ಸ್ಮಾರ್ಟ್‌ಫೋನ್‌ ವ್ಯಸನ ದೂರ ಮಾಡಲು ಗೂಗಲ್‌ನಿಂದ ಆಪ್ಸ್‌..!

By Gizbot Bureau
|

ಡಿಜಿಟಲ್ ವೆಲ್‌ಬಿಯಿಂಗ್‌ ವೈಶಿಷ್ಟ್ಯವನ್ನು ಗೂಗಲ್‌ ಹೊರತಂದು ಸ್ವಲ್ಪ ಸಮಯ ಆಗಿದೆ. ಕಳೆದ ವರ್ಷ ಆಂಡ್ರಾಯ್ಡ್‌ನಲ್ಲಿ ತಂದಿರುವ ಅಪ್‌ಡೇಟ್‌ ಆಂಡ್ರಾಯ್ಡ್ 9.0 ಪೈನೊಂದಿಗೆ ಈ ಫೀಚರ್‌ನ್ನು ಜಗತ್ತಿಗೆ ಪರಿಚಯಿಸಲಾಗಿದೆ. ಈಗ, ಸರ್ಚ್ ಇಂಜಿನ್‌ ದೈತ್ಯ ಆಂಡ್ರಾಯ್ಡ್‌ಗಾಗಿ 'ಡಿಜಿಟಲ್ ಯೋಗಕ್ಷೇಮ ಪ್ರಯೋಗ’ದಡಿಯಲ್ಲಿ ಆರು ಹೊಸ ಆಪ್‌ಗಳನ್ನು ಅನಾವರಣಗೊಳಿಸಿದೆ.

ಗೂಗಲ್

ಗೂಗಲ್ ವೆಬ್‌ಪುಟದೊಂದಿಗಿನ ತನ್ನ ಪ್ರಯೋಗಗಳಲ್ಲಿ ಪ್ರತಿ ಬಳಕೆದಾರರು ವಿಭಿನ್ನವಾಗಿ ವರ್ತಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡಿರುವ ಗೂಗಲ್‌ ಪ್ರತಿ ಅಪ್ಲಿಕೇಶನ್‌ನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ನೊಟಿಫಿಕೇಷನ್‌ಗಳಿಂದ ಒಬ್ಬ ವ್ಯಕ್ತಿಯು ಸುಲಭವಾಗಿ ವಿಚಲಿತರಾಗಬಹುದು, ಇತರರ ಸಂಪರ್ಕ ಕಡಿತಗೊಳಿಸುವುದು ಕಷ್ಟಕರವಾಗಬಹುದು. ಆದ್ದರಿಂದ ಇದು ಬಳಕೆದಾರರಿಗೆ ತಮ್ಮದೇ ಆದ ಪ್ರಯೋಗಗಳನ್ನು ರಚಿಸಲು ಆಯ್ಕೆಯನ್ನು ನೀಡಿದೆ ಮತ್ತು ಕಿಕ್‌ಸ್ಟಾರ್ಟ್ ಹೆಲ್ಪ್‌ಗಾಗಿ ಹ್ಯಾಕ್ ಪ್ಯಾಕ್ ಪಿಡಿಎಫ್ ಮತ್ತು ಓಪನ್ ಸೋರ್ಸ್ ಕೋಡ್‌ನ್ನು ಕೂಡ ನೀಡಿದೆ. ಗೂಗಲ್‌ನ ಆರು ಅಪ್ಲಿಕೇಶನ್‌ಗಳ ಬಗೆಗಿನ ಒಂದು ನೋಟ ಇಲ್ಲಿದೆ:

ಅನ್‌ಲಾಕ್‌ ಕ್ಲಾಕ್‌

ಅನ್‌ಲಾಕ್‌ ಕ್ಲಾಕ್‌

ಅನ್‌ಲಾಕ್ ಕ್ಲಾಕ್‌ ಆಪ್‌ ಮೂಲಕ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಎಷ್ಟು ಬಾರಿ ಲೈವ್ ವಾಲ್‌ಪೇಪರ್ ಮೂಲಕ ಅನ್‌ಲಾಕ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದಾಗಿದೆ. ಈ ಆಪ್‌ ಎಣಿಕೆ ಮಾಡುತ್ತಿದ್ದು, ಒಂದು ದಿನದಲ್ಲಿ ನಿಮ್ಮ ಫೋನ್ ಎಷ್ಟು ಬಾರಿ ಅನ್‌ಲಾಕ್ ಆಗಿದೆ ಎಂಬುದನ್ನು ತೋರಿಸುತ್ತದೆ.

ಪೋಸ್ಟ್‌ ಬಾಕ್ಸ್‌

ಪೋಸ್ಟ್‌ ಬಾಕ್ಸ್‌

ಸೂಕ್ತ ಸಮಯದವರೆಗೆ ಅಧಿಸೂಚನೆಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಬಳಕೆದಾರರ ಗೊಂದಲವನ್ನು ಕಡಿಮೆ ಮಾಡಲು ಪೋಸ್ಟ್‌ ಬಾಕ್ಸ್‌ ಸಹಾಯ ಮಾಡುತ್ತದೆ. ಈ ಸೂಕ್ತ ಸಮಯವನ್ನು ಬಳಕೆದಾರರು ಆಯ್ಕೆ ಮಾಡಬಹುದು, ಅಲ್ಲಿ ಎಲ್ಲಾ ಅಧಿಸೂಚನೆಗಳು ಸಂಘಟಿತ ರೀತಿಯಲ್ಲಿ ಕಾಣುತ್ತವೆ. ಸಂಗೀತ, ಸಂದೇಶಗಳು, ನಕ್ಷೆಗಳು ಮತ್ತು ಹೆಚ್ಚಿನವುಗಳ ವಿಭಾಗಗಳ ಎಲ್ಲಾ ರೀತಿಯ ಅಧಿಸೂಚನೆಗಳನ್ನು ಇಲ್ಲಿ ಸೇರಿಸಬಹುದು.

 ವೀ ಫ್ಲಿಪ್

ವೀ ಫ್ಲಿಪ್

ಈ ಅಪ್ಲಿಕೇಶನ್‌ನಲ್ಲಿ ಒಟ್ಟಿಗೆ ಮೊಬೈಲ್‌ನಲ್ಲಿ ತೊಡಗಿಸಿಕೊಳ್ಳುವ ಜನರ ಗುಂಪಿನೊಂದಿಗೆ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಸೇರಿದ ನಂತರ, ಬಳಕೆದಾರರು ತಮ್ಮ ಸೀಸನ್‌ನ್ನು ಪ್ರಾರಂಭಿಸಲು ಸ್ವಿಚ್‌ನ್ನು ಒಟ್ಟಿಗೆ ತಿರುಗಿಸಬಹುದು.

ಪೇಪರ್ ಫೋನ್

ಪೇಪರ್ ಫೋನ್

ಪೇಪರ್ ಫೋನ್ ಬಳಕೆದಾರರಿಗೆ ಆ ದಿನದ ಅಗತ್ಯ ಮಾಹಿತಿಯ ವೈಯಕ್ತಿಕ ಕಿರುಪುಸ್ತಕ ಮುದ್ರಿಸುವ ಮೂಲಕ ತಂತ್ರಜ್ಞಾನದಿಂದ ದೂರವಿರಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಇದು ನೆಚ್ಚಿನ ಸಂಪರ್ಕಗಳು, ನಕ್ಷೆಗಳು, ಸಭೆಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.

ಡೀಸಾರ್ಟ್‌ ಐಲ್ಯಾಂಡ್‌

ಡೀಸಾರ್ಟ್‌ ಐಲ್ಯಾಂಡ್‌

ಡೀಸಾರ್ಟ್‌ ಐಲ್ಯಾಂಡ್‌ ಆಪ್‌ ಬಳಕೆದಾರರಿಗೆ ಅಗತ್ಯ ಅಪ್ಲಿಕೇಶನ್‌ಗಳನ್ನು ಮಾತ್ರ ತೋರಿಸುವ ಮೂಲಕ ಅವರ ಗಮನ ಕೇಂದ್ರಿಕರಿಸಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮದೇ ಆದ ಅಗತ್ಯ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ಆಪ್‌ನ ಅವಧಿ 24 ಗಂಟೆಗಳ ಕಾಲ ಮುಂದುವರಿಯುತ್ತದೆ.

ಮಾರ್ಫ್

ಮಾರ್ಫ್

ಬಳಕೆದಾರರು ಫೋನ್‌ನ್ನು ಏನು ಮಾಡುತ್ತಿದ್ದಾರೆ ಎಂಬುದನ್ನು ಮಾರ್ಫ್‌ ಅಧ್ಯಯನ ಮಾಡುತ್ತದೆ. ಮೊಬೈಲ್‌ನಲ್ಲಿ ಬಳಕೆದಾರರು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆ ಮತ್ತು ಆ ಸಮಯದಲ್ಲಿ ಅವರು ಬಳಸುವ ಅಪ್ಲಿಕೇಶನ್‌ಗಳನ್ನು ಆರಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಸಮಯ ಅಥವಾ ಸ್ಥಳದ ಆಧಾರದ ಮೇಲೆ ಫೋನ್ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. ಹಾಗೂ ನಿರ್ದಿಷ್ಟ ಸಮಯದಲ್ಲಿ ಬಳಕೆದಾರರಿಗೆ ಆಪ್‌ಗಳನ್ನು ಬಳಕೆಗೆ ನೀಡುತ್ತದೆ ಎನ್ನಲಾಗಿದೆ.

Best Mobiles in India

Read more about:
English summary
Google Releases Apps To Reduce Your Smartphone Addiction

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X