Subscribe to Gizbot

ಗೂಗಲ್-ಏರ್‌ಟೆಲ್: ಗೋ ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಆಫರ್

Posted By: -

ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿರುವ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿರುವ ಗೂಗಲ್ ನೊಂದಿಗೆ ದೈತ್ಯ ಟೆಲಿಕಾಂ ಕಂಪನಿ ಏರ್ ಟೆಲ್ ಕೈ ಜೋಡಿಸಿದೆ. ಅತೀ ಕಡಿಮೆ ಬೆಲೆಯ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್ ಫೋನ್ ಗಳು ಶೀಘ್ರವೇ ಆನ್ ಲೈನ್ ಮಾರುಕಟ್ಟೆಗೆ ಕಾಲಿಡಲಿವೆ.

ಗೂಗಲ್-ಏರ್‌ಟೆಲ್: ಗೋ ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಆಫರ್

ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿಯೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದು, ಇದಾದ ನಂತರದಲ್ಲಿ ವಿಶ್ವದ ಇತರೆ ಮಾರುಕಟ್ಟೆಗೆ ಕಾಲಿಡಲಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಗಳ ಬೆಲೆಯು ಕಡಿಮೆ ಇದ್ದು, ಇವುಗಳಲ್ಲಿನ ಆಯ್ಕೆಗಳು ಸಹ ಕಡಿಮೆ ಇದೆ ಎನ್ನಲಾಗಿದೆ.

ಈ ಸ್ಮಾರ್ಟ್ ಫೋನ್ ನೊಂದಿಗೆ ಗೂಗಲ್ ವಿಶೇಷ ಆಪ್ ಗಳನ್ನು ಬಿಡುಗಡೆ ಮಾಡಿದ್ದು, ಲೈಟ್ ಆವೃತ್ತಿಯಲ್ಲಿ ಇವುಗಳು ಕಾರ್ಯನಿರ್ವಹಿಸಲಿದೆ. ಕಡಿಮೆ ಗಾತ್ರದಲ್ಲಿ ಇರಲಿದ್ದು, ಹೆಚ್ಚಿನ ಡೇಟಾವನ್ನು ಬಳಕೆ ಮಾಡಿಕೊಳ್ಳದೆ ಕಾರ್ಯನಿರ್ವಹಿಸಲು ಶಕ್ತವಾಗಿವೆ.

ಗೂಗಲ್-ಏರ್‌ಟೆಲ್: ಗೋ ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಆಫರ್

ಸದ್ಯ ಸ್ಮಾರ್ಟ್ ಫೋನ್ ಗಳ ಮೇಲೆ ಏರ್ ಟೆಲ್ 'ಮೇರಾ ಪೆಹೆಲಾ ಸ್ಮಾರ್ಟ್ ಫೋನ್' ಆಫರ್ ಘೋಷಣೆ ಮಾಡಿದ್ದು, ರೂ.2000ದ ವರೆಗೂ ಕ್ಯಾಷ್ ಬ್ಯಾಕ್ ಆಫರ್ ನೀಡಲು ಮುಂದಾಗಿದೆ. ಈಗಾಗಲೇ ಮೈಕ್ರೋ ಮಾಕ್ಸ್ ಮತ್ತು ಲಾವಾ ಕಂಪನಿಗಳು ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್ ಫೋನ್ ಗಳನ್ನು ನಿರ್ಮಾಣ ಮಾಡಿದ್ದು, ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯ ಮಾಡಲಿವೆ.

ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಏರ್ ಟೆಲ್, ತನ್ನ ಆಪ್ ಗಳನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಪ್ರೀ ಇನ್ ಸ್ಟಾಲ್ ಮಾಡಿಸಿಲಿದೆ. ಈಗಾಗಲೇ ಎಲ್ಲಾ ಬಳಕೆದಾರರಿಗೆ ಸ್ಮಾರ್ಟ್ ಪೋನ್ ನೀಡಬೇಕು ಎನ್ನುವ ಗುರಿಯೊಂದಿಗೆ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿರುವ ಗೂಗಲ್ ಆಸೆಗೆ ಎರ್ ಟೆಲ್ ನೀಡುತ್ತಿರುವ ಹೊಸ ಆಫರ್ ಇನ್ನಷ್ಟು ಸಹಾಯ ಮಾಡಲಿದೆ.

English summary
Airtel partners Google for Android Go smartphones. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot