ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರ ಅನುಕೂಲಕ್ಕಾಗಿ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಲೇ ಬಂದಿದೆ. ಸದ್ಯ ಇದೀಗ ಮತ್ತೊಂದು ಹೊಸ ಫೀಚರ್ಸ್‌ನಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಫೀಚರ್ಸ್‌ ವಾಟ್ಸಾಪ್‌ನ ಐಒಎಸ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಇದರಿಂದ ವಾಟ್ಸಾಪ್‌ ಬಳಕೆದಾರ ಇಂಟರ್ಫೇಸ್‌ನಲ್ಲಿ ಟ್ವೀಕ್‌ಗಳನ್ನು ತರುವ ಮತ್ತು ಗುಂಪು ಚಾಟ್‌ನಲ್ಲಿ ಸದಸ್ಯರ ಪ್ರೊಫೈಲ್ ಚಿತ್ರಗಳನ್ನು ಕಾಣಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಗ್ರೂಪ್‌ ಚಾಟ್‌ನಲ್ಲಿ ಬಳಕೆದಾರರ ಪ್ರೊಫೈಲ್‌ ಕಾಣುವಂತೆ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ವಾಟ್ಸಾಪ್‌ನ ಐಒಎಸ್‌ ಆವೃತ್ತಿಯಲ್ಲಿ ಬರಲಿದೆ. ಇದಲ್ಲದೆ ಬಳಕೆದಾರರ ಚಾಟ್ ಲಿಸ್ಟ್‌ನೊಳಗೆ ಸ್ಟೇಟಸ್‌ ಅಪ್ಡೇಟ್‌ಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲು ಮುಂದಾಗಿರುವ ಹೊಸ ಫೀಚರ್ಸ್‌ ವಿಶೇಷತೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಐಒಎಸ್‌ ಆವೃತ್ತಿಯಲ್ಲಿ ಗ್ರೂಪ್‌ಚಾಟ್‌ಗಳಲ್ಲಿ ಪ್ರೊಫೈಲ್‌ಗಳನ್ನು ನೋಡಬಹುದಾದ ಅವಕಾಶ ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಗ್ರೂಪ್‌ಚಾಟ್‌ನಲ್ಲಿ ಮೆಸೇಜ್‌ ಮಾಡಿದ ತಕ್ಷಣ ಅವರ ಪ್ರೊಫೈಲ್‌ ಕೂಡ ಕಾಣಲಿದೆ. ನೀವು ಕಳುಹಿಸಿದ ಸಂದೇಶದ ಪಕ್ಕದಲ್ಲಿ ಪ್ರೊಫೈಲ್ ಚಿತ್ರವನ್ನು ಕಾಣಲು ಸಾಧ್ಯವಾಗಲಿದೆ. ಈ ಹೊಸ ಫೀಚರ್ಸ್‌ನ ಬಗ್ಗೆ ವಾಟ್ಸಾಪ್‌ನ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾಇನ್ಫೋ ವರದಿ ಮಾಡಿದೆ. ಈ ಫೀಚರ್ಸ್‌ ಮೂಲಕ ನೀವು ಗ್ರೂಪ್‌ಚಾಟ್‌ನಲ್ಲಿ ಮಾತ್ರ ಭಾಗವಹಿಸವವರ ಪ್ರೊಫೈಲ್‌ ನೋಡಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ಇನ್ನು ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಿರೋದು ವರದಿಯಾಗಿದೆ. ಈ ಮೂಲಕ ಬಳಕೆದಾರರ ಅನುಭವವನ್ನು ಉತ್ತಮ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಇವುಗಳಲ್ಲಿ ಹಲವು ಫೀಚರ್ಸ್‌ಗಳು ಸಾಕಷ್ಟು ಕುತೂಹಲವನ್ನು ಮೂಡಿಸಿವೆ. ಇದರಲ್ಲಿ ಚಾಟ್‌ ಲಿಸ್ಟ್‌ನಲ್ಲಿ ಸ್ಟೇಟಸ್‌ ಅಪ್ಡೇಟ್‌ ವೀಕ್ಷಿಸುವ ಫೀಚರ್ಸ್‌ ಕೂಡ ಸೇರಿದೆ. ಇದು ಈಗಾಗಲೇ ಬೀಟಾ ಅಪ್ಡೇಟ್‌ನಲ್ಲಿ ಲಭ್ಯವಿದೆ ಎನ್ನಲಾಗಿದೆ. ಆದರೆ ನೀವು ಅವರ ಸ್ಟೇಟಸ್‌ ಅಪ್ಡೇಟ್‌ ವೀಕ್ಷಿಸಲು ಅವರ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಬೇಕಾಗುತ್ತದೆ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಅಪ್‌ಡೇಟ್‌ಗಳನ್ನುಹಂಚಿಕೊಳ್ಳುವ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಇನ್ನು ಈ ಫೀಚರ್ಸ್‌ ಇದೀಗ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಚಾಟ್‌ ಲಿಸ್ಟ್‌ನಲ್ಲಿರುವ ಯಾವುದೇ ಸಂಪರ್ಕವು ಹೊಸ ಸ್ಟೇಟಸ್‌ ಅಪ್ಡೇಟ್‌ ಅಪ್‌ಲೋಡ್ ಮಾಡಿದಾಗ, ಅದು ಚಾಟ್ ಪಟ್ಟಿಯಲ್ಲಿ ಸಹ ಗೋಚರಿಸುತ್ತದೆ. ಸದ್ಯ ಆಂಡ್ರಾಯ್ಡ್ ಆವೃತ್ತಿ 2.22.18.17 ಗಾಗಿ ವಾಟ್ಸಾಪ್‌ ಬೀಟಾದಲ್ಲಿ ಈ ಫೀಚರ್ಸ್‌ ಲಭ್ಯವಿದೆ ಎಂದು ವಾಬೇಟಾಇನ್ಫೋ ಟ್ರ್ಯಾಕರ್‌ ಹೇಳಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ನಿಮ್ಮ ಡಿಲೀಟ್‌ ಮೆಸೇಜ್‌ಗಳನ್ನು ರಿಕವರಿ ಮಾಡಲು ಅವಕಾಶ ನೀಡುವುದಕ್ಕೆ ಮುಂದಾಗಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ಮೆಸೇಜ್‌ ಡಿಲೀಟ್‌ ಆದರೆ ರಿಕವರಿ ಮಾಡುವುದಕ್ಕೆ ಯಾವುದೇ ಆಯ್ಕೆಯಿಲ್ಲ. ಬದಲಿಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿ ಡಿಲೀಟ್‌ ಮೆಸೇಜ್‌ ಅನ್ನು ಕಾಣಬಹುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಡಿಲೀಟ್‌ ಮಾಡಲಾದ ಮೆಸೇಜ್‌ ಅನ್ನು ರಿಕವರಿ ಮಾಡುವ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್‌ ಅಂಡೂ (Undo) ಬಟನ್ ಅನ್ನು ಒದಗಿಸಲಿದೆ. ಇದರಿಂದ ನಿಮ್ಮ ಸಂದೇಶವನ್ನು ಮರಳಿ ಪಡೆಯಲು ಸಾದ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ವಿಂಡೋಸ್‌ಗಾಗಿ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಹಿಂದೆ ಮ್ಯಾಕ್‌ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂಗಾಗಿ ವೆಬ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಮಾತ್ರ ನೀಡುತ್ತಿತ್ತು. ಇದೀಗ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಬಳಕೆದಾರಿಗೆ ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಆಫ್‌ಲೈನ್‌ನಲ್ಲಿದ್ದರೂ ಕೂಡ ವಾಟ್ಸಾಪ್‌ ನೋಟಿಫಿಕೇಶನ್‌ಗಳು ಮತ್ತು ಮೆಸೇಜ್‌ಗಳನ್ನು ಡೆಸ್ಕ್‌ಟಾಪ್‌ನಲ್ಲಿ ಸ್ವಿಕರಿಸಲು ಸಾಧ್ಯವಾಗಲಿದೆ.

ವಾಟ್ಸಾಪ್‌ನ

ವಾಟ್ಸಾಪ್‌ನ FAQ ಪೇಜ್‌ ಪ್ರಕಾರ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್ ಆಫ್‌ಲೈನ್ ಆಗಿದ್ದರೂ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ ನೋಟಿಫಿಕೇಶನ್‌ಗಳನ್ನು ನೋಡಬಹುದು. ಇನ್ನು ಬಳಕೆದಾರರು ವಾಟ್ಸಾಪ್‌ನ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ನಂತರ ಡಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ತೆರೆಯಬೇಕಾದರೆ ಫೋನ್‌ನಿಂದ ಸ್ಕ್ಯಾನ್‌ ಮಾಡುವ ಪ್ರಕ್ರಿಯೆಯನ್ನು ಈಗಲೂ ಅನುಸರಿಸಬೇಕಾಗುತ್ತದೆ.

Most Read Articles
Best Mobiles in India

Read more about:
English summary
WhatsApp working on display profile pictures in a group chat: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X