ಯೂಟ್ಯೂಬ್‌ನಲ್ಲಿ 4K ರೆಸಲ್ಯೂಶನ್‌ ವೀಡಿಯೊ ವೀಕ್ಷಿಸುವವರಿಗೆ ಇದು ಕಹಿ ಸುದ್ದಿ!

|

ಗೂಗಲ್‌ ಒಡೆತನದ ಯುಟ್ಯೂಬ್‌ ತನ್ನ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಯುಟ್ಯೂಬ್‌ನಲ್ಲಿ ವೀಡಿಯೋಗಳನ್ನು ವೀಕ್ಷಣೆ ಮಾಡುವ ಮುನ್ನ ಸ್ವಲ್ಪ ಯೋಚಿಸುವುದು ಒಳ್ಳೆಯದು. ಏಕೆಂದರೆ ಯುಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 4K ರೆಸಲ್ಯೂಶನ್‌ನಲ್ಲಿ ವೀಡಿಯೊ ವೀಕ್ಷಿಸುವವರಿಗೆ ಶುಲ್ಕವನ್ನು ವಿಧಿಸುವುದಾಗಿ ಹೇಳಿದೆ. ಅಂದರೆ ನೀವು 4K ರೆಸಲ್ಯೂಶನ್‌ ವೀಡಿಯೋ ನೋಡಿದರೆ ಹಣ ಪಾವತಸಿಬೇಕಾಗುತ್ತದೆ.

ಯುಟ್ಯೂಬ್‌ನಲ್ಲಿ

ಹೌದು, ಯುಟ್ಯೂಬ್‌ನಲ್ಲಿ 4K ರೆಸಲ್ಯೂಶನ್‌ ವೀಡಿಯೋ ವೀಕ್ಷಿಸುವುದಕ್ಕೆ ಇನ್ಮುಂದೆ ಶುಲ್ಕ ವಿಧಿಸುವ ಸಾಧ್ಯತೆಯಿದೆ. ಆದರಿಂದ ನೀವು 4K ರೆಸಲ್ಯೂಶನ್‌ ವೀಡಿಯೋ ನೋಡಲು ಬಯಸಿದರೆ ಯುಟ್ಯೂಬ್‌ ಪ್ರೀಮಿಯಂಗೆ ಸೈನ್ ಅಪ್ ಮಾಡಬೇಕಾಗುತ್ತದೆ. ಗೂಗಲ್‌ ಯುಟ್ಯೂಬ್‌ನಲ್ಲಿ ತನ್ನ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಹಾಗಾದ್ರೆ ಯುಟ್ಯೂಬ್‌ 4K ವೀಡಿಯೊಗಳಿಗೆ ಮಾತ್ರ ಶುಲ್ಕ ವಿಧಿಸಲು ಮುಂದಾಗಿರುವುದು ಯಾಕೆ ಅನ್ನೊದನ್ನ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಟ್ಯೂಬ್‌

ರೆಡ್ಡಿಟ್‌ ವರದಿ ಮಾಡಿರುವಂತೆ ಯೂಟ್ಯೂಬ್‌ 4K ರೆಸಲ್ಯೂಶನ್‌ ವೀಡಿಯೋ ವೀಕ್ಷಿಸುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆದರಿಂದ 4K ವೀಡಿಯೋ ನೋಡಬೇಕಾದರೆ ಬಳಕೆದಾರರು ಯೂಟ್ಯೂಬ್‌ ಪ್ರೀಮಿಯಂಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಆದರಿಂದ ನೀವು ಉಚಿತವಾಗಿ ವೀಡಿಯೊ ವೀಕ್ಷಿಸಬೇಕಾದರೆ ಯೂಟ್ಯೂಬ್‌ನಲ್ಲಿ 1440P ಅಥವಾ 2K ರೆಸಲ್ಯೂಶನ್‌ನಲ್ಲಿ ಮಾತ್ರ ನೋಡಬೇಕಾಗುತ್ತದೆ. ಬಳಕೆದಾರರು ಸ್ಮಾರ್ಟ್‌ಟಿವಿಯಲ್ಲಿ 4K ಯೂಟ್ಯೂಬ್ ಕಂಟೆಂಟ್‌ ನೋಡಬೇಕಾದರೂ ಯೂಟ್ಯೂಬ್‌ ಪ್ರೀಮಿಯಂಗೆ ಅಪ್‌ಗ್ರೇಡ್‌ ಮಾಡಬೇಕಾಗುತ್ತದೆ.

ಯೂಟ್ಯೂಬ್‌

ಒಂದು ವೇಳೆ ನೀವು ಸ್ಮಾರ್ಟ್‌ಟಿವಿಯಲ್ಲಿ ಯೂಟ್ಯೂಬ್‌ನ ಕಡಿಮೆ ರೆಸಲ್ಯೂಶನ್‌ ವೀಡಿಯೊಗಳನ್ನು ನೋಡಲು ಬಯಸಿದರೆ ಗಣಮಟ್ಟದ ಕುಸಿತವನ್ನು ಕಾಣಬಹುದಾಗಿದೆ. ಆದರಿಂದ ನೀವು ಸ್ಮಾರ್ಟ್‌ಟಿವಿಗಳಲ್ಲಿ ಯೂಟ್ಯೂಬ್‌ ವೀಡಿಯೋ ನೋಡುವುದಕ್ಕೆ ಹಣ ಪಾವತಿಸುವುದು ಅನಿವಾರ್ಯವಾಗಲಿದೆ. ಅದಂರೆ ನೀವು ಯೂಟ್ಯೂಬ್‌ ಪ್ರೀಮಿಯಂಗೆ ಅಪ್‌ಗ್ರೇಡ್‌ ಆಗಲೇಬೇಕಾಗುತ್ತದೆ. ಇದರೊಂದಿಗೆ ಯೂಟ್ಯೂಬ್‌ನಲ್ಲಿ ಜಾಹಿರಾತುಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಕೂಡ ನಡೆಸಲಾಗ್ತಿದೆ.

ಯೂಟ್ಯೂಬ್‌ ಪ್ರೀಮಿಯಂ ಸೇವೆಗಳು

ಯೂಟ್ಯೂಬ್‌ ಪ್ರೀಮಿಯಂ ಸೇವೆಗಳು

ಯೂಟ್ಯೂಬ್‌ ಪ್ರೀಮಿಯಂ ಸೇವೆಗಳು ಪ್ರಸ್ತುತ ತಿಂಗಳಿಗೆ 129ರೂ, ಮೂರು ತಿಂಗಳಿಗೆ 399ರೂ, ವಾರ್ಷಿಕವಾಗಿ 1290ರೂ. ಬೆಲೆಯಲ್ಲಿ ಲಭ್ಯವಿದೆ. ಇನ್ನು ಯೂಟ್ಯೂಬ್‌ ಪ್ರೀಮಿಯಂ ಸೇವೆಯನ್ನು ಬಳಸುವವರು ಜಾಹೀರಾತು-ಮುಕ್ತ ವೀಡಿಯೊಗಳು, ಪಿಕ್ಚರ್-ಇನ್-ಪಿಕ್ಚರ್ ಪ್ಲೇಬ್ಯಾಕ್ ಮತ್ತು ಯೂಟ್ಯೂಬ್‌ ಪ್ರೀಮಿಯಂ ಮ್ಯೂಸಿಕ್‌ಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ. ಇದಲ್ಲದೆ ಬಳಕೆದಾರರು ಡೇಟಾ ಕನೆಕ್ಟಿವಿಟಿ ಇಲ್ಲದೆ ಇರುವಾಗಲೂ ಕೂಡ ವೀಡಿಯೋ ವೀಕ್ಷಿಸಲು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ಸ್ಕಿಪ್‌ ಮಾಡಲು ಸಾಧ್ಯವಿಲ್ಲದ ಐದು ಜಾಹಿರಾತುಗಳನ್ನು ವೀಡಿಯೋದಲ್ಲಿ ಇರಿಸುವುದಕ್ಕೆ ಪ್ಲಾನ್‌ ಮಾಡಿದೆ. ವೀಡಿಯೋ ವೀಕ್ಷಣೆ ಮಾಡುವಾಗ ಈ ಜಾಹಿರಾತುಗಳ ಪ್ಲೇ ಆಗಲಿದ್ದು, ಸ್ಕಿಪ್‌ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಈ ಹೊಸ ಪ್ಲಾನ್‌ ಇದೀಗ ಯೂಟ್ಯೂಬ್‌ ವೀಡಿಯೋ ವೀಕ್ಷಣೆ ಮಾಡುವವರಿಗೆ ಕಿರಿಕಿರಿ ಎನಿಸಿದರೂ ಅಚ್ಚರಿಯಿಲ್ಲ. ಪ್ರಸ್ತುತ ಯೂಟ್ಯೂಬ್‌ನಲ್ಲಿ ಎರಡು ಜಾಹಿರಾತುಗಳನ್ನು ಮಾತ್ರ ಸ್ಕಿಪ್‌ ಮಾಡಲು ಸಾಧ್ಯವಿಲ್ಲ.

ಯೂಟ್ಯೂಬ್‌

ಒಂದು ವೇಳೆ ಇದು ಜಾರಿಗೆ ಬಂದರೆ ಹೆಚ್ಚಿನ ಸಮಯ ಜಾಹಿರಾತುಗಳನ್ನು ನೋಡಬೇಕಾಗುತ್ತದೆ. ಯೂಟ್ಯೂಬ್‌ ಸ್ಕಿಪ್‌ ಮಾಡಲಾಗದ ಐದು ಜಾಹೀರಾತುಗಳನ್ನು ಜಾರಿಗೆ ತಂದರೆ ವೀಡಿಯೊವನ್ನು ವೀಕ್ಷಿಸುವುದನ್ನು ಮುಂದುವರಿಸಲು ಸುಮಾರು 30 ಸೆಕೆಂಡುಗಳವರೆಗೆ ಕಾಯಬೇಕಾಗುತ್ತದೆ. ಒಂದು ಜಾಹಿರಾತು ಆರು ಸೆಕೆಂಡುಗಳಿರುವುದರಿಂದ ಒಟ್ಟು ಮೂವತ್ತು ನಿಮಿಷಗಳ ಬಂಪರ್‌ ಜಾಹಿರಾತುಗಳನ್ನು ನೋಡಬೇಕಾಗುತ್ತದೆ.

ಯೂಟ್ಯೂಬ್‌ ಜಾಹೀರಾತುಗಳನ್ನು ಸ್ಕಿಪ್ ಮಾಡುವುದು ಹೇಗೆ?

ಯೂಟ್ಯೂಬ್‌ ಜಾಹೀರಾತುಗಳನ್ನು ಸ್ಕಿಪ್ ಮಾಡುವುದು ಹೇಗೆ?

ಹಾಗಾದ್ರೆ ಯೂಟ್ಯೂಬ್‌ಲ್ಲಿ ಜಾಹೀರಾತುಗಳಿಲ್ಲದೆ ನೀವು ಯೂಟ್ಯೂಬ್‌ ವೀಡಿಯೊಗಳನ್ನು ವೀಕ್ಷಿಸುವುದಕ್ಕೆ ಅವಕಾಶವಿಲ್ಲವೆ? ಖಂಡಿತ ಅವಕಾಶವಿದೆ. ಇದಕ್ಕಾಗಿ ನೀವು ಎರಡು ಮಾರ್ಗಗಳನ್ನು ಅನುಸರಿಸಬಹುದು. ಮೊದಲನೇಯದಾಗಿ ವೀಡಿಯೊಗಳನ್ನು ವೀಕ್ಷಿಸುವಾಗ ಜಾಹೀರಾತುಗಳನ್ನು ತಪ್ಪಿಸಲು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ನೀವು ಕ್ರೋಮ್‌ನ ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್‌ ಅನ್ನು ಬಳಸಬಹುದಾಗಿದೆ. ಎರಡನೇಯ ಮಾರ್ಗವೆಂದರೆ ನೀವು ಯೂಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ. ಯೂಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆಯು ತಿಂಗಳಿಗೆ 129ರೂ. ಬೆಲೆಯನ್ನು ಬರಲಿದೆ.

Best Mobiles in India

English summary
YouTube will soon charge a fee for its 4K content?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X