ಫೇಸ್ ಬುಕ್ ಮೆಸೆಂಜರ್ ಆಪ್ ಬಳಕೆದಾರರೇ ಎಚ್ಚರ.!

Written By: Lekhaka

ಇಂದಿನ ದಿನದಲ್ಲಿ ಸೈಬರ್ ಅಟ್ಯಾಕ್ ಗಳು ಹೆಚ್ಚಾಗುತ್ತಿದೆ. ಅಲ್ಲದೇ ಆಪ್ ಗಳು ಸಹ ಅನೇಕ ಮಾಲ್ವೆರ್ ದಾಳಿಗೆ ತುತ್ತಾಗುತ್ತಿದೆ. ಇದೇ ಮಾದರಿಯಲ್ಲಿ ಆಡ್ ವೇರ್ ಮತ್ತು ಮಾಲ್ವೇರ್ ಲಿಂಕ್ ಗಳು ಫೇಸ್ ಬುಕ್ ಮೇಸೆಂಜರ್ ನಲ್ಲಿ ಸಾಕಷ್ಟು ಹರಿದಾಡುತ್ತಿದೆ.

ಫೇಸ್ ಬುಕ್ ಮೆಸೆಂಜರ್ ಆಪ್ ಬಳಕೆದಾರರೇ ಎಚ್ಚರ.!

ಸೈಬರ್ ಕ್ರಿಮಿನಲ್ ಗಳು ಫೇಸ್ ಬುಕ್ ಮೇಸೆಂಜರ್ ಆಪ್ ಅನ್ನು ಬಳಕೆ ಮಾಡಿಕೊಂಡು ಆಡ್ ವೇರ್ ಅನ್ನು ಹರಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರಿಗೆ ಲಿಂಕ್ ಗಳನ್ನು ಕಳುಹಿಸುತ್ತಿದ್ದಾರೆ ಅದುವೇ ಜನಪ್ರಿಯ ವೆಬ್ ತಾಣಗಳ ನಕಲಿ ಹೆಸರಿನಲ್ಲಿ. ಇದರಿಂದ ಹಣ ಮಾಡಲು ಮುಂದಾಗಿದ್ದಾರೆ.

10 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಲೈಕ್ ವಿಡಿಯೋ ಸ್ಟ್ರಿಮಿಂಗ್ ಆಪ್

ಜನರು ತಮಗೆ ಅರಿಯದಂತೆ ಆಡ್ ವೇರ್ ಗಳ ಮೇಲೆ ಕ್ಲಿಕ್ ಮಾಡಿ ವೆಬ್ ತಾಣಗಳನ್ನು ಓಪನ್ ಮಾಡುತ್ತಾರೆ ಇದರಿಂದ ಸೈಬರ್ ಕ್ರಿಮಿನಲ್ ಗಳು ಹಣ ಮಾಡುತ್ತಿದ್ದಾರೆ. ಬಳಕೆದಾರರೂ ಮೋಸಹೋಗುತ್ತಿದ್ದಾರೆ. ಇಲ್ಲದೇ ಈ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಅಪಹರಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.

ಹಾಗಾಗಿ ಫೇಸ್ ಬುಕ್ ಮೆಸೇಂಜರ್ ಆಪ್ ಬಳಕೆದಾರರು ಎಚ್ಚರದಿಂದ ಇರುವುದು ಒಳ್ಳೆಯದು. ವಿಡಿಯೋ, ಮೆಮೆಸ್ ಮತ್ತು ಇತರೇ ಅಪರಿಚಿತ ಲಿಂಕ್ ಗಳನ್ನು ತೆರೆಯದೆ ಇರುವುದೇ ಉತ್ತಮವಾಗಿದೆ.

ಈ ಆಡ್ವೇರ್ ಮತ್ತು ಮಾಲ್ವೇರ್ ಗಳ ಹಿಂದೆ ದೊಡ್ಡ ಮೋಸದ ಜಾಲವೇ ಇದೆ. ಹಾಗಾಗಿ ಫೇಸ್ ಬುಕ್ ನಲ್ಲಿ ಅಪರಿಚಿತರಿಂದ ದೂರ ಊಳಿಯುವುದು ಮತ್ತು ಅಪರಿಚಿತ ಲಿಂಕ್ ಗಳನ್ನು ತೆರೆಯದೆ ಇರುವುದು ಒಳ್ಳೆಯದು. ನೀವು ಎಚ್ಚರವಾಗಿರಿ, ಬೇರೆಯವರನ್ನು ಎಚ್ಚರಿಸಿ.Read more about:
English summary
Facebook Messenger is plagued and rigged with malicious links that basically spread Malware among the users.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot