ಇವು ಆಂಡ್ರಾಯ್ಡ್ ನಲ್ಲಿ ಬಳಸಬಹುದಾದ 10 ಸೂಪರ್ ಫಾಸ್ಟ್ ಬ್ರೌಸರ್ ಗಳು

By GizBot Bureau

  ಅಂತರ್ಜಾಲದಲ್ಲಿ ಏನನ್ನೋ ಹುಡುಕಾಡುವುದು, ಯಾವುದೋ ಫೈಲ್ ನ್ನು ವೀಡಿಯೋವನ್ನು ಡೌನ್ ಲೋಡ್ ಮಾಡುವುದು ಇದೆಲ್ಲವನ್ನು ಈಗ ಯಾವುದೋ ಇಂಟರ್ನೆಟ್ ಸೆಂಟರ್ ಹೋಗಿ ಮಾಡಬೇಕಾಗಿಲ್ಲ. ಎಲ್ಲವೂ ಕೈಯಲ್ಲಿರೋ ಸ್ಮಾರ್ಟ್ ಫೋನೇ ಮಾಡಿ ಬಿಡುತ್ತೆ. ಹೀಗಿರುವಾಗ ಬಳಕೆದಾರ ಮತ್ತು ಅಂತರ್ಜಾಲದ ನಡುವೆ ಸೇತುವೆಯಂತೆ ಕೆಲಸ ಮಾಡುವುದು ಬ್ರೌಸರ್ ಗಳು. ಯಾವುದೇ ಒಂದು ವಿಚಾರವನ್ನು ಬ್ರೌಸ್ ಮಾಡಬೇಕು ಇಲ್ಲವೇ ತಡಕಾಡಬೇಕು ಎಂದರೆ ನಿಮ್ಮ ಬ್ರೌಸರ್ ಗಳು ಅತ್ಯುತ್ತಮವಾಗಿರುವುದು ಬಹಳ ಮುಖ್ಯ.

  ಇವು ಆಂಡ್ರಾಯ್ಡ್ ನಲ್ಲಿ ಬಳಸಬಹುದಾದ 10 ಸೂಪರ್ ಫಾಸ್ಟ್ ಬ್ರೌಸರ್ ಗಳು

  ಗೂಗಲ್ ಕ್ರೋಮ್, ಮೋಝಿಲಾ ಫೈಯರ್ ಫಾಕ್ಸ್, ಒಪೆರಾ ಇತ್ಯಾದಿಗಳು ಬ್ರೌಸರ್ ಗಳು. ಇವುಗಳ ಪ್ರಮುಖ ಕೆಲಸ ಏನೆಂದರೆ ವೆಬ್ ಪೇಜ್ ಗಳನ್ನು ತುಂಬಿಸಿ ನಿಮಗೆ ಕಾಣುವಂತೆ ಮಾಡುವುದು. ಈ ಬ್ರೌಸರ್ ಗಳ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ಆಧಾರದಲ್ಲಿ ವೆಬ್ ಪೇಜ್ ಗಳು ತೆರೆದುಕೊಳ್ಳುತ್ತೆ ಮತ್ತು ಹೆಚ್ಚಿನ ಕೆಲಸಗಳಿಗೆ ನೆರವಾಗುತ್ತೆ.

  ಹಾಗಾಗಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅತ್ಯಧ್ಬುತವಾಗಿ ಕೆಲಸ ನಿರ್ವಹಿಸುವ 10 ಬ್ರೌಸರ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ, ಇವುಗಳು ನಿಮ್ಮ ವಯಕ್ತಿಯ ಮಾಹಿತಿಗಳ ರಕ್ಷಣೆ ಮಾಡುವ ವಿಧಾನ, ಪ್ರೊಸೆಸ್ಸಿಂಗ್ ವೇಗ, ಡೌನ್ ಲೋಡ್ ಆಗುವ ವೇಗ ಎಲ್ಲದರ ಮಾಹಿತಿಯನ್ನೂ ನೀಡಲಾಗಿದೆ. ಮುಂದೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಡಾಲ್ಫಿನ್ ಬ್ರೌಸರ್

  ಬ್ರೌಸರ್ ನಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು ಅವು, ಇದರ ನೋಟವನ್ನು ಅಂದಗೊಳಿಸಿದೆ. ಆಂಡ್ರಾಯ್ಡ್ ನಲ್ಲಿ ಗೇಮಿಂಗ್ ಮತ್ತು ವೀಡಿಯೋ ಅನುಭವವು ಅಧ್ಬುತವಾಗಿರಬೇಕೆಂದರೆ ಈ ಬ್ರೌಸರ್ ಸಹಾಯಕ. ಆಡ್ ಬ್ಲಾಕರ್ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಲು, ಜಾಹಿರಾತುಗಳ ವೀಡಿಯೋ ಮತ್ತು ಬ್ಯಾನರ್ ಗಳನ್ನು ಬ್ಲಾಕ್ ಮಾಡಲು ನೆರವಾಗುತ್ತೆ. ಅಷ್ಟೇ ಅಲ್ಲ ಟ್ಯಾಬ್ಲ್ ಗಳ ನಡುವೆ ಸ್ವೈಪ್ ಇನ್ ಆಗಲು ಇದು ಸಹಕಾರಿ.

  ಕ್ರೋಮಾ ಬೇಟಾ

  ಗೂಗಲ್ ನಿಂದ ಲೈವ್ ಅಪ್ ಡೇಟ್ ಗಳನ್ನು ಪಡೆಯಲು ಕ್ರೋಮಾ ಬೇಟಾ ಅಧ್ಬುತವಾಗಿದೆ. ನಿಮ್ಮ ವಿಮರ್ಷೆಯನ್ನು ನೇರವಾಗಿ ತಲುಪಿಸುವ ಅವಕಾಶವಿದ್ದು, ಬ್ರೌಸರ್ ನ ಮುಂದಿನ ಹಂತದ ಡೆವಲಪ್ ಮೆಂಟ್ ಗೆ ಇದು ನೆರವಾಗುತ್ತೆ.

  ಫಫಿನ್ ಬ್ರೌಸರ್

  ಇದು ಹೆಚ್ಚು ಕಸ್ಟಮೈಸ್ ಆಗಿರುವ ಬ್ರೌಸರ್ ಆಗಿದ್ದು, ಮೌಸ್ ಮತ್ತು ಟ್ರ್ಯಾಕ್ ಪ್ಯಾಡ್ ಅನುಭವವನ್ನು ಅಧ್ಬುತವಾಗಿ ನೀಡಲಿದೆ. ಇದು ದೊಡ್ಡ ವೆಬ್ ಸೈಟ್ ಫೈಲ್ ಗಳನ್ನು ಕಡಿಮೆ ಬ್ಯಾಂಡ್ ವಿಡ್ತ್ ನಲ್ಲಿ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಈ ಬ್ರೌಸರ್ ನಲ್ಲಿ ಸಂಚಾರವಾಗುವ ಎಲ್ಲಾ ಮಾಹಿತಿಗಳನ್ನು ಎನ್ ಕ್ರಿಪ್ಟ್ ಮಾಡಲಾಗಿರುವುದರಿಂದ ಕಳ್ಳರ ಭಯವಿಲ್ಲ.

  ಜಾವಲಿನ್ ಇನ್ಕಾಗ್ನಿಟೋ ಬ್ರೌಸರ್ – ಭದ್ರತೆ ಮತ್ತು ಗೌಪ್ಯತೆಗಾಗಿ

  ಅನಾಮಧೇಯವಾಗಿ ನೀವು ಯಾವುದಾದರೂ ವೆಬ್ ಸೈಟ್ ನ್ನು ನೋಡಬೇಕು ಎಂದಾದರೆ ಇದು ಅಧ್ಬುತ ಬ್ರೌಸರ್ ಆಗಿದೆ. ಕುಕ್ಕೀಸ್, ಸ್ಯಾಚೇಗಳು ಮತ್ತು ಬ್ರೌಸರ್ ಹಿಸ್ಟರಿಗಳು ಅಟೋಮ್ಯಾಟಿಕಲಿ ಡಿಲೀಟ್ ಆಗುವ ವ್ಯವಸ್ಥೆಯಿರುವ ಬ್ರೌಸರ್ ಇದು. ಅಷ್ಟೇ ಬ್ಲಾಕ್ ಆಗಿರುವ ವೆಬ್ ಗಳನ್ನು ನೀವಿದರಲ್ಲಿ ಸ್ಮಾರ್ಟ್ ಫ್ರೈವೇಟ್ ಪ್ರಾಕ್ಸಿ ಸರ್ವೀಸ್ ಮೂಲಕ ಆಕ್ಸಿಸ್ ಮಾಡಬಹುದಾಗಿದೆ. ಇದನ್ನು ಗಿಗ್ ಬಿಟ್ ಸರ್ವರ್ ನಲ್ಲಿ ಹೋಸ್ಟ್ ಮಾಡಲಾಗಿದೆ.

  ಯುಸಿ ಬ್ರೌಸರ್

  ಈ ಬ್ರೌಸರ್ ನಿಮ್ಮ ಡಾಟಾವನ್ನು ಕಂಪ್ರೆಸ್ ಮಾಡುತ್ತೆ ಮತ್ತು ಬೇಗನೆ ಬ್ರೌಸ್ ಆಗುವಂತೆ ಮಾಡಿ ವೇಗದ ಬ್ರೌಸಿಂಗ್ ಅನುಭವ ನೀಡುತ್ತೆ. ಇದರಲ್ಲೂ ಕೂಡ ಅಗತ್ಯವಿಲ್ಲದ ಹಲವಾರು ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದು. ಫೇಸ್ ಬುಕ್ ನ ಸ್ಪೀಡ್ ನ್ನು ಹೆಚ್ಚಿಸುತ್ತೆ. ಅರ್ಧ ಮಾತ್ರ ಡೌನ್ ಲೋನ್ ಆಗುವ ಸಮಸ್ಯೆ ಇದರಲ್ಲಿಲ್ಲ. ಒಂದು ವೇಳೆ ಕನೆಕ್ಷನ್ ಫೈಲ್ ಆದರೂ ಡೌನ್ ಲೋಡ್ ಗಿರುವ ಫೈಲ್ ಪರಿಪೂರ್ಣವಾಗಿ ಡೌನ್ ಲೋಡ್ ಆಗಲಿದೆ.

  ಅಮೆಜಾನ್‌ನಲ್ಲಿ ಫೇಕ್ ರಿವ್ಯೂ ಕಂಡುಹಿಡಿಯುವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್..!

  ಒಪೆರಾ ಮಿನಿ

  ಇದು ತುಂಬಾ ವೇಗವಾಗಿರುತ್ತೆ ಮತ್ತು ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವ ಅವಕಾಶವು ಬ್ರೌಸರ್ ನ ಒಳಗೆ ಇರುತ್ತೆ. ಹೆಚ್ಚು ಡಾಟಾ ತಿನ್ನದೆ ಕಡಿಮೆ ಡಾಟಾ ಖರ್ಚಿನಲ್ಲಿ ಹೆಚ್ಚು ಅಂತರ್ಜಾಲ ಸೌಕರ್ಯ ಒದಗಿಸುವ ಸಾಮರ್ಥ್ಯ ವು ಹೈ ಕಂಪ್ರೆಷನ್ ಮೋಡ್ ನ ಪರಿಣಾಮದಿಂದಾಗಿದೆ.

  ಗೂಗಲ್ ಕ್ರೋಮ್

  ಸೈಕ್ರೋನೈಜ್ ಸರ್ಚ್ ಹಿಸ್ಟರಿ, ಬುಕ್ ಮಾರ್ಕ್ ಗಳ ಅವಕಾಶ ಇತ್ಯಾದಿಗಳಿಂದಾಗಿ ಗೂಗಲ್ ಕ್ರೋಮ್ ಪ್ರಸಿದ್ಧಿಯಾಗಿದೆ. ನೀವು ಟ್ಯಾಬ್ ಗಳಿಗೆ ಫ್ಲಿಪ್ ಆಗಲು ಕೇವಲ ಸೈಡ್ ಬೈ ಸೈಡ್ ಸ್ಪೈಪ್ ಮಾಡಿದರೆ ಸಾಕಾಗುತ್ತೆ. ಬುಕ್ ಮಾಡುವ ಅವಕಾಶದಿಂದಾಗಿ ಬ್ರೌಸಿಂಗ್ ಇದರಲ್ಲಿ ಸರಾಗ

  ಸಿಎಂ ಬ್ರೌಸರ್ – ಫಾಸ್ಟ್ ಎಂಡ್ ಲೈಟ್

  ಸಿಎಂ ಅಥವಾ ಕ್ಲೀನ್ ಮಾಸ್ಟರ್ ಬ್ರೌಸರ್ ನಿಮಗೆ ಹೆಚ್ಚು ಭದ್ರತೆಯನ್ನು ಒದಗಿಸುತ್ತೆ ಮತ್ತು ಫಾಸ್ಟ್ ಬ್ರೌಸಿಂಗ್ ಅನುಭವವನ್ನು ನೀಡುತ್ತೆ. ನೀವು ಯಾವುದಾದರೂ ವೆಬ್ ಸೈಟ್ ಗೆ ಹೋದಾಗ ಅದು ನಿಮ್ಮ ಡಿವೈಸ್ ಗೆ ತೊಂದರೆ ಕೊಡುವುದಾದರೆ ಈ ಬ್ರೌಸರ್ ಕೂಡಲೇ ಅದನ್ನು ನಿಮಗೆ ತಿಳಿಸಿ ಎಚ್ಚರಿಸುತ್ತೆ. ನಿಮ್ಮ ಡೌನ್ ಲೋಡ್ ಆಗಿರುವ ಎಪಿಕೆ ಫೈಲ್ ಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಡಿವೈಸ್ ಗೆ ಯಾವುದೇ ತೊಂದರೆ ಇಲ್ಲವೇ ಎಂಬುದನ್ನು ಖಾತ್ರಿಗೊಳಿಸುತ್ತೆ. ನಿಮ್ಮ ಕುಕ್ಕೀಸ್, ಪಾಸ್ ವರ್ಡ್ ಮತ್ತು ಹಿಸ್ಟರಿಯನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಅವಕಾಶ ಇದರಲ್ಲಿದೆ.

  ಕ್ರೋಮ್ ಕ್ಯಾನರಿ(ಅನ್ ಸ್ಟೇಬಲ್)

  ಇನ್ನೂ ಬಿಡುಗಡೆಗೊಂಡಿರುವ ಗೂಗಲ್ ಕ್ರೋಮ್ ನ ಅನ್ ಸ್ಟೇಬಲ್ ವರ್ಷನ್ ಇದಾಗಿದೆ. ಡೆವಲಪರ್ಸ್ ಮತ್ತು ಅಡ್ವಾಸ್ಡ್ ಬಳಕೆದಾರರಿಗೆ ಇದು ಹೇಳಿ ಮಾಡಿಸಿದ ಬ್ರೌಸರ್ ಎಂದು ಹೇಳಲಾಗುತ್ತಿದೆ. ಪ್ರತಿವಾರವೂ 7 ಅಪ್ ಡೇಟ್ ಆಗಿರುವುದರಿಂದಾಗಿ ಸದ್ಯದ ವೇಗದ ಬ್ರೌಸರ್ ಇದು.

  ಮರ್ಕ್ಯುರಿ ಬ್ರೌಸರ್

  ಆಡ್ ಬ್ಲಾಕ್,ಕಸ್ಟಮೈಜ್ ಸರ್ಚ್ ಇಂಜಿನ್, ಯ್ಯೂಸರ್ ಏಜೆಂಟ್, ಪಿಕ್ಚರ್ ಬ್ಲಾಕ್,ಕಸ್ಟಮೈಜ್ ಸರ್ಚ್ ಇಂಜಿನ್, ಫುಲ್ ಸ್ಕ್ರೀನ್ ಇತ್ಯಾದಿಗಳಿಂದಾಗಿ ಮರ್ಕ್ಯುರಿ ಬ್ರೌಸರ್ ಪ್ರಸಿದ್ಧಿ. ಫ್ಲ್ಯಾಶ್ ಸಪೋರ್ಟ್ ಇರುವುದರಿಂದಾಗಿ ವೀಡಿಯೋಗಳು ಈ ಬ್ರೌಸರ್ ನಲ್ಲಿ ಅಧ್ಬುತವಾಗಿ ಕಾಣಿಸುತ್ತವೆ. ಪ್ರೈವೇಟ್ ಮೋಡ್ ಅನೇಬಲ್ ಮಾಡುವುದರಿಂದಾಗಿ ನಿಮ್ಮ ಹಿಸ್ಟರಿಯನ್ನು ಗುಪ್ತವಾಗಿರುಸುತ್ತೆ ಮತ್ತು ಕೂಡಲೇ ಅದನ್ನು ಸ್ವಚ್ಛಗೊಳಿಸಿಬಿಡುತ್ತೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Most browsing and simple downloads nowadays take place over smartphones, the interface that connects the internet and the user is known as the browser. There are a lot of browsers out there like Google Chrome, Mozilla Firefox, Opera etc.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more