'ಜಿಯೋಸಾವನ್' ಆಪ್ ಲೊಕಾರ್ಪಣೆ!..ಜಿಯೋ ಗ್ರಾಹಕರಿಗೆ 3 ತಿಂಗಳು ಉಚಿತ ಸೇವೆ!!

|

ಸಂಗೀತ, ಮೀಡಿಯಾಗೆ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆಯಾದ 'ಜಿಯೋಸಾವನ್' ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಸಾವನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇದೀಗ ಲೋಕಾರ್ಪಣೆಗೊಳಿಸಿದೆ. ಭಾರತದ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಆಗಿದ್ದ ಜಿಯೋಮ್ಯೂಸಿಕ್ ಹಾಗೂ ವಿಶ್ವದ ಮುಂಚೂಣಿ ಮ್ಯೂಸಿಕ್ ಆಪ್ 'ಸಾವನ್‌' ಅಧಿಕೃತವಾಗಿ
ಜೊತೆಗೂಡಿದ್ದು, ಈಗ 'ಜಿಯೋಸಾವನ್' ಆಪ್ ಮ್ಯೂಸಿಕ್ ಪ್ರಿಯರಿಗೆ ಲಭ್ಯವಿದೆ.

ಕಳೆದ ಮಾರ್ಚ್ 2018ರಲ್ಲಿ, ಸಾವನ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಸೇರ್ಪಡೆಯಾದ ಸಂದರ್ಭದಲ್ಲಿ ಘೋಷಿಸಿದಂತೆ, ಈ 'ಜಿಯೋಸಾವನ್' ಸಂಸ್ಥೆಯ ಮೌಲ್ಯ ಒಂದು ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿದೆ. ಹಾಗಾಗಿ, ಈ 'ಜಿಯೋಸಾವನ್' ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಮೌಲ್ಯಯುತ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಯಾದೆ. ಜೊತೆಗೆ ವಿಶ್ವದಲ್ಲೇ ಅತ್ಯಂತ ಜನಪ್ರಿಯ ವೇದಿಕೆಗಳಲ್ಲೊಂದು ಎಂದು ಕರೆಸಿಕೊಂಡಿದೆ.

'ಜಿಯೋಸಾವನ್' ಆಪ್ ಲೊಕಾರ್ಪಣೆ!..ಜಿಯೋ ಗ್ರಾಹಕರಿಗೆ 3 ತಿಂಗಳು ಉಚಿತ ಸೇವೆ!!

252 ಮಿಲಿಯನ್‌ಗೂ ಹೆಚ್ಚು ಚಂದಾದಾರರೊಡನೆ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಜಾಲವಾಗಿರುವ ಜಿಯೋ ಡಿಜಿಟಲ್ ಸೇವೆಗಳ ಇಕೋಸಿಸ್ಟಂ ಹಾಗೂ ಸಾವನ್‌ನ ಸ್ಟ್ರೀಮಿಂಗ್ ಮೀಡಿಯಾ ಪರಿಣತಿ ಒಟ್ಟುಗೂಡಿ ಜಿಯೋಸಾವನ್ ಆಪ್ ರೂಪುಗೊಂಡಿದೆ. ಇನ್ನು ಆಪ್ ಲೋಕಾರ್ಪಣೆಯಾದ ನಂತರ ಜಿಯೋ ಬಳಕೆದಾರರಿಗೆ ಮೂರು ತಿಂಗಳ ಉಚಿತ ಆಪ್ ಬಳಕೆಗೆ ಜಿಯೋ ಅವಕಾಶ ನೀಡಿದೆ. ಹಾಗಾದರೆ, ಲೋಕಾರ್ಪಣೆಯಾದ 'ಜಿಯೋಸಾವನ್ '‌ಆಪ್ ಅನ್ನು ಏಕೆ ಡೌನ್‌ಲೋಡ್ ಮಾಡಬೇಕು ಎಂದು ಮುಂದೆ ಓದಿ ತಿಳಿಯಿರಿ.

ಹೊಸ ಅನುಭವಗಳನ್ನು ನಿರೀಕ್ಷಿಸಬಹುದು!

ಹೊಸ ಅನುಭವಗಳನ್ನು ನಿರೀಕ್ಷಿಸಬಹುದು!

ಜಿಯೋಸಾವನ್ ಆಪ್‌ನಿಂದ ಗ್ರಾಹಕರು ಆಪ್‌ನೊಳಗಿಗೆ ಉತ್ಪನ್ನಗಳು ಹಾಗೂ ಸಂಗೀತದ ಹೊಸ ಅನುಭವಗಳನ್ನು ನಿರೀಕ್ಷಿಸಬಹುದಾಗಿದೆ. ಇಂಟರಾಕ್ಟಿವ್ ಲಿರಿಕ್ಸ್ ಸೌಲಭ್ಯ, ಸ್ಥಳೀಯ ಭಾಷೆಗಳಲ್ಲಿನ ಮಾಹಿತಿ, ಕಾನ್ಸರ್ಟ್ ಹಾಗೂ ಲೈವ್ ಕಾರ್ಯಕ್ರಮಗಳೊಡನೆ ಜೊತೆಗೂಡುವಿಕೆ ಮಾತ್ರವೇ ಅಲ್ಲದೆ ವಿಶಿಷ್ಟ ವೀಡಿಯೋ ಕಂಟೆಂಟ್ ಕೂಡ ಮುಂದಿನ ಕೆಲ ತಿಂಗಳುಗಳಲ್ಲಿ ಈ ವೇದಿಕೆಯ ಮೂಲಕ ದೊರಕಲಿವೆ.

ಜಾಹೀರಾತು ಬೆಂಬಲಿತ ಆವೃತ್ತಿ ಇಲ್ಲ

ಜಾಹೀರಾತು ಬೆಂಬಲಿತ ಆವೃತ್ತಿ ಇಲ್ಲ

ಗ್ರಾಹಕರಿಗೂ ದೊರಕಲಿರುವ ಈ ಸೇವೆಯನ್ನು ಭಾರತದಲ್ಲಿ ಫ್ರೀಮಿಯಂ ಮಾದರಿಯಲ್ಲಿ ನೀಡಲಾಗುತ್ತಿದೆ. ಜಿಯೋ ಗ್ರಾಹಕರು ಏಕೀಕೃತ ಆಪ್‌ಗೆ ಮುಕ್ತ ಪ್ರವೇಶ ಪಡೆಯಲಿದ್ದಾರೆ. ಹೆಚ್ಚುವರಿಯಾಗಿ, ಈ ಲೋಕಾರ್ಪಣೆಯ ಅಂಗವಾಗಿ, ಜಿಯೋ ಗ್ರಾಹಕರು ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆವೃತ್ತಿಯಾದ ಜಿಯೋಸಾವನ್ ಪ್ರೋ ಅನ್ನು 90 ದಿನಗಳ ಕಾಲ ಉಚಿತವಾಗಿ ಬಳಸಬಹುದಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್

ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್

ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್ ಹಾಗೂ ಕಲಾವಿದರ ಅಭಿವೃದ್ಧಿ ವೇದಿಕೆಯಾದ ಆರ್ಟಿಸ್ಟ್ ಒರಿಜಿನಲ್ಸ್ (ಏಓ) ಅನ್ನು ಜಿಯೋಸಾವನ್ ಮುಂದೆಯೂ ಬೆಳೆಸಲಿದೆ. ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್, 'ನೋಫಿಲ್ಟರ್‌ನೇಹಾ', 'ಥ್ಯಾಂಕ್ ಯೂ ಫಾರ್ ಶೇರಿಂಗ್', 'ಟೇಕ್ 2 ವಿತ್ ಅನುಪಮಾ ಆಂಡ್ ರಾಜೀವ್', 'ಟಾಕಿಂಗ್ ಮ್ಯೂಸಿಕ್' ಹಾಗೂ 'ಕಹಾನಿ ಎಕ್ಸ್‌ಪ್ರೆಸ್ ವಿತ್ ನೀಲೇಶ್ ಮಿಸ್ರಾ'ದಂತಹ ಭಾರತದ ಅತ್ಯಂತ ಜನಪ್ರಿಯ ಆಡಿಯೋ ಪಾಡ್ ಕಾಸ್ಟ್‌ಗಳನ್ನು ನಿರ್ಮಿಸಿ ವಿತರಿಸುತ್ತಿದೆ.

ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದೇನು?

ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದೇನು?

ಜಿಯೋಸಾವನ್ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ತಂತ್ರಜ್ಞಾನದ ವಿನೂತನ ಆವಿಷ್ಕಾರಗಳನ್ನು ಕ್ಷಿಪ್ರವಾಗಿ ಅನುಭವಿಸುತ್ತಿರುವ, ಡಿಜಿಟಲ್ ಸೇವೆಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿರುವ, ಜಾಗತಿಕ ಮಟ್ಟದ ಡಿಜಿಟಲ್ ಮ್ಯೂಸಿಕ್ ಉದ್ದಿಮೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಭಾರತದ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಜಿಯೋಸಾವನ್ ಒಂದು ಮಹತ್ವದ ತಿರುವು ನೀಡಿಎದೆ. ಜಿಯೋನ ಆಧುನಿಕ ಡಿಜಿಟಲ್ ಸೇವೆಗಳ ಮೂಲಸೌಕರ್ಯ ಹಾಗೂ ವ್ಯಾಪಕ ಬಳಕೆದಾರ ಸಮುದಾಯವನ್ನು ಬಳಸಲಿರುವ ಜಿಯೋಸಾವನ್ ಭಾರತದ ಅತಿದೊಡ್ಡ ಸ್ಟ್ರೀಮಿಂಗ್ ವೇದಿಕೆಯಾಗಲಿದೆ" ಎಂದು ಹೇಳಿದ್ದಾರೆ.

ಸಿಇಓ ರಿಷಿ ಮಲ್ಹೋತ್ರಾ ಅವರು ಹೇಳಿದ್ದೇನು?

ಸಿಇಓ ರಿಷಿ ಮಲ್ಹೋತ್ರಾ ಅವರು ಹೇಳಿದ್ದೇನು?

ಜಿಯೋಸಾವನ್ ಸಹ-ಸ್ಥಾಪಕ ಹಾಗೂ ಸಿಇಓ ರಿಷಿ ಮಲ್ಹೋತ್ರಾ ಮಾತನಾಡಿ, "ಮಾರ್ಚ್ 2018ರಲ್ಲಿ ನಮ್ಮ ಒಗ್ಗೂಡುವಿಕೆಯನ್ನು ಘೋಷಿಸಿದಾಗಿನಿಂದ ಜಿಯೋ ಹಾಗೂ ಸಾವನ್ ತಂಡಗಳು ಏಕೀಕೃತ ಜಿಯೋಸಾವನ್ ವೇದಿಕೆಯನ್ನು ರೂಪಿಸುವಲ್ಲಿ ತೊಡಗಿಕೊಂಡಿವೆ. ಇದರ ಫಲವಾಗಿ ಇಂದು ವಿಶ್ವದಲ್ಲೇ ಅತ್ಯಂತ ವೈಯಕ್ತಿಕ ಅನುಭವ ನೀಡುವ ಸಶಕ್ತ ಮೀಡಿಯಾ ವೇದಿಕೆಯನ್ನು ನಾವು ನೋಡುತ್ತಿದ್ದೇವೆ. ಸಾಟಿಯಿಲ್ಲದ ಕಂಟೆಂಟ್ ಕ್ಯಾಟಲಾಗ್, ಸ್ಥಳೀಯ ಸಂಪಾದಕೀಯ ಹಾಗೂ ಒರಿಜಿನಲ್ ಪ್ರೋಗ್ರಾಮಿಂಗ್ ಮತ್ತು ವಿಶ್ವದೆಲ್ಲೆಡೆಯ ಕೇಳುಗರೊಡನೆ ಕಲಾವಿದರ ನೇರ ಒಡನಾಟಕ್ಕೆ ಹೊಸ ಸ್ವರೂಪ ನೀಡುತ್ತಿರುವ ಸಂಗೀತ ನಮ್ಮಲ್ಲಿದೆ" ಎಂದು ಹೇಳಿದ್ದಾರೆ.

ಸಂಗೀತ ಉದ್ದಿಮೆಯಲ್ಲೂ ಒಂದು ಹೊಸ ಶಕೆ

ಸಂಗೀತ ಉದ್ದಿಮೆಯಲ್ಲೂ ಒಂದು ಹೊಸ ಶಕೆ

"ಜಿಯೋಸಾವನ್ ಲೋಕಾರ್ಪಣೆ ಭಾರತದ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಷ್ಟೇ ಅಲ್ಲದೆ ಜಾಗತಿಕ ಸಂಗೀತ ಉದ್ದಿಮೆಯಲ್ಲೂ ಒಂದು ಹೊಸ ಶಕೆಯನ್ನು ಪ್ರಾರಂಭಿಸುತ್ತಿದೆ. ಜಿಯೋ ಜಾಲದ ವ್ಯಾಪ್ತಿ-ಗುಣಮಟ್ಟಗಳ ಜೊತೆಗೆ ನಮ್ಮ ಅನುಭವವೂ ಸೇರಿರುವುದರಿಂದ ಜಿಯೋಸಾವನ್ ಮುಂದೆ ಅತ್ಯುತ್ತಮವಾಗಿ ಬೆಳೆಯಲಿದೆ. ಕಂಟೆಂಟ್, ವ್ಯವಹಾರ ಹಾಗೂ ಸಂಸ್ಕೃತಿಯನ್ನು ಒಟ್ಟಿಗೆ ತರಲು ಇದರಿಂದ ಲೇಬಲ್ ಪಾರ್ಟ್‌ನರ್‌ಗಳು, ಬ್ರಾಂಡ್ ಜಾಹೀರಾತುದಾರರು ಹಾಗೂ ಸ್ವತಂತ್ರ ಕಲಾವಿದರೆಲ್ಲರೂ ಸೇರಿದ ಇಡೀ ವ್ಯವಸ್ಥೆಗೆ ಸಹಾಯವಾಗಲಿದೆ" ಎಂದು ಕಾರ್ಯಕಾರಿ ಉಪಾಧ್ಯಕ್ಷ ಪರಮ್‌ದೀಪ್ ಸಿಂಗ್ ಅವರು ಹೇಳಿದ್ದಾರೆ.

Best Mobiles in India

English summary
JioSaavn App Unveiled for Android, iOS; 90-Day Complimentary Pro Access Offered to Jio Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X