ಫೇಸ್ ಬುಕ್ ನಿಂದ ವಿಡಿಯೋ ಮಾಡುವುದಲ್ಲೇ ಮತ್ತೊಂದು ಹೊಸ ಆಪ್ ಬಿಡುಗಡೆ

By Lekhaka
|

ಈ ಹಿಂದೆಯೇ ಫೇಸ್ ಬುಕ್ ವಿಡಿಯೋಗಾಗಿಯೇ ಹೊಸದೊಂದು ಆಯ್ಕೆಯನ್ನು ನೀಡಲಿದ್ದು, ಯೂಟ್ಯೂಬ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿತ್ತು. ಈಗ ಇದೇ ಪ್ರಕ್ರಿಯೇಯಲ್ಲಿ ಫೇಸ್ ಬುಕ್ ಹೊಸದೊಂದು ಆಪ್ ಅನ್ನು ನಿರ್ಮಾಣ ಮಾಡಿದ್ದು, ಪ್ಲೇ ಸ್ಟೋರಿನಲ್ಲಿ ಬಿಡುಗಡೆ ಮಾಡಿದೆ. ಅಲ್ಲದೇ ಇದನ್ನು ಕೆಲವೇ ಮಂದಿಗೆ ಮಾತ್ರ ಬಳಕೆಗೆ ನೀಡಿದೆ.

ಫೇಸ್ ಬುಕ್ ನಿಂದ ವಿಡಿಯೋ ಮಾಡುವುದಲ್ಲೇ ಮತ್ತೊಂದು ಹೊಸ ಆಪ್ ಬಿಡುಗಡೆ

ವಿಡಿಯೋ ಕ್ರಿಯೇಟಿಂಗ್ ಆಪ್ ವೊಂದನ್ನು ಲಾಂಚ್ ಮಾಡಿರುವ ಫೇಸ್ ಬುಕ್, ವಿಡಿಯೋಗಳನ್ನು ನಿರ್ಮಿಸುವುದಕ್ಕಾಗಿಯೇ ಈ ಆಪ್ ಅನ್ನು ನಿರ್ಮಾಣ ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಇದನ್ನು ಕೇಲವ ಸೆಲೆಬ್ರಿಟಿ ಗಳಿಗೆ ಮತ್ತು ಸೋಶಿಯಲ್ ಮೀಡಿಯಾ ದಲ್ಲಿ ಹೆಚ್ಚು ಆಕ್ಟೀವ್ ಆಗಿರುವವರಿಗೆ ಮಾತ್ರವೇ ನೀಡಿದೆ.

ಲೈವ್ ಕ್ರಿಯೇಟಿವ್ ಕಿಟ್:

ಲೈವ್ ಕ್ರಿಯೇಟಿವ್ ಕಿಟ್:

ಇದು ಲೈವ್ ವಿಡಿಯೋಗಳನ್ನು ಮಾಡಲು ಬಳಕೆ ಮಾಡಿಕೊಳ್ಳಬಹುದಾಘಿದೆ. ಇದು ಗ್ರಾಫಿಕ್ ಫ್ರೇಮ್ ಗಳನ್ನು ಒಳಗೊಂಡಿದ್ದು, ಅಲ್ಲದೇ ಕೇಲವು ಲೈವ್ ಸ್ಟಿಕರ್ ಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಕಮ್ಯೂನಿಟಿ ಟ್ಯಾಬ್:

ಕಮ್ಯೂನಿಟಿ ಟ್ಯಾಬ್:

ಇದಲ್ಲದೇ ಈ ಆಪ್ ನಲ್ಲಿ ಕಮ್ಯೂನಿಟಿ ಟ್ಯಾಬ್ ಅನ್ನು ನೀಡಲಾಗಿದೆ. ಇದರಲ್ಲಿ ವಿಡಿಯೋ ಗಳನ್ನು ಕನರ್ವಟ್ ಮಾಡಿ ಫ್ಯಾನ್ ಗಳೊಂದಿಗೆ ಹಂಚಿಕೊಳ್ಳುವ ಆಯ್ಕೆಯನ್ನು ನೀಡಿದೆ

ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!

ಕ್ಯಾಮೆರಾ ಮತ್ತು ಸ್ಟೋರಿಸ್:

ಕ್ಯಾಮೆರಾ ಮತ್ತು ಸ್ಟೋರಿಸ್:

ಇದರಲ್ಲಿ ಕ್ಯಾಮೆರಾ ಎಫೆಕ್ಟ್ ಮತ್ತು ಫ್ರೇಮ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಫೇಸ್ ಬುಕ್ ಸ್ಟೋರಿಗಳನ್ನು ಕ್ರಿಯೇಟ್ ಮಾಡಲು ಇದು ಸಹಾಯಕಾರಿಯಾಗಿದೆ. ಇದರಿಂದ ನಿಮ್ಮ ಫೇಸ್ ಬುಕ್ ಸ್ಟೋರಿ ಮತ್ತಷ್ಟು ಸುಂದರವಾಗಲಿದೆ

ಇನ್ ಸೆಟ್ಸ್:

ಇನ್ ಸೆಟ್ಸ್:

ಫೇಸ್ ಬುಕ್ ಅನಲಿಟಿಕ್ಸ್ ಮಾದರಿಯಲ್ಲಿ ಬಳಕೆದಾರರು ತಮ್ಮ ಸಂಖ್ಯೆಗಳನ್ನು ತಾವೇ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಫೇಸ್ ಬುಕ್ ಅನಲಿಟಿಕ್ಸ್ ಸಹ ಪಡೆಯಬಹುದಾಗಿದೆ.

ಇದಲ್ಲದೇ ಈ ಆಯ್ಕೆಗಳು ಫೇಸ್ ಬುಕ್ ವೆಬ್ ಬಳಕೆದಾರರಿಗೂ ದೊರೆಯಲಿದೆ. ಅಲ್ಲದೇ ಅಲ್ಲಿಯೂ ಫೇಸ್ ಬುಕ್ ವಿಡಿಯೋ ಗಳನ್ನು ಮತ್ತಷ್ಟು ಸುಂದರಗೊಳಿಸಬಹುದಾಗಿದೆ.

Best Mobiles in India

Read more about:
English summary
Currently, Facebook Video Creator app is only available for iOS users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X