Subscribe to Gizbot

ಯೂಟ್ಯೂಬ್‌ನಲ್ಲಿ ಚಾನಲ್ ಓಪನ್ ಮಾಡಿ ಕಾಸು ಮಾಡುವ ಪ್ಲಾನ್ ಇದ್ಯಾ..? ಹಾಗಿದ್ರೆ ಈ ಸ್ಟೋರಿ ನೋಡಿ..!

Written By:

ದೇಶದಲ್ಲಿ 4G ಇಂಟರ್ ನೆಟ್ ಸೇವೆಯೂ ಅತೀ ಕಡಿಮೆ ಬೆಲೆಗೆ ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿರುವ ಕಾರಣ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ತಿಳಿಯದ ಮಂದಿ ಯುಟ್ಯೂಬಿನಲ್ಲಿ ವೀಡಿಯೊಗಳನ್ನು ನೋಡಿ ವ್ಯರ್ಥ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದಿನಕ್ಕೆ ಸಾವಿರಾರು ಹೊಸ ಯೂಟ್ಯೂಬ್ ಚಾನಲ್ ಗಳು ಶುರುವಾಗುತ್ತಿದ್ದು, ಇದನ್ನೇ ಹಣ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ ಚಾನಲ್ ಓಪನ್ ಮಾಡಿ ಕಾಸು ಮಾಡುವ ಪ್ಲಾನ್ ಇದ್ಯಾ..?

ಆದರೆ ಇವುಗಳಲ್ಲಿ ಬೇಕಾದ ಅಂಶಗಳಿಗಿಂತ ಬೇಡದಿರುವ ಮತ್ತು ಕೆಟ್ಟ ಅಭಿರುಚಿಯ ವೀಡಿಯೊಗಳೇ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಯೂಟ್ಯೂಟ್ ನಿಂದ ಹಣ ಮಾಡುವ ಉದ್ದೇಶದಿಂದ ವೀಡಿಯೊಗಳನ್ನು ಮಾಡುತ್ತಿರುವವರಿಗೆ ಸರಿಯಾದ ಪಾಠ ಕಲಿಸುವ ಸಲುವಾಗಿ ಆನ್ ಲೈನ್ ವೀಡಿಯೋ ಸಂಸ್ಥೆ ಯೂಟ್ಯೂಬ್ ನಲ್ಲಿ ಹಣಗಳಿಕೆ ಮಾಡುವ ಚಾನೆಲ್ ಗಳ ಮೇಲೆ ಹೆಚ್ಚು ನಿರ್ಬಂಧವನ್ನು ಹೇರಲು ಗೂಗಲ್ ನಿರ್ಧರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಣ ಮಾಡುವವರಿಗೆ ಕಡಿವಾಣ:

ಹಣ ಮಾಡುವವರಿಗೆ ಕಡಿವಾಣ:

ಕಳೆದ ವರ್ಷದ ಮಧ್ಯಭಾಗದಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬದಲಾವಣೆ ಮಾಡಿತ್ತು. ಚಾನೆಲ್ ಗೆ 10 ಸಾವಿರ ವೀಕ್ಷಣೆ ಬರುವವರೆಗೆ ವಿಡಿಯೋ ಹಾಕಿರುವವರಿಗೆ ಹಣ ಸಂಪಾದನೆ ಮಾಡಲು ಸಾಧ್ಯವಾಗದಂತೆ ಮಾಡಿತ್ತು. ಇದಾದ ಮೇಲೆಯೂ ಹೆಚ್ಚಿನ ಚಾನಲ್‌ಗಳು ಹುಟ್ಟಿಕೊಳ್ಳುತ್ತಿರುವುದರಿಂದ ಮತ್ತೇ ತನ್ನ ನಿಯಮ ಬದಲು.

ಮಾನದಂಡ ಬದಲು:

ಮಾನದಂಡ ಬದಲು:

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬಾರಿ ಬದಲಾವಣೆ ಮಾಡಲು ಮುಂದಾಗಿರುವ ಯುಟ್ಯೂಬ್, ಈ ಮೊದಲು 10 ಸಾವಿರ ವೀಕ್ಷಣೆ ಬಂದರೆ ಸಾಕು ಹಣ ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ಆದರೆ ಇದರ ಬದಲು ಇನ್ನು ಮುಂದೆ ವರ್ಷಕ್ಕೆ 4,000 ಗಂಟೆಗಳಷ್ಟು ಕಾಲ ವಿಡಿಯೊ ವೀಕ್ಷಣೆ ಮಾಡಿದರೆ ಮಾತ್ರ ಹಣ ಗಳಿಕೆ ಮಾಡಲು ಅವಕಾಶ ನೀಡಲು ಮುಂದಾಗಿದೆ.

ಹಣ ಸಂಪಾದನೆ ಮಾರ್ಗ:

ಹಣ ಸಂಪಾದನೆ ಮಾರ್ಗ:

ಪ್ರತಿವರ್ಷ ಯೂಟ್ಯೂಬ್ ನ ಪಾರ್ಟ್ನರ್ ಪ್ರೊಗ್ರೆಮ್ ಮೂಲಕ ಸಾವಿರಾರು ಬಳಕೆದಾರರು ಹಣ ಸಂಪಾದಿಸುತ್ತಾರೆ. ಈಗ ಹೊಸ ನಿಯಮದಂತೆ ಹಣ ಗಳಿಗೆ ಮಾಡಲು ವಿಡಿಯೊ ಒಂದು ವರ್ಷದೊಳಗೆ ಒಟ್ಟಾರೆ 4,000 ಗಂಟೆಗಳ ವಿಕ್ಷಣೆ ಪಡೆಯಬೇಕು ಮತ್ತು ಚಾನೆಲ್ ಗೆ 1,000ಕ್ಕಿಂತ ಹೆಚ್ಚು ಲೈಕ್ ಬರಬೇಕು ಎಂಬ ಷರತ್ತು ವಿಧಿಸಿದೆ.

ಹಣಗಳಿಕೆ ಇತಿಹಾಸ:

ಹಣಗಳಿಕೆ ಇತಿಹಾಸ:

2007ರಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಸೇವೆಯನ್ನು ಆರಂಭಿಸಲಾಯಿತು. ಯಾರು ಬೇಕಾದರೂ ಯೂಟ್ಯೂಬ್‌ಗೆ ಸೈನ್ ಅಪ್ ಆಗಬಹುದಾಗಿದ್ದು, ವಿಡಿಯೋಗಳನ್ನು ಅಪ್ ಲೋಡ್ ಮಾಡಿದ ತಕ್ಷಣ ಅದನ್ನು ನೋಡಿದವರ ಸಂಖ್ಯೆ ಆಧಾರದ ಮೇಲೆ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
youtube channel making money. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot