ಐಪಿಎಲ್ ಅಭಿಮಾನಿಗಳಿಗಾಗಿ ವಾಟ್ಸ್ ಆಪ್ ನಲ್ಲಿ ಈ ಸ್ಟಿಕ್ಕರ್ ಗಳು

By Gizbot Bureau
|

ಸೋಷಿಯಲ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ವಾಟ್ಸ್ ಆಪ್ ಸದ್ಯ ನಡೆಯುತ್ತಿರುವ ಐಪಿಲ್ ಸೀಸನ್ ಪ್ರಯುಕ್ತ ಹೊಸದಾಗಿ ಸ್ಪೆಷಲ್ ಕ್ರಿಕೆಟ್ ಸ್ಟಿಕ್ಕರ್ ನ್ನು ಪರಿಚಯಿಸಿದೆ. ಸದ್ಯ ಸ್ಟಿಕ್ಕರ್ ಗಳು ಆಂಡ್ರಾಯ್ಡ್ ಡಿವೈಸ್ ನಲ್ಲಿ ಲಭ್ಯವಿರುತ್ತದೆ. ಐಓಎಸ್ ನಲ್ಲೂ ಕೂಡ ಕೆಲವೇ ದಿನಗಳಲ್ಲಿ ಇದು ಲಭ್ಯವಾಗುತ್ತದೆ.

ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯ:

ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯ:

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2019 ಮಾರ್ಚ್ 23 ರಿಂದ ಆರಂಭವಾಗಿದೆ. ಮೇ ಮಧ್ಯದ ವರೆಗೆ ದೇಶದಾದ್ಯಂತ ಈ ಕ್ರಿಕೆಟ್ ಕಾರ್ಯಕ್ರಮ ಜರುಗಲಿದೆ. ಹೊಸದಾಗಿ ಪ್ರಕಟಿಸಿರುವ ಸ್ಟಿಕ್ಕರ್ ಗಳು ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಿದ್ದು ಜನರು ತಮ್ಮ ಮೂಡ್, ಪ್ರತಿಕ್ರಿಯೆ ಮತ್ತು ಅನುಭವವನ್ನು ಆಯಾ ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಎಂದು ಕಂಪೆನಿ ತಿಳಿಸಿದೆ.

ವಾಬೇಟಾಇನ್ಫೋ ಮಾಹಿತಿ:

ವಾಬೇಟಾಇನ್ಫೋ ಮಾಹಿತಿ:

ವಾಟ್ಸ್ ಆಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸದಾಗಿ ಕೆಲವು ಫೀಚರ್ ಗಳನ್ನು ಬಿಡುಗಡೆಗೊಳಿಸುವುದಕ್ಕಾಗಿ ಕೆಲಸ ಮಾಡುತ್ತಿದೆ. ಸದ್ಯ ಈ ಫೀಚರ್ ಗಳು ಆಪ್ ನ ಬೇಟಾ ವರ್ಷನ್ ನಲ್ಲಿ ಲಭ್ಯವಿದೆ.ವಾಟ್ಸ್ ಆಪ್ ನ ಹೊಸ ಅಪ್ ಡೇಟ್ ಗಳ ಬಗ್ಗೆ ಯಾವಾಗಲೂ ಟ್ರ್ಯಾಕ್ ಇಟ್ಟುಕೊಳ್ಳುವ ವಾಬೇಟಾಇನ್ಫೋ ತಿಳಿಸಿರುವ ಪ್ರಕಾರ ವಾಟ್ಸ್ ಆಪ್ ಆಂಡ್ರಾಯ್ಡ್ ಬೇಟಾ ವರ್ಷನ್ 2.19.106 ನಲ್ಲಿ ಈ ಅಪ್ ಡೇಟ್ ಗಳು ಲಭ್ಯವಿದೆ. ಹೊಸ ಬೇಟಾ ವರ್ಷನ್ ನಲ್ಲಿರುವ ಈ ಫೀಚರ್ ನಲ್ಲಿ ಡೂಡಲ್ ಪಿಕ್ಕರ್ ಗೆ ಕೆಲವು ಅಭಿವೃದ್ಧಿಯನ್ನು ಮಾಡಲಾಗಿದ್ದು ಸ್ಟಿಕ್ಕರ್ಸ್ ಮತ್ತು ಎಮೋಜಿಗಳು ಗ್ರೂಪ್ಡ್ ಟ್ಯಾಬ್ಸ್ ನಲ್ಲಿ ಲಭ್ಯವಾಗುತ್ತದೆ.

ರೀಡಿಸೈನ್:

ರೀಡಿಸೈನ್:

ವಾಟ್ಸ್ ಆಪ್ ನ ಕೀಬೋರ್ಡ್ ನಲ್ಲಿ ಬಳಸಲಾಗುವ ಅಧಿಕೃತ ಎಮೋಜಿಗಳಂತೆಯೇ ಈಗ ಹೊಸದಾಗಿ ಬಿಡುಗಡೆಗೊಳ್ಳಲಿರುವ ಎಮೋಜಿಗಳಿರುತ್ತವೆ ಎಂದು ಹೇಳಲಾಗುತ್ತಿದೆ.ಆದರೆ ಇವುಗಳನ್ನು ವಾಟ್ಸ್ ಆಪ್ ಇನ್ನೂ ಬಿಡುಗಡೆಗೊಳಿಸಿಲ್ಲ ಯಾಕೆಂದರೆ ಇದನ್ನು ರೀಡಿಸೈನ್ ಮಾಡುವುದಕ್ಕೆ ವಾಟ್ಸ್ ಆಪ್ ಸಮಯ ತೆಗೆದುಕೊಳ್ಳುತ್ತಿದೆ ಎಂದು ವಾಬೇಟಾಇನ್ಫೋ ವರದಿ ಮಾಡಿದೆ.

ಆರ್ಕೈವ್ ಫೀಚರ್:

ಆರ್ಕೈವ್ ಫೀಚರ್:

ಅಪ್ ಡೇಟ್ ನಲ್ಲಿ ಪರಿಚಯಿಸಲಾಗಿರುವ ಮತ್ತೊಂದು ಅಪ್ ಡೇಟ್ ಏನೆಂದರೆ ಆರ್ಕೈವ್ಡ್ ಚಾಟ್ ಆಯ್ಕೆಯು ಮೆನುವಿನ ಪ್ರಮುಖ ಸೈಡ್ ನಲ್ಲಿರುತ್ತದೆ. ಚಾಟ್ ಆರ್ಕೈವ್ ಆಗಿದೆಯೋ ಅಥವಾ ಅನ್ ಆರ್ಕೈವ್ ಬಗ್ಗೆ ಬಳಕೆದಾರರು ಕಂಟ್ರೋಲ್ ಹೊಂದಿರುವುದಕ್ಕೆ ಅವಕಾಶವಿರುತ್ತದೆ. ಸದ್ಯ ವಾಟ್ಸ್ ಆಪ್ ನಲ್ಲಿ ನೀವು ಯಾವುದೇ ಚಾಟ್ ನ್ನು ಆರ್ಕೈವ್ ಮಾಡಿದರೆ ಹೊಸ ಚಾಟ್ ಬಂದ ಕೂಡಲೇ ಸ್ವಯಂಚಾಲಿತವಾಗಿ ಆರ್ಕೈವ್ ಆಗಿರುವ ಚಾಟ್ ಅನ್ ಆರ್ಕೈವ್ ಆಗುತ್ತದೆ.ಆದರೆ ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ . ಈಗಾಗಲೇಈ ಹೊಸ ಫೀಚರ್ ವಾಟ್ಸ್ ಆಪ್ ನ 2.19.101 ನ ಬೇಟಾ ವರ್ಷನ್ ನಲ್ಲಿ ಲಭ್ಯವಾಗಿದೆ.

Best Mobiles in India

English summary
IPL fans, WhatsApp has these cricket stickers for you

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X