ಆಟೋ ಚಾಲಕರಿಗೆ ಅನುಕೂಲ ಮಾಡಿಕೊಟ್ಟ ಗೂಗಲ್

|

ಕೆಲವು ಆಯ್ದ ದೇಶಗಳಲ್ಲಿ ಗೂಗಲ್ ಮ್ಯಾಪ್ ಹೆಚ್ಚಿನ ಶ್ರಮವಹಿಸುತ್ತಿದ್ದು, ದೇಶದ ಜನರಿಗೆ ಅನುಕೂಲವಾಗುವ ಕೆಲವು ಫೀಚರ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿ ಭಾರತವೂ ಕೂಡ ಸೇರಿದ್ದು ಇದೀಗ ಗೂಗಲ್ ಮ್ಯಾಪ್ 10.6 ಅಪ್ ಡೇಟ್ ನ ಭಾಗವಾಗಿ ಆಟೋಚಾಲಕರಿಗೆ ಅನುಕೂಲವಾಗುವಂತಹ ವಿಶೇಷ ಫೀಚರ್ ವೊಂದನ್ನು ಬಿಡುಗಡೆಗೊಳಿಸಿದೆ.

ನಿಧಾನವಾಗಿದ್ದ ಸೇವೆ ಇದೀಗ ಚುರುಕು:

ನಿಧಾನವಾಗಿದ್ದ ಸೇವೆ ಇದೀಗ ಚುರುಕು:

ವರದಿಯ ಪ್ರಕಾರ ಗೂಗಲ್ ಮ್ಯಾಪ್ ವಿ10.6.1 ಅಪ್ ಡೇಟ್ ನ್ನು ಆಯ್ದ ಕೆಲವು ಬಳಕೆದಾರರಿಗೆ ಬಿಡುಗಡೆಗೊಳಿಸಿದೆ.ಮಹತ್ವದ ಬದಲಾವಣೆಯನ್ನೇನೂ ಗೂಗಲ್ ತಂದಿಲ್ಲವಾದರೂ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಸೇವೆಯನ್ನು ನಿಧಾನಗತಿಗೆ ತಳ್ಳಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಹಿಡಿದಿದೆ.

ಶೇರಿಂಗ್ ಮೆನು ಫೀಚರ್ ನಲ್ಲಿ ಮರುಕೆಲಸ:

ಶೇರಿಂಗ್ ಮೆನು ಫೀಚರ್ ನಲ್ಲಿ ಮರುಕೆಲಸ:

ವಿ10.6.1 ಅಪ್ ಡೇಟ್ ನಲ್ಲಿ ಗೂಗಲ್ ಮ್ಯಾಪ್ ಶೇರಿಂಗ್ ಮೆನು ಫೀಚರ್ ಬಗ್ಗೆ ಮರುಕೆಲಸವನ್ನು ಮಾಡಿದೆ. ಪ್ರತಿಯೊಂದು ಸೋಷಿಯಲ್ ಐಕಾನ್ ಮತ್ತು ಕೆಲವು ಆಯ್ಕೆಗಳು ಲೋಡ್ ಆಗುವುದಕ್ಕೆ ಇಷ್ಟು ದಿನ ಕೆಲವು ಸೆಕೆಂಡ್ ಗಳೇ ಬೇಕಾಗುತ್ತಿತ್ತು. ಇದೇ ಕಾರಣಕ್ಕೆ ಬಳಕೆದಾರರು ತಪ್ಪಾಗಿ ಬೇರೆ ಆಯ್ಕೆಯನ್ನು ಒತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದೀಗ ಹೊಸ ಅಪ್ ಡೇಟ್ ನಲ್ಲಿ ಹೀಗೆ ಆಗದಂತೆ ಕೆಲವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೊನೆ ಕ್ಷಣದ ಲೋಡಿಂಗ್ ಸ್ಥಗಿತ:

ಕೊನೆ ಕ್ಷಣದ ಲೋಡಿಂಗ್ ಸ್ಥಗಿತ:

ಹೊಸ ಶೇರಿಂಗ್ ಮೆನು ಡಿಸೈನ್ ವರ್ಟಿಕಲ್ ಲೋಡಿಂಗ್ ಸಮಸ್ಯೆಯನ್ನು ಪರಿಹರಿಸಿದೆ. ಗೂಗಲ್ ಮ್ಯಾಪ್ ನಲ್ಲಿ ರೀಡಿಸೈನ್ ಮಾಡಲಾಗಿರುವ ಶೇರ್ ಶೀಟ್ ನಲ್ಲಿ ಕಾಂಟ್ಯಾಕ್ಟ್ ಗಳಿಗೆ ನಿಗದಿತ ಏರಿಳಿಕೆ(carousel) ಇದೆ ಜೊತೆಗೆ ಎರಡನೆಯದು ಸೋಷಿಯಲ್ ಆಪ್ಸ್ ಮತ್ತು ಆಕ್ಷನ್ ಗಳಿಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಕೊನೆ ಕ್ಷಣದಲ್ಲಿ ಶೇರಿಂಗ್ ಪೆನಲ್ ಲೋಡಿಂಗ್ ಆಗುವುದು ನಿಲ್ಲುತ್ತದೆ.

ಕೆಲವು ಸಣ್ಣಪುಟ್ಟ ಬದಲಾವಣೆಯನ್ನು ಕೂಡ ಶೇರ್ ಶೀಟ್ ನಲ್ಲಿ ಗಮನಿಸಬಹುದಾಗಿದ್ದು ಹಳೆಯ ವರ್ಷನ್ ನಲ್ಲಿದ್ದ ಶಾರ್ಪ್ ಕಾರ್ನರ್ ಬದಲಾಗಿ ರೌಂಡೆಡ್ ಕಾರ್ನರ್ ಇದೆ. ಹೆಸರು ತುಂಬಿಸಲು ಇದ್ದ ‘To' ಫೀಲ್ಡ್, ಫೋನ್ ನಂಬರ್ ಮತ್ತು ಇಮೇಲ್ ಮೇಲ್ಬಾಗದಲ್ಲಿ ಸೇರಿದೆ.

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಆಂಡ್ರಾಯ್ಡ್ ನ ಎಲ್ಲಾ ಮ್ಯಾಪ್ ಬಳಕೆದಾರರಿಗೆ ಗೂಗಲ್ ಮ್ಯಾಪ್ ಈ ಫೀಚರ್ ಗಳನ್ನು ಯಾವಾಗ ಬಿಡುಗಡೆಗೊಳಿಸಲಿದೆ ಎಂಬ ಬಗ್ಗೆ ಸೂಕ್ತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಗೂಗಲ್ ಮ್ಯಾಪ್ ನಲ್ಲಿ ಸಾರ್ವಜನಿಕ ಸಾರಿಗೆ ಆಟೋ :

ಗೂಗಲ್ ಮ್ಯಾಪ್ ನಲ್ಲಿ ಸಾರ್ವಜನಿಕ ಸಾರಿಗೆ ಆಟೋ :

ಭಾರತದ ಗೂಗಲ್ ಮ್ಯಾಪ್ ನಲ್ಲಿ ಇದೀಗ ಆಟೋ ರಿಕ್ಷಾಗಳು ಸಾರ್ವಜನಿಕ ಸಾರಿಗೆಯಾಗಿ ತೋರಿಸುತ್ತದೆ. ಒಮ್ಮೆ ನೀವು ಈ ಆಯ್ಕೆಯನ್ನು ಕ್ಲಿಕ್ಕಿಸಿದರೆ, ನೀವು ಆಯ್ಕೆ ಮಾಡಿದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಟೋ ರಿಕ್ಷಾದಲ್ಲಿ ಸಂಚರಿಸುವುದಾದರೆ ಎಷ್ಟು ಬೆಲೆ, ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನ ತೋರಿಸುತ್ತದೆ. ಇದು ರಸ್ತೆಯ ಟ್ರಾಫಿಕ್ ಕಂಡೀಷನ್ ನ್ನು ಕೂಡ ತೋರಿಸುತ್ತದೆ. ರೂಟ್ ಮ್ಯಾಪ್ ಮತ್ತು ಬೆಲೆಯ ಬಗ್ಗೆ ದೆಹಲಿ ಟ್ರಾಫಿಕ್ ಫೋಲೀಸರು ಹಂಚಿಕೊಂಡಿದ್ದಾರೆ. ಈ ಫೀಚರ್ ನ್ನು ‘cab' ಮೋಡ್ ನಿಂದ ಕೂಡ ಆಕ್ಸಿಸ್ ಮಾಡಬಹುದು.

Best Mobiles in India

Read more about:
English summary
Google is making it easier to share locations in Maps, here's how

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X