ಹೆಚ್ಚು ಜಾಹಿರಾತು ಇಲ್ಲದ ಈ 5 ಅತ್ಯುತ್ತಮ ಮತ್ತು ವಿಶಿಷ್ಟ ಆಪ್‌ಗಳು ನಿಮ್ಮ ಫೋನ್‌ನಲ್ಲಿರಲಿ!!

ಅತ್ಯುತ್ತಮವಾಗಿ ರೂಪುಗೊಂಡಿರುವ ಎಷ್ಟೋ ಆಪ್‌ಗಳಿಗೆ ಸರಿಯಾದ ಜಾಹಿರಾತು ಇರುವುದಿಲ್ಲ ಹಾಗಾಗಿ ಹೆಚ್ಚು ಬಳಕೆಯಲ್ಲಿಯೂ ಇರುವುದಿಲ್ಲ.!!

|

ಆಂಡ್ರಾಯ್ಡ್ ಪ್ರಪಂಚದಲ್ಲಿರುವ ಕೋಟ್ಯಾಂತರ ಆಪ್‌ಗಳಲ್ಲಿ ಅತ್ಯುತ್ತಮ ಆಪ್‌ಗಳು ಮತ್ತು ವಿಶಿಷ್ಟ ಆಪ್‌ಗಳು ಯಾವುವು ಎಂಬುದನ್ನು ಗುರುತಿಸುವುದು ಕಷ್ಟವೇ ಸರಿ.! ಏಕೆಂದರೆ, ಅತ್ಯುತ್ತಮವಾಗಿ ರೂಪುಗೊಂಡಿರುವ ಎಷ್ಟೋ ಆಪ್‌ಗಳಿಗೆ ಸರಿಯಾದ ಜಾಹಿರಾತು ಇರುವುದಿಲ್ಲ ಮತ್ತು ಹೆಚ್ಚು ಬಳಕೆಯಲ್ಲಿಯೂ ಇರುವುದಿಲ್ಲ.!!

ಹಾಗಾಗಿ, ಇಂದಿನ ಲೇಖನದಲ್ಲಿ ನಾವು ನಿಮೆಗೆ ಕೆಲವು ಅತ್ಯುತ್ತಮ ಆಪ್‌ಗಳನ್ನು ಪರಿಚತಯಿಸುತ್ತೇವೆ. ಈ ಆಪ್‌ಗಳು ಹೆಚ್ಚು ಉಪಯೋಗಕಾರಿಯಾಗಿದ್ದು ನಿಮಗೆ ತಿಳಿಯದೇ ಇರಬಹುದು.!! ಹಾಗಾದರೆ, ಆ ಆಪ್‌ಗಳು ಯಾವುವು? ಏನೆಲ್ಲಾ ಪ್ರಯೋಜನ ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿಂಡ್‌ಸ್ಕ್ರೈಬ್ ಆಪ್‌!!

ವಿಂಡ್‌ಸ್ಕ್ರೈಬ್ ಆಪ್‌!!

ನೀವು ಇಂಟರ್‌ನೆಟ್‌ನಲ್ಲಿ ಏನೇ ಜಾಲಾಡಿದರೂ ಸಹ ಅದು ಗೂಗಲ್‌ ಸೇರಿ ಇತರರಿಗೆ ಗೊತ್ತಾಗುತ್ತದೆ. ಆದರೆ, ನಿಮ್ಮ ಚಟುವಟಿಕೆ ಇತರರಿಗೆ ಗೊತ್ತಾಗುವುದು ನಿಮಗೆ ಇಷ್ಟವಿಲ್ಲ ಎಂದರೆ ವಿಂಡ್‌ಸ್ಕ್ರೆಬ್ ಆಪ್‌ ಅನ್ನು ಬಳಸಿ. ಇದೊಂದು ಪರ್ಯಾಯ ನೆಟ್‌ವರ್ಕ್‌ ಆಗಿದ್ದು, ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಬಹುದು.

ಗೂಗಲ್ ಕೀಪ್!!

ಗೂಗಲ್ ಕೀಪ್!!

ನಿಮ್ಮ ಮೊಬೈಲಲ್ಲಿ ನೋಟ್‌ಪುಸ್ತಕದಂತ ಬಳಸಬಹುದಾದ ಆಪ್ ಈಗಾಗಲೇ ಇರಬಹುದು. ಆದರೂ ಗೂಗಲ್ ಕೀಪ್ ಒಮ್ಮೆ ಬಳಸಿ ನೋಡಿ. ನೀವು ಬರೆದ ನೋಟ್ಸ್, ಪಟ್ಟಿ, ಫೊಟೋಗಳನ್ನು ನಿರ್ವಹಿಸಲು ಇದು ಅತ್ಯುತ್ತಮ ಆಪ್. ಅತ್ಯಂತ ಸರಳ ಆಯ್ಕೆಗಳು, ನೀವು ಬರೆಯುತ್ತಿದ್ದಂತೆ ಸೇವ್ ಆಗುವುದಲ್ಲದೆ, ಆನ್-ಲೈನ್‌ನಲ್ಲಿ ಕೂಡ ಇದರ ಪ್ರತಿ ಸೇವ್ ಆಗುತ್ತದೆ

ಮನಿ ಮ್ಯಾನೇಜರ್‌ ಎಕ್ಸ್‌!!

ಮನಿ ಮ್ಯಾನೇಜರ್‌ ಎಕ್ಸ್‌!!

ಒಬ್ಬ ಆಡಿಟರ್‌ ಮಾಡುವ ಕೆಲಸವನ್ನು ಒಂದು ಆಪ್‌ ಮಾಡಿದರೆ ಹೇಗಿರುತ್ತದೆ.? ಹೌದು, ನಿಮ್ಮ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಖಾಸಗಿ ಆಡಿಟರ್‌ ಒಬ್ಬರ ಅಗತ್ಯ ನಿಮಗಿಲ್ಲ.!! ಏಕೆಂದರೆ, ನಿಮ್ಮ ಅಕೌಂಟ್‌ಗಳ ಮಾಹಿತಿ, ಕ್ರೆಡಿಟ್‌ ಕಾರ್ಡ್‌ ಬಳಕೆ ಸೇರಿ ನಿಮ್ಮ ಎಲ್ಲಾ ವ್ಯವಹಹಾರಗಳನ್ನು ನೋಡಿಕೊಳ್ಳುತ್ತದೆ. ನಿಮ್ಮ ಅಕೌಂಟ್‌ಗೆ ನೇರ ಪ್ರವೇಶವನ್ನು ಪಡೆಯದ ಈ ಆಪ್ ಸುರಕ್ಷತೆ ದೃಷ್ಟಿಯಿಂದಲೂ ಒಳ್ಳೆಯದು.!!

ಆಫ್ಟರ್ ಫೋಕಸ್!!

ಆಫ್ಟರ್ ಫೋಕಸ್!!

ದುಬಾರಿ ಕ್ಯಾಮರಾಗಳಲ್ಲಿರುವಂತೆ ಒಂದು ವಸ್ತುವನ್ನೇ ಉತ್ತಮವಾಗಿ ಫೋಕಸ್ ಮಾಡುವ ಅವಕಾಶ ಮೊಬೈಲ್ ಕ್ಯಾಮರಾಗಳಲ್ಲಿರುವುದಿಲ್ಲ. ಹಾಗಾಗಿ, ಚಿತ್ರ ತೆಗೆದ ನಂತರ ಅದರಲ್ಲಿರುವ ಒಂದು ವಸ್ತುವನ್ನು ಫೋಕಸ್ ಮಾಡಿ ಹಿನ್ನೆಲೆಯನ್ನು ಮಸುಕಾಗಿಸಿ ಚಿತ್ರವನ್ನು ಚೆನ್ನಾಗಿ ಕಾಣುವಂತೆ ಮಾಡುವ ಆಫ್ಟರ್ ಫೋಕಸ್ ಆಪ್ ಇದ್ದರೆ ಒಳ್ಳೆಯದು.!!

ಕಾಂಟ್ಯಾಕ್ಟ್ ಪ್ಲಸ್!!

ಕಾಂಟ್ಯಾಕ್ಟ್ ಪ್ಲಸ್!!

ನಿಮ್ಮ ಸಂಪರ್ಕದಲ್ಲಿರುವವರ ಮೊಬೈಲ್ ನಂಬರ್, ಇಮೇಲ್, ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳು, ವಾಟ್ಸಾಪ್ ಎಲ್ಲಾ ಖಾತೆಗಳ ಸಂಪರ್ಕವನ್ನು ಜೊತೆಗೆ ಸೇರಿಸಿ, ಅವರ ಪ್ರೊಫ಼ೈಲ್ ಚಿತ್ರಗಳನ್ನೂ ಅವರ ಸಂಪರ್ಕದ ಜೊತೆಗೆ ಲಗತ್ತಿಸುವ ಆಪ್ ಕಾಂಟಾಕ್ಟ್ ಪ್ಲಸ್. ಇದರಿಂದ ನಿಮಗೆ ಮೊಬೈಲ್‌ನಲ್ಲಿರುವ ಸಂಪರ್ಕಗಳ ಹುಡುಕಾಟ ಖಂಡಿತಾ ಇಷ್ಟವಾಗಬಹುದು.!!

ಆಪಲ್ X ವಿನ್ಯಾಸದಲ್ಲಿ ಬರುತ್ತಿದೆ ಶಿಯೋಮಿಯ ಆಪಲ್ X ವಿನ್ಯಾಸದಲ್ಲಿ ಬರುತ್ತಿದೆ ಶಿಯೋಮಿಯ "ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್!!

Best Mobiles in India

English summary
There is always an opportunity to learn more about the world around us, even the stuff that we can’t see.!! to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X