ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

Written By:

ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಜನರಿಗೆ ಹುಚ್ಚು ಹಿಡಿಸಿದಂತಿದೆ.! ಹೌದು, ಇತ್ತ ಆಂಡ್ರಾಯ್ಡ್ ವರ್ಷನ್‌ ಸಹ ಬೇಕು. ಅತ್ತ ನೋಕಿಯಾ ಕಂಪೆನಿ ಸಹ ಬೇಕು ಎಂದು ಕಾದು ಕುಳಿತಿದ್ದ ಸ್ಮಾರ್ಟ್‌ಫೋನ್‌ ಪ್ರಿಯರು "ನೋಕಿಯಾ 6" ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಮುಗಿಬಿದ್ದಿದ್ದಾರೆ.!!

ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ದಾಖಲೆ ಮಾಡುತ್ತಿರುವ ನೋಕಿಯಾ 6 ಸ್ಮಾರ್ಟ್‌ಫೊನ್ ಈ ಬಾರಿ ಎರಡನೇ ಫ್ಲಾಶ್‌ಸೇಲ್‌ನಲ್ಲಿ ನಿರ್ಮಿಸಿರುವ ದಾಖಲೆ ನೋಡಿದರೆ ಒಮ್ಮೆ ಎಲ್ಲರೂ ದಂಗಾಗುವಂತೆ ಇದೆ.! ಹೌದು, ನೋಕಿಯಾ 6 ಸ್ಮಾರ್ಟ್‌ಫೋನ್‌ ಖರೀದಿಸಲು ಕೇವಲ ಒಂದು ನಿಮಿಷದಲ್ಲಿ 1.4 ದಶಲಕ್ಷ ಸ್ಮಾರ್ಟ್‌ಫೋನ್ ಬುಕ್ ಆಗಿದೆ.!

 ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

ಫ್ಲಾಶ್‌ಸೇಲ್‌ನಲ್ಲಿ 10,999 ರೂ,ಗೆ 4GB RAM "ಲೆನೊವೂ ಕೆ6 ಪವರ್‌" ಸ್ಮಾರ್ಟ್‌ಫೋನ್!!

ಚೀನಾದ jd.com ನಲ್ಲಿ ಮಾರಾಟಕ್ಕಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಹೀಗಿದ್ದೂ ಕೂಡ ಪ್ರತಿ ಸೇಲ್‌ನಲ್ಲಿಯೋ ನೋಕಿಯಾ 6 ಗೆ ಬಾರಿ ಬೇಡಿಕೆ ಬರುತ್ತಿದೆ ಎಂದು jd.com ಹೇಳಿದೆ.

 ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

ಪ್ರಸ್ತುತ ನೋಕಿಯಾ ಸ್ಮಾರ್ಟ್‌ಫೋನ್ ಕಡಿಮೆಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ ಹೊಂದಿ ಮಾರುಕಟ್ಟೆಗೆ ಬಿಡುಗಡೆಗೊಂಡಿದಡ. 5.5 ಇಂಚ್ ಸ್ಕ್ರೀನ್ 4GB RAM ಹೊಂದಿರುವ ನೋಕಿಯಾ 6 ಸ್ಮಾರ್ಟ್‌ಫೋನ್‌ ಬೆಲೆ 16,000 ರೂಪಾಯಿಗಳ ಆಸುಪಾಸಿನಲ್ಲಿದೆ. ಇನ್ನು ನೋಕಿಯಾ 6 ಮಾರ್ಚ್‌ 21 ಕ್ಕೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ ಎನ್ನುವ ರೂಮರ್ಸ್ ಹರಿದಾಡಿದೆ.!!

English summary
ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ದಾಖಲೆ ಮಾಡುತ್ತಿರುವ ನೋಕಿಯಾ 6 ಸ್ಮಾರ್ಟ್‌ಫೊನ್ ಈ ಬಾರಿ ಎರಡನೇ ಫ್ಲಾಶ್‌ಸೇಲ್‌ನಲ್ಲಿ ನಿರ್ಮಿಸಿರುವ ದಾಖಲೆ ನೋಡಿದರೆ ಒಮ್ಮೆ ಎಲ್ಲರೂ ದಂಗಾಗುವಂತೆ ಇದೆ.!
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot