ಶಿಯೋಮಿ ಪಂಚ ಸಂಭ್ರಮಕ್ಕೆ ಹೊಸ ಉತ್ಪನ್ನಗಳು..!

By Gizbot Bureau
|

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಿರುವ ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಶಿಯೋಮಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ತಯಾರಾಗಿದೆ. ಹೌದು, ಇದೇ ಜುಲೈ 15ಕ್ಕೆ ಶಿಯೋಮಿ ಭಾರತದಲ್ಲಿ ಕಾರ್ಯಾರಂಭ ಮಾಡಿ 5 ವರ್ಷ ಪೂರ್ಣವಾಗಲಿದೆ. ಈ 5 ವರ್ಷದ ಅವಧಿಯಲ್ಲಿ ಶಿಯೋಮಿ ಕಂಪನಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು, ಅಕ್ಸೆಸರಿಸ್ ಮತ್ತು ಸ್ಮಾರ್ಟ್‌ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ.

ಶಿಯೋಮಿ ಪಂಚ ಸಂಭ್ರಮಕ್ಕೆ ಹೊಸ ಉತ್ಪನ್ನಗಳು..!

ಪಂಚ ವರ್ಷದ ಸಂಭ್ರಮದಲ್ಲಿರುವ ಶಿಯೋಮಿ ಭಾರತೀಯ ಮಾರುಕಟ್ಟೆಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಗ್ರಾಹಕರಿಗೆ ಭರಪೂರ ಆಫರ್‌ಗಳು ದೊರೆಯುವುದಂತೂ ಖಂಡಿತ. ಈಗಾಗಲೇ, 1199 ರೂ.ಗೆ Mi ಟ್ರಿಮ್ಮರ್‌ನ್ನು ಬಿಡುಗಡೆಗೊಳಿಸಿದ್ದು, ಒಂದಾದ ಮೇಲೊಂದರಂತೆ ಹೊಸ ಉತ್ಪನ್ನಗಳು ಇಂಡಿಯನ್‌ ಮಾರ್ಕೆಟ್‌ ಪ್ರವೇಶಿಸಲಿವೆ.

Mi 5 ಟೀಸರ್‌

Mi 5 ಟೀಸರ್‌

ಈಗಾಗಲೇ Mi 5 ವಸಂತಗಳನ್ನು ಪೂರೈಸಿರುವ ಟೀಸರ್‌ ಬಿಡುಗಡೆಯಾಗಿದ್ದು, 5 ವರ್ಷದ ಸಂಭ್ರಮಕ್ಕೆ ಬಿಡುಗಡೆಯಾಗುವ ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಟ್ರಕ್ ಬಿಲ್ಡರ್, ಬ್ಲೂಟೂಥ್ ಹೆಡ್‌ಫೋನ್‌ ಮತ್ತಿತರ ಹೊಸ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಕಾಲಿಡುವುದು ಪಕ್ಕಾ ಆಗಿದೆ.

ಯಾವ ಉತ್ಪನ್ನಗಳು..?

ಯಾವ ಉತ್ಪನ್ನಗಳು..?

Mi ಟ್ರಕ್‌ ಬಿಲ್ಡರ್ (500 ಭಾಗಗಳು, ಸ್ಟಿರಿಂಗ್‌ ಚಕ್ರ ನಿಯಂತ್ರಣಾ ವ್ಯವಸ್ಥೆ) ಹಾಗೂ Mi ವಯರ್‌ಲೆಸ್‌ ಬ್ಲೂಟೂಥ್ ಹೆಡ್‌ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿಯೂ ಬಿಡುಗಡೆಯಾಗುವ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿದೆ. ಇದರ ಜೊತೆ Mi ರಿಚಾರ್ಜೆಬಲ್‌ ಎಲ್‌ಇಡಿ ಲ್ಯಾಂಪ್‌ನ್ನು ಕೂಡ ಭಾರತೀಯ ಮಾರುಕಟ್ಟೆಗೆ ಶಿಯೋಮಿ ಪರಿಚಯಿಸುತ್ತಿದೆ. ಈ ಲ್ಯಾಂಪ್‌ ವಿವಿಧ ಮೂಡ್‌ಗೆ ತಕ್ಕಂತೆ ಬದಲಾಯಿಸಲು ಮೂರು ರೀತಿಯ ಬಣ್ಣದ ದೀಪವನ್ನು ಹೊಂದಿದ್ದು, ಮಿನಿಮಲಿಸ್ಟ್‌ ವಿನ್ಯಾಸಸದೊಂದಿಗೆ ಆಕರ್ಷಿಸುತ್ತದೆ.

ಫಾಸ್ಟ್‌ ಚಾರ್ಜರ್‌

ಫಾಸ್ಟ್‌ ಚಾರ್ಜರ್‌

ಮೇಲಿನ ಉತ್ಪನ್ನಗಳು ಅಲ್ಲದೇ ಶಿಯೋಮಿ ಫಾಸ್ಟ್‌ ಚಾರ್ಜರ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಈಗಾಗಲೇ ಚೀನಾದಲ್ಲಿ 36W ಮತ್ತು 27W ಸಾಮರ್ಥ್ಯದ ಫಾಸ್ಟ್‌ ಚಾರ್ಜರ್‌ಗಳು ಲಭ್ಯವಿದ್ದು, ಇದರಲ್ಲಿ ಯಾವುದು ಭಾರತಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಯರ್‌ ಚಾರ್ಜರ್ ಅಲ್ಲದೇ ಚೀನಾದಲ್ಲಿ ವಯರ್‌ಲೆಸ್‌ ಫಾಸ್ಟ್‌ ಚಾರ್ಜರ್‌ನ್ನು ಶಿಯೋಮಿ ಮಾರಾಟ ಮಾಡುತ್ತಿದ್ದು, ಅದು ಕೂಡ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಇದರ ಜೊತೆ Mi ನೆಕ್‌ಬ್ಯಾಂಡ್‌ ಹೆಡ್‌ಫೋನ್‌ಗಳು ಕೂಡ ಗ್ರಾಹಕರ ಕೈ ಸೇರಲಿವೆ.

ರೆಡ್‌ಮಿ K20, ರೆಡ್‌ಮಿ K20 ಪ್ರೊ

ರೆಡ್‌ಮಿ K20, ರೆಡ್‌ಮಿ K20 ಪ್ರೊ

Mi ಟೀಸರ್‌ ಒಂದಿಷ್ಟು ಉತ್ಪನ್ನಗಳ ಪರಿಚಯ ಮಾಡಿದೆ. ಆದರೆ, ಪ್ರಮುಖವಾಗಿ ರೆಡ್‌ಮಿ K20 ಮತ್ತು ರೆಡ್‌ಮಿ K20 ಪ್ರೊ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಒಂದಿಷ್ಟು ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಈ ಸ್ಮಾರ್ಟ್‌ಫೋನ್‌ಗಳನ್ನು ಜುಲೈ 15ಕ್ಕೆ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಈ ಹಿಂದಿನ ಟೀಸರ್‌ನಲ್ಲಿ 4 ವಾರಗಳ ಟೈಂ ಫ್ರೇಮ್‌ನ್ನು ಶಿಯೋಮಿ ನೀಡಿತ್ತು, ಆ ಟೈಂ ಫ್ರೇಮ್‌ ಜುಲೈ 15ಕ್ಕೆ ಅಂತ್ಯವಾಗಲಿದ್ದು, ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವುದು ಖಂಡಿತ ಎನ್ನುತ್ತಿದ್ದಾರೆ. ರೆಡ್‌ಮಿ K20 ಮತ್ತು ರೆಡ್‌ಮಿ K20 ಪ್ರೊ 48MP ಕ್ಯಾಮೆರಾ, ಪಾಪ್‌ಅಪ್‌ ಸೆಲ್ಫೀ ಕ್ಯಾಮೆರಾ ಮತ್ತಿತರ ಫೀಚರ್‌ಗಳನ್ನು ಹೊಂದಿದ್ದು, ರೆಡ್‌ಮಿ K20 ಪ್ರೊ 7nm ಸ್ನಾಪ್‌ಡ್ರಾಗನ್ 855 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, 4000mAh ಬ್ಯಾಟರಿ, ತ್ರಿವಳಿ ಹಿಂಬದಿ ಕ್ಯಾಮೆರಾ ಹೊಂದಿರಲಿದೆ.

Best Mobiles in India

English summary
Win Redmi Smartphones For Free On Xiaomi's Fifth Anniversary Celebration In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X