ಜಿಯೋವಿನ ಹೊಸ ಆಪ್ ಬಗ್ಗೆ ತಿಳಿದರೆ ಈಗಲೇ ಡೌನ್‌ಲೋಡ್ ಮಾಡ್ತೀರಾ!!

ನಾರ್ಟನ್‌ನಿಂದ ಬೆಂಬಲದಿಂದ ನೂತನ ಜಿಯೋ ಸೆಕ್ಯೂರಿಟಿ ಆಪ್ ಹೊರಬಂದಿದೆ.!

|

ಸ್ಮಾರ್ಟ್‌ಪೋನ್ ಆಪ್‌ಗಳ ಸುರಕ್ಷಿತ ಬಳಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಜಿಯೋ ಮೊಬೈಲ್ ಸುರಕ್ಷತಾ ವ್ಯವಸ್ಥೆಗೆ ಆಪ್ ಬಿಡುಗಡೆ ಮಾಡಿದೆ.! ಜಿಯೋಸೆಕ್ಯೂರಿಟಿ ಹೆಸರಿನಲ್ಲಿ ಆಪ್ ಬಿಡುಗಡೆಯಾಗಿದ್ದು, ಇದೀಗ ಆಪ್ ಕುರಿತು ಸಲಹೆ ನೀಡುವ ವಿಶಿಷ್ಟ ಸೌಲಭ್ಯವೊಂದನ್ನು ಜಿಯೋ ಪರಿಚಯಿಸುತ್ತಿದೆ.!

2016 ರಿಂದ ಈಚೆಗೆ ನಾರ್ಟನ್ ಬೈ ಸಿಮ್ಯಾಂಟೆಕ್ ಸಂಸ್ಥೆ 6,464,472ಕ್ಕೂ ಹೆಚ್ಚು ಹೊಸ ಮಾಲ್‌ವೇರ್ ಆಪ್‌ಗಳನ್ನು ಹಾಗೂ 5,741,834 ಹೊಸ 'ಗ್ರೇವೇರ್' ಅಂದರೆ ಖಾಸಗಿತನ ಕುರಿತ ಸಂಭಾವ್ಯ ಸಮಸ್ಯೆಗಳುಳ್ಳ ಆಪ್‌ಗಳನ್ನು ಗುರುತಿಸಿದ್ದು,ಹಾಗಾಗಿ, ನಾರ್ಟನ್‌ನಿಂದ ಬೆಂಬಲದಿಂದ ನೂತನ ಜಿಯೋ ಸೆಕ್ಯೂರಿಟಿ ಆಪ್ ಹೊರಬಂದಿದೆ.!

ಕ್ಯೂರಿಟಿ ಆಪ್ ಉತ್ಕೃಷ್ಟ ಮಟ್ಟದ ವೆಬ್ ಸುರಕ್ಷತಾ ಸೇವೆ ನೀಡುವ ಜೊತೆಗೆ ಅಪಾಯಕಾರಿ ಆಪ್‌ಗಳನ್ನೂ ಮಾಲ್‌ವೇರ್‌ಗಳನ್ನೂ ದೂರವಿಡಲು ಸಹಾಯಮಾಡುತ್ತದೆ ಎಂದು ಜಿಯೋ ಹೇಳಿದೆ.!! ಹಾಗಾದರೆ, ಜಿಯೋ ಸೆಕ್ಯೂರಿಟಿ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ? ಆಪ್‌ ಬಳಕೆ ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸುರಕ್ಷತಾ ಭೀತಿ ಎದುರಾಗಿದೆ

ಸುರಕ್ಷತಾ ಭೀತಿ ಎದುರಾಗಿದೆ

ಮೊಬೈಲ್ ಸಾಧನಗಳಲ್ಲಿ ಆಪ್‌ಗಳನ್ನು ಬಳಸುವುದರಿಂದ ತಮ್ಮ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಶೇ.52 ರಷ್ಟು ಬಳಕೆದಾರರು ನಂಬುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವವರ ಪೈಕಿ ಶೇ. 27 ಮಂದಿ ಸೋಶಿಯಲ್ ಮೀಡಿಯಾ ಆಪ್‌ಗಳಿಂದ ಹೆಚ್ಚಿನ ಸುರಕ್ಷತಾ ಭೀತಿ ಎದುರಾಗಿದೆ ಎಂದಿದ್ದಾರೆ!! ಹಾಗಾಗಿ, ಸುರಕ್ಷತಾ ಆಪ್ ಅವಶ್ಯಕತೆ ಹೆಚ್ಚಿತ್ತು.

ದುರುದ್ದೇಶಪೂರಿತ ಆಪ್‌ಗಳಿಂದ ರಕ್ಷಣೆ!!

ದುರುದ್ದೇಶಪೂರಿತ ಆಪ್‌ಗಳಿಂದ ರಕ್ಷಣೆ!!

ಸ್ವಯಂಚಾಲಿತವಾಗಿ ಸ್ಕ್ಯಾನ್‌ ಮಾಡುವ ಹಾಗೂ ಇನ್‌ಸ್ಟಾಲ್ ಆಗಿರುವ ಆಪ್‌ಗಳ ಬಗ್ಗೆ ಮಾಹಿತಿ ನೀಡುವ ಮೂಲಕ ತಮ್ಮ ಫೋನುಗಳನ್ನು ದುರುದ್ದೇಶಪೂರಿತ ಆಪ್‌ಗಳಿಂದ ರಕ್ಷಿಸಿಕೊಳ್ಳಲು ನಾರ್ಟನ್‌ ಬೆಂಬಲಿತ ಜಿಯೋಸೆಕ್ಯೂರಿಟಿ ಆಪ್ ಬಳಕೆದಾರರಿಗೆ ನೆರವಾಗುತ್ತಿದೆ. ಹಾಗಾಗಿ, ಬಳಕೆದಾರರು ಹೆಚ್ಚು ಸೇಫ್ ಆಗಿತ್ತಾರೆ

ನಿಮ್ಮ ಫೋನ್ ಹುಡುಕಿ!!

ನಿಮ್ಮ ಫೋನ್ ಹುಡುಕಿ!!

ಜಿಯೋ ಸೆಕ್ಯೂರಿಟಿ ಆಪ್ ಮೂಲಕ ನಿಮ್ಮ ಕಳೆದುಹೋದ ಫೋನ್ ಅನ್ನು ಹುಡುಕುವ ಆಯ್ಕೆ ಕೂಡ ಲಭ್ಯವಿದೆ.! ನಿಮ್ಮ ಫೋನ್ ಅನ್ನು ಬೇರೆಯವರು ಬಳಕೆ ಮಾಡುತ್ತಿದ್ದರೆ ಅಥವಾ ನೀವೆ ಆಕಸ್ಮಿಕವಾಗಿ ಎಲ್ಲೊ ಮರೆತಿದ್ದರೆ ನಿಮ್ಮ ಫೋನ್ ಅನ್ನು ಲೊಕೇಟ್ ಮಾಡಬಹುದು. ಆದರೆ, ಜಿಯೋ ಆಪ್ ಡಿಲೀಟ್ ಮಾಡಿದ್ದರೆ ಸಾಧ್ಯವಾಗುವುದಿಲ್ಲ.!!

ಆಪ್‌ಗಳ ಬಗ್ಗೆ ಸಲಹೆ!!

ಆಪ್‌ಗಳ ಬಗ್ಗೆ ಸಲಹೆ!!

ಜಿಯೋಸೆಕ್ಯೂರಿಟಿ ಆಪ್‌ನಿಂದ ದೊರಕುವ ಮಾಹಿತಿಯ ಆಧಾರದ ಮೇಲೆ ನಿರ್ದಿಷ್ಟ ಆಪ್‌ಗಳನ್ನು ಉಳಿಸಿಕೊಳ್ಳಬೇಕೋ ಇಲ್ಲ ತೆಗೆದುಹಾಕಬೇಕೋ ಎಂದು ಆಪ್‌ ಬಳಕೆದಾರರು ಸುಲಭವಾಗಿ ತೀರ್ಮಾನಿಸಬಹುದಾಗಿದೆ. ಇದರಿಂದ ನಮ್ಮನ್ನು ಮೋಸಗೊಳಿಸುವ ಆಪ್‌ಗಳಿಂದ ನಾವು ಹೆಚ್ಚು ಎಚ್ಚರಿಕೆಯಿಂದ ಇರಬಹುದು.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ ಬಳಕೆದಾರರಿಗೆ ಮಾತ್ರ ಆಪ್ !!

ಜಿಯೋ ಬಳಕೆದಾರರಿಗೆ ಮಾತ್ರ ಆಪ್ !!

ಜಿಯೋ ಸೆಕ್ಯೂರಿಟಿ ಆಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಎಲ್ಲ ಜಿಯೋ ಸಿಮ್ ಬಳಕೆದಾರರಿಗೂ ಈ ಆಪ್ ಉಚಿತವಾಗಿ ಲಭ್ಯವಿದೆ. ಜಿಯೋ ಬಳಕೆ ಮಾಡದೇ ಇರುವವರು ಈ ಆಪ್‌ ಅನ್ನು ಡೌನ್‌ಲೋಡ್ ಮಾಡಕೊಂಡರೂ ಕೂಡ ಬಳಕೆ ಮಾಡಲು ಸಾಧ್ಯವಿಲ್ಲ!!

<strong>ಮಕ್ಕಳು ಇಂಟರ್‌ನೆಟ್ ದಾಸರಾಗುವುದನ್ನು ತಡೆಯಲು ಬಂದಿದೆ ಆಪ್!!</strong>ಮಕ್ಕಳು ಇಂಟರ್‌ನೆಟ್ ದಾಸರಾಗುವುದನ್ನು ತಡೆಯಲು ಬಂದಿದೆ ಆಪ್!!

Best Mobiles in India

English summary
Reliance jio Locate my device feature.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X