50 ಮಿಲಿಯನ್ ಡೌನ್ ಲೋಡ್ ಕಂಡ ಫೇಸ್ ಬುಕ್ ಮೆಸೆಂಜರ್ ಲೈಟ್ ಆಪ್

Written By: Lekhaka

ಫೇಸ್ ಬುಕ್ ಮೆಸೆಂಜರ್ ಲೈಟ್ ಆಪ್ ಜುಲೈ ಮಧ್ಯ ಭಾಗದಲ್ಲಿ ಭಾರತದಲ್ಲಿ ಲಾಂಚ್ ಆಗಿತ್ತು. ಇನ್ನು ತಿಂಗಳು ಕಳೆಯುವ ಹೊತ್ತಿಗೆ ಸುಮಾರು 50 ಮಿಲಿಯನ್ ಡೌನ್ ಲೋಡ್ ಸಂಖ್ಯೆಯನ್ನು ತಲುಪಿದೆ ಅದುವೇ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿದ ಸಂಖ್ಯೆಯಾಗಿದೆ.

50 ಮಿಲಿಯನ್ ಡೌನ್ ಲೋಡ್ ಕಂಡ ಫೇಸ್ ಬುಕ್ ಮೆಸೆಂಜರ್ ಲೈಟ್ ಆಪ್

ಫೇಸ್ ಬುಕ್ ಲೈಟ್ ಆಪ್ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫೇಸ್ ಬುಕ್ ಮೆಸೆಂಜರ್ ಲೈಟ್ ಆಪ್ ಲೋ ಕ್ವಾಲಿಟಿ ನೆಟ್ವರ್ಕ್ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾಗಿದೆ. ಕೇವಲ 6 ವಾರಗಳಲ್ಲಿ ಈ ಆಪ್ 50 ಮಿಲಿಯನ್ ಡೌನ್ ಲೋಡ್ ಗುರಿಯನ್ನು ಮುಟ್ಟಿದೆ.

ಈ ಆಪ್ ಸುಮಾರು 100 ದೇಶಗಳಲ್ಲಿ ಬಳಕೆಗೆ ಲಭ್ಯವಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಇದನ್ನು ತಮ್ಮ ಫೋನ್ ಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಕೇವಲ 10 MB ಸೈಜ್ ನಲ್ಲಿದ್ದು, ಆಂಡ್ರಾಯ್ಡ್ 2.3 ನಲ್ಲಿಯೂ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಇದರಲ್ಲಿ ಬಳಕೆದಾರರು ಟೆಕ್ಸ್, ಫೋಟೋ, ಎಮೋಜಿ, ಲಿಂಕ್ ಗಳನ್ನು ಕಳುಹಿಸಬಹುದಾಗಿದ್ದು, ಅಲ್ಲದೇ ಸ್ಟೀಕರ್ ಗಳನ್ನು ಸೆಂಡ್ ಮಾಡಬಹುದಾಗಿದೆ. ಇದಲ್ಲದೇ ವಾಯ್ಸ್ ಕಾಲಿಂಗ್ ಮಾಡಲು ಸಹ ಇದರಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ.

BSNL ನಿಂದ ಮತ್ತೊಂದು ಬೊಂಬಾಟ್ ಆಫರ್ ಘೋಷಣೆ.!

ಫೇಸ್ ಬುಕ್ ಮೆಸೆಂಜರ್ ದೊಡ್ಡ ಆಪ್ ಹಾಗಿದ್ದು, ಹೆಚ್ಚಿನ ಡೇಟಾ ಹಾಗೂ ಮೆಮೊರಿಯನ್ನು ಬೇಡಲಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ಮೆಸೆಂಜರ್ ಲೈಟ್ ಆಪ್ ಅನ್ನು ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ.

English summary
The Facebook Messenger Lite app has surpassed the 50 million download mark on the Google Play Store.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot