Subscribe to Gizbot

ಉಚಿತ Wi-Fi ಹುಡುಕುವುದು ಹೇಗೆ..? ಉಚಿತ ಡೇಟಾ ಪಡೆಯುವುದು ಹೇಗೆ..?

Written By:

ಇಂದಿನ ದಿನದಲ್ಲಿ Wi-Fi ಇಂಟರ್ನೆಟ್ ಸಾಕಷ್ಟು ಸದ್ದು ಮಾಡುತ್ತಿದೆ. ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆಯೂ ದೊರೆಯುತ್ತಿದ್ದರು ಸಹ, ಮಾರುಕಟ್ಟೆಯಲ್ಲಿ Wi-Fi ಬೇಡಿಕೆಯೂ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ದೊಡ್ಡ ಗಾತ್ರ ಫೈಲ್‌ಗಳನ್ನು ಇಲ್ಲವೇ ದೊಡ್ಡ ಗಾತ್ರ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಸಲುವಾಗಿ Wi-Fi ಅವಶ್ಯವಾಗಿದೆ.

ಉಚಿತ Wi-Fi ಹುಡುಕುವುದು ಹೇಗೆ..? ಉಚಿತ ಡೇಟಾ ಪಡೆಯುವುದು ಹೇಗೆ..?

ಇದಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ಇಂದು ಉಚಿತವಾಗಿ Wi-Fi ಸೌಲಭ್ಯ ದೊರೆಯುತ್ತಿದೆ. ಅಲ್ಲದೇ ಕಾಫಿ ಶಾಪ್, ರೆಸ್ಟೋರೆಂಟ್, ಸಿನಿಮಾ ಮಂದಿರ, ಶಾಪಿಂಗ್ ಮಾಲ್ ಮುಂತಾದ ಕಡೆಗಳಲ್ಲಿ Wi-Fi ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ಉಚಿತವಾಗಿ ನಿಮ್ಮ ಸುತ್ತ ಮುತ್ತ ಲಭ್ಯವಿರುವ ಉಚಿತ Wi-Fi ಅನ್ನು ಕಂಡುಹಿಡಿಯುವ ಸಲುವಾಗಿ ಹಲವು ಆಪ್‌ಗಳು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಲಭ್ಯವಿದೆ. ಅವುಗಳ ಕುರಿತು ಮಾಹಿತಿಯೂ ಈ ಮುಂದಿನಂತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Wi-Fi ಮ್ಯಾಪ್:

Wi-Fi ಮ್ಯಾಪ್:

ಹೆಸರೇ ಹೇಳುವಂತೆ ಇದು ನಿಮ್ಮ ಸುತ್ತ ಇರುವಂತಹ Wi-Fi ಬಗ್ಗೆ ಮಾಹಿತಿಯನ್ನು ನೀಡಿದ್ದು, ಇದರೊಂದಿಗೆ ಉಚಿತವಾಗಿ ಯಾವುದು ಲಭ್ಯವಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡಲಿದೆ.

ಅವಿಸ್ತಾ Wi-Fi ಫೈಂಡರ್:

ಅವಿಸ್ತಾ Wi-Fi ಫೈಂಡರ್:

ಆಂಟಿ ವೈರಸ್ ವಿಭಾಗದಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಅವಿಸ್ತಾ, ಹೊಸದಾಗಿ ಮಾರುಕಟ್ಟೆಗೆ ಲಾಂಚ್ ಮಾಡಿರುವ ಅವಿಸ್ತಾ Wi-Fi ಫೈಂಡರ್ ಆಪ್ ಸುಲಭವಾಗಿ Wi-Fi ಸಂಪರ್ಕವನ್ನು ಹುಡುಕಲು ಸಹಾಯ ಮಾಡಲಿದೆ.

TWC Wi-Fi ಫೈಂಡರ್:

TWC Wi-Fi ಫೈಂಡರ್:

ಇದಲ್ಲದೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ Wi-Fi ಫೈಂಡರ್‌ಗಳಲ್ಲಿ TWC Wi-Fi ಫೈಂಡರ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಆಪ್‌ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

What is Jio Cricket Gold Pass? How to Buy it
ಕಾಫಿ Wi-Fi:

ಕಾಫಿ Wi-Fi:

ಇದು ಹತ್ತಿರದಲ್ಲಿರುವ ಕಾಫಿಶಾಪ್, ಹೋಟೆಲ್ ರೆಸ್ಟೋರೆಂಟ್ ಸೇರಿದಂತೆ ವಿವಿಧ ಪ್ರದೇಶದ Wi-Fi ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ನೀವು Wi-Fi ನೊಂದಿಗೆ ಇಲ್ಲಿ ಲ್ಯಾಪ್‌ಟಾಪ್ ಹಿಡಿದು ಕೆಲಸವನ್ನು ಮಾಡುವ ಅವಕಶವು ಇರಲಿದೆ.

Wi-Fi ಸ್ಕ್ಯಾನರ್:

Wi-Fi ಸ್ಕ್ಯಾನರ್:

ಇದು iOS ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಬಳಕೆದಾರರಿಗೆ ಸೇಫ್ ಆಗಿರುವ Wi-Fi ಗಳ ಬಗ್ಗೆ ಮಾಹಿತಿ ನೀಡಲಿದ್ದು, ಹತ್ತಿರದಲ್ಲಿರುವ Wi-Fi ಗಳಲ್ಲಿ ಯಾವುದು ಉಚಿತ ಸೇವೆಯನ್ನು ನೀಡಲಿದೆ ಎಂಬುದನ್ನು ತಿಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
how to find free wifi near me. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot