗ್ರೂಪ್ಸ್‌ ನಡುವೆ ಕಮ್ಯೂನಿಟಿಗಳ ಅಡ್ಮಿನ್ಸ್‌ ಟೂಲ್ಸ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ನಿಂದನೆಯನ್ನು ವರದಿ ಮಾಡಲು, ಖಾತೆಗಳನ್ನು ನಿರ್ಬಂಧಿಸಲು, ಕಮ್ಯೂನಿಟಿಯನ್ನು ತೊರೆಯಲು ಸಾಧ್ಯವಾಗುತ್ತದೆ.

ವಾಟ್ಸಾಪ್‌ ಇನ್-ಚಾಟ್ ಪೋಲ್

ವಾಟ್ಸಾಪ್‌ ಇನ್-ಚಾಟ್ ಪೋಲ್

ವಾಟ್ಸಾಪ್‌ ಇನ್-ಚಾಟ್ ಪೋಲ್ ಫೀಚರ್ಸ್‌ ಹೆಸರೇ ಸೂಚಿಸುವಂತೆ ಚಾಟ್‌ಗಳಲ್ಲಿ ಪೋಲ್‌ ನಡೆಸಲು ಅವಕಾಶ ನೀಡಲಿದೆ. ಇದರಿಂದ ನೀವು ಇನ್-ಚಾಟ್ ಪೋಲ್‌ಗಳಲ್ಲಿ ಪ್ರಶ್ನೆಯನ್ನು ರಚಿಸಬಹುದಾಗಿದೆ. ಅಲ್ಲದೆ ಪ್ರತ್ಯೇಕ ಸ್ಕ್ರೀನ್‌ನಲ್ಲಿ 12 ಸಂಭವನೀಯ ಉತ್ತರಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಆದರೆ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಇನ್ನು ಕೂಡ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

1024 ಜನರೊಂದಿಗೆ ಗ್ರೂಪ್ ಚಾಟ್

1024 ಜನರೊಂದಿಗೆ ಗ್ರೂಪ್ ಚಾಟ್

ಇನ್ಮುಂದೆ ವಾಟ್ಸಾಪ್‌ ನಿಮಗೆ 1024 ಜನರನ್ನು ಗ್ರೂಪ್‌ಗೆ ಸೇರಿಸುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ನೀವು ಗ್ರೂಪ್‌ ವೀಡಿಯೊ ಕಾಲ್‌ನಲ್ಲಿ ಭಾಗವಹಿಸವವರ ಸಂಖ್ಯೆಯನ್ನು 32ಕ್ಕೇರಿಸಿದೆ. ಇದಲ್ಲದೆ ಬಿಗ್‌ ಫೈಲ್ ಶೇರ್‌, ಎಮೋಜಿ ರಿಯಾಕ್ಷನ್‌ಗಳು ಮತ್ತು ಅಡ್ಮಿನ್‌ ಡಿಲೀಟ್‌ ಫೀಚರ್ಸ್‌ ಅನ್ನು ಸಹ ಹೊರತಂದಿದೆ.

Best Mobiles in India

English summary
WhatsApp announced four new features: rolling out communities to all users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X