ಫೇಸ್‌ಬುಕ್ ಆಗುತ್ತಿದೆ ಅಪ್‌ಡೇಟ್..ಏನಿದು ಹೊಸ ವೀಕ್ಷಕ ಅಳತೆಯ ಲೆಕ್ಕಾಚಾರ?

Written By:

ಪ್ರತಿದಿನವು ಏನಾದರೂ ಬದಲಾವಣೆಯನ್ನು ತರುತ್ತಿರುವ ಫೇಸ್‌ಬುಕ್. ಇನ್ನು ಫೆಸ್‌ಬುಕ್‌ನಲ್ಲಿ ವಿಡಿಯೋ ನೋಡುವವರ ಸಂಖ್ಯೆಯನ್ನು ಬೇರೆಯದೇ ರೀತಿಯಲ್ಲಿ ಲೆಕ್ಕಹಾಕಲು ನಿರ್ಧರಿಸಿದೆ. ಈ ಮೊದಲು ಇದ್ದ ವೀಕ್ಷಕರ ಅಳೆಯುವ ಮಾದರಿಯನ್ನು ಬದಲಿಸಿ ಪ್ರತಿ ವ್ಯಕ್ತಿ ವಿಡಿಯೋ ನೋಡಿದ ಸಮಯದ ಮೇಲೆ ಆ ವಿಡಿಯೋಗೆ ರ್ಯಾಂಕಿಂಗ್ ನೀಡಲು ಚಿಂತಿಸಿದೆ.

ಬಳಕೆದಾರರ ವಿಡಿಯೋಗಳನ್ನು ಬಳಸಿಕೊಂಡು, ಅದರಲ್ಲಿ ಜಾಹಿರಾತು ಪ್ರಕಟಿಸಿ ವಿಡಿಯೋ ಮಾಲಿಕರಿಗೆ ಹಣವನ್ನು ನೀಡಲು ಮುಂದಾಗಿರುವ ಫೇಸ್‌ಬುಕ್ ಅದಕ್ಕಾಗಿ ತನ್ನ ವಿಡಿಯೋ ನೋಡುವ ವೀಕ್ಷಕರ ಲೆಕ್ಕಾಚಾರವನ್ನು ಬದಲಾವಣೆ ಮಾಡಿದೆ. ಹಾಗಾಗಿ, ಯೂಟ್ಯೂಬ್‌ ರೀತಿಯಲ್ಲಿ ಫೆಸ್‌ಬುಕ್ ಸಹ ಒಂದು ಚಾನಲ್ ರೀತಿಯಲ್ಲಿ ಬದಲಾಗುವ ಕಾಲ ಬಹಳದೂರವಿಲ್ಲ.!

ಫೇಸ್‌ಬುಕ್ ಆಗುತ್ತಿದೆ ಅಪ್‌ಡೇಟ್..ಏನಿದು ಹೊಸ ವೀಕ್ಷಕ ಅಳತೆಯ ಲೆಕ್ಕಾಚಾರ?

ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

ಈ ಬಗ್ಗೆ ಫೆಸ್‌ಬುಕ್‌ ಕಂಪೆನಿ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ಫೆಸ್‌ಬುಕ್‌ ವಿಡಿಯೋ ವೀಕ್ಷಕರ ಲೆಕ್ಕವನ್ನು ಅಳೆಯುವುದನ್ನು ನಾವು ಬದಲಿಸುತ್ತಿದ್ದೇವೆ. ವಿಡಿಯೋ ನೋಡಿದ ಪ್ರಮಾಣದ ಮೇಲೆ ಇನ್ನು ವೀಕ್ಷಕರ ಸಂಖ್ಯರ ನಿರ್ಧರಿಸಲಾಗುತ್ತದೆ ಎಂದು ಹೇಳಿಕೊಂಡಿದೆ. ಇನ್ನು ಇದಕ್ಕೆ ಪರ್ಸೆಂಟ್ ಕಂಪ್ಲೀಷನ್ (percent completion) ಹೆಸರಿಟ್ಟಿದೆ.

ಫೇಸ್‌ಬುಕ್ ಆಗುತ್ತಿದೆ ಅಪ್‌ಡೇಟ್..ಏನಿದು ಹೊಸ ವೀಕ್ಷಕ ಅಳತೆಯ ಲೆಕ್ಕಾಚಾರ?

ವೀಕ್ಷಕರ ಅಳೆಯುವ ಮಾದರಿಯನ್ನು ಬದಲಿಸಿದ್ದು, ಗ್ರಾಹಕರು ಯಾವ ವಿಡಿಯೋವನ್ನು ಹೆಚ್ಚು ನೋಡಿ ಖುಷಿಯನ್ನು ಪಡೆಯುತ್ತಾರೆ ಎನ್ನುವುದನ್ನು ತಿಳಿಯುವುದಕ್ಕೆ ಮಾತ್ರ. ಜನರಿಗಾಗಿ ಈ ರೀತಯ ಬದಲಾವಣೆ ಮಾಡುತ್ತಿರುವುದು ಎಂದು ಉಪಾಯದ ಹೇಳಿಕೆ ನೀಡಿದೆ.

English summary
The social network will adjust the value of videos based on how much was watched.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot