ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿರುವ ಶಿಯೋಮಿ ಸ್ಮಾರ್ಟ್ ಫೋನ್ ಬಗೆಗಿನ ವದಂತಿಗಳು

By Gizbot Bureau
|

ಪ್ರತಿ ವರ್ಷವು ಹಲವು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬ್ರ್ಯಾಂಡ್ ಗಳಲ್ಲಿ ಶಿಯೋಮಿ ಕೂಡ ಒಂದು.ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಿಂದ ಹಿಡಿದು ದುಬಾರಿ ಬೆಲೆಯ ಹೈ-ಎಂಡ್ ಸ್ಮಾರ್ಟ್ ಫೋನ್ ಗಳು ಈ ಬ್ರ್ಯಾಂಡಿನಲ್ಲಿ ಲಭ್ಯವಿದೆ. ಇತ್ತೀಚೆಗಷ್ಟೇ ಈ ಬ್ರ್ಯಾಂಡಿನ ರೆಡ್ಮಿ ನೋಟ್ 9 ಪ್ರೋ ಮತ್ತು ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್ ಭಾರತದಲ್ಲಿ ಬಿಡುಗಡೆಗೊಂಡಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 720G SoC ಇದರಲ್ಲಿದೆ. ಶಿಯೋಮಿ ಎಂಐ 10 ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಶಿಯೋಮಿ

ಶಿಯೋಮಿ ಕೂಡ ಈಗಾಗಲೇ ಹಲವು ವಿಭಿನ್ನ ಮಾಡೆಲ್ಲಿನ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸುವುದಕ್ಕೆ ಪ್ರಯತ್ನಿಸುತ್ತಿದೆ ಮತ್ತು ಕೆಲವು ಸ್ಮಾರ್ಟ್ ಫೋನ್ ಗಳ ಬಗೆಗಿನ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ ಮತ್ತು ಈ ಸ್ಮಾರ್ಟ್ ಫೋನ್ ಗಳ ಬಗೆಗೆ ಹಲವು ವದಂತಿಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. 2020 ರಲ್ಲಿ ಈ ಡಿವೈಸ್ ಗಳು ಖಂಡಿತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಶಿಯೋಮಿ ರೆಡ್ಮಿ ಕೆ30ಐ 5ಜಿ

ಶಿಯೋಮಿ ರೆಡ್ಮಿ ಕೆ30ಐ 5ಜಿ

ಶಿಯೋಮಿ ರೆಡ್ಮಿ ಕೆ30ಐ 5ಜಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ 5G ಬೆಂಬಲಿತ ಸ್ಮಾರ್ಟ್ ಫೋನ್ ಆಗಿರಲಿದ್ದು ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 765G SoC ಜೊತೆಗೆ ಕನಿಷ್ಟ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರಲಿದೆ. ಇದರಲ್ಲಿ 64MP ಪ್ರೈಮರಿ ಕ್ಯಾಮರಾ ಜೊತೆಗೆ 4K ವೀಡಿಯೋ ರೆಕಾರ್ಡಿಂಗ್ ಕೆಪಾಸಿಟಿ ಲಭ್ಯವಿದೆ.

ಶಿಯೋಮಿ ಪೋಕೋ ಎಫ್2 ಪ್ರೋ

ಶಿಯೋಮಿ ಪೋಕೋ ಎಫ್2 ಪ್ರೋ

ಶಿಯೋಮಿ ಪೋಕೋ ಎಫ್2 ಪ್ರೋ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿದ್ದು ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ಜೊತೆಗೆ ಕನಿಷ್ಟ 6GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆ ಇರಲಿದೆ.. ದೊಡ್ಡ ಬ್ಯಾಟರಿ ವ್ಯವಸ್ಥೆಯೊಂದಿಗೆ ಇದು ಬರಲಿದೆ ಎಂಬ ವಿಶ್ವಾಸವಿದ್ದು ಆಂಡ್ರಾಯ್ಡ್ 10ಓಎಸ್ ನಲ್ಲಿ ರನ್ ಆಗುತ್ತದೆ ಜೊತೆಗೆ ಕಸ್ಟಮ್ MIUI 12 ಇರಲಿದೆ. ಸ್ನ್ಯಾಪ್ ಡ್ರಾಗನ್ 865 SoC ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಅಂದರೆ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಇದಾಗಿರಲಿದೆ ಎಂಬ ವಿಶ್ವಾಸವಿದೆ.

ಶಿಯೋಮಿ ರೆಡ್ಮಿ 10ಎಕ್ಸ್

ಶಿಯೋಮಿ ರೆಡ್ಮಿ 10ಎಕ್ಸ್

ಶಿಯೋಮಿ ರೆಡ್ಮಿ 10ಎಕ್ಸ್ ಮಧ್ಯಮ ಟಯರ್ ನ ಸ್ಮಾರ್ಟ್ ಫೋನ್ ಆಗಿದ್ದು ರೆಡ್ಮಿ ನೋಟ್ 9 ಪ್ರೋ ನಂತೆಯೇ ಇರಲಿದೆ.ಈ ಸ್ಮಾರ್ಟ್ ಫೋನ್ ನಲ್ಲಿ ಕ್ವಾಡ್ ಕ್ಯಾಮರಾ ವ್ಯವಸ್ಥೆ ಇರಲಿದ್ದು 48MP/64MP ಪ್ರೈಮರಿ ಸೆನ್ಸರ್ ಜೊತೆಗೆ ನಿಗದಿತ ಆಲ್ಟ್ರಾ ವೈಡ್ ಆಂಗಲ್ ಮತ್ತು ಮ್ಯಾಕ್ರೋ ಲೆನ್ಸ್ ಇರಲಿದೆ.

ಶಿಯೋಮಿ ಎಂಐ 10 ಲೈಟ್ ಝೂಮ್

ಶಿಯೋಮಿ ಎಂಐ 10 ಲೈಟ್ ಝೂಮ್

ಶಿಯೋಮಿ ಎಂಐ 10 ಲೈಟ್ ಝೂಮ್ ಮೊದಲ ಶಿಯೋಮಿ ಸ್ಮಾರ್ಟ್ ಫೋನ್ ಆಗಿದ್ದು 50x ಹೈಬ್ರಿಡ್ ಝೂಮ್ ಲೆನ್ಸ್ ಮತ್ತು AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ವ್ಯವಸ್ಥೆ ಇರಲಿದೆ. ಮಿಡ್ ಟಯರ್ ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿರಲಿದೆ.

Best Mobiles in India

English summary
Xiaomi is also working on several models of smartphones and here are some of the upcoming models that are likely to introduce some industry-first features at various price points. So, here are the rumored smartphones the Xiaomi might announce in 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X