ಮೆಸೆಂಜರ್ ನಿಂದ ಬಿಸ್ನೆಸ್ ಅಭಿವೃದ್ದಿ: ಫೇಸ್ ಬುಕ್ ಸರ್ವೆ ಬಿಚ್ಚಿಟ್ಟ ಸತ್ಯ..!

By Lekhaka
|

ದೇಶದಲ್ಲಿ ಡಿಜಿಟಲ್ ಕ್ರಾಂತಿಯು ನಡೆಯುತ್ತಿದ್ದು, ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಸುಮಾರು330 ಮಿಲಿಯನ್ ಮಂದಿ ತಮ್ಮ ವ್ಯವಹಾರವನ್ನು ಉತ್ತಮ ಪಡಿಸಿಕೊಳ್ಳುವ ಸಲುವಾಗಿ ಮೇಸೆಂಜರ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ತಮ್ಮ ವ್ಯವಹಾರವನ್ನು ಎಲ್ಲರಿಗೂ ತಲುಪಿಸಲು ಮೆಸೆಂಜರ್ ಸಹಾಯವಾಗಿದೆ ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ ಎನ್ನಲಾಗಿದೆ.

ಮೆಸೆಂಜರ್ ನಿಂದ ಬಿಸ್ನೆಸ್ ಅಭಿವೃದ್ದಿ: ಫೇಸ್ ಬುಕ್ ಸರ್ವೆ ಬಿಚ್ಚಿಟ್ಟ ಸತ್ಯ..!

ಈ ಕುರಿತು ಫೇಸ್ ಬುಕ್ ಮತ್ತು ನಿಲ್ಸನ್ ಸರ್ವೆಯೊಂದನ್ನು ಮಾಡಿದ್ದು, ಇದರ ಮೂಲಕ ಈ ಮಾಹಿತಿಯು ಲಭ್ಯವಾಗಿದೆ, ಸುಮಾರು 63% ಮಂದಿ ಮೆಸೆಂಜರ್ ತಮ್ಮ ಬಿಸ್ ನೆಸ್ ಅಭಿವೃದ್ಧಿಗೆ ಸಹಾಯ ಮಾಡಿದೆ ಎನ್ನಲಾಗಿದೆ. ಕಳೆದ ಎರಡು ವರ್ಷ ಅವಧಿಯಲ್ಲಿ ತಮ್ಮ ವ್ಯವಹಾರವನ್ನು ಮೆಸೆಂಜರ್ ಮೇಲಕ್ಕೆ ತೆಗೆದುಕೊಂಡು ಹೋಗಿದೆ ಎಂದಿದ್ದಾರೆ.

ಸಣ್ಣ ಸಣ್ಣ ಬಿಸ್ ಸೆಸ್ ಗಳು ತಮ್ಮ ಸೇವೆಯನ್ನು ಮತ್ತು ಸರಕುಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಸಲುವಾಗಿ ಫೇಸ್ ಬುಕ್ ಮೆಸೆಂಜ್ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಂಪರ್ಕವು ಹೆಚ್ಚು ಸುಲಭವಾಗುತ್ತಿದೆ.

ಆಪಲ್ ಐಫೋನ್ Xಗೆ ಸೆಡ್ಡು, ಮಡಚುವ ಸ್ಕ್ರಿನ್ ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ X ಸ್ಮಾರ್ಟ್‌ಪೋನ್..!ಆಪಲ್ ಐಫೋನ್ Xಗೆ ಸೆಡ್ಡು, ಮಡಚುವ ಸ್ಕ್ರಿನ್ ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ X ಸ್ಮಾರ್ಟ್‌ಪೋನ್..!

ಸಾಮಾಜಿಕ ಜಾಲತಾಣಗಳು ಸಮಯವನ್ನು ವ್ಯರ್ಥ ಮಾಡುತ್ತಿವೆ ಎನ್ನುವ ಅಪವಾದ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಫೇಸ್ ಬುಕ್ ವಿಶ್ವದಾದ್ಯಂತ ಈ ಸರ್ವೆಯನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳು ಹೇಗೆ ಕೆಲವು ಮಂದಿಗೆ ಸಹಾಯಕವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದೆ.

ಭಾರತದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸಾಮಾಹಿಕ ಜಾಲತಾಣಗಳು ವ್ಯವಹಾರಗಳಿಗೆ ಲಾಭದಾಯಕವಾಗುತ್ತಿದೆ ಎನ್ನಲಾಗಿದೆ. ಶೀಘ್ರವೇ ಇದರ ಪ್ರಮಾಣದಲ್ಲಿಯೂ ಏರಿಕೆ ಕಂಡುಬರಲಿದೆ ಎನ್ನುವ ಮಾತು ಕೇಳಿ ಬಂದಿದೆ.

Best Mobiles in India

Read more about:
English summary
It said that 63 percent of people feel their messaging with businesses has increased over the past two years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X