Subscribe to Gizbot

ಇನ್ ಸ್ಟಗ್ರಾಮ್ ಬಳಕೆದಾರರಿಗೆ ಹೊಸ ಮಾದರಿಯ ಎರಡು ಆಯ್ಕೆಗಳು ಲಭ್ಯ..!

Written By: Lekhaka

ಇನ್ ಸ್ಟಗ್ರಾಮ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಆಪ್ ಡೇಟ್ ನೀಡಿದ್ದು, ಎರಡು ಮೇಜರ್ ಫೀಚರ್ ಗಳನ್ನು ಬಳಕೆಗೆ ಮುಕ್ತ ಮಾಡಿದೆ. ಈ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಬಳಕೆದಾರರು ಸ್ಟೋರಿಗಳನ್ನು ಆರ್ಚೀವ್ ಮಾಡಬಹುದಾಗಿದ್ದು, ಜೊತೆಗೆ ಹೈಲೈಟ್ ಸಹ ಮಾಡುವ ಅವಕಾಶವನ್ನು ನೀಡಿದೆ ಎನ್ನಲಾಗಿದೆ.

ಇನ್ ಸ್ಟಗ್ರಾಮ್ ಬಳಕೆದಾರರಿಗೆ ಹೊಸ ಮಾದರಿಯ ಎರಡು ಆಯ್ಕೆಗಳು ಲಭ್ಯ..!

ಈ ಆಯ್ಕೆಯಲ್ಲಿ ಇನ್ ಸ್ಟಗ್ರಾಮ್ ಬಳಕೆದಾರರು ತಮ್ಮ ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳುವ ಮತ್ತು ನಂತರದಲ್ಲಿ ಅದನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಅದನ್ನು ಬೇರೆ ಪ್ಲಾಟ್ ಫಾರ್ಮ್ ನಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಹೊಸ ಆಯ್ಕೆಯಿಂದಾಗಿ ಇನ್ ಸ್ಟಗ್ರಾಮ್ ನಲ್ಲಿ ಆಪ್ ಲೋಡ್ ಮಾಡುವ ಸ್ಟೋರಿಗಳು ಸೇವ್ ಆಗಲಿದ್ದು, ಅದನ್ನು ಬೇಕೆಂದಾಗ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಪ್ರೋಫೈಲ್ ನಲ್ಲಿ ಹೊಸ ಟ್ಯಾಬ್ ವೊಂದನ್ನು ಇನ್ ಸ್ಟಗ್ರಾಮ್ ನೀಡಿದೆ ಎನ್ನಲಾಗಿದೆ. ಅಲ್ಲದೇ ಇವುಗಳಲ್ಲಿ ನಿಮ್ಮ ನೆಚ್ಚಿನ ಸ್ಟೋರಿಯನ್ನು ಹೈಲೈಟ್ ಮಾಡಬಹುದಾಗಿದೆ.

ಈ ಹೊಸ ಟ್ಯಾಬ್ ನಿಮ್ಮ ಪೋಸ್ಟ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ದಿನ ಕಳೆದಂತೆ ಇನ್ ಸ್ಟಗ್ರಾಮ್ ಬಳಕೆದಾರರು ಹೆಚ್ಚು ಪೋಸ್ಟ್ ಗಳಿಗಿಂತ ಸ್ಟೋರಿಯನ್ನು ಆಪ್ ಲೋಡ್ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದ್ದು, ಇದರಿಂದ ಇನ್ ಸ್ಟಗ್ರಾಮ್ ಬಳಕೆ ಮತ್ತಷ್ಟು ಹೆಚ್ಚಾಗಲಿದೆ.

ಈ ಹೊಸ ಆಯ್ಕೆಯೂ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ದೊರೆಯಲಿದ್ದು, ಇದರಿಂದಾಗಿ ಹೊಸ ಗ್ರಾಹಕರು ಇನ್ ಸ್ಟಗ್ರಾಮ್ ಕಡೆಗೆ ವಾಲಿದ್ದಾರೆ ಎನ್ನಲಾಗಿದ್ದು, ಇದು ಸ್ನಾಪ್ ಚಾಟ್ ಅನ್ನು ಮೀರಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

English summary
Instagram has rolled out two new features called Stories Archive and Stories Highlights for the users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot