ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ನೀವು ಸೆಲೆಬ್ರಿಟಿಯಾಗಬೇಕಂದರೆ ಈ ಆಪ್ಸ್ ಬಳಸಿ..!

By Avinash
|

ಅನೇಕ ಜನ ಸಾಮಾನ್ಯರನ್ನು ಸೆಲೆಬ್ರಿಟಿ ಮಾಡಿದ ಕೀರ್ತಿ ಡಬ್ ಸ್ಮಾಷ್ ಆಪ್ ಗೆ ದೊರೆಯುತ್ತದೆ. ಅದರಂತೆ ನಮ್ಮ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಕೂಡ ಸೆಲೆಬ್ರಿಟಿಯಾಗಿದ್ದು ಡಬ್ ಸ್ಮಾಷ್ ಮೂಲಕ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಬೇರೆಯವರ ಧ್ವನಿಗೆ ನಿಮ್ಮ ಅಭಿನಯ ವೇದಿಕೆಯಾಗಿರುವ ಈ ಪ್ಲಾಟ್ ಫಾರ್ಮನಿಂದ ಬಹಳಷ್ಟು ಜನ ಸೆಲೆಬ್ರಿಟಿ ಆಗುವ ಕನಸು ಕಾಣುತ್ತಿದ್ದಾರೆ.

ಸಂಗೀತ ಪ್ರಿಯರಿಗೆ ಇಲ್ಲಿವೆ ಬೆಸ್ಟ್ ಮ್ಯೂಸಿಕ್ ಆಪ್ಸ್... ಕೇಳಿ ಆನಂದಿಸಿ..!ಸಂಗೀತ ಪ್ರಿಯರಿಗೆ ಇಲ್ಲಿವೆ ಬೆಸ್ಟ್ ಮ್ಯೂಸಿಕ್ ಆಪ್ಸ್... ಕೇಳಿ ಆನಂದಿಸಿ..!

ಹೌದು, ಅಭಿನಯವೇ ವೇದಿಕೆಯಾಗಿರುವ ಆಪ್ ಗಳಲ್ಲಿ ಅನೇಕ ಆಪ್ ಗಳು ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಡಬ್ ಸ್ಮಾಷ್ ನಂತಹ ಸಾಕಷ್ಟು ಆಪ್ ಗಳು ಬಂದರೂ ಡಬ್ ಸ್ಮಾಷ್ ನಷ್ಟು ಹೆಸರು ಮಾಡಿಲ್ಲ. ಈಗೀಗ ಮ್ಯೂಸಿಕ್ ಲೀ ಹೆಸರು ಮಾಡುತ್ತಿದೆ. ಇವುಗಳ ಜೊತೆ ಅನೇಕ ಆಪ್ ಗಳು ನಿಮ್ಮ ಡಬ್ಬಿಂಗ್ ಕಲೆಗೆ ಬೆಸ್ಟ್ ಆಯ್ಕೆಯಾಗಿವೆ. ಅವು ಯಾವುವೆಂಬ ಕುತೂಹಲವಿದೆಯೇ ಮುಂದೆ ನೋಡಿ.

ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ಸೆಲೆಬ್ರಿಟಿಯಾಗಲು ಈ ಆಪ್ಸ್ ಬಳಸಿ.!

1. ಡಬ್ ಸ್ಮಾಷ್ DubSmash

1. ಡಬ್ ಸ್ಮಾಷ್ DubSmash

ಡಬ್ಬಿಂಗ್ ಆಪ್ ಎಂದರೆ ಅಲ್ಲಿ ಮೊದಲು ಬರುವುದು ಡಬ್ ಸ್ಮಾಷ್ ಆಪ್. ಇದು ನವೆಂಬರ್ 14, 2014ರಲ್ಲಿ ಬಳಕೆಗೆ ದೊರೆಯಿತು. ಜೋನಾಸ್ ಡ್ರಫ್ಫೆಲ್, ರೋಲಾಂಡ್ ಗ್ರಿಂಕೆ, ಡೇನಿಯಲ್ ಥಾಸ್ಚಿಕ್ ಸೇರಿ ಡಬ್ ಸ್ಮಾಷ್ ಆಪ್ ಅಭಿವೃದ್ಧಿ ಪಡಿಸಿದರು. ಇದು ವಿಡಿಯೋ ಮೆಸೆಂಜಿಂಗ್ ಆಪ್ ಆಗಿದ್ದು, iOS ಮತ್ತು Android ಸಾಧನಗಳಿಗೆ ಲಭ್ಯವಿದೆ.
ಡಬ್ ಸ್ಮಾಷ್ ಮೂಲಕ ಹಾಡುಗಳು, ಸಿನಿಮಾ ಮತ್ತು ಯಾವುದಾದರೂ ರಿಯಾಳಿಟಿ ಶೋಗಳ ಸಣ್ಣ ಸಂಭಾಷಣೆಯನ್ನು ಸ್ವತಃ ಡಬ್ಬಿಂಗ್ ಮಾಡಬಹುದಾಗಿದ್ದು, ಲಿಪ್ ಸಿಂಕ್ ಪ್ರಮುಖ ಪಾತ್ರವಹಿಸುತ್ತದೆ. ಅದಲ್ಲದೇ ಬಳಕೆದಾರರು ತಮ್ಮದೇ ಆದ ಆಡಿಯೋ ಫೈಲ್ ಗಳನ್ನು ಅಪ್ ಲೋಡ್ ಮಾಡುವ, ಬಣ್ಣದ ಫಿಲ್ಟರ್, ಟೆಕ್ಸ್ಟ್ಅನಿಮೇಷನ್ ಮಾಡುವ ಆಯ್ಕೆ ಇದೆ.

2. ಮ್ಯೂಸಿಕ್ ಲಿ Musical.ly

2. ಮ್ಯೂಸಿಕ್ ಲಿ Musical.ly

ಇತ್ತೀಚೆಗೆ ಬಹಳ ಫೇಮಸ್ ಆಗಿರುವ ಡಬ್ಬಿಂಗ್ ಆಪ್ ಅಂದರೆ ಮ್ಯೂಸಿಕ್ ಲಿ. ಚೈನಾದ ವಿಡಿಯೋ ಸೋಷಿಯಲ್ ನೆಟ್ ವರ್ಕ್ ಆಪ್ ಆಗಿದ್ದು, ಏಪ್ರಿಲ್ 2014ರಲ್ಲಿ ರಿಲೀಸ್ ಆಗಿ, ಅದೇ ವರ್ಷ ಆಗಸ್ಟ್ ನಲ್ಲಿ ಅಧಿಕೃತವಾದ ಆಪ್ ಬಿಡುಗಡೆಯಾಯಿತು. ಇದರ ಮೂಲಕ 15 ಸೆಕೆಂಡ್ ನಿಂದ 1 ನಿಮಿಷದವರೆಗೆ ಲಭ್ಯವಿರುವ ಆಡಿಯೋ ಟ್ರಾಕ್ ಬಳಸಿಕೊಂಡು ವಿಡೀಯೋ ಮಾಡಬಹುದಾಗಿದೆ. ಅದಲ್ಲದೇ ವಿಭಿನ್ನವಾದ ಸ್ಪೀಡ್ ಆಯ್ಕೆಗಳಿದ್ದು, ಟೈಮ್ ಲ್ಯಾಪ್ಸ್, ಫಾಸ್ಟ್, ನಾರ್ಮಲ್, ಸ್ಲೋ ಮೋಷನ್ ಮತ್ತು ಎಪಿಕ್ ಆಯ್ಕೆಗಳಿವೆ.
ಮೇ 2017ರ ಪ್ರಕಾರ 200 ಮಿಲಿಯನ್ ನೊಂದಾಯಿತ ಬಳಕೆದಾರರಿದ್ದು, ದಿನಕ್ಕೆ 12 ಮಿಲಿಯನ್ ಗಿಂತಲೂ ಹೆಚ್ಚು ವಿಡೀಯೋಗಳು ಮ್ಯೂಸಿಕ್ ಲೀ ಆಪ್ ನಲ್ಲಿ ಪೋಸ್ಟ್ ಆಗುತ್ತವೆ.

3. ಡಬ್ ಶೂಟ್ Dubshoot

3. ಡಬ್ ಶೂಟ್ Dubshoot

ಡಬ್ ಸ್ಮಾಷ್ ಮತ್ತು ಮ್ಯೂಸಿಕ್ ಲೀಯಂತೆ ಡಬ್ ಶೂಟ್ ಆಪ್ ಕೂಡ ಬಹಳಷ್ಟು ಪ್ರಸಿದ್ಧಿ ಹೊಂದಿದೆ. ಸೆಲ್ಫಿಯೊಂದಿಗೆ ಯಾರು ಡಬ್ ಮಾಡಲು ಇಷ್ಟ ಪಡ್ತಾರೋ ಅಂತವರಿಗೆ ಹೇಳಿಮಾಡಿಸಿದಂತ ಆಪ್ ಇದು. ಅದ್ಭುತ ಶಬ್ಧದೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತದೆ. mTouch Labs ಅವರ ಪ್ರಾಡಕ್ಟ್ ಆಗಿದ್ದು, ಉತ್ತಮವಾಗಿದೆ. ನಿಮ್ಮ ಸೃಜನಶೀಲತೆಗೆ ಇದು ಕನ್ನಡಿ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ. ಸರಳವಾಗಿದ್ದು ಅದ್ಭುತವಾದುದ್ದನ್ನು ಸೃಷ್ಟಿಸಬಹುದಾಗಿದೆ.

4. ವೈನ್ ಸ್ಮಾಷ್ VineSmash

4. ವೈನ್ ಸ್ಮಾಷ್ VineSmash

ಡಬ್ ಸ್ಮಾಷ್ ಆಪ್ ಗೆ ಉತ್ತಮ ಪರ್ಯಾಯ ಎಂದರೆ ವೈನ್ ಸ್ಮಾಷ್ ಎಂದು ಆಪ್ ತಜ್ಞರು ಹೇಳುತ್ತಾರೆ. ಫನ್ನಿ ವಿಡೀಯೋಗಳನ್ನು ಗುಣಮಟ್ಟದ ವಿಡೀಯೋ ಮತ್ತು ಶಬ್ಧದೊಂದಿಗೆ ನೀಡುತ್ತದೆ. ನಿಮಗೆ ಬೇಕಾದಷ್ಟು ಫನ್ನಿಯಾಗಿ ವಿಡೀಯೋಗಳನ್ನು ಇಲ್ಲಿ ತಯಾರಿಸಬಹುದು. ನೀವು ಲೈಬ್ರರಿಯಿಂದ ಟ್ರಾಕ್ ತೆಗೆದುಕೊಂಡು ರೆಕಾರ್ಡ್ ಮಾಡಿ, ಎಡಿಟ್ ಮಾಡಬಹುದು. ಮತ್ತು ವಾಟ್ಸ್ ಆಪ್, ಇನ್ಸ್ಟಾಗ್ರಾಮ್ ನಂತಹ ಮೆಸೆಂಜರ್ ಗಳಲ್ಲಿ ಶೇರ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.

5. ಲಿಪ್ ಸಿಂಕ್ ಲೈವ್ Lip Sync Live

5. ಲಿಪ್ ಸಿಂಕ್ ಲೈವ್ Lip Sync Live

ಇದು ಆಪ್ ಅಲ್ಲ. ಬದಲಾಗಿ ಫೇಸ್ ಬುಕ್ ಇತ್ತೀಚೆಗೆ ಪರಿಚಯಿಸಿದ ಹೊಸ ಫೀಚರ್ ಆಗಿದ್ದು, ಡಬ್ ಸ್ಮಾಷ್ ನಂತೆ ಇಲ್ಲಿಯೂ ಲಿಪ್ ಸಿಂಕ್ ಮಾಡಬಹುದಾಗಿದೆ. ಈ ಹೊಸ ಫೀಚರ್ ಅನ್ನು ಫೇಸ್ ಬುಕ್ ತನ್ನ ಲೈವ್ ವಿಡೀಯೋದಲ್ಲಿಯೇ ನೀಡಿರುವುದರಿಂದ ಲೈವ್ ಜೊತೆ ಲಿಪ್ ಸಿಂಕ್ ಮಾಡಬಹುದಾಗಿದೆ. ಆನ್ ಲೈವ್ ಕಮೆಂಟ್, ಶೇರ್ ಮಾಡುವ ಆಯ್ಕೆ ಲಭ್ಯವಿರುವುದರಿಂದ ಡಬ್ಬಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಫೀಚರ್ ಆಗಿದೆ.

6. ಫನ್ನಿಮೇಟ್ Funimate

6. ಫನ್ನಿಮೇಟ್ Funimate

ಫನ್ನಿಮೇಟ್ ನಲ್ಲಿ ಸಾಮಾನ್ಯ ವಿಡೀಯೋಗಳಿಗೆ ಅದ್ಭುತವಾದ ಎಫೆಕ್ಟ್ ನೀಡಿ ಎಡಿಟ್ ಮಾಡಬಹುದಾಗಿದ್ದು, ನಿಮ್ಮದೇ ಆದ ಸಂಗೀತ ಮತ್ತು ಎಫೆಕ್ಟ್ ಗಳನ್ನು ನೀಡಬಹುದಾಗಿದೆ. 5 ಮಿಲಿಯನ್ ಗೂ ಹೆಚ್ಚು ಜನರು ಬಳಸುವ ಆಪ್ ಫನ್ನಿ ವಿಡೀಯೋ ಸೃಷ್ಟಿಸಲು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಆಪ್ ಡಬ್ ಸ್ಮಾಷ್ ಗೆ ಪರ್ಯಾಯ ಅಲ್ಲದಿದ್ರೂ ಮನರಂಜನೆ ತಪ್ಪಿದ್ದಲ್ಲ.

How to send WhatsApp Payments invitation to others - GIZBOT KANNADA
7. ಲೈವ್. ಲಿ Live.ly

7. ಲೈವ್. ಲಿ Live.ly

ಡಬ್ ಸ್ಮಾಷ್ ನಂತಿರುವ ಲೈವ್ ಲಿ ಎಲ್ಲಿಂದ ಬೇಕಾದರೂ ಲೈವ್ ವಿಡೀಯೋ ಸ್ಟ್ರೀಮ್ ಮಾಡಬಹುದು. ಈ ಆಪ್ ನಿಂದ ನೀವೇನು ಮಾಡುತ್ತಿದ್ದಿರಿ ಎಂಬುದನ್ನು ಲೈವ್ ಬ್ರಾಡ್ ಕಾಸ್ಟ್ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಆನ್ ಲೈವ್ ಮಾತುಕತೆಯಲ್ಲಿ ತೊಡಗಬಹುದು. ಲೈವ್ ಲಿಯ ಡೆವಲಪರ್ಸ್ ಮ್ಯೂಸಿಕ್ ಲಿ ಆಪ್ ನ್ನು ಬಿಡುಗಡೆಗೊಳಿಸಿರುವುದು ವಿಶೇಷ.

Best Mobiles in India

Read more about:
English summary
best dubsmash apps for android. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X