ತುರ್ತು ಸಮಯದಲ್ಲಿ ರಕ್ತಕ್ಕಾಗಿ ಆಪ್ ನಿರ್ಮಿಸಿದ ವಿದ್ಯಾರ್ಥಿಗಳು.!

ಬ್ಲಡ್ ಬ್ರಿಡ್ಜ್ ಎಂಬ ಹೆಸರಿನ ಈ ಆಪ್ ನಲ್ಲಿ ರಕ್ತದಾನ ಮಾಡುವವರು ಮತ್ತು ರಕ್ತ ಬೇಕಾದರು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದ್ದು, ಈ ಆಪ್ ಇವರಿಬ್ಬರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

|

ತುರ್ತು ಸಮಯದಲ್ಲಿ ರಕ್ತ ಬೇಕಾದ ಸಂದರ್ಭದಲ್ಲಿ ನಾವು ಯಾರ ಸಹಾಯವನ್ನು ಪಡೆಯಬೇಕು ಎಂದು ಯೋಚಿಸಲು ಸಹ ಸಮಯವಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ನಮಗೆ ಸಹಾಯ ಮಾಡುವ ಆಪ್ ವೊಂದನ್ನು ವಿದ್ಯಾರ್ಥಿಗಳೇ ಅಭಿವೃದ್ಧಿ ಪಡಿಸಿದ್ದಾರೆ.

ತುರ್ತು ಸಮಯದಲ್ಲಿ ರಕ್ತಕ್ಕಾಗಿ ಆಪ್ ನಿರ್ಮಿಸಿದ ವಿದ್ಯಾರ್ಥಿಗಳು.!

ಓದಿರಿ: ಅಮೆಜಾನ್‌ನಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ಯಾನ್: ಕಾರಣ ಭಾರತೀಯರು ಮೆಚ್ಚುವಂತದ್ದು.!!

ಬ್ಲಡ್ ಬ್ರಿಡ್ಜ್ ಎಂಬ ಹೆಸರಿನ ಈ ಆಪ್ ನಲ್ಲಿ ರಕ್ತದಾನ ಮಾಡುವವರು ಮತ್ತು ರಕ್ತ ಬೇಕಾದರು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದ್ದು, ಈ ಆಪ್ ಇವರಿಬ್ಬರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಆಪ್:

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಆಪ್:

ಈ ಬ್ಲಡ್ ಬ್ರಿಡ್ಜ್ ಆಪ್ ಅನ್ನು ಹೈದರಾಬಾದ್ ಮೂಲದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿ ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ. ಈ ಆಪ್ ಮೂಲಕ ತುರ್ತು ಸಮಯದಲ್ಲಿ ರಕ್ತ ದೊರೆಯುವಂತೆ ಮಾಡಿ ಜೀವ ಉಳಿಸುವುದೇ ಇವರ ಗುರಿಯಾಗಿದೆ.

ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ..?

ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ..?

ಈ ಆಪ್ ನಲ್ಲಿ ರಕ್ತವನ್ನು ದಾನ ಮಾಡುವವರು ತಮ್ಮ ಮೊಬೈಲ್ ನಲ್ಲಿ ಆಪ್ ಇನ್‌ಸ್ಟಾಲ್ ಮಾಡಿಕೊಂಡು ತಮ್ಮ ಹೆಸರು, ವಿಳಾಸ ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ನೀಡಿ ರಿಜಿಸ್ಟರ್ ಆಗಬೇಕಾಗುತ್ತಿದೆ. ನಂತರ ರಕ್ತ ಬೇಕಾಗಿರುವವರು ಈ ಆಪ್ ಹಾಕಿಕೊಂಡು ಅದರಲ್ಲಿ ರಕ್ತದ ಮಾದರಿ ಮತ್ತು ಸ್ಥಳದ ಮಾಹಿತಿಯನ್ನು ನಮೂದಿಸಬೇಕುತ್ತದೆ.

ನೋಟಿಫಿಕೇಷನ್ ಬರಲಿದೆ:

ನೋಟಿಫಿಕೇಷನ್ ಬರಲಿದೆ:

ರಕ್ತದ ಅಗತ್ಯ ಇದ್ದವರು ರಕ್ತದ ಮಾದರಿ ಮತ್ತು ಸ್ಥಳದ ಮಾಹಿತಿಯನ್ನು ನೀಡಿದ ಸಂದರ್ಭದಲ್ಲಿ ಅದು ರಕ್ತ ದಾನಿಗಳ ಮೊಬೈಲ್ ಸಂಖ್ಯೆಗೆ ಆ ಮಾಹಿತಿ ರವಾನೆ ಮಾಡುತ್ತದೆ. ಈ ಸಂದರ್ಭದಲ್ಲಿ ರಕ್ತ ಬೇಕಾಗಿರುವವರ ಹತ್ತಿರದಲ್ಲಿ ಇರುವ ದಾನಿಗಳು ಅವರ ಸ್ಥಳಕೆ ತೆರಳಿ ರಕ್ತವನ್ನು ದಾನ ಮಾಡಬಹುದು.

ಸದ್ಯ ಆಂಡ್ರಾಯ್ಡ್ ಆಪ್ ಮಾತ್ರವೇ ಲಭ್ಯ:

ಸದ್ಯ ಆಂಡ್ರಾಯ್ಡ್ ಆಪ್ ಮಾತ್ರವೇ ಲಭ್ಯ:

ಈ ಬ್ಲಡ್ ಬ್ರಿಡ್ಜ್ ಆಪ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ. ಸದ್ಯಕ್ಕೆ ಈ ಆಪ್ ಹೈದರಾಬಾದ್ ನಗರವನ್ನು ಮಾತ್ರ ಕೇಂದ್ರಿಕರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನದಲ್ಲಿ ಇದರ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಸಾಧ್ಯತೆ ಇದೆ.

Best Mobiles in India

Read more about:
English summary
A group of engineering students of city-based colleges have built an android application to bridge the gap between blood donors and recipient institutions that the blood is donated to. to Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X