ಮ್ಯಾಪ್ ನಲ್ಲೇ ಫುಡ್ ಆರ್ಡರ್ ಮಾಡಲು ಅವಕಾಶ ನೀಡಿದ ಗೂಗಲ್

By Gizbot Bureau
|

ಹೆಚ್ಚುವರಿ ಆಪ್ ಗಳನ್ನು ನಿಮ್ಮ ಮೊಬೈಲಿಗೆ ತುಂಬಿಸಿಕೊಳ್ಳಬೇಕಾಗಿರುವ ಅಗತ್ಯತೆಯನ್ನು ಗೂಗಲ್ ಕಡಿಮೆಗೊಳಿಸುತ್ತಿದೆ. ಹುಡುಕಾಟ ದೈತ್ಯ ಎಂದು ಕರೆಸಿಕೊಳ್ಳುವ ಗೂಗಲ್ ಮ್ಯಾಪ್ ನಲ್ಲೇ ಇನ್ನು ಮುಂದೆ ನೀವು ಫುಡ್ ಆರ್ಡರ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಅಥವಾ ಗೂಗಲ್ ಅಸಿಸ್ಟೆಂಟ್ ಬಳಸಿ ನೀವು ಡೆಲಿವರಿ ಕಂಪೆನಿಗಳ ಜೊತೆಗಿನ ಸಹಭಾಗಿತ್ವದಿಂದಾಗಿ ಆಹಾರ ಪದಾರ್ಥಗಳನ್ನು ಖರೀದಿಸಬಹುದು.

ಫುಡ್ ಆರ್ಡರ್ ಗೆ ಅವಕಾಶ ನೀಡಲಿರುವ ಮ್ಯಾಪ್:

ಫುಡ್ ಆರ್ಡರ್ ಗೆ ಅವಕಾಶ ನೀಡಲಿರುವ ಮ್ಯಾಪ್:

ಗೂಗಲ್ ಹೊಸದಾಗಿ ಆರ್ಡರ್ ಆನ್ ಲೈನ್ ಬಟನ್ ನ್ನು ಸರ್ಚ್ ನಲ್ಲಿ ಸೇರಿಸಿದೆ. ರೆಸ್ಟೋರೆಂಟ್ ಗಳ ಹುಡುಕಾಟವನ್ನು ಮ್ಯಾಪ್ ನಲ್ಲಿ ಬಳಕೆದಾರರು ಹುಡುಕಿದಾಗ ಆ ಹೊಟೆಲ್ ನಲ್ಲಿ ಆರ್ಡರ್ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತದೆ.

ಮ್ಯಾಪ್ ನಲ್ಲೇ ಡೆಲಿವರಿ ಆಯ್ಕೆ:

ಮ್ಯಾಪ್ ನಲ್ಲೇ ಡೆಲಿವರಿ ಆಯ್ಕೆ:

ಬಳಕೆದಾರರು ಪಿಕ್ ಅಪ್ ಮತ್ತು ಡೆಲಿವರಿಯನ್ನು ಆಯ್ಕೆ ಮಾಡಬಹುದು ಮತ್ತು ಅವರು ಯಾವ ಫುಡ್ ನ್ನು ಬಯಸುತ್ತಾರೆ ಎಂಬುದನ್ನು ಗೂಗಲ್ ಸರ್ಚ್ ನಲ್ಲೇ ಸೆಲೆಕ್ಟ್ ಮಾಡಬಹುದು. ಒಂದು ವೇಳೆ ಆ ರೆಸ್ಟೋರೆಂಟ್ ಇವರ ಆರ್ಡರ್ ಗೆ ಬೆಂಬಲ ನೀಡಿದರೆ, ಗೂಗಲ್ ಪೇ ಮತ್ತು ಗೂಗಲ್ ಇಂಟರ್ ಫೇಸ್ ಗಳ ಮೂಲಕವೇ ಸಂಪೂರ್ಣ ಪ್ರೊಸೀಜರ್ ನ್ನು ನಿರ್ವಹಿಸಲಾಗುತ್ತದೆ. ಅಂದರೆ ಪಾವತಿ ಕೂಡ ಗೂಗಲ್ ನಲ್ಲೇ ನಡೆಯುತ್ತದೆ.

ಗೂಗಲ್ ಅಸಿಸ್ಟೆಂಟ್ ಸಹಾಯ:

ಗೂಗಲ್ ಅಸಿಸ್ಟೆಂಟ್ ಸಹಾಯ:

ಗೂಗಲ್ ಅಸಿಸ್ಟೆಂಟ್ ನ ಸಹಾಯವನ್ನು ಬೇಕಿದ್ದರೂ ಬಳಕೆದಾರರು ಪಡೆದುಕೊಳ್ಳಬಹುದು. ಆದರೆ, ಗೂಗಲ್ ಅಸಿಸ್ಟೆಂಟ್ ಅನೇಬಲ್ ಆಗಿರುವ ಸ್ಮಾರ್ಟ್ ಸ್ಪೀಕರ್ ಮತ್ತು ಸ್ಮಾರ್ಟ್ ಡಿಸ್ಪ್ಲೇಗಳಲ್ಲಿ ಇದು ಕೆಲಸ ಮಾಡುತ್ತದೆಯಾ ಎಂಬ ಬಗ್ಗೆ ಇನ್ನು ಖಚಿತತೆ ಇಲ್ಲ.

ಐದು ವಿಭಿನ್ನ ಡೆಲಿವರಿ:

ಐದು ವಿಭಿನ್ನ ಡೆಲಿವರಿ:

ಐದು ವಿಭಿನ್ನ ರೀತಿಯ ಡೆಲಿವರಿ ಸೇವೆಯನ್ನು ಊಟದ ಸಮಯಕ್ಕಾಗಿ ಇದು ಬೆಂಬಲಿಸುತ್ತದೆ -ಡೋರ್ ಡ್ಯಾಷ್,ಪೋಸ್ಟ್ ಮೇಟ್ಸ್, ಡೆಲಿವರಿ.ಕಾಮ್, ಸ್ಪೈಸ್ ಮತ್ತು ಚೌನೌ ಮತ್ತು ಗೂಗಲ್ ಝುಪ್ಲಿಯರ್(Zuppler) ಗೆ ಬೆಂಬಲ ನೀಡುವುದಕ್ಕೆ ಪ್ಲಾನ್ ಮಾಡಿದೆ ಎಂದು ವರದಿ ಹೇಳುತ್ತಿದೆ.

ಗೂಗಲ್ ಸರ್ಚ್ ನಲ್ಲಿ ಹೊಸ ಡಿಸೈನ್:

ಗೂಗಲ್ ಸರ್ಚ್ ನಲ್ಲಿ ಹೊಸ ಡಿಸೈನ್:

ಇತ್ತೀಚೆಗೆ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಮೊಬೈಲ್ ನ ಸರ್ಚ್ ಇಂಟರ್ ಫೇಸ್ ನಲ್ಲಿ ಹೊಸ ಡಿಸೈನ್ ಮಾಡಲಾಗಿತ್ತು. ಇದರ ಪ್ರಮುಖ ಉದ್ದೇಶ ಬಳಕೆದಾರರಿಗೆ ಏನು ಮತ್ತು ಎಲ್ಲಿಂದ ಎಂಬ ಮಾಹಿತಿಗಳು ಸರಿಯಾಗಿ ಸಿಗಬೇಕು ಗೊಂದಲ ಆಗಬಾರದು ಎಂಬ ಚಿಂತನೆಯಿಂದ ಮಾಡಿದ ಬದಲಾವಣೆ ಇದಾಗಿತ್ತು.

ಯುಸ್ ನಲ್ಲಿ ಮಾತ್ರ:

ಯುಸ್ ನಲ್ಲಿ ಮಾತ್ರ:

ಒಟ್ಟಿನಲ್ಲಿ ಸದ್ಯ ಈ ಸೌಲಭ್ಯವು ಯುಸ್ ನಲ್ಲಿ ಲಭ್ಯವಾಗುತ್ತಿದೆ. ಭಾರತದಲ್ಲಿ ಲಭ್ಯವಾಗಲಿದೆಯಾ ಮುಂದಿನ ದಿನಗಳಲ್ಲಿ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ.

Best Mobiles in India

Read more about:
English summary
Google adds option to order food online on Search, Maps in US -

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X