ಅಮೆಜಾನ್‌ನಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ಯಾನ್: ಕಾರಣ ಭಾರತೀಯರು ಮೆಚ್ಚುವಂತದ್ದು.!!

ಚೀನಾ ಭಾರತದೊಂದಿಗೆ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವುದರಿಂದ ಚೀನಾ ವಸ್ತುಗಳನ್ನು ಬರಿಷ್ಕರಿಸಿ ಎನ್ನುವ ಮಾತು ಕೇಳಿ ಬಂದಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಹೆಚ್ಚಾಗಿದ್ದು, ದಿನಕ್ಕೊಂದು ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬಜೆಟ್ ಬೆಲೆಯಲ್ಲಿ ದೊರೆಯತ್ತಿರುವ ಕಾರಣ ಜನರು ಸಹ ಅವುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆದರೆ ಸದ್ಯ ಚೀನಾ ಭಾರತದೊಂದಿಗೆ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವುದರಿಂದ ಚೀನಾ ವಸ್ತುಗಳನ್ನು ಬರಿಷ್ಕರಿಸಿ ಎನ್ನುವ ಮಾತು ಕೇಳಿ ಬಂದಿದೆ.

ಅಮೆಜಾನ್‌ನಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ಯಾನ್: ಕಾರಣ

ಓದಿರಿ: ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ, BSNL: ಇವುಗಳಲ್ಲಿ ಬೆಸ್ಟ್ ಆಫರ್ ಯಾವುದು? ಆಯ್ಕೆ ಬುದ್ದಿವಂತರಿಗೆ!

ಈ ಕರೆಯ ಸಮಯದಲ್ಲಿಯೇ ದೈತ್ಯ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್, ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ತನ್ನ ತಾಣದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದೆ ಎನ್ನುವ ಸುದ್ದಿಯೊಂದು ಲಭ್ಯವಾಗಿದೆ. ಇದು ಚೀನಾ ವಸ್ತುಗಳ ಬಹಿಷ್ಕರಕ್ಕೆ ಮುನ್ನಡಿಯಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಬ್ಲೂ ಸ್ಮಾರ್ಟ್‌ಫೋನ್ ಮಾರಲ್ಲ.!!

ಬ್ಲೂ ಸ್ಮಾರ್ಟ್‌ಫೋನ್ ಮಾರಲ್ಲ.!!

ಅಮೆಜಾನ್ ಇನ್ನು ಮುಂದೆ ತನ್ನ ತಾಣದಲ್ಲಿ ಚೀನಾ ಮೂಲದ ಬ್ಲೂ ಸ್ಮಾರ್ಟ್‌ಫೋನ್ ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ. ಕಾರಣ ಈ ಸ್ಮಾರ್ಟ್‌ಫೋನ್‌ಗಳು ಚೀನಾ ಸರ್ವರ್‌ಗೆ ನಿರಂತರ ಸಂದೇಶವನ್ನು ಕಳುಹಿಸುತ್ತಿವೆ ಎನ್ನುವದಕ್ಕಾಗಿ ಈ ನಿರ್ಧಾರನ್ನು ಕೈಗೊಂಡಿದೆ.

ಸೆಕ್ಯೂರಿಟಿ-ಪ್ರೈವಸಿ ವಿಚಾರವಾಗಿ:

ಸೆಕ್ಯೂರಿಟಿ-ಪ್ರೈವಸಿ ವಿಚಾರವಾಗಿ:

ಬ್ಲೂ ಸ್ಮಾರ್ಟ್‌ಫೋನ್‌ಗಳು ಸೆಕ್ಯೂರಿಟಿ-ಪ್ರೈವಸಿ ಅಂಶಗಳನ್ನು ಉಲ್ಲಂಘನೆ ಮಾಡುತ್ತಿದ್ದವು ಎಂದು ಅಮೆರಿಕಾದ ಸಂಸ್ಥೆಯೂ ತನಿಖೆಯಿಂದ ಬಹಿರಂಗಗೊಳಿಸಿತ್ತು. ಇದನ್ನು ಆಧಾರಿ ಅಮೆಜಾನ್ ಈ ಕ್ರಮಕ್ಕೆ ಮುಂದಾಗಿದೆ.

ಬ್ಲೂ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಮಾತ್ರವೇ ಇತ್ತು:

ಬ್ಲೂ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಮಾತ್ರವೇ ಇತ್ತು:

ಈ ಬ್ಲೂ ಸ್ಮಾರ್ಟ್‌ಫೋನ್ ಗಳು ಕೇವಲ ಅಮೇಜಾನ್ ಶಾಪಿಂಗ್ ತಾಣದಲ್ಲಿ ಮಾತ್ರವೇ ಮಾರಾಟವಾಗುತ್ತಿತ್ತು. ಏಕ್ಲೂಸಿವ್ ಆಫರ್ ಗಳೊಂದಿಗೆ ಈ ಸ್ಮಾರ್ಟ್‌ಫೋನ್ ಗಳನ್ನು ಮಾರಾಟ ಮಾಡುತ್ತಿದ್ದ ಅಮೆಜಾನ್, ಸದ್ಯ ಈ ಚೀನಾ ಕಂಪನಿಯನ್ನು ಸಸ್ಪೆಂಡ್ ಮಾಡಿದ್ದು, ಇನ್ನು ಮುಂದೆ ಈ ಚೀನಾ ಕಂಪನಿಯ ಫೋನ್ ಅನ್ನು ಮಾರುವುದಿಲ್ಲ ಎಂಬ ದಿಟ್ಟ ತನವನ್ನು ತೋರಿಸಿದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಭಾರತೀಯರು ಮೆಚ್ಚುವಂತಹದ್ದು:

ಭಾರತೀಯರು ಮೆಚ್ಚುವಂತಹದ್ದು:

ಅಮೇಜಾನ್ ಮಾಡಿರುವ ಈ ಕಾರ್ಯವು ಭಾರತೀಯ ಮೆಚ್ಚುವಂತದ್ದಾಗಿದ್ದು, ಇದೇ ಮಾದರಿಯಲ್ಲಿ ಬೇರೆ ಎಲ್ಲಾ ಚೀನಾ ವಸ್ತುಗಳನ್ನು ನಿ‍ಷೇಧಸಬೇಕಾಗಿದೆ. ಚೀನಾ ವಸ್ತುಗಳನ್ನೇ ಮಾರಾಟ ಮಾಡಲಿಲ್ಲ ಎಂದರೆ ಇನ್ನು ಖರೀದಿಸುವುದು ಎಲ್ಲಿಂದ ಸಾಧ್ಯ.

Best Mobiles in India

Read more about:
English summary
The e-commerce company cites “security and privacy of our customers is of the utmost importance”, and has announced that it won’t sell Blu phones till the problem is resolved. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X