ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್‌ಗಳಿಲ್ಲಿ ಇದು ಒಂದು..!

By Tejaswini P G

  ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಉತ್ಪಾದಕರು ತಮ್ಮ ಸಾಧನಗಳಿಗೆ ಕಾಲ ಕಾಲಕ್ಕೆ ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡುವುದನ್ನು ತಪ್ಪಿಸುತ್ತಿರುವುದು ಜನರ ಗಮನಕ್ಕೆ ಬಂದಿದೆ. ಈ ಆಂಡ್ರಾಯ್ಡ್ ಸೆಕ್ಯೂರಿಟಿ ಅಪ್ಡೇಟ್ಗಳು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಸೆಕ್ಯೂರಿಟಿ ಫಯರ್ವಾಲ್ ನ ಪ್ರಮುಖ ಭಾಗವಾಗಿದೆ. ಒಂದು ಸೆಕ್ಯೂರಿಟಿ ಅಪ್ಡೇಟ್ ಅನ್ನು ತಪ್ಪಿಸಿಕೊಂಡರೂ ಅದು ಆ ಸಾಧನದ ಸುರಕ್ಷತೆಗೆ ಧಕ್ಕೆಯುಂಟು ಮಾಡಬಹುದು ಮತ್ತು ಬಳಕೆದಾರರಿಗೆ ಆ ಸಾಧನ ಬಳಸುವಾಗ ಸುರಕ್ಷಿತವೆನಿಸಲಾರದು.

  ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್‌ಗಳಿಲ್ಲಿ ಇದು ಒಂದು..!

  ನಾವು ಈಗಾಗಲೇ ತಿಳಿಸಿದಂತೆ ಕಲವು OEMಗಳು ತಮ್ಮ ಸ್ಮಾರ್ಟ್ಫೋನ್ಗಳಿಗೆ ತಿಂಗಳ ಸೆಕ್ಯೂರಿಟಿ ಅಪ್ಡೇಟ್ಗಳನ್ನು ತಪ್ಪಿಸಬಹುದು ಮತ್ತು ಹೆಚ್ಚಾಗಿ ಬಲಿಪಶುವಾಗುವುದು ಆರಂಭಿಕ ಶ್ರೇಣಿಯ ಮೊಬೈಲ್ಗಳು. ಕೆಲವು ಬ್ರ್ಯಾಂಡ್ಗಳು ಸೆಕ್ಯೂರಿಟಿ ಪ್ಯಾಚ್ ಗಳ ಹೆಸರು ಬದಲಿಸಿ ಬಿಡುಗಡೆಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತದೆ.

  ಸೆಕ್ಯೂರಿಟಿ ರೀಸರ್ಚ್ ಲ್ಯಾಬ್ಸ್(SRL) ನ ಸೈಬರ್ ಸೆಕ್ಯೂರಿಟಿ ವಿಮರ್ಶಕರು OEMಗಳು ಸೆಕ್ಯೂರಿಟಿ ಅಪ್ಡೇಟ್ಗಳನ್ನು ತಪ್ಪಿಸುವುದಲ್ಲದೆ ಸೆಕ್ಯೂರಿಟಿ ಪ್ಯಾಚ್ಗಳನ್ನು ನೀಡುವ ಬಗ್ಗೆಯೂ ಸುಳ್ಳು ಹೇಳುತ್ತಾರೆ ಎಂದು ವರದಿ ಮಾಡಿದೆ. ಇದನ್ನು ಓದಿದ ನಂತರ ನಿಮಗೆ ನಿಮ್ಮ ಸಾಧನದ ಸುರಕ್ಷತೆಯ ಬಗ್ಗೆ ಸಂದೇಹ ಮೂಡುವುದು ಸಹಜ. ಈ ಸಂದರ್ಭದಲ್ಲಿ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಹೊಸ ಆಪ್ ಬಗ್ಗೆ ತಿಳಿಸಬಯಸುತ್ತಿದ್ದು, ನಿಮ್ಮ ಸ್ಮಾರ್ಟ್ಫೋನ್ ಉತ್ಪಾದಕರು ಯಾವುದಾದರೂ ಸೆಕ್ಯೂರಿಟಿ ಪ್ಯಾಚ್ ತಪ್ಪಿಸಿದ್ದರೆ ಈ ಅಪ್ ಅದನ್ನು ನಿಮಗೆ ತಿಳಿಸುತ್ತದೆ.

  ನಾವು ಈಗಾಗಲೇ ತಿಳಿಸಿದಂತೆ ಫ್ಲ್ಯಾಗ್ಶಿಪ್ ಮೊಬೈಲ್ ಗಳಿಗೆ ಯಾವುದೇ ಅಪ್ಡೇಟ್ ತಪ್ಪುವುದಿಲ್ಲ. ಆದರೆ ಆರಂಭಿಕ ಮತ್ತು ಮಧ್ಯಮ ಶ್ರೇಣಿಯ ಮೊಬೈಲ್ಗಳಿಗೆ ಸಾಮನ್ಯವಾಗಿ ಕಾಲ ಕಾಲಕ್ಕೆ ಸರಿಯಾಗಿ ಸೆಕ್ಯೂರಿಟಿ ಅಪ್ಡೇಟ್ಗಳು ದೊರೆಯುವುದಿಲ್ಲ. ಶಿಯೋಮಿ , ಹುವಾವೆ, ಮೊಟೋರೋಲಾ ಸಂಸ್ಥೆಗಳು ಸಾಮನ್ಯವಾಗಿ ಈ ಅಪ್ಡೇಟ್ಗಳನ್ನು ಮಿಸ್ ಮಾಡುತ್ತದಲ್ಲದೆ ತಿಂಗಳ ಸೆಕ್ಯೂರಿಟಿ ಅಪ್ಡೇಟ್ಗಳ ವಿಚಾರದಲ್ಲಿ ಜನರ ಹಾದಿ ತಪ್ಪಿಸುತ್ತದೆ.

  ಸ್ನೂಪ್ಸ್ನಿಚ್ ಎಂಬ ಹೊಸತಾದ ಆಪ್ ಮೂಲಕ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಇತ್ತೀಚಿಗಿನ ಆಂಡ್ರಾಯ್ಡ್ ಸೆಕ್ಯೂರಿಟಿ ಪ್ಯಾಚ್ ಇದೆಯೇ ಅಥವಾ ಯಾವುದಾದರೂ ಅಪ್ಡೇಟ್ ತಪ್ಪಿ ಹೋಗಿದೆಯೇ ಎಂದು ತಿಳಿದುಕೊಳ್ಳಬಹುದು. ತಮ್ಮ ಸ್ಮಾರ್ಟ್ಫೋನ್ ನಲ್ಲಿ ಇತ್ತೀಚಿಗಿನ ಆಂಡ್ರಾಯ್ಡ್ ಸೆಕ್ಯೂರಿಟಿ ಪ್ಯಾಚ್ ಹೊಂದಿದೆಯೇ ಇಲ್ಲವೇ ಎಂದು ತಿಳಿಯಲು ಈ ಸೂಚನೆಗಳನ್ನು ಅನುಸರಿಸಿ.

  ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್‌ಗಳಿಲ್ಲಿ ಇದು ಒಂದು..!


  ಹಂತ 1:
  ಪ್ಲೇಸ್ಟೋರ್ ನಿಂದ ಸ್ನೂಪ್ಸ್ನಿಚ್ ಆಪ್ ಅನ್ನು ಡೌನ್ಲೋಡ್ ಮಾಡಿ.

  ಹಂತ 2: ಆಪ್ ಡೌನ್ಲೋಡ್ ಮಾಡಿದ ನಂತರ ಆಪ್ ತೆರೆದು "ಕ್ಲಿಕ್ ಹಿಯರ್ ಟು ಟೆಸ್ಟ್ ಪ್ಯಾಚ್ ಲೆವೆಲ್" ಟ್ಯಾಬ್ ಅನ್ನು ಆಯ್ಕೆ ಮಾಡಿ

  ಹಂತ 3: ಇಲ್ಲಿ "ಸ್ಟಾರ್ಟ್ ಟೆಸ್ಟ್" ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಂಡ್ರಾಯ್ಡ್ ಸೆಕ್ಯೂರಿಟಿ ಪ್ಯಾಚ್ ಟೆಸ್ಟ್ ಪ್ರಾರಂಭಿಸಿ.

  ಹಂತ 4 : ಈ ಪರೀಕ್ಷೆ ಮುಗಿದ ನಂತರ ಬಳಕೆದಾರರು ತಮ್ಮ ಸಾಧನದಲ್ಲಿ ಯಾವ ಆವೃತ್ತಿಯ ಆಂಡ್ರಾಯ್ಡ್ ಸೆಕ್ಯೂರಿಟಿ ಪ್ಯಾಚ್ ಓಡುತ್ತಿದೆ ಎಂಬುದನ್ನು ತಿಳಿಯಬಹುದು. ಅಲ್ಲದೆ ನಿಮ್ಮ ಸಾಧನದಲ್ಲಿರುವ ಸೆಕ್ಯೂರಿಟಿ ಅಪ್ಡೇಟ್ ಇತ್ತೀಚಿನದ್ದೇ, ಈ ಹಿಂದೆ ತಪ್ಪಿರುವ ಸೆಕ್ಯೂರಿಟಿ ಪ್ಯಾಚ್ ನ ಸಂಖ್ಯೆ ಇತ್ಯಾದಿ ಮಾಹಿತಿಗಳೂ ಈ ಮೂಲಕ ಲಭಿಸುತ್ತದೆ.

  What is Jio Cricket Gold Pass? How to Buy it

  ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೇವೆ ಆರಂಭಿಸಿದ ಅಮೆಜಾನ್..!

  Read more about:
  English summary
  It was recently discovered that the Android smartphone manufacturers were skipping on releasing the occasional security patch for their devices. The Android security updates is an important aspect of an Android smartphone's security firewall. So skipping on one update could be a threat to device's security. SnoopSnitch app takes care of this situation.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more