ಫೆಬ್ರವರಿ 24 ರಿಂದ ಗೂಗಲ್‌ನ ಈ ಸೇವೆ ಸಂಪೂರ್ಣ ಬಂದ್..!‌

By Gizbot Bureau
|

ಫೆಬ್ರವರಿ ಕೊನೆಯಲ್ಲಿ ಎಲ್ಲ ಗೂಗಲ್ ಪ್ಲೇ ಮ್ಯೂಸಿಕ್ ಡೇಟಾವನ್ನು ಅಳಿಸಲಾಗುವುದು ಎಂದು ಗೂಗಲ್ ತನ್ನ ಬಳಕೆದಾರರಿಗೆ ತಿಳಿಸಿದೆ. ಈ ಬಗ್ಗೆ ತನ್ನ ಗೂಗಲ್‌ ಪ್ಲೇ ಮ್ಯೂಸಿಕ್‌ ಬಳಕೆದಾರರಿಗೆ ಇ-ಮೇಲ್‌ ಮಾಡಿರುವ ಗೂಗಲ್‌, ಈ ಡೇಟಾದಲ್ಲಿ ಅಪ್‌ಲೋಡ್‌ ಮಾಡಿರುವ ಮತ್ತು ಗೂಗಲ್‌ ಪ್ಲೇ ಮ್ಯೂಸಿಕ್‌ನಿಂದ ಖರೀದಿಸಿದ ಹಾಡುಗಳಿರುವ ಸಂಗೀತ ಲೈಬ್ರರಿ ಇರುತ್ತದೆ ಎಂದು ಹೇಳಿದೆ. ಫೆಬ್ರವರಿ 24 ರಂದು ಮಾಹಿತಿಯನ್ನು ಅಳಿಸಲಾಗುತ್ತದೆ ಎಂದು ಗೂಗಲ್‌ ತಿಳಿಸಿದ್ದು, ಅದನ್ನು ವಾಪಸ್‌ ಪಡೆಯಲು ಯಾವುದೇ ಮಾರ್ಗವಿಲ್ಲ.

ಫೆಬ್ರವರಿ 24 ರಿಂದ ಗೂಗಲ್‌ನ ಈ ಸೇವೆ ಸಂಪೂರ್ಣ ಬಂದ್..!‌

“ಫೆಬ್ರವರಿ 24, 2021ರಂದು, ನಿಮ್ಮ ಎಲ್ಲಾ ಗೂಗಲ್‌ ಪ್ಲೇ ಮ್ಯೂಸಿಕ್‌ ಡೇಟಾವನ್ನು ನಾವು ಡಿಲೀಟ್‌ ಮಾಡುತ್ತೇವೆ. ಇದರಲ್ಲಿ ಯಾವುದೇ ಅಪ್‌ಲೋಡ್‌ಗಳು ಮತ್ತು ಗೂಗಲ್‌ ಪ್ಲೇ ಮ್ಯೂಸಿಕ್‌ನಿಂದ ಖರೀದಿಸಿದ ಹಾಡುಗಳಿರುವ ಸಂಗೀತ ಲೈಬ್ರರಿಯನ್ನು ಇದು ಒಳಗೊಂಡಿದೆ. ಫೆಬ್ರವರಿ 24ರ ಬಳಿಕ ಆ ಮಾಹಿತಿಯನ್ನು ಮರುಪಡೆಯಲು ಯಾವುದೇ ಮಾರ್ಗವಿಲ್ಲ” ಎಂದು ಗೂಗಲ್‌ ತನ್ನ ಮೇಲ್‌ನಲ್ಲಿ ತಿಳಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗೂಗಲ್‌ ತನ್ನ ಮ್ಯೂಸಿಕ್‌ ಸ್ಟ್ರೀಮಿಂಗ್‌ ವೇದಿಕೆಯನ್ನು ಡಿಸೆಂಬರ್ 2020ರಲ್ಲಿಯೇ ಅಧಿಕೃತವಾಗಿ ಮುಚ್ಚಿದೆ. ಆದಾಗ್ಯೂ, ಗೂಗಲ್ ಪ್ಲೇ ಮ್ಯೂಸಿಕ್‌ನಿಂದ ತಮ್ಮ ಮಾಹಿತಿಯನ್ನು ಡೌನ್‌ಲೋಡ್ ಮಾಡಲು, ವರ್ಗಾಯಿಸಲು ಅಥವಾ ಡಿಲೀಟ್‌ ಮಾಡಲು ಫೆಬ್ರವರಿ 24 ರವರೆಗೆ ಸಮಯವನ್ನು ನೀಡಿದೆ. ಅದರ ಬಳಿಕ ಎಲ್ಲವನ್ನೂ ಶಾಶ್ವತವಾಗಿ ಅಳಿಸಲಾಗುತ್ತದೆ. ಅದಲ್ಲದೇ ಫೆಬ್ರವರಿ 24ರ ಮೊದಲು ತನ್ನ ಯೂಟ್ಯೂಬ್‌ ಮ್ಯೂಸಿಕ್‌ಗೆ ವರ್ಗಾಯಿಸುವಂತೆ ಗೂಗಲ್‌ ಬಳಕೆದಾರರಿಗೆ ತಿಳಿಸಿದೆ.

ಗೂಗಲ್‌ ಪ್ಲೇ ಮ್ಯೂಸಿಕ್‌ನಿಂದ ಡೇಟಾ ವರ್ಗಾವಣೆ ಹೇಗೆ..?

ಹಂತ 1 : ಐಒಎಸ್ ಅಥವಾ ಆಂಡ್ರಾಯ್ಡ್‌ಗಾಗಿ ಯೂಟ್ಯೂಬ್ ಮ್ಯೂಸಿಕ್ ಆಪ್‌ ಡೌನ್‌ಲೋಡ್ ಮಾಡಿ.

ಹಂತ 2 : ಪರದೆಯ ಮೇಲ್ಭಾಗದಲ್ಲಿರುವ ಟ್ರಾನ್ಸ್‌ಫರ್‌ ಬಟನ್‌ ಟ್ಯಾಪ್ ಮಾಡಿ.

ಹಂತ 3 : ಈಗ ನೀವು ಅಪ್‌ಲೋಡ್‌ ಮಾಡಿದ ಹಾಡುಗಳು, ಖರೀದಿಸಿದ ಸಂಗೀತ, ಸೇರಿಸಿದ ಹಾಡುಗಳು ಮತ್ತು ಆಲ್ಬಮ್‌ಗಳು, ವೈಯಕ್ತಿಕ ಮತ್ತು ಸಬ್‌ಸ್ಕ್ರೈಬ್‌ ಆದ ಪ್ಲೇಲಿಸ್ಟ್‌ಗಳು, ನಿಮ್ಮ ಲೈಕ್ಸ್‌ ಹಾಗೂ ಡಿಸ್‌ಲೈಕ್ಸ್‌ಗಳು, ನಿಮ್ಮ ವೈಯಕ್ತಿಕ ಅಭಿರುಚಿ ಆದ್ಯತೆಗಳು ಸೇರಿ ಎಲ್ಲ ಮಾಹಿತಿ ಗೂಗಲ್‌ ಪ್ಲೇ ಮ್ಯೂಸಿಕ್‌ನಿಂದ ಯೂಟ್ಯೂಬ್‌ ಮ್ಯೂಸಿಕ್‌ಗೆ ವರ್ಗಾವಣೆ ಆಗಲು ಪ್ರಾರಂಭಿಸುತ್ತದೆ.

ಹಂತ 4 : ಡೇಟಾ ವರ್ಗಾವಣೆಗೆ ಕೆಲವು ಗಂಟೆಗಳು ಸಮಯವಾಗಬಹುದು.

ಹಂತ 5 : ಬಳಕೆದಾರರು ತಮ್ಮ ಮ್ಯೂಸಿಕ್‌ ಲೈಬ್ರರಿಯ ವರ್ಗಾವಣೆ ಪೂರ್ಣಗೊಂಡ ಬಳಿಕ ನೊಟಿಫಿಕೇಷನ್‌ ಮತ್ತು ಇ-ಮೇಲ್ ಪಡೆಯುತ್ತಾರೆ.

ಜೂನ್ 1ರಿಂದ ನಿಷ್ಕ್ರಿಯ ಜಿಮೇಲ್ ಖಾತೆಗಳ ಸ್ಥಗಿತ..?

ಟೆಕ್‌ ದೈತ್ಯ ಗೂಗಲ್‌ ಜೂನ್‌ 1, 2021 ರಿಂದ ಹೊಸ ನೀತಿ ಜಾರಿಗೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಬಳಕೆದಾರರ ಜಿಮೇಲ್‌ ಖಾತೆಗಳನ್ನು ಗೂಗಲ್‌ ಸ್ಥಗಿತಗೊಳಿಸಬಹುದು ಎನ್ನಲಾಗಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಗೂಗಲ್‌, ತನ್ನ ಹೊಸ ನೀತಿಯಂತೆ ನಿಷ್ಕ್ರಿಯವಾಗಿರುವ ಅಥವಾ ಅವುಗಳ ಸಂಗ್ರಹ ಮಿತಿಯನ್ನು ಮೀರಿರುವ ಜಿಮೇಲ್, ಗೂಗಲ್‌ ಡ್ರೈವ್ (ಗೂಗಲ್ ಡಾಕ್ಸ್, ಶೀಟ್ಸ್‌, ಸ್ಲೈಡ್ಸ್‌, ರೇಖಾಚಿತ್ರ, ಫಾರ್ಮ್ಸ್‌ ಮತ್ತು ಜಾಮ್‌ಬೋರ್ಡ್ ಫೈಲ್‌ಗಳನ್ನು ಒಳಗೊಂಡಂತೆ) ಮತ್ತು ಫೋಟೋಸ್‌ಗಳನ್ನು ಸಾಮಾನ್ಯ ಅಭ್ಯಾಸಗಳೊಂದಿಗೆ ಬಳಸುವುದು ಉತ್ತಮ ಎಂದು ಹೇಳಿದೆ.

ಜಿಮೇಲ್‌ ಖಾತೆಯನ್ನು ಸಕ್ರಿಯವಾಗಿರಿಸುವುದು ಹೇಗೆ..?

ನಿಮ್ಮ ಖಾತೆಯನ್ನು ಸಕ್ರಿಯವಾಗಿಡುವ ಸರಳ ಮಾರ್ಗವೆಂದರೆ ವೆಬ್ ಅಥವಾ ಮೊಬೈಲ್‌ನಲ್ಲಿ ನಿಯಮಿತವಾಗಿ ಜಿಮೇಲ್‌, ಗೂಗಲ್‌ ಡ್ರೈವ್ ಅಥವಾ ಗೂಗಲ್‌ ಫೋಟೋಸ್‌ಗೆ ಭೇಟಿ ನೀಡುವುದು. ಸೈನ್ ಇನ್ ಆಗಿರುವಾಗ ಮತ್ತು ಇಂಟರ್ನೆಟ್‌ಗೆ ಸಂಪರ್ಕ ಸಾಧಿಸುವುದು. ಇದರಿಂದ ನಿಮ್ಮ ಖಾತೆಗಳು ಸಕ್ರಿಯವಾಗಿರುತ್ತವೆ.

Most Read Articles
Best Mobiles in India

Read more about:
English summary
It's Time To Say Goodbye To Google Play Music; Save Your Data Before It Shuts Down

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X