ನಿಮ್ಮ ವೈಫೈಗೆ ಯಾರು ಕನೆಕ್ಟ್ ಆಗಿದ್ದಾರೆ..? ತಿಳಿಯಲು ಈ ಆಪ್‌ಗಳು ಬೆಸ್ಟ್..!

By Gizbot Bureau
|

ವೈಫೈ ಸಂಪರ್ಕದ ನಿಧಾನಗತಿಯ ಕಾರ್ಯನಿರ್ವಹಣೆಯಿಂದ ಬೇಸತ್ತಿದ್ದೀರಾ..? ಎಷ್ಟೇ ವೇಗದ ಪ್ಯಾಕ್‌ ರೀಚಾರ್ಜ್ ಮಾಡಿಸಿದರೂ ವೈಫೈ ವೇಗವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದೇ ವೈಫೈಗೆ ಹೆಚ್ಚೆಚ್ಚು ಜನ ಸಂಪರ್ಕವಾಗಿದ್ದರೆ, ಇಂಟರ್‌ನೆಟ್ ವೇಗ ಖಂಡಿತವಾಗಿ ಕಡಿಮೆಯಾಗುತ್ತದೆ. ಒಂದೊಂದು ಬಾರಿ ನಿಮಗೆ ಗೊತ್ತಿರದೇ ಅನೇಕರು ನಿಮ್ಮ ವೈಫೈಗೆ ಕನೆಕ್ಟ್‌ ಆಗಿರುತ್ತಾರೆ.

ನಿಮ್ಮ ವೈಫೈಗೆ ಯಾರು ಕನೆಕ್ಟ್ ಆಗಿದ್ದಾರೆ..? ತಿಳಿಯಲು ಈ ಆಪ್‌ಗಳು ಬೆಸ್ಟ್..!

ಇದರಿಂದ ನಿಮಗೆ ದೊರೆಯಬೇಕಾದ ಇಂಟರ್‌ನೆಟ್‌ ವೇಗದಲ್ಲಿ ಅಡೆತಡೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ವೈಫೈಗೆ ಯಾರೆಲ್ಲಾ ಸಂಪರ್ಕ ಹೊಂದಿದ್ದಾರೆಂದು ತಿಳಿದುಕೊಳ್ಳಲು ಒಂದಿಷ್ಟು ಆಪ್‌ಗಳಿವೆ. ಆ ಆಪ್‌ಗಳ ಮೂಲಕ ಅಪರಿಚಿತರು ವೈಫೈಗೆ ಕನೆಕ್ಟ್ ಆಗಿದ್ದನ್ನು ಕಂಡುಹಿಡಿದು ಬ್ಲಾಕ್‌ ಮಾಡಬಹುದು. ಆ ಆಪ್‌ಗಳು ಯಾವುವು ಎಂಬುದನ್ನು ಮುಂದೆ ನೋಡಿ.

ಫಿಂಗ್‌ ನೆಟ್‌ವರ್ಕ್‌ ಟೂಲ್ಸ್

ಫಿಂಗ್‌ ನೆಟ್‌ವರ್ಕ್‌ ಟೂಲ್ಸ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ವೈಫೈ ವಿಶ್ಲೇಷಕ ಆಪ್‌ಗಳಲ್ಲಿ ಫಿಂಗ್- ನೆಟ್‌ವರ್ಕ್ ಟೂಲ್ಸ್ ಉತ್ತಮ ಆಪ್‌. ಸಂಪೂರ್ಣ ವೈಫೈ ನೆಟ್‌ವರ್ಕ್‌ನ್ನು ಸ್ಕ್ಯಾನ್ ಮಾಡಿದ ನಿಮ್ಮ ವೈಫೈಗೆ ಕನೆಕ್ಟ್ ಆದ ಸಾಧನಗಳನ್ನು ಹುಡುಕುತ್ತದೆ. ನಿಮ್ಮ ವೈಫೈಗೆ ಕನೆಕ್ಟ್‌ ಆದ ಸಾಧನದ ಹೆಸರು, ಐಪಿ ವಿಳಾಸ, MAC ವಿಳಾಸ, ಮಾದರಿ, ಮಾರಾಟಗಾರ ಮತ್ತು ತಯಾರಕರ ಮಾಹಿತಿಯನ್ನು ನಿಮಗೆ ನೀಡುತ್ತದೆ. ಆದ್ದರಿಂದ, ಈ ಆಪ್‌ ವೈಫೈಗೆ ಯಾರು ಸಂಪರ್ಕ ಹೊಂದಿದ್ದಾರೆಂದು ಕಂಡುಹಿಡಿಯಲು ಉತ್ತಮದ್ದಾಗಿದೆ.

ಐಪಿ ಟೂಲ್ಸ್

ಐಪಿ ಟೂಲ್ಸ್

ನಿಮ್ಮ ನೆಟ್‌ವರ್ಕ್‌ನ ಪೂರ್ಣ ಮತ್ತು ಸ್ಪಷ್ಟ ಚಿತ್ರ ಪಡೆಯಲು ನಿಮಗೆ ಐಪಿ ಟೂಲ್ಸ್ ಉತ್ತಮ ಆಪ್‌. ಈ ಆಪ್‌ ಪ್ರಬಲ ವೈಫೈ ವಿಶ್ಲೇಷಕ ಹೊಂದಿದ್ದು, ಅದು ನಿಮ್ಮ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳನ್ನು ಸ್ಕ್ಯಾನ್ ಮಾಡುತ್ತೆ ಮತ್ತು ಕಂಡುಹಿಡಿಯುತ್ತೆ. ನಿಮ್ಮ ವೈಫೈಗೆ ಸಂಪರ್ಕಗೊಂಡಿರುವ ಸಾಧನದ ಐಪಿ ವಿಳಾಸ, ಎಂಎಸಿ ವಿಳಾಸ, ಸಾಧನದ ಹೆಸರು ಮುಂತಾದ ವಿವರಗಳನ್ನು ಐಪಿ ಟೂಲ್ಸ್‌ ನೀಡುತ್ತದೆ. ಆದ್ದರಿಂದ ಐಪಿ ಟೂಲ್ಸ್‌ ಆಪ್ ಕೂಡ ಆಂಡ್ರಾಯ್ಡ್ ಬಳಕೆದಾರರಿಗೆ ಬೆಸ್ಟ್ ಎಂಬುದರಲ್ಲಿ ಎರಡು ಮಾತಿಲ್ಲ.

ನೆಟ್‌ಕಟ್

ನೆಟ್‌ಕಟ್

ನೆಟ್‌ಕಟ್, ಮತ್ತೊಂದು ಉತ್ತಮ ವೈಫೈ ವಿಶ್ಲೇಷಕ ಅಪ್ಲಿಕೇಶನ್ ಆಗಿದ್ದು, ವೈಫೈನಲ್ಲಿರುವ ಎಲ್ಲಾ ನೆಟ್‌ವರ್ಕ್ ಬಳಕೆದಾರರನ್ನು ತ್ವರಿತವಾಗಿ ಕಂಡುಹಿಡಿಯುತ್ತದೆ, ಇದಷ್ಟೇ ಅಲ್ಲದೇ ಲ್ಯಾನ್‌ ನೆಟ್‌ವರ್ಕ್‌ನಲ್ಲಿ ಸಂಪರ್ಕ ಸಾಧಿಸಿದ ಬಳಕೆದಾರರ ನಡುವಿನ ಸಂಪರ್ಕವನ್ನು ಸಹ ಈ ಆಪ್ ಕಡಿತಗೊಳಿಸುವ ಸಾಮರ್ಥ್ಯ ಹೊಂದಿದೆ. ಈ ಫೀಚರ್‌ ಬಳಸಲು ನಿಮ್ಮ ಸ್ಮಾರ್ಟ್‌ಫೋನ್‌ನ್ನು ರೂಟ್ ಮಾಡಬೇಕಾಗಿರುತ್ತದೆ. ಇದರ ಜೊತೆ ನೆಟ್‌ಕಟ್ ಡಿಫೆಂಡರ್ ಫೀಚರ್ ಲಭ್ಯವಿದ್ದು, ನಿಮ್ಮ ನೆಟ್‌ವರ್ಕ್‌ ಮೇಲೆ ಆಗುವ ದಾಳಿಯನ್ನು ಪತ್ತೆ ಮಾಡುತ್ತದೆ.

ezNetScan

ezNetScan

ನೆಟ್‌ವರ್ಕ್‌ ವಿಧದಲ್ಲಿರುವ ಮತ್ತೊಂದು ಬೆಸ್ಟ್ ಆಪ್‌ ಎಂದರೆ ezNetScan. ಈ ಆಪ್‌ ವೈರ್‌ಲೆಸ್ ನೆಟ್‌ವರ್ಕ್‌ನ್ನು ಪರಿಣಾಮಕಾರಿಯಾಗಿ ಸ್ಕ್ಯಾನ್ ಮಾಡುತ್ತದೆ. ಹಾಗೂ ಎಲ್ಲಾ ಸಂಪರ್ಕಿತ ಸಾಧನಗಳ ಸಂಪೂರ್ಣ ಪಟ್ಟಿಯನ್ನು ನಿಮಗೆ ನೀಡುತ್ತದೆ. ಇದಲ್ಲದೆ, ನಿರ್ದಿಷ್ಟ ಸಾಧನಕ್ಕೆ ಐಕಾನ್ ನಿಯೋಜಿಸುವುದು, ಟ್ಯಾಗ್ ನೇಮ್ ಇಡುವಂತಹ ಅನೇಕ ಆಯ್ಕೆಗಳನ್ನು ezNetScan ಆಪ್‌ ನೀಡುತ್ತದೆ.

ನೆಟ್‌ವರ್ಕ್ ಸ್ಕ್ಯಾನರ್

ನೆಟ್‌ವರ್ಕ್ ಸ್ಕ್ಯಾನರ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾದ ಸುಧಾರಿತ ವೈಫೈ ಆಪ್‌ಗಳಲ್ಲಿ ನೆಟ್‌ವರ್ಕ್ ಸ್ಕ್ಯಾನರ್ ಕೂಡ ಒಂದು. ವೈಫೈಗೆ ಕನೆಕ್ಟ್‌ ಆಗಿರುವ ಸಾಧನಗಳನ್ನು ಸ್ಕ್ಯಾನ್ ಮಾಡುವುದಷ್ಟೇ ಅಲ್ಲದೇ ನಿಮ್ಮ ವೈಫೈನ ಅನುಮಾನಾಸ್ಪದ ದೋಷ, ಭದ್ರತಾ ಸಮಸ್ಯೆಗಳನ್ನು ನೆಟ್‌ವರ್ಕ್‌ ಸ್ಕ್ಯಾನರ್ ನಿಮ್ಮ ಮುಂದಿಡುತ್ತದೆ. ಇದಷ್ಟೇ ಅಲ್ಲದೇ ವೇಕ್ ಆನ್ ಲ್ಯಾನ್, ಪಿಂಗ್, ಟ್ರೇಸರೂಟ್‌ನಂತಹ ಟೂಲ್ಸ್‌ಗಳನ್ನು ನಿಮಗೆ ನೀಡುತ್ತದೆ. ಈ ಆಪ್‌ ಉತ್ತಮ ಬಳಕೆದಾರ ಇಂಟರ್ಫೇಸ್‌ ಹೊಂದಿದ್ದು, ಖಂಡಿತವಾಗಿಯೂ ಬಳಸಬಹುದು.

ವೈಫೈ ಥೀಫ್ ಡಿಟೆಕ್ಟರ್

ವೈಫೈ ಥೀಫ್ ಡಿಟೆಕ್ಟರ್

ನಿಮ್ಮ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವ ಸಾಧನಗಳನ್ನು ಪತ್ತೆಹಚ್ಚುವಂತಹ ಆಪ್‌ಗಾಗಿ ಹುಡುಕುತ್ತಿದ್ದರೆ, ನೀವು ಖಂಡಿತವಾಗಿಯೂ ವೈಫೈ ಥೀಫ್ ಡಿಟೆಕ್ಟರ್‌ ಆಪ್‌ನ್ನು ಪ್ರಯತ್ನಿಸಬಹುದು. ಇದು ನೆಟ್‌ವರ್ಕ್ ಸ್ಕ್ಯಾನರ್ ಅಪ್ಲಿಕೇಶನ್ ಆಗಿದ್ದು, ವೈಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳನ್ನು ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ವೈಫೈ ಥೀಫ್ ಡಿಟೆಕ್ಟರ್ ಸಂಪರ್ಕಿತ ಸಾಧನಗಳ ಐಪಿ ವಿಳಾಸ, ಎಂಎಸಿ ಐಡಿ, ಮಾರಾಟಗಾರರ ಪಟ್ಟಿ ಮುಂತಾದ ಪ್ರಮುಖ ಮಾಹಿತಿಯನ್ನು ತೋರಿಸುತ್ತದೆ.

ನೆಟ್‌ವರ್ಕ್ ಕನೆಕ್ಷನ್ಸ್‌

ನೆಟ್‌ವರ್ಕ್ ಕನೆಕ್ಷನ್ಸ್‌

ನಿಮ್ಮ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಎಲ್ಲಾ ಸಾಧನಗಳನ್ನು ಪತ್ತೆಹಚ್ಚಲು ಬಳಸಬಹುದಾದ ಮತ್ತೊಂದು ಉತ್ತಮ ಆಂಡ್ರಾಯ್ಡ್ ಅಪ್‌ ಅಂದರೆ ಅದು ನೆಟ್‌ವರ್ಕ್ ಕನೆಕ್ಷನ್ಸ್. ನೆಟ್‌ವರ್ಕ್ ನಿರ್ವಹಣಾ ಅಪ್ಲಿಕೇಶನ್‌ ಆಗಿರುವ ಇದು ಎಲ್ಲಾ ಒಳ ಮತ್ತು ಹೊರ ಸಂಪರ್ಕಗಳನ್ನು ಪ್ರದರ್ಶಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಇದಲ್ಲದೆ, ಪ್ರತಿ ಸಂಪರ್ಕಿತ ಸಾಧನಗಳ ವಿವರವಾದ ಐಪಿ ಮಾಹಿತಿಯನ್ನು ನೆಟ್‌ವರ್ಕ್‌ ಕನೆಕ್ಷನ್ಸ್‌ ತೋರಿಸುತ್ತದೆ.

ವೂ ಈಸ್ ಆನ್‌ ಮೈ ವೈಫೈ

ವೂ ಈಸ್ ಆನ್‌ ಮೈ ವೈಫೈ

ಹೆಸರೇ ಹೇಳುವಂತೆ ವೂ ಈಸ್ ಆನ್‌ ಮೈ ವೈಫೈ ಆಪ್ ನಿಮ್ಮ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಇದು ಡಿ-ಲಿಂಕ್, ಟಿಪಿ-ಲಿಂಕ್ ಮುಂತಾದ ಜನಪ್ರಿಯ ರೂಟರ್‌ಗಳಿಗೆ ರೂಟರ್ ಸೆಟ್ಟಿಂಗ್‌ಗಳನ್ನು ಸಹ ಒದಗಿಸುತ್ತದೆ. ಆದ್ದರಿಂದ, ಅಪರಿಚಿತ ಸಾಧನವನ್ನು ಪತ್ತೆಹಚ್ಚಿದ ನಂತರ ಆಪ್‌ ಮೂಲಕ ಸಾಧನವನ್ನು ಸುಲಭವಾಗಿ ನಿರ್ಬಂಧಿಸಬಹುದು.

Best Mobiles in India

English summary
Apps And Services To Check The List Of Devices That Are Connected To A Wi-Fi Network

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X