ಹೊಸ ಮಾದರಿ ಟೈಪಿಂಗ್ ಅನುಭವ ನೀಡಲಿದೆ ಗೂಗಲ್ ಜಿ ಬೋರ್ಡ್..!

By GizBot Bureau
|

ತನ್ನ ಬಳಕೆದಾರರಿಗೆ ಎಂದಿಗೂ ಹೊಸ ಮಾದರಿಯ ಸೇವೆಯನ್ನು ನೀಡಲು ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಗೂಗಲ್, ಈ ಬಾರಿ ತನ್ನ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಸಹಾಯವಾಗುವಂತೆ ತನ್ನ ಜಿ ಬೋರ್ಡ್ ಕೀಪ್ಯಾಡ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲು ಮುಂದಾಗಿದೆ. ಇಷ್ಟು ದಿನ ವಿವಿಧ ಮಾದರಿಯಲ್ಲಿ ಟೈಪ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದ ಗೂಗಲ್ ಈ ಬಾರಿ ಮೊರ್ಸೆ ಕೋಡ್ ಮೂಲಕ ಟೈಪ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಹೊಸ ಮಾದರಿ ಟೈಪಿಂಗ್ ಅನುಭವ ನೀಡಲಿದೆ ಗೂಗಲ್ ಜಿ ಬೋರ್ಡ್..!

ಇದು ಮೊಬೈಲ್ ಟೈಪಿಂಗ್ ವಿಭಾಗದಲ್ಲಿ ಹೊಸ ಮಾದರಿಯ ಕ್ರಾಂತಿಯನ್ನು ಉಂಟು ಮಾಡಲಿದೆ ಎನ್ನುವ ಮಾತು ಎಲ್ಲಾ ಕಡೆಗಳಿಂದ ಕೇಳಿ ಬಂದಿದೆ. ಇಷ್ಟು ದಿನ ಕ್ವರ್ಟಿ ಕೀ ಪ್ಯಾಡಿನಲ್ಲಿ ಟೈಪ್ ಮಾಡಿದ ಬಳಕೆದಾರರಿಗೆ ಹೊಸ ಮಾದರಿಯ ಟೈಪಿಂಗ್ ಅನುಭವನ್ನು ಗೂಗಲ್ ಮಾಡಿಕೊಡುತ್ತಿದೆ. ಇದರ ಬಳಕೆಗಾಗಿ ಬಳಕೆದಾರರು ತಮ್ಮ ಜಿ ಬೋರ್ಡ್ ಅನ್ನು ಆಪ್ ಡೇಟ್ ಮಾಡಿಕೊಳ್ಳಬೇಕಾಗಿದೆ.

ಮೋರ್ಸ್ ಕೋರ್ಡ್ ಈ ಹಿಂದೆ 30 ವರ್ಷ ಗಳ ಹಿಂದೆಯೇ ಬಳಕೆಯಲ್ಲಿತ್ತು ಎನ್ನಲಾಗಿದೆ. ಇದನ್ನು ಇನ್ನಷ್ಟು ಪ್ರಮಾಣದಲ್ಲಿ ಬಳಕೆಗೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಲು ಗೂಗಲ್ ಮುಂದಾಗಿದೆ. ಇದಲ್ಲದೇ ಬಳಕೆದಾರಿಗೆ ಹೊಸ ಮಾದರಿಯಲ್ಲಿ ಬಳಕೆಯ ಅನುಭವನ್ನು ನೀಡಲಿದೆ.

ಹೊಸ ಮಾದರಿ ಟೈಪಿಂಗ್ ಅನುಭವ ನೀಡಲಿದೆ ಗೂಗಲ್ ಜಿ ಬೋರ್ಡ್..!

ಮೂರ್ಸ್ ಕೋಡ್ ಅನ್ನು ಬಳಕೆ ಮಾಡಿಕೊಳ್ಳುವುದು ಹೇಗೆ..?

ನೀವು ಆಂಡ್ರಾಯ್ಡ್ ಮತ್ತು iOSಗಳಲ್ಲಿ ಬಳಕೆಯಾಗುತ್ತಿರುವ ಜಿ ಬೋರ್ಡ್ ನಲ್ಲಿ ಬಳಕೆದಾರರಿಗೆ ಈ ಹೊಸ ಸೇವೆಯನ್ನು ಬಳೆಕಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

- ಮೊದಲಿಗೆ ಜಿ ಬೋರ್ಡ್ ನಲ್ಲಿ ಲಾನ್ ಗ್ವೇಜ್ ಮತ್ತು ಇನ್ ಪುಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

- ನಂತರ ವರರ್ಚುವಲ್ ಕೀ ಬೋರ್ಡ್ ಸೆಲೆಕ್ಟ್ ಮಾಡಿಕೊಳ್ಳಿ.

- ನಂತರದಲ್ಲಿ ಜಿ ಬೋರ್ಡ್ ಸೆಲೆಕ್ಟ್ ಮಾಡಿಕೊಳ್ಳಿ.

- ನಂತರದಲ್ಲಿ ಲಾಗ್ವೇಜ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ

- ನಂತರದಲ್ಲಿ ಇಂಗ್ಲೀಷ್ ನಿಂದ ಮೋರ್ಸ್ ಕೋಡ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಬಳಕೆದಾರರಿಗೆ ಗೂಗಲ್ ಹೊಸ ಮಾದರಿಯ ಸೇವೆಯನ್ನು ನೀಡುತ್ತಲೇ ಬಂದಿದೆ. ಅದನ್ನು ಬಳಕೆ ಮಾಡಿಕೊಂಡು ಮುಂದುವರೆಯುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು, ಟೆಕ್ನಲಾಜಿಯನ್ನು ನಮ್ಮ ಉಪಯೋಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೂಗಲ್ ಸುಲಭ ಮಾಡುವ ಕಾರ್ಯವನ್ನು ಮಾಡುತ್ತಿದೆ.

Best Mobiles in India

English summary
Gboard Now Lets You Communicate Through Morse Code On Both Android & iOS. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X