ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಡಿಲೀಟ್‌ ಮೆಸೇಜ್‌ ರಿಕವರಿ ಆಯ್ಕೆ!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುವಲ್ಲಿ ಸದಾ ಮುಂದಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ಗೆ ಸೆಡ್ಡು ಹೊಡೆಯುವುದಕ್ಕೆ ಯಾವುದೇ ಮೆಸೇಜಿಂಗ್‌ ಅಪ್ಲಿಕೇಶನ್‌ಗೆ ಸಾಧ್ಯವಾಗಿಲ್ಲ. ತನ್ನ ಬಳಕೆದಾರರಿಗೆ ಮೆಸೇಜಿಂಗ್‌ ಅನುಭವವನ್ನು ಇನ್ನಷ್ಟು ಆಸಕ್ತಿದಾಯಕಗೊಳಿಸುವ ಪ್ರಯತ್ನವನ್ನು ವಾಟ್ಸಾಪ್‌ ನಡೆಸುತ್ತಲೇ ಬಂದಿದೆ. ಅದರಂತೆ ಇದೀಗ ಬಳಕೆದಾರರನ್ನು ಮನಗೆಲ್ಲುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದು ನಿಮ್ಮ ಡಿಲೀಟ್‌ ಮೆಸೇಜ್‌ಗಳನ್ನು ರಿಕವರಿ ಮಾಡಲು ಅವಕಾಶ ನೀಡಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ ಮತ್ತೊಂದು ಆಸಕ್ತಿದಾಯಕ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಫೀಚರ್ಸ್‌ ಬಳಕೆದಾರರು ತಾವು ಡಿಲೀಟ್‌ ಮಾಡಿದ ಮೆಸೇಜ್‌ಗಳನ್ನು ರಿಕವರಿ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ. ಇದರಿಂದ ನೀವು ಆಕಸ್ಮಿಕವಾಗಿ ಡಿಲೀಟ್‌ ಮಾಡಿದ ನಿಮ್ಮ ಸಂದೇಶಗಳನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ ಬೀಟಾ ಅಪ್‌ಡೇಟ್‌ನಲ್ಲಿ ಗುರುತಿಸಲಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಪ್ರಸ್ತುತ ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ಮೆಸೇಜ್‌ ಡಿಲೀಟ್‌ ಆದರೆ ರಿಕವರಿ ಮಾಡುವುದಕ್ಕೆ ಯಾವುದೇ ಆಯ್ಕೆಯಿಲ್ಲ. ಬದಲಿಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿ ಡಿಲೀಟ್‌ ಮೆಸೇಜ್‌ ಅನ್ನು ಕಾಣಬಹುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಡಿಲೀಟ್‌ ಮಾಡಲಾದ ಮೆಸೇಜ್‌ ಅನ್ನು ರಿಕವರಿ ಮಾಡುವ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್‌ ಅಂಡೂ (Undo) ಬಟನ್ ಅನ್ನು ಒದಗಿಸಲಿದೆ. ಇದರಿಂದ ನಿಮ್ಮ ಸಂದೇಶವನ್ನು ಮರಳಿ ಪಡೆಯಲು ಸಾದ್ಯವಾಗಲಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಮೂಲಕ ನೀವು ಮೆಸೇಜ್‌ ಅನ್ನು ಡಿಲೀಟ್‌ ಮಾಡುವ ಸಮಯದಲ್ಲಿ ಸ್ನ್ಯಾಕ್‌ಬಾರ್ ತೋರಿಸುತ್ತದೆ. ಈ ಸನ್ನಿವೇಶದಲ್ಲಿ ಈ ಹಿಂದೆ ಎಲ್ಲರಿಗೂ ಸಂದೇಶವನ್ನು ಅಳಿಸಲು ಬಯಸಿದರೆ ಅದನ್ನು ರಿಕವರಿ ಮಾಡಲು ಕೆಲವು ಸೆಕೆಂಡುಗಳು ಲಭ್ಯವಾಗಲಿದೆ. ಆದ್ದರಿಂದ ನೀವು "ಡಿಲೀಟ್ ಫಾರ್ ಮಿ" ಆಯ್ಕೆಯನ್ನು ಒತ್ತಿದ ತಕ್ಷಣ, ಅಂಡೂ ಬಟನ್ ಕಾಣಿಸಿಕೊಳ್ಳುತ್ತದೆ. ಇದರಿಂದ ನೀವು ಡಿಲೀಟ್‌ ಮಾಡುವುದಕ್ಕೆ ಬಯಸುವುದಿಲ್ಲ ಎಂದರೆ ನಿಮ್ಮ ಮೆಸೇಜ್‌ ಅನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ.

ಫೀಚರ್ಸ್‌

ಸದ್ಯಕ್ಕೆ, ಈ ಫೀಚರ್ಸ್‌ ಅನ್ನು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದನ್ನು ನೀವು ಪ್ಲೇ ಸ್ಟೋರ್‌ನಿಂದ ಇತ್ತೀಚಿನ ಬೀಟಾ ಅಪ್‌ಡೇಟ್ ಮೂಲಕ ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ವಾಟ್ಸಾಪ್‌ ಆವೃತ್ತಿಯನ್ನು ಅಪ್ಡೇಟ್‌ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಇತ್ತೀಚಿನ ಬೀಟಾವನ್ನು ಇನ್‌ಸ್ಟಾಲ್ ಮಾಡಿದರೂ "ಡಿಲೀಟ್ ಫಾರ್ ಮಿ" ಅನ್ನು ಬಳಸುವಾಗ ಸ್ನ್ಯಾಕ್‌ಬಾರ್ ಕಾಣಿಸದಿದ್ದರೆ, ಈ ಫೀಚರ್ಸ್‌ ಇನ್ನು ಕೂಡ ನಿಮಗೆ ಲಭ್ಯವಾಗಿಲ್ಲ ಎಂದರ್ಥ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ವಿಂಡೋಸ್‌ಗಾಗಿ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಹಿಂದೆ ಮ್ಯಾಕ್‌ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂಗಾಗಿ ವೆಬ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಮಾತ್ರ ನೀಡುತ್ತಿತ್ತು. ಇದೀಗ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಬಳಕೆದಾರಿಗೆ ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಆಫ್‌ಲೈನ್‌ನಲ್ಲಿದ್ದರೂ ಕೂಡ ವಾಟ್ಸಾಪ್‌ ನೋಟಿಫಿಕೇಶನ್‌ಗಳು ಮತ್ತು ಮೆಸೇಜ್‌ಗಳನ್ನು ಡೆಸ್ಕ್‌ಟಾಪ್‌ನಲ್ಲಿ ಸ್ವಿಕರಿಸಲು ಸಾಧ್ಯವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ನ FAQ ಪೇಜ್‌ ಪ್ರಕಾರ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್ ಆಫ್‌ಲೈನ್ ಆಗಿದ್ದರೂ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ ನೋಟಿಫಿಕೇಶನ್‌ಗಳನ್ನು ನೋಡಬಹುದು. ಇನ್ನು ಬಳಕೆದಾರರು ವಾಟ್ಸಾಪ್‌ನ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ನಂತರ ಡಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ತೆರೆಯಬೇಕಾದರೆ ಫೋನ್‌ನಿಂದ ಸ್ಕ್ಯಾನ್‌ ಮಾಡುವ ಪ್ರಕ್ರಿಯೆಯನ್ನು ಈಗಲೂ ಅನುಸರಿಸಬೇಕು. ನಿಮ್ಮ ಫೋನಿನಲ್ಲಿ ವಾಟ್ಸಾಪ್‌ QR ಕೋಡ್ ಸ್ಕ್ಯಾನರ್ ಅನ್ನು ತೆರೆಯಲು ಲಿಂಕ್ ಮಾಡಲಾದ ಡಿವೈಸ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಸಬಹುದು.

Best Mobiles in India

Read more about:
English summary
Whatsapp working on a new feature which will let users recover their deleted messages

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X