ಗೂಗಲ್ ಮ್ಯಾಪ್ ನಲ್ಲಿ ಅಪಘಾತ ಮತ್ತು ಸ್ಪೀಡ್ ಟ್ರ್ಯಾಪ್ಸ್ ಗಳನ್ನು ವರದಿ ಮಾಡಲು ಅವಕಾಶ

By Gizbot Bureau
|

ಈ ವರ್ಷದ ಆರಂಭದಲ್ಲಿ ಗೂಗಲ್ ಮ್ಯಾಪ್ ಹೊಸದಾಗಿ ಸ್ಪೀಡಿಂಗ್ ಟಿಕೆಟ್ ಗಳನ್ನು ತಪ್ಪಿಸಲು ಹೊಸ ಫೀಚರ್ ನ್ನು ಜಾರಿಗೆ ತಂದಿತ್ತು. ಇದೀಗ ಕಂಪೆನಿಯು ಮತ್ತೆರಡು ಹೊಸ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸುತ್ತಿದ್ದು ಇದು ಸ್ಪೀಡ್ ಟ್ರ್ಯಾಪ್ಸ್ ಮತ್ತು ಅಪಘಾತಗಳನ್ನು ವರದಿ ಮಾಡುವುದಕ್ಕೆ ನೆರವಾಗುತ್ತದೆ.

ನೀವು ಹೋಗುತ್ತಿರುವ ರಸ್ತೆಯಲ್ಲಿ ಅಪಘಾತವಾಗಿದೆಯೇ ಎಂದು ತಿಳಿಸುವ ಗೂಗಲ್ ಮ್ಯಾಪ್

ರೆಡ್ ಇಟ್ ಪೋಸ್ಟ್ ಮಾಡಿರುವ ಮಾಹಿತಿಯ ಪ್ರಕಾರ ಮಧ್ಯದಲ್ಲಿರುವ ಪ್ಲಸ್ ಚಿಹ್ನೆಯ ಮೆಸೇಜ್ ಐಕಾನ್ ಜೊತೆಗೆ ಇನ್ನೊಂದು ಹೊಸ ಐಕಾನ್ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡುವುದರಿಂದಾಗಿ ಎರಡು ಆಯ್ಕಗಳು ಸಿಗುತ್ತದೆ- ಕ್ರ್ಯಾಷ್ ಮತ್ತು ಸ್ಪೀಡ್ ಟ್ರ್ಯಾಪ್.

ಹೊಸ ಐಕಾನ್, ಬಳಕೆ ಹೇಗೆ?

ಹೊಸ ಐಕಾನ್, ಬಳಕೆ ಹೇಗೆ?

ಆಂಡ್ರಾಯ್ಡ್ ಆಪ್ ನ ಗೂಗಲ್ ಮ್ಯಾಪ್ ಆಪ್(ವಿ.10.11.1) ನಲ್ಲಿ ಈ ಐಕಾನ್ ನ್ನು ಗುರುತಿಸುವುದಕ್ಕೆ ಸಾಧ್ಯವಿದೆ. ಆದರೆ ಐಓಎಶ್ ನ(ವಿ 5.12) ನಲ್ಲಿ ನಾವಿದ್ದನ್ನು ಗುರುತಿಸುದಕ್ಕೆ ಸಾಧ್ಯವಿಲ್ಲ. ಒಮ್ಮೆ ನೀವು ಕ್ರ್ಯಾಷ್ ಅಥವಾ ಸ್ಪೀಡ್ ಟ್ರ್ಯಾಪ್ ನ್ನು ವರದಿ ಮಾಡಿದ ನಂತರ ನೀವು ನಿಮ್ಮ ದಾರಿಯಲ್ಲಿರುವ ಇತರರನ್ನು ಕಾಣುವುದಕ್ಕೆ ಸಾಧ್ಯವಿದೆ. ನೀವು ಅವರನ್ನು ಟ್ಯಾಪ್ ಮಾಡಬಹುದು ಮತ್ತು ವಿಚಾರದ ಬಗ್ಗೆ ಅವರ ಬಳಿ ತಿಳಿದು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಸ್ಪೀಡ್ ಕ್ಯಾಮರಾ:

ಸ್ಪೀಡ್ ಕ್ಯಾಮರಾ:

ಜನವರಿಯಲ್ಲಿ ಯುಸ್ ಮೂಲದ ಅಂತರ್ಜಾಲ ಹುಡುಕಾಟ ದೈತ್ಯ ಗೂಗಲ್ ಗೂಗಲ್ ಮ್ಯಾಪ್ ನ ಮೊಬೈಲ್ ಆಪ್ ಗಳಲ್ಲಿ ಸ್ಪೀಡ್ ಕ್ಯಾಮರಾವನ್ನು ಭಾರತದಲ್ಲಿ ಅಳವಡಿಸುವ ಬಗ್ಗೆ ಖಾತ್ರಿಗೊಳಿಸಿತ್ತು.

ಯಾವ ದೇಶಗಳಲ್ಲಿ ಲಭ್ಯ:

ಯಾವ ದೇಶಗಳಲ್ಲಿ ಲಭ್ಯ:

ಯುಕೆ,ಯುಸ್, ಆಸ್ಟ್ರೇಲಿಯಾ, ರಷ್ಯಾ, ಬ್ರೆಝಿಲ್, ಮೆಕ್ಸಿಕೋ, ಕೆನಡಾ, ಇಂಡಿಯಾ ಮತ್ತು ಇಂಡೋನೇಷಿಯಾಗಳಲ್ಲಿ ಈ ಸ್ಪೀಡ್ ಕ್ಯಾಮರಾಗಳು ಬಳಕೆದಾರರಿಗೆ ಪೋಸ್ಟ್ ಗಳನ್ನು ಕಳುಹಿಸುತ್ತದೆ. ಯುಸ್,ಯುಕೆ ಮತ್ತು ಡೆನ್ಮಾರ್ಕ್ ನಲ್ಲಿ ಸ್ಪೀಡ್ ಲಿಮಿಟ್ ಬಳಕೆದಾರರು ತೆಗೆದುಕೊಳ್ಳುವ ದಾರಿಯದ್ದೇ ಲಭ್ಯವಾಗುತ್ತಾ ಸಾಗುತ್ತದೆ.

ಇನ್ನಷ್ಟು ಫೀಚರ್ ಗಳು:

ಇನ್ನಷ್ಟು ಫೀಚರ್ ಗಳು:

ಈ ತಿಂಗಳ ಆರಂಭದಲ್ಲಿ ಗೂಗಲ್ ಎಂಡಬ್ಲ್ಯೂಸಿ 2019 ರ ಟೆಕ್ ಶೋದಲ್ಲಿ ಗೂಗಲ್ ಅಸಿಸ್ಟೆಂಟ್ ನ ಕೆಪಾಬಲಿಟಿಯನ್ನು ಇನ್ನಷ್ಟು ವೃದ್ಧಿಸುವ ಬಗ್ಗೆ ಪ್ರಕಟಿಸಿತ್ತು. ಗೂಗಲ್ ಅಸಿಸ್ಟೆಂಟ್ ನಲ್ಲಿ ಭಾರತದ ನಾಲ್ಕು ಭಾಷೆಗಳನ್ನು ಬೆಂಬಲಿಸುವಂತೆ ಮಾಡಲಾಗುವುದು ಎಂದು ಕೂಡ ಕಂಪೆನಿ ತಿಳಿಸಿತ್ತು. ಇದರ ಜೊತೆಗೆ ಕಿಯೋಸ್ ಬಳಸಿ ಡಿವೈಸ್ ನಲ್ಲಿ ವಾಯ್ಸ್ ಟೈಪಿಂಗ್ ಗೂಡ ಅವಕಾಶ ನೀಡುವಂತೆ ಮಾಡಲಾಗುವ ಬಗ್ಗೆ ಕೂಡ ಪ್ರಕಟಿಸಿತ್ತು. ಅದರಲ್ಲಿ ಗುಜರಾತಿ, ಕನ್ನಡ, ಉರ್ದು ಮತ್ತು ಮಳಯಾಳಂ ಭಾಷೆಗಳು ಸೇರಿವೆ. ಅಷ್ಟೇ ಅಲ್ಲದೆ ಬೇರೆ ಭಾಷೆಗಳಿಗೆ ಸ್ವಿಚ್ ಆಗುವುದನ್ನು ಕೂಡ ಇನ್ನಷ್ಟು ಸರಳಗೊಳಿಸುವ ಬಗ್ಗೆ ಕೂಡ ಕಂಪೆನಿ ತಿಳಿಸಿದೆ.ಅಂದರೆ ಬಳಕೆದಾರರು ಕೇವಲ " ಓಕೆ ಗೂಗಲ್, ಟಾಕ್ ಟು ಮಿ ಇನ್ ಕನ್ನಡ" ಎಂದು ಹೇಳಿದರೆ ಸಾಕು ಕನ್ನಡದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಪ್ರಾರಂಭವಾಗುವಂತಹ ಫೀಚರ್ ಗಳು ಬರಲಿದೆ.

ಇದಿಷ್ಟೇ ಅಲ್ಲದೆ ಗೂಗಲ್ ಕೊರಿಯನ್, ಹಿಂದಿ, ಸ್ವಾದಿಷ್, ಡ್ಯಾನಿಷ್ ಮತ್ತು ಡಚ್ ಭಾಷೆಗಳಿಗೆ ಕೂಡ ಬೆಂಬಲ ನೀಡಲಿದೆ.

Best Mobiles in India

English summary
Users can now report accidents, speed traps on Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X