Subscribe to Gizbot

ನೂತನ ಮೆಸೇಜಿಂಗ್ ಆಪ್ ಡೈರೆಕ್ಟ್ ಅನ್ನು ಟೆಸ್ಟ್ ಮಾಡುತ್ತಿದೆ ಇನ್ಸ್ಟಾಗ್ರಾಮ್

Posted By: Tejaswini P G

ಇನ್ಸ್ಟಾಗ್ರಾಮ್ ತನ್ನದೇ ಸ್ವಂತ ಮಸೇಜಿಂಗ್ ಆಪ್ ಒಂದನ್ನು ಲಾಂಚ್ ಮಾಡಲು ಸಜ್ಜಾಗಿ ನಿಂತಿದೆ. ಟರ್ಕಿ, ಇಟೆಲಿ,ಪೋರ್ಚುಗಲ್, ಇಸ್ರೇಲ್, ಚಿಲಿ, ಉರುಗುವೆ ಮೊದಲಾದ ಆಯ್ದ ದೇಶಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಶೀಘ್ರದಲ್ಲಿಯೇ ಟೆಸ್ಟಿಂಗ್ ಗಾಗಿ ಬಿಡುಗಡೆಮಾಡಲಿದೆ.

ನೂತನ ಮೆಸೇಜಿಂಗ್ ಆಪ್ ಡೈರೆಕ್ಟ್ ಅನ್ನು ಟೆಸ್ಟ್ ಮಾಡುತ್ತಿದೆ ಇನ್ಸ್ಟಾಗ್ರಾಮ್

ದಿ ವರ್ಜ್ ನ ವರದಿಯ ಅನುಸಾರ ಇನ್ಸ್ಟಾಗ್ರಾಮ್ ನ ಈ ನೂತನ ಸ್ಟ್ಯಾಂಡ್-ಅಲೋನ್ ಡೈರೆಕ್ಟ್ ಮೆಸೇಜಿಂಗ್ ಆಪ್ ನ ಹೆಸರು 'ಡೈರೆಕ್ಟ್'. ನೂತನ ಡೈರೆಕ್ಟ್ ಆಪ್ ಸ್ನ್ಯಾಪ್ಚ್ಯಾಟ್ ನ ಮಾದರಿಯಲ್ಲೇ ಇರಲಿದೆ.ಆಪ್ ಅನ್ನು ತೆರೆದಾಗ ಮೊದಲಿಗೆ ಕ್ಯಾಮೆರಾ ಪೇನ್ ತೆರೆಯುತ್ತದಲ್ಲದೆ, ತನ್ನ ಬಳಕೆದಾರರಿಗೆ ಹೊಸ ಹೊಸ ಫೋಟೋ ಮತ್ತು ವೀಡಿಯೋಗಳನ್ನು ಸೆರೆಹಿಡಿದು ಶೇರ್ ಮಾಡಲು ಪ್ರೋತ್ಸಾಹಿಸುತ್ತದೆ. ಈ ಆಪ್ ನ ಕ್ಯಾಮೆರಾ ಇನ್ಸ್ಟಾಗ್ರಾಮ್ ನ ಕ್ಯಾಮೆರಾವನ್ನೇ ಹೋಲಲಿದ್ದು, 4 ಹೊಸ ಫಿಲ್ಟರ್ಗಳನ್ನೂ ಹೊಂದಿರಲಿದೆ.

ಕ್ಯಾಮೆರಾ ಇಂಟರ್ಫೇಸ್ ನ ಮೇಲೆ ಎಡಬದಿಗೆ ಸ್ವೈಪ್ ಮಾಡಿದಾಗ ನಿಮ್ಮ ಅಕೌಂಟ್ ಮತ್ತು ಸೆಟ್ಟಿಂಗ್ಸ್ ಆಯ್ಕೆ ತೆರೆದುಕೊಳ್ಳುತ್ತದೆ ಅಲ್ಲದೆ ಬಲಬದಿಗೆ ಸ್ವೈಪ್ ಮಾಡಿದರೆ ಚ್ಯಾಟ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ.ಇನ್ಸ್ಟಾಗ್ರಾಮ್ ನಲ್ಲೂ ಇದೇ ಮಾದರಿಯ ವಿನ್ಯಾಸವಿದೆ.

ಡೈರೆಕ್ಟ್ ಆಪ್ ಅನ್ನು ಇನ್ಸ್ಟಾಲ್ ಮಾಡಿದ ನಂತರ, ಇನ್ಸ್ಟಾಗ್ರಾಮ್ ಅಪ್ ನಲ್ಲಿ ಚ್ಯಾಟ್ಸ್ ವಿಭಾಗ ಮರೆಯಾಗುತ್ತದಲ್ಲದೆ, ಎಡಬದಿಗೆ ಸ್ವೈಪ್ ಮಾಡಿದಾಗ ಆನಿಮೇಶನ್ ಒಂದು ಕಾಣಿಸಲಿದ್ದು, ಅದು ಬಳಕೆದಾರರನ್ನು ಡೈರೆಕ್ಟ್ ಆಪ್ ನತ್ತ ಕರೆದೊಯ್ಯಲಿದೆ. ಅಂತೆಯೇ, ಡೈರೆಕ್ಟ್ ನ ಇನ್ಬಾಕ್ಸ್ ನಿಂದ ಎಡಬದಿಗೆ ಸ್ವೈಪ್ ಮಾಡುವ ಮೂಲಕ ಬಳಕೆದಾರರು ಮತ್ತೆ ಇನ್ಸ್ಟಾಗ್ರಾಮ್ ಗೆ ಮರಳಬಹುದಾಗಿದೆ.

ನೂತನ ಡೈರೆಕ್ಟ್ ಆಪ್ ತುಂಬ ಸರಳವಾಗಿದ್ದು, ಇನ್ಸ್ಟಾಗ್ರಾಮ್ ನಿಂದ ಮೆಸೇಜಿಂಗ್ ಸೇವೆಯನ್ನಷ್ಟೇ ಇದು ಹೊರತೆಗೆಯುತ್ತದೆ. ಈ ಹಿಂದೆ ಫೇಸ್ಬುಕ್ ನಿಂದ ಮೆಸೇಜಿಂಗ್ ಸೇವೆಯನ್ನು ಬೇರ್ಪಡಿಸಲು ಮೆಸೆಂಜರ್ ಆಪ್ ಅನ್ನು ಲಾಂಚ್ ಮಾಡಿದಂತೆಯೇ, ಇನ್ಸ್ಟಾಗ್ರಾಮ್ ಡೈರೆಕ್ಟ್ ಆಪ್ ಅನ್ನು ಬಿಡುಗಡೆಮಾಡಲಿದೆ.

ಗೂಗಲ್ ಅನ್ನು ಕಂಟ್ರೋಲ್ ಮಾಡುವ ಶಕ್ತಿ ನಿಮಗಿದೆ!!..ಆದರೆ,ಕಂಟ್ರೋಲ್ ಏಕೆ ಮಾಡಬೇಕು!?

ಇನ್ಸ್ಟಾಗ್ರಾಮ್ ಕೂಡ ಫೇಸ್ಬುಕ್ ನ ಒಡೆತನದಲ್ಲಿದ್ದು, ಫೇಸ್ಬುಕ್ ಈಗ 3 ವಿಭಿನ್ನ ಮೆಸೇಜಿಂಗ್ ಆಪ್ ಗಳನ್ನು ಹೊಂದಿದೆ ಎನ್ನುವುದು ಗಮನಾರ್ಹವಾಗಿದೆ. ಮೆಸೆಂಜರ್, ವಾಟ್ಸಾಪ್ ಮತ್ತು ನೂತನ ಡೈರೆಕ್ಟ್ ಆಪ್ ಫೆಸ್ಬುಕ್ ನ ಒಡೆತನದಲ್ಲಿರುವ ಮೂರು ವಿಭಿನ್ನ ಡೈರೆಕ್ಟ್ ಮೆಸೇಜಿಂಗ್ ಆಪ್ಗಳಾಗಿದೆ. ವಾಟ್ಸಾಪ್ ಈಗಲೂ ಕೇವಲ ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ ಆಗಿದ್ದರೆ, ಮೆಸೆಂಜರ್ ಅನೇಕ ಫೀಚರ್ಗಳೊಂದಿಗೆ ತನ್ನ ಬಳಕೆದಾರರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಫೇಸ್ಬುಕ್ ನ ಮೆಸೆಂಜರ್ ಆಪ್ ನಲ್ಲಿ, ಪೇಯ್ಮೆಂಟ್ ಆಯ್ಕೆಗಳು, ಬಾಟ್ಸ್ , ಫೋನ್ ಕರೆಗಳನ್ನು ಮಾಡುವ ಸಾಮರ್ಥ್ಯ ಮತ್ತು ಮೆಸೆಂಜರ್ನೊಳಗೆ ಗೇಮ್ಸ್ ಆಡುವ ಫೀಚರ್ಗಳಿವೆ.

ಇನ್ಸ್ಟಾಗ್ರಾಮ್ ಡೈರೆಕ್ಟ್ ಆಪ್ ಅನ್ನು ಕ್ಯಾಮೆರಾ ಫರ್ಸ್ಟ್ ಮೆಸೇಜಿಂಗ್ ಸೇವೆಯಾಗಿ ಕರೆಯುತ್ತದಾದರೂ, ಮುಂದೆ ಈ ಆಪ್ ಯಾವ ರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ. ಈ ಆಪ್ ಅನ್ನು ಎಲ್ಲಾ ಗ್ರಾಹಕರಿಗೆ ಬಿಡುಗಡೆಮಾಡಿದರೂ , ಹೊಸ ಡೈರೆಕ್ಟ್ ಆಪ್ ಸಧ್ಯಕ್ಕೆ ಪ್ರಾಯೋಗಿಕ ಹಂತದಲ್ಲಿರಲಿದೆ.

English summary
Instagram is likely testing a new Direct app that is a standalone messaging application for both Android and iOS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot