ಫೇಸ್ ಬುಕ್ ಪ್ರಮೋಟ್ ಆಯ್ತು ಈಗ ಡಿಮೋಟ್ ಮಾಡಲು ಶುರುಮಾಡಿದೆ...!

By Lekhaka
|

ಫೇಸ್ ಬುಕ್ ದಿನ ಕಳೆದಂತೆ ಭಾರತದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಸಿಕೊಳ್ಳುತ್ತಿದ್ದು, ಇದರಂತೆ ಆದಾಯ ಗಳಿಕೆಯಲ್ಲಿಯೂ ಮುಂದಿದೆ ಎನ್ನಲಾಗಿದೆ. ಫೇಸ್ ಬುಕ್ ತನ್ನ ಬಳಕೆದಾರರ ಫೋಸ್ಟ್ ಗಳನ್ನು ಪ್ರಮೋಟ್ ಮಾಡುವ ಮೂಲಕ ಸಾಕಷ್ಟು ಆದಾಯವನ್ನು ಗಳಿಕೆ ಮಾಡುತ್ತಿದೆ. ಆದರೆ ಕೆಲವು ಪೇಜ್ ಗಳು ಮತ್ತು ವ್ಯಕ್ತಿಗಳು ತಾವೇ ಉಚಿತವಾಗಿ ಪ್ರಮೋಟ್ ಮಾಡಿಕೊಳ್ಳಲು ಎಂಗೇಜ್ ಮೆಂಟ್ ಫೋಸ್ಟ್ ಗಳನ್ನು ಹಾಕುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಡಿಮೋಟ್ ಮಾಡಲು ಯೋಜನೆಯನ್ನು ರೂಪಿಸಿದೆ.

ಫೇಸ್ ಬುಕ್ ಪ್ರಮೋಟ್ ಆಯ್ತು ಈಗ ಡಿಮೋಟ್ ಮಾಡಲು ಶುರುಮಾಡಿದೆ...!

ಈಗಾಗಲೇ ಫೇಸ್ ಬುಕ್ ಕೃತಕ ಬುದ್ಧಿಮತ್ತೆಯ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದ್ದು, ಪೇಜ್ ಗಳು ಮತ್ತು ಪರ್ಸನಲ್ ಪೋಸ್ಟ್ ಗಳಿಗೆ ಹೆಚ್ಚಿನ ಲೈಕ್ ಗಳನ್ನು ಪಡೆದುಕೊಳ್ಳುವ ಸಲುವಾಗಿ ಎಂಗೇಮೆಂಟ್ ಮಾಡುವುದು ಹೆಚ್ಚಾಗುತ್ತಿದೆ. ಇದನ್ನು ಕಂಡು ಹಿಡಿಯಲ್ಲಿರುವ ಫೇಸ್ ಬುಕ್ ಅಂತಹ ಫೋಸ್ಟ್ ಗಳನ್ನು ಡಿಮೋಟ್ ಮಾಡಲಿದೆ.

ಈಗಾಗಲೇ ಫೇಸ್ ಬುಕ್ ನಲ್ಲಿ ಟ್ಯಾಗ್ ಮೆಮೆಗಳ ಮಾದರಿಯ ಎಗೇಮೆಂಟ್ ಪೋಸ್ಟ್ ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಫೇಸ್ ಬುಕ್ ಅಂತಹ ಪೋಸ್ಟ್ ಗಳನ್ನು ಡಿಮೋಟ್ ಮಾಡಲು ಮುಂದಾಗಿದೆ. ಈ ಮೂಲಕ ತನ್ನ ಪ್ರೋಮೋಷನ್ ಗೆ ಮಾತ್ರವೇ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಈ ಮಾದರಿ ಎಂಗೇಜ್ ಮೆಂಟ್ ಫೊಸ್ಟ್ ಗಳನ್ನು ಕಂಡು ಹಿಡಿಯುವ ಸಲುವಾಗಿ ಕೃತಕ ಬುದ್ದಿ ಮತ್ತೆ ಮತ್ತು ಯಾಂತ್ರಿಕ ಬುದ್ದಿಮತ್ತೆಯ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದೆ. ಈ ಎರಡು ಬುದ್ದಿ ಮತ್ತೆಯ ಸಹಾಯದಿಂದ ಫೇಸ್ ಬುಕ್ ಡಿಮೋಟ್ ಅನ್ನು ಶೀಘ್ರವೇ ಶುರು ಮಾಡಲಿದೆ ಎನ್ನಲಾಗಿದೆ.

ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು? ಪ್ರತಿಯೊಬ್ಬರು ತಿಳಿಯಲೇಬೇಕು!ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು? ಪ್ರತಿಯೊಬ್ಬರು ತಿಳಿಯಲೇಬೇಕು!

ಇದು ಬಿಸ್ನಸ್ ಮಾಡುತ್ತಿರುವವರಿಗೆ ಹೊಡೆತ ನೀಡಲಿದ್ದು, ಫೇಸ್ ಬುಕ್ ಗೇ ಹಣವನ್ನು ಪಾವತಿ ಮಾಡದೆ ಯಾವುದೇ ರೀತಿಯಲ್ಲಿಯೂ ತಮ್ಮ ಫೋಸ್ಟ್ ಗಳನ್ನು ಹೆಚ್ಚಿನ ರೀಚ್ ಮಾಡಿಕೊಳ್ಳಲು ಸಾಧ್ಯವಾಗದಂತೆ ತಡೆಯುವ ಕೆಲಸವನ್ನು ಮಾಡಲು ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.

Best Mobiles in India

Read more about:
English summary
Facebook has announced that they will start demoting individual posts from people and Pages that use engagement bait.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X