Subscribe to Gizbot

ಗೂಗಲ್ ಮ್ಯಾಪ್ ನಿಂದ ಬಸ್-ಟ್ರೈನ್ ಪ್ರಯಾಣಿಕರಿಗೆ ಹೊಸ ಮಾದರಿಯ ಸೇವೆ..!

Written By: Lekhaka

ಗೂಗಲ್ ಮ್ಯಾಪ್ ದಿನಕ್ಕೊಂದು ಹೊಸ ಫೀಚರ್ ಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈಗಾಗಲೇ ಹಲವು ಹೊಸತನವನ್ನು ಮೈ ಗೂಡಿಸಿಕೊಂಡಿದ್ದ ಗೂಗಲ್ ಮ್ಯಾಪ್ ಇನ್ನು ಮುಂದೆ ರೈಲು ಹಾಗೂ ಬಸ್ ಪ್ರಯಾಣಿಕರಿಗೆ ಸಹಾಯ ಮಾಡುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ.

ಗೂಗಲ್ ಮ್ಯಾಪ್ ನಿಂದ ಬಸ್-ಟ್ರೈನ್ ಪ್ರಯಾಣಿಕರಿಗೆ ಹೊಸ ಮಾದರಿಯ ಸೇವೆ..!

ಬಸ್ ಮತ್ತು ಟ್ರೈನಿನಲ್ಲಿ ಪ್ರಯಾಣ ಮಾಡುವವರು ಕೆಲವು ಬಾರಿ ತಾವು ಇಳಿಯಬೇಕಾಗಿದ್ದ ನಿಲ್ದಾಣವನ್ನು ಮಿಸ್ ಮಾಡಿಕೊಂಡ ಸಾಧ್ಯತೆಗಳು ಹೆಚ್ಚು ಕಾಣಸಿಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿಯೇ ಗೂಗಲ್ ಮ್ಯಾಪ್ ಇಳಿಯಬೇಕಾದ ಸ್ಥಳವನ್ನು ತೋರಿಸುವ ಆಯ್ಕೆಯನ್ನು ನೀಡಲಿದೆ.

ಫುಶ್ ನೋಟಿಫಿಕೇಷ್ ಅನ್ನು ಬಳಕೆದಾರರಿಗೆ ನೀಡುವ ಗೂಗಲ್ ಮ್ಯಾಪ್, ಈ ಮೂಲಕ ಪ್ರಯಾಣಿಕರಿಗೆ ತಾವು ಇಳಿಯಬೇಕಾದ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ನಿಗಧಿತ ಸ್ಥಳದಲ್ಲಿ ಇಳಿಯ ಬಹುದಾಗಿದೆ.

ಇದು ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚಿನ ಉಪಯೋಗವಾಗಲಿದ್ದು, ಆಪ್ ಡೇಟ್ ಮಾಡಿದರಿಗೆ ಈಗಾಗಲೇ ಈ ಸೇವೆಯೂ ದೊರೆಯಲಿದೆ ಎನ್ನಲಾಗಿದೆ. ಗ್ರಾಹಕರ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುವ ಗೂಗಲ್ ಈ ಮಾದರಿಯ ಹೊಸ ಸೇವೆಯನ್ನು ನೀಡುವ ಮೂಲಕ ಮತ್ತಷ್ಟು ಮಂದಿಯನ್ನು ಆಕರ್ಷಿಸಲು ಮುಂದಾಗಿದೆ.

ಬಿಟ್‌ಕಾಯಿನ್ ಖರೀದಿಸಿದವರಿಗೆ ತೆರಿಗೆ ಇಲಾಖೆ ನೋಟಿಸ್!!..ಖರೀದಿಸಿದವರು ಎಷ್ಟು ಜನ ಗೊತ್ತಾ!?

ಈಗಾಗಲೇ ವಿದೇಶಗಳಲ್ಲಿ ಈ ಸೇವೆಯೂ ಲಭ್ಯವಿದ್ದು, ಶೀಘ್ರವೇ ನಮ್ಮಲ್ಲಿಯೂ ಶುರುವಾಗಲಿದೆ. ಈ ಮೂಲಕ ಪ್ರಯಾಣ ಮಾಡುವವರೆಲ್ಲೂ ಗೂಗಲ್ ಸಹಾಯವನ್ನು ಪಡೆಯಲಿ ಎನ್ನುವುದು ಗೂಗಲ್ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ. ಗೂಗಲ್ ಈ ಹೊಸ ಆಯ್ಕೆ ಸಾವಿರಾರು ಮಂದಿಗೆ ಸಹಾಯವನ್ನು ಮಾಡಲಿದೆ.

English summary
Google Maps to soon alert you when to get off the bus
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot