ಪ್ಲೇ ಸ್ಟೋರಿನಲ್ಲಿ ಗೂಗಲ್ ಅಸಿಸ್ಟೆಂಟ್ ಆಪ್ ಲಭ್ಯ..!

Written By: Lekhaka

ಸರ್ಜ್ ಇಂಜಿನ್ ದೈತ್ಯ ಗೂಗಲ್ ಸದ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಮೊನ್ನೆ ತಾನೆ ಗೂಗಲ್ ಪಿಕ್ಸಲ್ ಫೋನ್ ಗಳನ್ನು ಲಾಂಚ್ ಮಾಡುವ ಮೂಲಕ ಸುದ್ದಿಯಲ್ಲಿತ್ತು. ಸದ್ಯ ತನ್ನ ಅಸಿಸ್ಟೆಂಟ್ ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಲಾಂಚ್ ಮಾಡುವ ಮೂಲಕ ತನ್ನ ಆಪ್ ಅನ್ನು ಹಲವರು ಬಳಸಿಕೊಳ್ಳುವಂತೆ ಮಾಡಿಕೊಡಲು ಮುಂದಾಗಿದೆ.

ಪ್ಲೇ ಸ್ಟೋರಿನಲ್ಲಿ ಗೂಗಲ್ ಅಸಿಸ್ಟೆಂಟ್ ಆಪ್ ಲಭ್ಯ..!

ಆದರೆ ಇದು ವಾಯ್ಸ್ ಆಸಿಸ್ಟೆಂಟ್ ಸನ್ನು ಅನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದ್ದು, ಇದು ನಿಮ್ಮ ಮೊಬೈಲ್ ನಲ್ಲಿರುವ ಅಸಿಸ್ಟೆಂಟ್ ಆಪ್ ಅನ್ನು ಓಪನ್ ಮಾಡಲು ಮಾತ್ರವೇ ಶಾರ್ಟ್ ಕಟ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಫೊಲೀಸ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಈ ಆಪ್ ನಿಮ್ಮ ಹೊಮ್ ಸ್ಕ್ರಿನ್ ನಲ್ಲಿ ಆಪ್ ಶಾರ್ಟ್ ಕಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಎಲ್ಲಾ ಮಾದರಿಯ ಫೋನ್ ಗಳಿಗೆ ಇದು ಸಪೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ. ಇದು ನಿಮ್ಮ ಫೋನಿನಲ್ಲಿ ಅಸಿಸ್ಟೆಂಟ್ ಆಪ್ ಅನ್ನು ಬಳಕೆ ಮಾಡಿಕೊಳ್ಳಲು ಸಹಾಯ ಮಾಡಲಿದೆ.

2014ರಲ್ಲೇ ಫುಲ್ ಸ್ಕ್ರಿನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದ ವಿಂಡೋಸ್

ಈ ಆಪ್ ಈಗಾಗಲೇ ಗೂಗಲ್ ಅಸಿಸ್ಟೆಂಟ್ ಆಪ್ ಹೊಂದಿರುವ ಸ್ಮಾರ್ಟ್ ಫೋನ್ ಗಳಿಗೆ ಮಾತ್ರವೇ ಸಪೋರ್ಟ್ ಮಾಡಲಿದ್ದು, ಈ ಆಪ್ ಇಲ್ಲದ ಸ್ಮಾರ್ಟ್ ಫೋನ್ ಗಳಿಗೆ ಇದನ್ನು ಇನ್ಟಾಲ್ ಮಾಡಿದರೆ ಯಾವುದೇ ಲಾಭ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಸ್ಮಾರ್ಟ್ ಫೋನ್ ಗಳಲ್ಲಿ ಈ ಗೂಗಲ್ ಅಸಿಸ್ಟೆಂಟ್ ಅಪ್ ಅನ್ನು ಕಾಣಬಹುದಾಗಿದೆ, ಅವುಗಳಲ್ಲಿ ಈ ಆಪ್ ಅನ್ನು ಬಳಕೆ ಮಾಡಿಕೊಂಡರೆ ಹೊಸ ಅನುಭವವು ದೊರೆಯಲಿದೆ.English summary
The Google Assistant app has been launched on the Play Store and works well with the supported Android devices.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot