ಪೋರ್ನ್ ಮಾಲ್ವೇರ್ ಸೋಂಕಿತ 60 ಗೇಮ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದ ಗೂಗಲ್

By Tejaswini P G
|

ಸಂಶೋಧನಾ ಸಂಸ್ಥೆಯೊಂದು ಪೋರ್ನೋಗ್ರಾಫಿಕ್ ಮಾಲ್ವೇರ್ನಿಂದ ಸೋಂಕಿತ ಎಂದು ಗುರುತಿಸಿದ ಅಂದಾಜು 60 ಗೇಮ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ತೆಗೆದುಹಾಕಿದ್ದು, ಈ ಪೈಕಿ ಹೆಚ್ಚಿನದು ಮಕ್ಕಳಿಗೆಂದು ಅಭಿವೃದ್ಧಿಪಡಿಸಿದ ಗೇಮ್ಗಳಾಗಿದ್ದವು. ಇಸ್ರೇಲ್ ಮೂಲದ ಚೆಕ್ಪಾಯಿಂಟ್ ಸಾಫ್ಟ್ವೇರ್ ಟೆಕ್ನಾಲಜೀಸ್ ಎನ್ನುವ ಸಂಸ್ಥೆಯ ಸಂಶೋಧಕರು ಈ ಮಾಲ್ವೇರ್ ಅನ್ನು ಮೊದಲಿಗೆ ಗುರುತಿಸಿದರು.

ಪೋರ್ನ್ ಮಾಲ್ವೇರ್ ಸೋಂಕಿತ 60 ಗೇಮ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದ ಗೂಗಲ್

ಎಡಲ್ಟ್ ಸ್ವೈನ್ ಎಂದು ಕರೆಯಲಾಗುವ ಈ ಮಾಲ್ವೇರ್ ಪೋರ್ನೋಗ್ರಾಫಿಕ್ ಚಿತ್ರಗಳನ್ನು ಜಾಹೀರಾತಿನಂತೆ ಪ್ರಕಟಿಸಿ ಬಳಕೆದಾರರಿಗೆ ನಕಲಿ ಸೆಕ್ಯೂರಿಟಿ ಸಾಫ್ಟ್ವೇರ್ಗಳನ್ನು ಡೌನ್ಲೋಡ್ ಮಾಡುವಂತೆ ಪ್ರಾಂಪ್ಟ್ ಮಾಡುತ್ತಿತ್ತು.

ಈ ಸಂಶೋಧನಾ ಸಂಸ್ಥೆಯ ವರದಿಯ ಅನುಸಾರ ಈ ಹಾನಿಕಾರಕ ಆಪ್ಗಳು ಮೂರು ವಿಧದಲ್ಲಿ ಹಾನಿಯನ್ನುಂಟುಮಾಡುತ್ತದೆ.

• ವೆಬ್ ನಲ್ಲಿ ಅನುಚಿತವಾದ ಮತ್ತು ಅಶ್ಲೀಲ ಜಾಹೀರಾತುಗಳನ್ನು ಪ್ರದರ್ಶಿಸುವುದು.

• ಬಳಕೆದಾರರಿಗೆ ನಕಲಿ ಸೆಕ್ಯೂರಿಟಿ ಆಪ್ಗಳನ್ನು ಇನ್ಸ್ಟಾಲ್ ಮಾಡುವಂತೆ ಪ್ರೇರೇಪಿಸಿವುದು

• ಬಳಕೆದಾರರ ವೆಚ್ಚದಲ್ಲಿ ಪ್ರೀಮಿಯಂ ಸೇವೆಗಳಿಗೆ ನೋಂದಾಯಿಸಿಕೊಳ್ಳುವಂತೆ ಅವರನ್ನು ಪ್ರೇರೇಪಿಸುವುದು.

ಈ ಹಾನಿಕಾರಕ ಆಪ್ಗಳು ಒಂದು ಸಾಧನದಲ್ಲಿ ಇನ್ಸ್ಟಾಲ್ ಆದ ನಂತರ, ಬಳಕೆದಾರರು ಆ ಫೋನ್ ಅನ್ನು ಒಮ್ಮೆ ರೀಬೂಟ್ ಮಾಡಲು ಅಥವಾ ಸ್ಕ್ರೀನ್ ಅನ್ಲಾಕ್ ಮಾಡಲು ಕಾಯುತ್ತದೆ. ರೀಬೂಟ್ ಅಥವಾ ಅನ್ಲಾಕ್ ಆದ ಕೂಡಲೇ ಅದು ತನ್ನ ಹಾನಿಕಾರಕ ಚಟುವಟಿಕೆಗಳನ್ನು ಪ್ರಾರಂಭಿಸುತ್ತದೆ.

ಈ ವರದಿ ಬರುತ್ತಿದ್ದಂತೆ ಎಚ್ಚೆತ್ತ ಗೂಗಲ್ ಕೂಡಲೇ ಈ ಆಪ್ಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ಕಿತ್ತೆಸೆದಿದೆ. "ನಾವು ತಕ್ಷಣ ಆ ಆಪ್ಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ತೆಗೆದು ಹಾಕಿದ್ದು ಮಾತ್ರವಲ್ಲದೆ, ಅದರ ಡೆವೆಲೆಪರ್ಗಳ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದೇವೆ. ಅಲ್ಲದೆ ಈ ಆಪ್ ಅನ್ನು ಇನ್ಸ್ಟಾಲ್ ಮಾಡಿರುವವರಿಗೆ ಸೂಕ್ತ ಎಚ್ಚರಿಯನ್ನೂ ನೀಡಿದ್ದೇವೆ. ನಮ್ಮ ಬಳಕೆದಾರರ ಸುರಕ್ಷತೆಯ ಬಗ್ಗೆ ಕಾಳಜಿ ತೋರಿದ ಚೆಕ್ಪಾಯಿಂಟ್ ಸಂಸ್ಥೆಯ ಈ ಕಾರ್ಯ ಪ್ರಶಂಸನೀಯವಾಗಿದೆ" ಎಂದು ಗೂಗಲ್ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಗೆ ತಿಳಿಸಿದೆ.

ಗೂಗಲ್ ಈ ಆಪ್ಗಳು ಆಂಡ್ರಾಯ್ಡ್ ಸುರಕ್ಷತೆಯಲ್ಲಿರುವ ಲೋಪಗಳ ಲಾಭವನ್ನು ಪಡೆದಿಲ್ಲ ಹಾಗೂ ಬಳಕೆದಾರರ ಸಾಧನಗಳಿಗೆ ಹಾನಿಯುಂಟು ಮಾಡಿಲ್ಲವೆಂದು ಹೇಳಿದೆ. ಆದರೆ ಚೆಕ್ಪಾಯಿಂಟ್ ನ ಸಂಶೋಧಕರು ಗೂಗಲ್ ಪ್ಲೇ ನ ಮಾಹಿತಿಯನ್ನಾಧರಿಸಿ ಈ ಆಪ್ಗಳು ಮೂರರಿಂದ ಏಳು ಮಿಲಿಯನ್ ಬಾರಿ ಡೌನ್ಲೋಡ್ ಆಗಿದೆಯೆಂದು ತಿಳಿಸಿದೆ. " ಜನರಿಗೆ ನಕಲಿ ಸೆಕ್ಯೂರಿಟಿ ಆಪ್ಗಳನ್ನು ಇನ್ಸ್ಟಾಲ್ ಮಾಡಲು ಮತ್ತು ಪ್ರೀಮಿಯಂ ಸೇವೆಗಳಿಗೆ ಹಣ ಪಾವತಿಸುವಂತೆ ಪ್ರೇರೇಪಿಸಿವುದು ಮಾತ್ರವಲ್ಲದೆ, ಎಡಲ್ಟ್ ಸ್ವೈನ್ ಜನರ ಖಾತೆಯ ಮಾಹಿತಿಗಳನ್ನೂ ಅಪಹರಿಸಿದೆ " ಎಂದು ಚೆಕ್ಪಾಯಿಂಟ್ ನ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!..ಆದರೂ ಖುಷಿಯಂತೆ!!ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!..ಆದರೂ ಖುಷಿಯಂತೆ!!

ಈ ಆಪ್ಗಳು ಇನ್ಸ್ಟಾಲ್ ಆದ ನಂತರ, ಮಾಲ್ವೇರ್ ಅದರ ಡೆವೆಲಪರ್ಗಳ ಕಮಾಂಡ್ ಆಂಡ್ ಕಂಟ್ರೋಲ್ ಸರ್ವರ್ಗಳನ್ನು ಸಂಪರ್ಕಿಸಿ ಸೋಂಕಿತ ಸಾಧನದ ಮಾಹಿತಿಯನ್ನು ಕಳುಹಿಸುವುದಲ್ಲದೆ ಮುಂದೆ ಏನು ಮಾಡಬೇಕೆಂದು ಸೂಚನೆಗಳನ್ನೂ ಪಡೆಯುತ್ತಿತ್ತು. ಚೆಕ್ಪಾಯಿಂಟ್ ನ ಅನುಸಾರ ನಕಲಿ ಆಡ್ಗಳನ್ನು ಪ್ರಕಟಿಸುವುದು, ನಕಲಿ ಸೆಕ್ಯೂರಿಟಿ ಆಪ್ಗಳನ್ನು ಇನ್ಸ್ಟಾಲ್ ಮಾಡುವಂತೆ ಪ್ರೇರೇಪಿಸುವುದು, ಅವರು ಪಡೆಯದ ಸೇವೆಗಳಿಗೆ ಹಣ ಪಾವತಿಸುವಂತೆ ಮಾಡುವುದು ಮೊದಲಾದ ಸೂಚನೆಗಳನ್ನು ಅದು ತಮ್ಮ ಡೆವೆಲಪರ್ಗಳಿಂದ ಪಡೆಯುತ್ತಿತ್ತು. ಚೆಕ್ಪಾಯಿಂಟ್ ತನ್ನ ಸಂಶೋಧನಾ ಪೋಸ್ಟ್ನಲ್ಲಿ ಈ ಮಾಲ್ವೇರ್ ಸೋಂಕಿರುವ ಎಲ್ಲಾ ಆಪ್ಗಳನ್ನು ಪಟ್ಟಿಮಾಡಿದೆ.

ಈ ಆಪ್ಗಳು ಪ್ಲೇಸ್ಟೋರ್ ಗೆ ಹೇಗೆ ಬಂದವು ಎನ್ನುವುದೇ ಅಚ್ಚರಿಯ ವಿಷಯವಾಗಿದೆ. ಗೂಗಲ್ ಈಗಾಗಲೇ ತನ್ನ ಪ್ಲ್ಯಾಟ್ಫಾರ್ಮ್ನಲ್ಲಿ ಗೂಗಲ್ ಪ್ಲೇ ಪ್ರೊಟೆಕ್ಟ್ ಎಂಬ ಸುರಕ್ಷತಾ ಫೀಚರ್ ಅನ್ನು ಹೊಂದಿದೆ. ಆಪ್ಗಳನು ಕಾಲಕಾಲಕ್ಕೆ ಪರೀಕ್ಷಿಸುವುದು ಮತ್ತು ಸಾಧನಗಳಿಗೆ ಮಾಲ್ವೇರ್ ಸೋಂಕಿದೆಯೇ ಎಂದು ಕಾಲಕಾಲಕ್ಕೆ ಪರೀಕ್ಷಿಸಲೆಂದೇ ಈ ಫೀಚರ್ ಅನ್ನು ವಿನ್ಯಾಸಗೊಳಿಸಲಾಗಿದೆ.

How to Activate UAN Number? KANNADA

ಈ ಮಧ್ಯೆ ಗೂಗಲ್ "ಹೆತ್ತವರಿಗೆ ಪ್ಲೇಸ್ಟೋರ್ನಲ್ಲಿ ಮಕ್ಕಳ ವಯಸ್ಸಿಗೆ ತಕ್ಕ ಕಂಟೆಂಟ್ ಅನ್ನು ಗುರುತಿಸಲು ಸಹಾಯವಾಗಲು ಫ್ಯಾಮಿಲಿ ಕಲೆಕ್ಷನ್ ಇದೆ. ಅಲ್ಲದೆ ಮಕ್ಕಳು ಯಾವ ಯಾವ ಆಪ್ಗಳನ್ನು ಬಳಸಬಹುದು ಎನ್ನುವುದನ್ನು ನಿರ್ವಹಿಸಲು ಫ್ಯಾಮಿಲಿ ಲಿಂಕ್ ಎನ್ನುವ ಸುರಕ್ಷತಾ ಫೀಚರ್ ಕೂಡ ಪ್ಲೇಸ್ಟೊರ್ನಲ್ಲಿದೆ" ಎಂದು ದಿ ವರ್ಜ್ ಪತ್ರಿಕೆಗೆ ತಿಳಿಸಿದೆ. ಅಷ್ಟೇ ಅಲ್ಲದೆ ತಮ್ಮ ಸಂಸ್ಥೆಯು ಜಾಹೀರಾತುಗಳನ್ನು ತಾವೇ ವಿಮರ್ಶಿಸುವುದಲ್ಲದೆ ಮಕ್ಕಳಿಗೆ ಸುರಕ್ಷಿತ ಅನುಭವವನ್ನು ನೀಡಲು ಕಟ್ಟುನಿಟ್ಟಾಗಿ ವಯೋಮಿತಿಯ ಪರೀಕ್ಷೆಯನ್ನು ನಡೆಲಾಗುತ್ತದೆಯೆಂದು ಗೂಗಲ್ ಹೇಳಿದೆ. ಫ್ಯಾಮಿಲಿ ಪ್ರೋಗ್ರಾಮ್ನಲ್ಲಿರುವ ಆಪ್ಗಳು ಈ ಮಾಲ್ವೇರ್ನ ಸೋಂಕಿಗೆ ಒಳಗಾಗಿಲ್ಲ ಎಂದು ಗೂಗಲ್ ಹೇಳಿದೆ.

Best Mobiles in India

Read more about:
English summary
Google has removed nearly 60 games, many of which were for children, from its Play Store after a security research firm found they were infected with a pornographic malware.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X